ಅಶ್ವಥ ವೃಕ್ಷ ಉರುಳಿದೆ
ಆಶ್ರಯ ಪಡೆದ ಹಕ್ಕಿಗಳೆಲ್ಲ
ಚೆಲ್ಲಾಪಿಲ್ಲಿ...
ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆ
ಹೊರಟಿದೆ....
ಕವಿನುಡಿ ನಮ್ಮ ನಾಲಿಗೆಗಳ ಮೇಲೆ
ಸರಿದಾಡುವಂತೆ ಮಾಡಿದವ...
ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವ
ಹಾಡುಗಳಿಗೆ ಭಾಷ್ಯಬರೆದವ ಈಗಿಲ್ಲ...
ನಂಬಬೇಕು ಇದು ಸತ್ಯ...
ಅಲ್ಲಲ್ಲ ಅಶ್ವಥ ಮಾತ್ರ ನಿತ್ಯ...
ಸರ್,
ReplyDeleteಅಶ್ವಥ್ ಇಲ್ಲವಾದ ಸುದ್ಧಿ ಕೇಳಿ ಇವತ್ತು ಯಾಕೋ ಮನಸ್ಸಿಗೆ ಒಂಥರ ಬೇಸರ. ನಿನ್ನೆಯವರೆಗೆ "ರೇರೇರೇ...ರಾ....ಅನ್ನುತ್ತಿದ ಕಂಚಿನ ಕಂಠ ಇವತ್ತು ಇಲ್ಲವಲ್ಲ.
ಅವರ ಆತ್ಮಕ್ಕೆ ಶಾಂತಿ ಸಿಗಲಿ...
ನಿಜಕ್ಕೂ ಅಮೋಘ ನಿಮ್ಮ ಕವನ.. ನನ್ನ ಮನದಾಳದ ಭಾವನೆಗಳನ್ನ ನೀವು ಕಾಗದದ ಮೇಲೆ ಇಳಿಸಿದ್ದೀರ.. ನಿನ್ನೆ ರಾತ್ರಿ ಇಂದ ಕಾಣದ ಕಡಲಿಗೆ ಹಂಬಲಿಸಿದೆ ಮನ ಹಾಗು ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ಗೀತೆಗಳನ್ನ ಎಷ್ಟು ಬಾರಿ ಕೇಳಿದ್ದೀನೋ ನನಗೆ ಗೊತ್ತಿಲ್ಲ..
ReplyDeleteಅವರ ನೆನಪಿನಲ್ಲಿ ..
ಅವೀನ್
"ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ"
ಗಾನ ಗಾರುಡಿಗ ಶ್ರೀ ಅಶ್ವಥ ಅವರು ಮಹಾನ್ ಗಾಯಕರು ಅವರ ಅಗಲಿಕೆಯಿಂದ ಎಲ್ಲರಿಗು ತುಂಬಾ ಬೇಸರವಾಗಿದೆ. ಇದು ಇಡಿ ಕರ್ನಾಟಕಕ್ಕೆ ತುಂಬಲಾರದ ಆಸ್ತಿ.
ReplyDeleteಅಶ್ವಥರು ನಮ್ಮ ನಡುವೆ ತಮ್ಮ ಕ೦ಚಿನ ಕ೦ಠದಲ್ಲಿ ಸದ ಇರುತ್ತಾರೆ. ಅ೦ಥಾ ಹಾಡುಗಾರನಿಗೆ ನಮ್ಮ ಭಾವಪೂರ್ಣ ಶ್ರಧ್ಧಾ೦ಜಲಿ.
ReplyDelete