Thursday, November 19, 2009

ಮಾಯಿ ರಿ ಮೈ ಕಾಸೆ ಕಹುಂ ಪೀಡ್ ಅಪನಿ ಜಿಯಾಕಿ

ಹಿಂದಿ ಚಿತ್ರರಂಗದ ಎರಡು ಅಜರಾಮರ ನಕ್ಷತ್ರಗಳು----ಲತಾ ಹಾಗೂ ನೌಶಾದ್. ಈ ಇಬ್ಬರೂ
ಮಹೋನ್ನತ ವ್ಯಕ್ತಿಗಳು ಒಬ್ಬ ನತದೃಷ್ಟ ತಾರೆ ಬಗ್ಗೆ ಹೀಗೆನ್ನುತ್ತಾರೆ...

ನೌಶಾದ : ನನ್ನ ಎಲ್ಲ ಕಂಪೋಸಿಷನ್ ಕೊಡುವೆ ಈ ಗಜಲ್ ಕೊಡಿ...( ನೌಶಾದ್ ಹೇಳತಿರೋದು "ಆಪ್ ಕಿ ನಜರೊನೆ ಸಮಝಾ ಪ್ಯಾರ್ ಕೆ ಕಾಬಿಲ್" ಈ ಗಜಲಿನ ಬಗ್ಗೆ)

ಲತಾ : ಕೆಲವೊಂದು ವ್ಯಕ್ತಿಗಳ ಕುಂಡಲಿ ತೆರೆದುಕೊಳ್ಳುವುದೇ ಅವರು ಸತ್ತ ಬಳಿಕ.


ಮೇಲೆ ಹೇಳಿದ ಇಬ್ಬರೂ ಒಬ್ಬ ವ್ಯಕ್ತಿಯ ಬಗ್ಗೆ ಹೇಳುತ್ತಿದ್ದಾರೆ ತೀರ ವ್ಯತಿರಿಕ್ತ ಅನ್ನೋ ಹೇಳಿಕೆಗಳು..! ನಿಜ ಮದನ್ ಮೋಹನ್
ನಸೀಬು ಇದ್ದದ್ದೇ ಹಾಗೆ. ಪ್ರತಿಭಾಶಾಲಿ ತನ್ನದೇ ಶೈಲಿಯಲ್ಲಿ ಅಮರ ಗೀತೆ ನೀಡಿದಾತ ವ್ಯಾಪಾರಿಕರಣ ಅವನಿಗೆ ಎಂದೂ ಆಗಿಬರುತ್ತಿರಲಿಲ್ಲ.ಹಾಗೆಂದು ಸ್ಫರ್ಧೆಗೆ ಎಂದೂ ಆತ ಹೆದರಲಿಲ್ಲ. ಸಂಗೀತದ ಬಗ್ಗೆ ಅವನಿಗೆ ಒಲವಿತ್ತು ಆ ಒಲವನ್ನು ಜೀವನವಿಡಿ
ಲೋಕಕ್ಕೆ ಹಂಚಿದ ಅತ. ಅದೊಂದು ತಪಸ್ಸು ಎಂದು ಆತ ಭಾವಿಸಿದ್ದ. ಅದರ ಸೆಳೆತವೇ ಅವನಿಗೆ ಸೈನ್ಯದ ಗಡಸು ಮಾಯಮಾಡಿ ಸಂಗೀತದ ಮಾರ್ದವತೆಗೆ ಎಳೆದಿತ್ತು. ಸೈನ್ಯದ ಸೇವೆ ಮುಗಿಸಿಬಂದವ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿದ.
ಆಗ ಅಲಿಅಕ್ಬರ್ ಖಾನ್ , ಬೇಗಮ್ ಅಕ್ತರ್ ಮುಂತಾದವರ ಜೊತೆ ಕೆಲಸ ಮಾಡಿದ. ಮದನ್ ಮೋಹನ್ ತಂದೆ ಫಿಲ್ಮಿಸ್ತಾನ ಸ್ಟುಡಿಯೋದ ಪಾರ್ಟನರ್. ಅದಾಗ್ಯು ಮದನಮೋಹನ್ ಶುರುವಾತಿನಲ್ಲಿ ಎಸ್ ಡಿ ಬರ್ಮನ್ ಬಳಿ ಸಹಾಯಕನಾಗಿ ದುಡಿದ.
೧೯೫೦ ರಲ್ಲಿ ಆಂಖೆ ಚಿತ್ರ ಅವನ ಮೊದಲ ಚಿತ್ರ.ಪೂರ್ವ ಒಪ್ಪಂದದಂತೆ ಲತಾ ಆ ಚಿತ್ರದಲ್ಲಿ ಹಾಡಲಾಗಲಿಲ್ಲ.
ಮುಂದೆ ಅದಾ ಎಂಬ ಚಿತ್ರ. ಲತಾ ಬಳಿ ಮದನಮೋಹನ್ ರಾಖಿ ತಗೊಂಡು ಹೋದ. ಲತಾ ಕಟ್ಟಿದಳು. ಒಂದು ಸುಮಧುರ
ಬಾಂಧವ್ಯ ಬೆಸೆಯಿತು ಆ ರಾಖಿ . ಇಡೀ ಲೋಕ ಮುಂದೆ ಇವರಿಬ್ಬರ ಜುಗಲ್ ಬಂದಿಯ ರಸದೂಟ ಉಂಡು ತೇಗಿತು.
ಮದನಮೋಹನ್ ಕಂಪೋಸಿಷನ್ ಲತಾ ಧ್ವನಿ ಎಲ್ಲರ ಮನೆ ಮಾತಾಯಿತು... ಮದನಮೋಹನ್ ನ ವಾಪರಿಸದೆ ಇದ್ದ ಟ್ಯೂನ್
ಮೇಲೆ ಯಶ್ ಚೋಪ್ರಾ ೨೦೦೪ ರಲ್ಲಿ "ವೀರ್ ಜರಾ" ತೆಗೆದ. ಲತಾ ಆ ಚಿತ್ರದಲ್ಲೂ ಹಾಡಿದಳು ಹಾಗೂ ತಮ್ಮಿಬ್ಬರ ಬಾಂಧವ್ಯ
ಸಾವಿನಿಂದ ಸಮಾಪ್ತಿಯಾಗೋಲ್ಲ ಎಂದು ನಿರೂಪಿಸಿದಳು...!

ಮದನಮೋಹನ್--ಲತಾ ಈ ಜುಗಲಬಂದಿಯಿಂದ ಹೊಮ್ಮಿದ ಹಾಡುಗಳೆಂದರೆ ಅವು ಮಾಧುರ್ಯತೆಗೆ, ಇಂಪಿಗೆ ಹಾಗೂ
ಒಟ್ಟಾರೆ ಚಿತ್ರಸಂಗೀತಕ್ಕೆ ಹೊಸ ಆಯಾಮ ಕೊಟ್ಟಂತಹವು. "ಗಜಲೊಂಕಾ ಶಹಜಾದಾ" ಎಂದು ಅವಳು ಅವನನ್ನು ಕರೆದಳು.
ಅನೇಕ ದಿಗ್ಗಜ ಸಂಗೀತ ನಿರ್ದೇಶಕರಜೊತೆ ಒಂದಿಲ್ಲೊಂದು ಸಲ ಮನಸ್ತಾಪ ಲತಾಗಿತ್ತು ಆದರೆ ಮದನಮೋಹನ್ ಜೊತೆ ಮಾತ್ರ ಎಂದೂ ಹಾಗಾಗಲಿಲ್ಲ. ಮುಖ್ಯವಾಗಿ ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.ಬೇರೆಯವರಿಗೆ ಕ್ಲಿಷ್ಟವಾಗಿ ತೋರುವ ಸಂಯೋಜನೆ ಲತಾ ಕಂಠಸಿರಿಯಲ್ಲಿ ಸರಾಗವಾಗುತ್ತಿತ್ತು ಇತ್ತ ತನ್ನ ಪರಿಶ್ರಮ ಲತಾದನಿಯಲ್ಲಿ ಎರಕ
ಹೊಯ್ದಾಗಲೆ ಅದು ಪೂರ್ಣತೆ ಹೊಂದಿತು ಇದು ಮದನಮೋಹನ್ ಭಾವ. ಈ ಭಾವ ಲಯದ ಮಿಶ್ರಣದಲ್ಲಿ ಅಮೃತವಲ್ಲದೆ
ಮತ್ತೇನು ಉಕ್ಕಲು ಸಾಧ್ಯ....ಅಮೃತದ ಬಿಂದುಗಳು ಹೀಗಿವೆ......
" ಮೇರಿ ವೀಣಾ ತುಮ್ ಬಿನ ರೋಯೆ....."
" ಯೂಂ ಹಸರತೊಂಕೆ ದಾಗ್ ಮೊಹಬ್ಬತ್ ಮೆ ಧೊಲಿಯೆ...."
" ಆಪ್ ಕಿ ನಜರೊಂನೆ ಸಮಝಾ ಪ್ಯಾರ್ ಕೆ ಕಾಬಿಲ್ ಮುಝೆ..."
" ವೊ ಭೂಲಿ ದಾಸ್ತಾನ್ ಫಿರ್ ಯಾದ್ ಆ ಗಯಿ...."
" ಜರಾಸೀ ಆಹಟ್ ಹೋತಿಹೈ...."
" ಬೇತಾಬ್ ದಿಲ್ ಕಿ ತಮನ್ನಾ ಯಹೀ ಹೈ...."
" ರುಕೆ ಸೆ ಕದಮ್ ರುಕ್ ಕೆ ಬಾರ್ ಬಾರ್ ಚಲೆ..."
"ನೈನೊಮೆ ಬದರಾ ಛಾಯೆ...."
" ನೈನಾ ಬರಸೆ ರಿಮ್ ಝಿಮ್...."
" ಬೈಯ್ಯಾ ನ ಧರೊ ಓ ಬಲಮಾ..."
ಕೆಲವು ಬಿಂದುಗಳು ಬಿಟ್ಟುಹೋಗಿರಬಹುದು... ಅಮೃತದ ಸವಿ ಅಪಾರ ಅಲ್ಲವೆ....!

ಮದನಮೋಹನ್ ಕಂಪೋಸಿಷನ್ ಅಂದರೆ ಸಾಹಿತ್ಯ ಉತ್ತುಂಗದಲ್ಲಿರುತ್ತಿತ್ತು.ಅವನ ವಾದ್ಯಗೋಷ್ಟಿ ಅಥವಾ ಅವನ ಟ್ಯೂನ್ ಎಂದೂ ಸಾಹಿತ್ಯ ನುಂಗುತ್ತಿರಲಿಲ್ಲ. ಅನೇಕ ಹೆಸರುವಾಸಿ ಗೀತಕಾರರ ಜೊತೆ ಕೆಲಸ ಮಾಡಿದ್ದ. ರಾಜೇಂದ್ರ ಕ್ರಿಷನ್,ರಾಜಾಮೆಹಂದಿಅಲಿಖಾನ್, ಸಾಹಿರ್, ಮಜರೂಹ, ಕೈಫಿ ಅಜ್ಮಿ ಹೀಗೆ ಅಗಿನ ಪ್ರತಿಭನ್ವಿತರಜೊತೆ ಕೆಲಸ ಮಾಡಿದ್ದ ಅವರಿಂದ
ಅಮರ ಗೀತೆಗಳನ್ನು ಬರೆಸಿದ್ದ.

ಮದನಮೋಹನ್ ಗಾಯಕರಲ್ಲಿ ಭೇದಭಾವ ಮಾಡುತ್ತಿರಲಿಲ್ಲ. ರಫಿ ಅವನ ಹೆಚ್ಚಿನ ಹಾಡು ಹಾಡಿದ್ದರೂ ಕೆಲಹಾಡುಗಳಿಗೆ
ಇವನೇ ಗಾಯಕನಾಗಬೇಕು ಇದು ಮದನಮೋಹನ್ ಹಟವಾಗಿತ್ತು.೧೯೬೪ರ ಜಹಾಂಆರಾ ಇದಕ್ಕೆ ಉದಾಹರಣೆ ತಲತ್ ಕಡೆಯಿಂದ ಹಾಡು ಹಾಡಿಸಿದ ಚಿತ್ರ ಸೋತಿತಾದರೂ ತಲತ್ ಹಾಡು ಮನೆಮಾತಾಗಿದ್ದವು. ಮನ್ನಾಡೆ ಜೀವನದ ಉತ್ತಮಹಾಡು
"ಕೌನ್ ಆಯಾ ಮೇರೆ ಮನ್ ಕೆ ದ್ವಾರೆ.." ಮದನಮೋಹನ್ ಕಂಪೋಸಿಶನ್.ಹೊಸಗಾಯಕರಿಗೂ ಅವ ಉತ್ತೇಜನ ಕೊಟ್ಟಿದ್ದ.
ಭುಪಿಂದರ್ ಬೆಳಕಿಗೆ ಬಂದಿದ್ದು ಇವನ ಗರಡಿಯಲ್ಲಿಯೇ.

ದೇವಆನಂದನ ಅಣ್ಣ ಚೇತನ್ ಆನಂದ. ಇವನ ಚಿತ್ರಗಳಿಗೆ ಮದನಮೋಹನ್ ಕಾಯಂ ಸಂಗೀತಗಾರ--
ಹಕೀಕತ್, ಹಸ್ತೆ ಜಖಂ, ಹಿಂದುಸ್ತಾನ್ ಕಿ ಕಸಂ, ಹೀರ್ ರಾಂಝಾ..ಹೀಗೆ ಒಂದಕ್ಕಿಂತ ಒಂದು ಸೂಪರ್ ಚಿತ್ರಗಳು ಕೆಲವು ಚಿತ್ರ
ಸೋತರೂ ಸಂಗೀತ ಎಂದೂ ಸೋತಿರಲಿಲ್ಲ.

ರಫಿ ಹಾಗೂ ಮದನಮೋಹನ್ ಹಾಲು ಸಕ್ಕರೆ ಇದ್ದಂತಿದ್ದರು.ರಫಿಯ ಕಂಠದ ಆಳ ವಿಸ್ತಾರ ಮದನಮೋಹನ್ ಚೆನ್ನಾಗಿ ಉಪಯೋಗಿಸಿಕೊಂಡಿದ್ದ. ಹೊಸ ಪ್ರಯೋಗ ಮಾಡಲು ರಫಿ ಅವನಿಗೆ ನೆರವಾಗಿದ್ದ. ಕೆಲವು ಉದಾಹರಣೆ ---
"ಸಾವನ್ ಕೆ ಮಹೀನೆ ಮೆ ಏಕ್ ಆಗ್ ಸಿ ಸೀನೆಮೆ...(ಶರಾಬಿ)"
" ಮೈ ಏ ಸೋಚಕರ್ ಉಸ್ಕೆ ದರ್ ಸೆ ಉಠಾಥಾ...(ಹಕೀಕತ್)"
" ತುಮ್ ಸೆ ಕಹುಂ ಏಕ್ ಬಾತ್ ಪರೊಂಸೆ ಹಲ್ಕಿ ಹಲ್ಕಿ...(ದಸ್ತಕ್)"
" ತುಮ್ ಜೊ ಮಿಲ್ ಗಯೇ ಹೋ ತೋ ಏ ಲಗತಾ ಹೈ....(ಹಸ್ತೆ ಜಖಂ)"
"ತುಮಾಃರಿ ಜುಲ್ಫ್ ಕೆ ಸಾಯೆ ಮೆ ಶಾಮ್ ಕರಲೂಂಗಾ....."

ಇಷ್ಟೆಲ್ಲ ಅಮರಗೀತೆಗಳ ರೂವಾರಿ ಸಂತೋಷದಿಂದ ಇದ್ದನಾ ತನ್ನ ಸಾಧನೆಬಗ್ಗೆ ಅವನಿಗೆ ತೃಪ್ತಿ ಯಿತ್ತೇ ಅಥವಾ ಫಿಲ್ಮಿದುನಿಯಾ ಅವನ ಟ್ಯಾಲೆಂಟಿಗೆ ನ್ಯಾಯ ಒದಗಿಸಿತ್ತೇ ಮೇಲಿನ ಎಲ್ಲ ಪ್ರಶ್ನೆಗಳಿಗೆ ನಕಾರವೇ ಉತ್ತರ...! ಯಾಕೆ ಹೀಗೆ
ಇದು ಉತ್ತರ ಇರಲಾರದ ಪ್ರಶ್ನೆ.ಮದನಮೋಹನ್ ತನ್ನ ಹಿಂಜರಿತಕ್ಕೆ ತಾನೇ ಕಾರಣನಾಗಿದ್ದನೇ ಈ ಪ್ರಶ್ನೆಗೆ ಉತ್ತರ ತಕ್ಕಮಟ್ಟಿಗೆ ಹೌದೆಂದೇ ಹೇಳಬೇಕಾಗುತ್ತದೆ. ಹಾಗಿದ್ದರೆ ಅವನ ದೌರ್ಬಲ್ಯ ಏನಿತ್ತು ಉತ್ತರದಲ್ಲಿ ಗೂಢಾರ್ಥವಿದೆ...!
ತನ್ನ ನಿಲುವುಗಳಜೊತೆ ಆತ ಎಂದೂ ರಾಜಿಮಾಡ್ಕೊಳ್ಳಿಲ್ಲ ಲೋಕಕ್ಕೆ ಬೇಕಾದಹಾಗೆ ತನ್ನ ಶೈಲಿ ಬದಲಿಸಿಕೊಳ್ಳಲಿಲ್ಲ.
ಇನ್ನೂ ವಿಷದವಾಗಿ ಹೇಳಬಕಂದ್ರೆ ಶಮ್ಮಿ ಯ ಕುಣಿತಕೆ ರಫಿ "ಯಾಹೂ......" ಎಂದ ಶಂಕರ್ ಜೈಕಿಶನ್ ನವಸಂಗೀತದ ಸರದಾರರೆನಿದರು ಲೋಕ ಉಘೆ ಉಘೆ ಅಂತು .ಆದ್ರೆ ಅದೇ ರಫಿ ಮದನ್ ಮೋಹನ ಕಡೆ ಬಂದು " ಆಪ್ ಕೆ ಪೆಹಲೂ ಮೆ ಆಕರ್ ರೋದಿಯೆ ದಾಸ್ತಾನೆ ಗಮ್ ಸುನಾಕರ್ ರೋ ದಿಯೆ.."ಹಾಡಿದ್ದ ಬದುಕಿನ ವಿಪರ್ಯಾಸ ಇದೇ ಇರಬೇಕು...!

ಮದನಮೋಹನ್ ನ ಪ್ರತಿಸ್ಫರ್ಧಿಗಳು ಅನೇಕರಿದ್ದರು.ಹಿಂದಿಚಿತ್ರರಂಗದಲ್ಲಿ ಆಯಾ ಬ್ಯಾನರುಗಳಿಗೆ,ಚಿತ್ರನಟರಿಗೆ ಅವರವರೇ ಆದ
ಕಾಯಂ ಸಂಗೀತಗಾರರಿದ್ದರು ಉದಾಹರಣೆಗೆ---ರಾಜಕಪೂರ್--ಶಂಕರ್ಜೈಕಿಶನ್--ದೇವ್ ಆನಂದ---ಎಸ್ ಡಿ ಬರ್ಮನ್ ಹೀಗೆ. ಆದರೆ ಮದನ್ ಮೋಹನ್ ಲಾಬಿ ಯಲ್ಲಿ ವಿಶ್ವಾಸಇಟ್ಟವನಲ್ಲ ಬದಲುಕಾಯಕ ನಂಬಿದವ. ತನಗೆಒಪ್ಪಿಸಿದ ಕೆಲಸ ನಾಲ್ಕು
ಜನ ಮೆಚ್ಚುವಂತೆ ಮಾಡುತ್ತಿದ್ದ. ಆದರೆ ಈ ದೊಡ್ಡತನವೂ ಅನೇಕ ಸಲ ತೊಡಕಾಗುತ್ತದೆ ಮದನಮೋಹನ್ ವಿಷಯದಲ್ಲೂ ಹೀಗೆ
ಆಯಿತು. ಭಾರತೀಯ ಚಿತ್ರರಂಗ ಫಿಲ್ಮಫೇರ್ ಪ್ರಶಸ್ತಿ ಆಸ್ಕರ್ ಪ್ರಶಸ್ತಿಗೆ ಸಮಾನ ಅಂತ ಭಾವಿಸುತ್ತದೆ. ಈ ಒಂದು ಗರಿಮೆ ಸಂಪಾದಿಸಲು ಅನೇಕ ಜನ ಕಲಾವಿದರು, ತಂತ್ರಜ್ನರು ತುಡಿಯುತ್ತಾರೆ. ಮದನಮೋಹನ್ ಗೂ ಆಸೆ ಇತ್ತು ಫಿಲ್ಮಫೇರ್ ದಕ್ಕಲಿ ಎಂದು. ಅವನ ೨೫ ವರ್ಷದ ಕರಿಯರ್ರಲ್ಲಿ ಎರಡು ಬಾರಿ ಆತ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ. ಅದರಲ್ಲೂ ೧೯೬೪ ರಲ್ಲಿ
"ವೊ ಕೌನ್ ಥಿ" ಗೆ ಗ್ಯಾರಂಟಿ ಎಂದುಕೊಂಡಿದ್ದ. ಕಾಂಪಿಟೇಶನ್ ಇದ್ದಿದ್ದು ಸಂಗಮ್ , ದೋಸ್ತಿ ಚಿತ್ರಗಳು. ಎಲ್ಲರ ನಿರೀಕ್ಷೆ ತಲೆಕೆಳಗಾಗಿಸಿ ದೋಸ್ತಿ ಚಿತ್ರಕ್ಕೆ ಪ್ರಶಸ್ತಿ ಬಂತು. ಹೊಸಜೋಡಿ ಲಕ್ಷ್ಮಿ-ಪ್ಯಾರೆ ಬೀಗಿದರು. ಆದರೆ ಪ್ರಶಸ್ತಿಯಹಿಂದೆ ಕಾಣದ ಕೈಗಳು ಆಟ ಆಡಿದ್ದವು. ಸ್ವತಃ ಪ್ಯಾರೆಲಾಲ್ ಒಂದು ಸಂದರ್ಶನದಲ್ಲಿ ತಮಗೆ ದೋಸ್ತಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ ಪರಿ ಹೇಳ್ತಾನೆ
http://www.hamaraforums.com/index.php?showtopic=46854 ಈ ಲಿಂಕು ಕತೆ ಬಿಚ್ಚಿಡುತ್ತದೆ.

೧೯೭೦ ಈ ವರ್ಷ ಮದನಮೋಹನ್ ಗೆ ಗುರುತು ತಂದ ವರ್ಷ. ಅವನ ದಸ್ತಕ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಅದರಲ್ಲಿ ರಫಿ
ಹಾಗೂ ಲತಾ ಹಾಡಿದ ಮನೆಮಾತಾದವು.ಸಂವೇದನಾಶೀಲ ಚಿತ್ರ ದಸ್ತಕ್ ಅದಕ್ಕೆ ಆತ್ಮ ಆಗಿದ್ದು ಮದನಮೋಹನ್ ಸಂಗೀತ.
ಮುಂದೆ ಕೆಲವು ಉತ್ತಮ ಚಿತ್ರಗಳಿಗೆ ಅವ ಸಂಗೀತ ನೀಡಿದ ---ಹಸ್ತೆ ಜಖಂ, ಬಾವರ್ಚಿ, ಕೋಶಿಶ್ , ಹೀರ್ ರಾಂಝಾ,ಪರವಾನಾ ಹೀಗೆ
ಎಲ್ಲ ಚಿತ್ರಗಳಿಗೆ ಮದನಮೋಹನ್ ಸಂಗೀತ ಜೀವಾಳ ಆಗಿತ್ತು.ಆದರೂ ಲೋಕದ ಅಸಡ್ಡೆ ,ತನ್ನ ಪ್ರತಿಭೆಗೆ ಸಿಗದ ಮನ್ನಣೆ ಅವನನ್ನು ಸದಾ ಕಾಡಿಸುತ್ತಿತ್ತು.ಮೊದಲೇ ಇದ್ದ ಕುಡಿತದ ಚಟ ವಿಪರೀತ ಆಯಿತು. ೧೪-೦೭-೧೯೭೫ ಕೊನೆಗೆ ಅದಕ್ಕೆ ಬಲಿಯಾದ. ದುರ್ದೈವ ಅಂದ್ರೆ ಇದೇ ಇರಬೇಕು. ಅವನ ಕೊನೆ ಸಿನೇಮಾಗಳೆರಡೂ ಯಶಸ್ವಿಯಾದವು--ಮೌಸಮ್ ಹಾಗೂ ಲೈಲಾ ಮಜ್ನೂ--.ಮೌಸಮ್ ನಲ್ಲಿ ಭುಪಿಂದರ್ ಹಾಡಿದ "ದಿಲ್ ಢುಂಡತಾ ಹೈ..." ಬಹುಷಃ ಮದನಮೋಹನ್ ನ ಅತ್ಯುತ್ತಮ
ರಚನೆಗಳಲ್ಲಿ ಒಂದು ಅನಬಹುದು. ಇನ್ನು ಲತಾ ಹಾಡಿದ ಲೈಲಾ ಮಜ್ನೂ ದ "ಹುಸ್ನ ಹಾಜಿರ್ ಹೈ ಮೊಹಬ್ಬತ್ ಕಿ ಸಜಾ ಪಾನೆಕೊ" ಯಾರು ಮರೆಯಲು ಸಾಧ್ಯ..

ಮದನಮೋಹನ್ ಸದಾ ಹಸಿರಾಗಿರುತ್ತಾನೆ. ಭಾರತೀಯ ಚಿತ್ರರಂಗ ಪ್ರತಿಭಾವಂತರಿಗೆ ಸರಿಯಾದ ಪ್ರೋತ್ಸಾಹ ಎಂದೂ ನೀಡಿಲ್ಲ. ಈ ಕೊರಗು ಅನೇಕರಿಗೆ ಇದೆ ಅದೆಷ್ಟೋ "ಮದನಮೋಹನ್"ರು ಇನ್ನೂ ಇರಬಹುದು ನಿಟ್ಟುಸಿರು ಬಿಡುತ್ತಿರಬಹುದು.
ಅವರಿಗೆ ಸಾಂತ್ವನವಿದೆ.
ಕೊನೆಗೆ ಅವ ಕಂಪೋಸಿದ ಈ ಹಾಡು ನೋಡಿ ಪ್ರಶ್ನೆ ಕೇಳಿದ್ದಾನೆ ಯಾರಲ್ಲಾದರು ಉತ್ತರ ಇದೆಯೆ...
"ಜೋ ಹಮನೆ ದಾಸ್ತಾಂ ಅಪನಿ ಸುನಾಯಿ
ಆಪ್ ಕ್ಯೂಂ ರೋಯೆ...
ತಬಾಹಿ ತೊ ಹಮಾರೆ ದಿಲ್ ಪೆ ಆಯಿ
ಆಪ್ ಕ್ಯೂಂ ರೋಯೆ....."

14 comments:

  1. ದೇಸಾಯರೇ
    ಹಳೆಯ ಹಿಂದಿ ಚಿತ್ರಗೀತೆಗಳ ಬಗ್ಗೆ ನಿಮ್ಮ ಬರಹಗಳು ಆ ಗೀತೆಗಳನ್ನು ಅರ್ಥಪೂರ್ಣವಾಗಿ ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಪ್ರತಿಭಾವ೦ತರಿಗೆ ಸರಿಯಾದ ಅವಕಾಶ ಸಿಗದೇ ಇರುವುದು ಸಾರ್ವಕಾಲಿಕ ಸತ್ಯ.

    ReplyDelete
  2. ದೇಸಾಯಿಯವರೇ,
    ಲೇಖನ ತುಂಬಾ ಚೆನ್ನಾಗಿದೆ..ನೀವು ನನ್ನ ಅತ್ಯಂತ ಇಷ್ಟವಾದ ಕೆಲವು ಹಾಡುಗಳನ್ನು ನೆನಪಿಸಿ, ಅವುಗಳನ್ನು ಗುನ್ ಗುನಾಯಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು..ಈ ಹಾಡುಗಳನ್ನೆಲ್ಲ ಕೇಳುವಾಗ ಯಾವುದೋ ಒಂದು ಬೇರೆಯೇ ಲೋಕವನ್ನೇ ಪ್ರವೇಶಿಸಿದಂತೆ ಆಗುತ್ತದೆ..ಅದರಲ್ಲೂ

    ವೊ ಭೂಲಿ ದಾಸ್ತಾನ್ ಫಿರ್ ಯಾದ್ ಆ ಗಯಿ....
    ನೈನೊಮೆ ಬದರಾ ಛಾಯೆ....
    ನೈನಾ ಬರಸೆ ರಿಮ್ ಝಿಮ್...
    ಜೋ ಹಮನೆ ದಾಸ್ತಾಂ ಅಪನಿ ಸುನಾಯಿ....


    ಈ ಹಾಡುಗಳು ಯಾವ ಸಮಯದಲ್ಲಿಯೂ ನನ್ನನ್ನು ಕಣ್ಣೀರಾಗಿಸುತ್ತವೆ..ಲತಾಳ ಸ್ವರದ ಮೋಡಿಯೇ ಅಂತಹದು..ಜೇನುತುಪ್ಪದಲ್ಲಿ ಅದ್ದಿದಂತಹ ಸ್ವರ,
    ಆ ಸ್ವರದಲ್ಲಿನ ಆರ್ದ್ರತೆ, ಭಾವುಕತೆ ಈಗಿನ ಯಾವ ಹಾಡುಗಳಲ್ಲಿಯೂ ಕಾಣಲಾರದೆಂದರೆ ತಪ್ಪಾಗಲಾರದು..

    ಅತ್ಯುತ್ತಮವಾದ ಹಾಡುಗಳನ್ನು ನೆನಪು ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

    ReplyDelete
  3. ಮದನ ಮೋಹನ ಲತಾಳ ಅಚ್ಚುಮೆಚ್ಚಿನ ಸಂಗೀತಗಾರ. ಇವರ ಕೆಲವು ಅತ್ಯುತ್ತಮ ಹಾಡುಗಳನ್ನು ನಮಗೆ ನೆನಪಿಸಿ ಕೊಟ್ಟಿದ್ದೀರಿ. ಮದನ ಮೋಹನ ಬಗೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

    ReplyDelete
  4. ತುಂಬಾ ಚೆನ್ನಾಗಿದೆ ಸರ್, ಹಿಂದಿ ಚಿತ್ರರಂಗದ ಮಹಾನ ಕಲಾವಿದರ ಪರಿಚಯಿಸುವ ಅತ್ಯುತ್ತಮ ಕಾರ್ಯ ಮಾಡುತ್ತಿದ್ದೀರ ಅಭಿನಂದನೆಗಳು. ಮತ್ತೆ ಮನಿಗ ಬನ್ನಿ ಸರ್.. ನಿಮ್ಮ ಜೊತೆ ಇದ್ದರೆ ತುಂಬಾ ವಿಷಯ ಅರಿಯಬಹುದು. ಮಾಮಿಗೆ ಮತ್ತೆ ಮಗಳಿಗೆ ಕೇಳಿದೆ ಅಂತ ಹೇಳಿ.

    ReplyDelete
  5. This comment has been removed by the author.

    ReplyDelete
  6. ಉಮೇಶ್ ಸರ್, ಲತಾ, ರಫಿ, ಮುಕೇಶ್, ಮನ್ನಡೇ, ತಲತ್, ಕಿಶೋರ್ ಇವರಜೊತೆ ನೌಷಾದ್, ಮನ್ಮೋಹನ್, ಲಕಾ-ಪ್ಯಾಲಾ, ಎಸ್ಡಿ, ಆರ್ಡಿ, ಕಜೀ ಆಜೀ...ಇವರಿಲ್ಲದಿದ್ದರೆ ಮಾಧುರ್ಯ ರಹಿತ ಸಿನಿಮೀ ಸಮ್ಗೀತ ವಿದ್ದಂತೆ...
    ಈ ವಿವರಗಳನ್ನು ಚನ್ನಾಗಿ ನೀಡಿದ್ದೀರ..ಧನ್ಯವಾದ.

    ReplyDelete
  7. ದೇಸಾಯ್ ಸರ್,

    ನಿಮ್ಮ ಹಳೆಯ ಗೀತೆ ಮಾಹಿತಿ ಸರಕು ತುಂಬಾ ಇರಬೇಕು ಅನ್ನಿಸುತ್ತೆ. ಈ ಬಾರಿ ಮದನಮೋಹನ್ ರವರ ಬದುಕು, ಸಂಗೀತ, ಇತ್ಯಾದಿಗಳ ಮೇಲೆ ಬೆಳಕು ಚೆಲ್ಲಿದ್ದೀರಿ. ಇದರಿಂದ ನಮಗೂ ಕೂಡ ತುಂಬಾ ಉಪಯೋಗವಾಗುತ್ತಿದೆ.
    ಧನ್ಯವಾದಗಳು

    ReplyDelete
  8. ಪರಾಂಜಪೆ ಸರ್ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

    ReplyDelete
  9. This comment has been removed by the author.

    ReplyDelete
  10. ಚಿತ್ರಾ ಮೇಡಮ್ ಧನ್ಯವಾದಗಳು ಲತಾ- ಮದನಮೋಹನ್ ಕಾಂಬಿನೇಶನ್ ಕರಾಮತ್ತು ಎಷ್ಟು ಹೇಳಿದರೂ ಕಮ್ಮಿ

    ReplyDelete
  11. ಕಾಕಾ ಅನಿಸಿಕೆಗೆ ಧನ್ಯವಾದಗಳು..ನೀವು ಆ ಕಾಲದ ಪತ್ರಿಕೆ ಓದಿದವರು ನಾ ಹೇಳಿದ ಸಂಗತಿಗಳು ಆಭಾಸ ಇರಲಾರದು
    ಅಲ್ಲವೆ?

    ReplyDelete
  12. ಧನ್ಯವಾದಗಳು ಗೋಪಾಲ್ ಅನಿಸಿಕೆ ಹಂಚಿಕೊಂಡಿದ್ದಕ್ಕೆ

    ReplyDelete
  13. ಜಲನಯನ ಅನಿಸಿಕೆಗೆ ಧನ್ಯವಾದಗಳು

    ReplyDelete
  14. ಶಿವು ಅನಿಸಿಕೆಗೆ ಧನ್ಯವಾದಗಳು

    ReplyDelete