ನೆತ್ತರು ಬಸಿದುಕೊಂಡ ಭುವಿ ತಣ್ಣಗಾಗಿಲ್ಲ
ಮಾಲ್ ಗಳಲ್ಲಿ ಸ್ವಲ್ಪೇ ದಿನ , ಗದ್ದಲವಿರಲಿಲ್ಲ...!
ಕತೆ ಕೇಳುತ ತೂಕಡಿಸುತ ಕೂತಿಹೆವು ನಾವೆಲ್ಲ
ನಾವ್ಯಾಕೆ ಹಿಂಗೆ ಈ ಪ್ರಶ್ನೆಯೇ ಬೇಡ
ಮತ್ತಾರೋ ಮಹ್ಮದ್ ಹೆ(ಡೆ)ಡ್ಲಿ ಯಾಗಿ
ನಮ್ಮೋಣಿಯಲ್ಲಿಯೇ ಸುತ್ತುತಿಹನಲ್ಲ...!
ಕಳೆದಿದೆ ವರ್ಷ ಆಕಳಿಕೆ ಹೋಗಿಲ್ಲ..
ಯಾರೋ ಸುರಿಸಿದ ನೆತ್ತರು ನಮಗಾಗಿ..
ಚಟ್ನಿಗೆ ಹಾಕಿದ ಖಾರ ಜಾಸ್ತಿ ನಮ್ಮ
ಗೊಣಗಾಟ ಮುಗಿಯುತ್ತಲೇ ಇಲ್ಲವಲ್ಲ...!
ಗಲ್ಲಿಗೆ ಏರಬೇಕಾಗಿದ್ದ ಡೆಡ್ಲಿ ಹೆಡ್ಲೀ ಗಳು ಗಲ್ಲಿ ಗಲ್ಲಿಗೊಬ್ಬರಂತೆ ಇದ್ದಾರೆ... ಮೊನ್ನೆ ಯಾವುದೊ ಚಾನೆಲ್ ನವರು ಸಾರ್ವಜನಿಕ ಸ್ಥಳಗಳಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡ್ತಿದ್ರು... ನಮ್ಮ ಭದ್ರತಾ ವ್ಯವಸ್ಥೆಯ ಅವ್ಯವಸ್ಥೆ ನೋಡಿ ಬೇಸರವಾಯ್ತು... ನಮ್ಮ ಗೊಣಗಾಟಗಳು ಚಟ್ನಿಗೆ ಹಾಕಿದ ಖಾರ, ಉಪ್ಪಿಗಷ್ಟೇ ಸೀಮಿತವಾಗುತ್ತಿರುವುದು ವಿಪರ್ಯಾಸ... ೨೬/೧೧ ಮತ್ತು ಅದಕ್ಕೂ ಗಂಭೀರ ದುರ್ಘಟನೆಗಳು ಇನ್ನೆಷ್ಟು ಸಂಭವಿಸಿದ ಮೇಲೆ ನಮ್ಮ ಸರ್ಕಾರಗಳು ಎಚ್ಚರಗೊಳ್ಳುತ್ತವೋ ದೇವರೇ ಬಲ್ಲ... ಕವನ ಮನಸ್ಸಿಗೆ ತಟ್ಟಿತು... ಅಭಿನಂದನೆಗಳು...
ReplyDeleteಧನ್ಯವಾದ ದಿಲೀಪ್ ಇದನ್ನು ಮೆಚ್ಚಿದ್ದಕ್ಕೆ ಇದು ಕವನ ಅನಿಸಿಕೊಳ್ಳುತ್ತಾ ಈ ಪ್ರಶ್ನೆ ಇದೆ
ReplyDeleteಕಸಾಬನ ವಿಚಾರಣೆಗೆ, ಅವನ ರಕ್ಷಣೆಗೆ ೨೦-೩೦ ಕೋಟಿ ಖರ್ಚಾಗಿದೆಯ೦ತೆ. ಡೆಡ್ಲಿಯನ್ನು ಹಿಡಿದರೆ ಇನ್ನಷ್ಟು ಖರ್ಚು ವಿಚಾರಣಾ ಅವಧಿಯಲ್ಲಿ ಅವರ ಜೀವಿತ ಮುಗಿಯುತ್ತದೆ. ಸತ್ತವರಿಗೆ೦ಥಾ ಶಿಕ್ಷೇ?
ReplyDeleteಕವನ ನಮ್ಮ ವ್ಯವಸ್ತೆಗೆ ಕನ್ನಡಿಯಾಗಿದೆ.
ಧನ್ಯವಾದಗಳು ಸೀತಾರಾಮ್ ಸರ್ ಪ್ರೋತ್ಸಾಹ ಹೀಗೆ ಇರಲಿ. ನಮ್ಮ ಚಿದಂಬರಂ ಸಹ ಹತಾಶನಾಗಿದ್ದಾನೆ
ReplyDeleteಏನ್ ಮಾಡೋದು