ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ
ಮರೆಯದ ಅವೆ ಮುಖಗಳು..
ಕಾಲನ ಗತಿಯಲೂ ಕುಂದದ ತಮ್ಮ ವಜನು
ಉಳಿಸಿಹೋದ ಚೆಹರೆಗಳು...
ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ
ಅವ್ವಳ ಮೂಗುಬಟ್ಟು..
ಅಕ್ಕಳ ಕೇದಗೆ ಜಡೆ ಹಿದಿದುಕೊಂಡ ಕನ್ನಡಿ..
ಹೀಗೆ ಪುಟ ತೆರೆದಂತೆ ಸಾರಿನಿಲ್ಲುತ್ತದೆ ಗತ.
ಆ ಡೌಲು, ನಗು ಸುಖ ಎಲ್ಲ ದಾಖಲಿಲ್ಲಿ
ಈ ಫೋಟೋಗಳ ತುಂಬ ಅವರದೇ ಪಾರುಪತ್ಯ.
ಅಲ್ಬಮ್ಮಿನ ಈ ಮಿನುಗುವ ಚೆಹರೆಗಳಿಗೆ ಇನ್ನೊಂದು ರೂಪ ಇದೆ
ಚಿತೆಯ ಮೇಲಿನ ಪ್ರಶಾಂತ ದೇಹ..
ಕೊರೆಯುವ ಚಳಿನಡುವೆ ಛಿಟಿ ಛಿಟಿ ಉರಿದು ಹೋದ ದೇಹ
ಈ ಚಿತ್ರ ಯಾವ ಅಲ್ಬಮ್ಮಿನಲೂ ಇಲ್ಲ
ಎದೆ ತುಂಬ ಮಾತ್ರ ಆ ಚಿತೆ, ಬೆಂಕಿ ಆ ಬೆಂಕಿಯ ನಡುವಿನ
ಪ್ರಶಾಂತ ಮುಖ ಅಚ್ಚೊತ್ತಿದೆ....!
ತು೦ಬ ದಿನವಾಗಿತ್ತು ನಿಮ್ಮ ಬ್ಲಾಗ್ ಮನೆಗೆ ಬಂದು. ಇಂದು ಬಂದೆ. ಕಟು ವಾಸ್ತವದೊ೦ದಿಗೆ ವಿಷಾದದ ಮಿಶ್ರಣ. ಚೆನ್ನಾಗಿದೆ.
ReplyDeleteನೈಸ್.. ಇಷ್ಟ ಆಯ್ತು.. ಮೊನ್ನೆಯಷ್ಟೇ One Hour Photo ಮೂವಿ ನೋಡ್ಬೇಕಾದ್ರೂ ಹೀಗೆಲ್ಲ ಅನ್ನಿಸಿತ್ತು ನಂಗೆ..
ReplyDeleteದೇಸಾಯ್ ಸರ್,
ReplyDeleteನಿಜಕ್ಕೂ ಒಂದು ಒಳ್ಳೆಯ ಪದ್ಯ. ಮೆಲುನೋಟಕ್ಕೆ ಮದುವೆ ಫೋಟೊಗಳು ಚಲಿಸಿದರೂ ಒಳಗೆಲ್ಲೋ ಒಂದು ವಿಶಾಧ ವ್ಯಕ್ತವಾಗಿ ಪದ್ಯದ ತೂಕವನ್ನು ಹೆಚ್ಚಿಸಿದೆ..
ಉಮೇಶ,
ReplyDeleteಯಾವ ಅಲ್ಬಮ್ಮಿನಲ್ಲೂ ಕಾಣಲಾಗದ ಕಟುಸತ್ಯವನ್ನು ತೋರಿಸಿದ್ದೀರಿ!
excellent
ReplyDeleteNice one sir
ReplyDeleteಉಮೇಶ್ ಸರ್, ಕವನದ ವಿಷಯ ಸೀದಾ ಎದಿ ಕೊರದು ಮನಸಿನೊಳಗ ಘಟ್ಟಿ ಕೂತಬಿಡ್ತದ. ಆದ್ರ ಇನ್ನೂ ಸ್ವ...ಲ್ಪ ಕಾವ್ಯದ ಗುಣ ಇದ್ದಿದ್ರ ಎಲ್ಲಾ ರೀತಿಯಿಂದ್ಲೂ ಛಂದದ ಕವಿತಾ ಆಗಿರೂದು. ಸಣ್ಣ ಬಾಯಿ ದೊಡ್ಡ ಮಾತಾತು ನಂದು ಅಂತ ಗೊತ್ತದ. ನೋವಾಗಿದ್ರ ಕ್ಷಮಾ ಮಾಡ್ರಿ.
ReplyDeleteಪರಾಂಜಪೆ ಸರ್ ಧನ್ಯವಾದಗಳು ಮತ್ತೆ ಬಂದಿದ್ದಕ್ಕೆ ಹಾಗೂ ಮೆಚ್ಚಿದ್ದಕ್ಕೆ
ReplyDeleteಸುಶ್ರುತ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ReplyDeleteಶಿವು ಫೋಟೋಹಿಂದಿರುವ ಚೆಹರೆಗಳ ನೋವು ಬಲ್ಲವರಾರು ಮೆಚ್ಚಿದ್ದಕ್ಕೆ ಧನ್ಯವಾದಗಳು
ReplyDeleteಕಾಕಾ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ವಾಸ್ತವದ ಬೆಂಕಿಯ ಶಾಖ ಪ್ರಖರ ಅಲ್ಲ?
ReplyDeleteಸೀತಾರಾಮ್ ಚುಟುಕಾದ ಪ್ರತಿಕ್ರಿಯೆಗೆ ಧನ್ಯವಾದಗಳು
ReplyDeleteಶಿವಪ್ರಕಾಶ್ ಚುಟುಕಾದ ಪ್ರತಿಕ್ರಿಯೆಗೆ ಧನ್ಯವಾದಗಳು
ReplyDeleteಮೇಡಂ ಮೊದಲಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು ಇನ್ನು ಬರೀಬೇಕಾದ್ರ ಅನುಮಾನ ಕಾಡಿತ್ತು ವಿಷಯ ಹೇಳಲಿಕ್ಕೆ ಆಗ್ತದೊ ಇಲ್ಲೋ
ReplyDeleteಪ್ರಯತ್ನ ಮಾಡಿದೆ ನಿಮ್ಮ ಮಾತಿಗೆ ಬ್ಯಾಸರ ಇಲ್ಲ ಮುಂದ ತಿದ್ಕೊಳ್ಳಿಕ್ಕೆ ಇಂಥಾ ಟೀಕಾ ಬೇಕಾಗ್ತಾವ