Wednesday, December 9, 2009

ಕಾದಿಹೆ ನಾನು...

ಕಾದಿರುವೆ ನಾನು ಆ ನಾಳೆಗಳ
ಎದಿರು ನೋಡುತ..
ಕಾಂಕ್ರೀಟು ಕಾಡಿನ ಅನುಭವವೂ
ಕವಿತೆಯಾಗಲೆಂದು
ಮೂಲೆಯಲ್ಲಿನ ಹೂ ಗಮಗಮಿಸಲೆಂದು
ನೆರೆ ಮನೆಯಾತ ಕೈ ಚಾಚಿದಾಗ
ಕರದಲ್ಲಿ ಚೂರಿಯ ಬದಲು ಗುಲಾಬಿ
ಇರಲೆಂದು....
ಒಂದು ಮನದ ನೋವಿಗೆ ಇನ್ನೊಂದು ಮನ
ಮಿಡಿಯಲೆಂದು..
ಕಾಯುವ ಈ ಪರಿ ನಿರರ್ಥಕವೆಂದು ತಿಳಿದಿದೆ..
ಈ ಕಾಯುವ ಕಾಯಕದಲ್ಲಿ ಅದೇನು ಸೊಗಸಿದೆ...
ಬರಲಿರುವ ನಾಳೆಗಳ ಹೊಳಪು ಬಿಂಬಿಸುವ
ಕಣ್ಣುಗಳಿಗೆ ವರ್ತಮಾನದ ಧೂಳು ರಾಚುತಿದೆ.

13 comments:

  1. ದೇಸಾಯರ,
    ಒಳಿತನ್ನು ಕಾಣಬಯಸುವವರ ಭಾವನೆಗಳ ಯಥಾರ್ಥ ವರ್ಣನೆಯನ್ನು ಮಾಡೀರಿ.ವರ್ತಮಾನದ ಆಸೆ, ನಿರಾಸೆಗಳ ನಡುವೆಯೂ ಇಂತಹ ಛಂದನ್ನ ಕವನ ಹುಟ್ಟತದ ಅನ್ನೋದು ಆಶಾವಾದಕ್ಕ ಕಾರಣ ಆಗತದ.

    ReplyDelete
  2. ದೇಸಾಯಿಯವರೆ...

    ಆಸೆ..
    ನಿರಾಸೆಗಳ ನಡುವೆ...

    ಹೊಸಕನಸಿನ ಕವಿತೆ ಹುಟ್ಟುವದಲ್ಲ...!
    ಇದೇ ಜೀವನ..!

    ತುಂಬಾ ಸೊಗಸಾಗಿದೆ...

    ಅಭಿನಂದನೆಗಳು...

    ReplyDelete
  3. ಆಶಾವಾದದ ಚೆ೦ದದ ಕವಿತೆ ದೇಸಾಯಿರವರೇ.

    ReplyDelete
  4. ತುಂಬಾ ಚೆನ್ನಾಗಿದೆ, ಇಷ್ಟವಾಯ್ತು.

    ReplyDelete
  5. ಚೆನ್ನಾಗಿದೆ ದೇಸಾಯ್ ಜೀ
    ಬರಲಿರುವ ನಾಳೆಗಳ ಹೊಳಪು ಬಿಂಬಿಸುವ
    ಕಣ್ಣುಗಳಿಗೆ ವರ್ತಮಾನದ ಧೂಳು ರಾಚುತಿದೆ.
    ಈ ಸಾಲು ಗಳ೦ತೂ ಅರ್ಥಗರ್ಭಿತವಾಗಿವೆ.

    ReplyDelete
  6. ದೇಸಾಯಿ ಸರ್,

    ಕಾಯುವಿಕೆಯ ಬಗ್ಗೆ ಒಳ್ಳೆಯ ಕವನವನ್ನು ಬರೆದಿದ್ದೀರಿ...

    ReplyDelete
  7. ಕಾಕಾ ಧನ್ಯವಾದಗಳು ಆಶಾವಾದ ಎಲ್ಲಾರಿಗೂ ಬೇಕು ಅದು ನಾನೂ ಆಶಾವಾದೀನ ಆದ್ರೂ ಸುತ್ತಲ ಜಗತ್ತು ನಿರಾಸೆ ಮೂಡಿಸುತ್ತದೆ.

    ReplyDelete
  8. ಹೆಗಡೇಜಿ ಪ್ರತಿಕ್ರಿಯೆಗೆ ಧನ್ಯವಾದಗಳು ಕತ್ತಲೆಯಲ್ಲೂ ಬೆಳಕಿಗಾಗಿತುದಿಯುವುದೇ ಜೀವನ ಏನಂತೀರಿ

    ReplyDelete
  9. ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ್ ಸರ್

    ReplyDelete
  10. @ಆನಂದ್ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  11. ಪರಾಂಜಪೆ ಅವರಿಗೆ ಧನ್ಯವಾದಗಳು....

    ReplyDelete
  12. ಸಿವು ಪ್ರತಿಕ್ರಿಯೆಗೆ ಧನ್ಯತೆ

    ReplyDelete
  13. ತುಂಬಾ ಚೆ೦ದದ ಕವಿತೆ. ಅಭಿನಂದನೆಗಳು ಸರ್.

    ReplyDelete