Wednesday, September 30, 2009

" ನಾ ಮಾತ್ರ ತಾಯಿ ಅಲ್ವಾ...."

ಮೇಲಿನ ತಲೆ ಬರಹದ ಕತೆ ಅಕ್ಟೋಬರ್ ತುಷಾರ ದಲ್ಲಿದೆ. ಮೂಲ ತೆಲುಗು ಲೇಖಕರು
"ಶ್ರೀ ಮನ್ನೆ ಸತ್ಯನಾರಾಯಣ" ಹಾಗೂ ಯಶಸ್ವಿಯಾಗಿ ಕನ್ನಡಕ್ಕೆ ತಂದವರು ಯಲ್ದೂರು ಪ್ರಭು. ಇದು ಅನುವಾದಿತ ಕತೆ.
ನಮ್ಮ ಸಮಾಜದ ಓರೆ ಕೋರೆ , ಹುಳಕನ್ನು ಬೆತ್ತಲಾಗಿಸುತ್ತದೆ. ನಾವೇ ಸೃಷ್ಟಿಸಿಕೊಂಡ ಮೇಲು ಕೀಳುಗಳು
ಸಂಪತ್ತು ಆಧಾರಿತ ವರ್ಗೀಕರಣ ಇವು ನಮ್ಮ ದೇಶ ೬೦ ಸ್ವಾತಂತ್ರ್ಯನೋಡಿದರೂ ಹಾಗೆ ಇದೆ ಇನ್ನೂ ಜಾಸ್ತಿಯಾಗಿತ್ತಿದೆ.

ಸಂಕ್ಷಿಪ್ತವಾಗಿ ಕತೆ ಹಂದರ ಹೀಗಿದೆ. ರೇಖಾ ಹಾಗೂ ನರಸಮ್ಮ ಇಬ್ಬರೂ ಕೂಡಿ ಆಡಿದವರು
ರೇಖಾ ಮಹಿಳಾ ಕಲ್ಯಾಣ ಇಲಾಖೆ ನೌಕರಳು. ನರಸಮ್ಮ ಕೂಲಿ ಹೆಂಗಸು. ಕತೆ ಶುರುಆಗುವುದು ನರಸಮ್ಮ ರೇಖಾಳ ಬಳಿ
ಸಾವಿರರುಪಾಯಿ ಸಾಲ ಕೇಳುತ್ತಾಳೆ. ರೇಖಾಗೆ ಆಶ್ಚರ್ಯದ ವಿಷಯ ಅಂದ್ರೆ ನರಸಮ್ಮ ಒಂದು ತಿಂಗಳ ಮಗುವಿನ ಬಾಣಂತಿ ಆದರೂ ದುಡಿಯಲು ಹೋಗುತ್ತ ಇದ್ದಾಳೆ ಹಾಗೂ ತಾನು ದುಡಿಯದಿದ್ದರೆ ಸಂಸಾರದ ಬಂಡಿ ಸಾಗೊಲ್ಲ ಎಂಬ
ಸಂಗತಿ ರೇಖಾಳಿಗೆ ತಿಳಿಸುತ್ತಾಳೆ. ರೇಖಾಳೂ ಹೆರಿಗೆ ರಜೆಯಲ್ಲಿದ್ದಾಳೆ. ಸರಕಾರ ತನಗೆ ಹೆರಿಗೆ ರಜೆ, ಭತ್ಯೆ ಇತ್ಯಾದಿ ಸವಲತ್ತು
ನೀಡಿರುವುದಾಗಿ ಹೇಳುತ್ತಾಳೆ. ನಮ್ಮ ತಾಯ್ತನಕ್ಕೆ ಗೌರವ ದ್ಯೋತಕವಾಗಿ ಸರಕಾರ ಹೀಗೆ ಸವಲತ್ತು ನೀಡಿದೆ ಎನ್ನುತ್ತಾಳೆ.
ಮುಗ್ಧೆ ನರಸಮ್ಮ ರೇಖಾಳ ಪುಣ್ಯ ಹೊಗಳುತ್ತಾಳೆ.ಮರುದಿನ ಮತ್ತೆ ಬಂದ ನರಸಮ್ಮ ರೇಖಾಳಿಗೆ ಪ್ರಶ್ನೆ ಹಾಕುತ್ತಾಳೆ ಅದೆಂದರೆ ಸರಕಾರ ಏಕೆ ತನಗೂ ಹೆರಿಗೆ ರಜೆ, ಭತ್ಯೆ ನೀಡೊಲ್ಲ. " ನೀವು ಕಾಗದ-ಪೆನ್ನಿನಿಂದ ಕೆಲ್ಸ ಮಾಡ್ತೀರಾ ನಾವು ಭೂಮಿ ಮೇಲೆ ಮಣ್ಣಿನ ಜೊತೆ ಕೆಲ್ಸ ಮಾಡ್ತೀವಮ್ಮ..." . ನರಸಮ್ಮನ ಪ್ರಶ್ನೆ ರೇಖಾಗೆ ವಿಚಲಿತಳನ್ನಾಗಿ ಮಾಡುತ್ತದೆ. ನರಸಮ್ಮನ
ಬೇಡಿಕೆ ನ್ಯಾಯ ಸಮ್ಮತವಾದದ್ದೇ ನಿಜ. ಆದ್ರೆ ತಾನೊಬ್ಬಳು ಏನು ಮಾಡಲಾದೀತು ಇದು ಅವಳ ದಿಗಿಲು. ರೇಖಾ ತನ್ನ ತಾಯಿಯನ್ನು ಕರೆಸಿಕೊಳ್ಳುತ್ತಾಳೆ ಅವಳ ತಾಯಿ ಸಹ ಸರಕಾರಿ ಉದ್ಯೋಗದಲ್ಲಿರೋಳು.ಒಂದು ತಿಂಗಳು ರಜೆ ಹಾಕಿದ್ರೆ ಸಂಬಳ ಕಟ್ ಆಗುತ್ತೆ ಇದು ಅವಳ ಗೋಳು.ಇತ್ತ ರೇಖಾ ಇನ್ನೂ ಎರಡು ತಿಂಗಳು ಮೆಟರ್ನಿಟಿ ಲೀವ್ ಬಾಕಿ ಇರೋವಾಗ್ಲೆ
ಕೆಲಸಕ್ಕೆ ಹಾಜರಾಗುತ್ತಾಳೆ . ಗಂಡ ತಾಯಿ ಸಹೋದ್ಯೋಗಿಗಳ ಕುಹಕಕ್ಕೆ ಜಗ್ಗದೇ. ತಾಯಿಗೆ ರೇಖಾ ಪ್ರಶ್ನಿಸುತ್ತಾಳೆ...
" ಅಮ್ಮ ಸರಕಾರೀ ತಾಯಿ ಮತ್ತು ಖಾಸಗಿ ತಾಯಿ ಅಂತ ಬೇರೆ ಇರ್ತಾರಾ " ತಾಯಿ ನಿರುತ್ತರವಾಗುತ್ತಾಳೆ. ರೇಖಾ
ಐದುಸಾವಿರ ನರಸಮ್ಮನಿಗೆ ಕೊಟ್ಟು ಮೂರು ತಿಂಗಳಮಟ್ಟಿಗಾದರೂ ಮನೆಯಲ್ಲಿಯೇ ಇದ್ದು ಮಗುವನ್ನು ಚೆನ್ನಾಗಿ ನೋಡು
ಎಂದು ಕೇಳಿಕೊಳ್ಳುತ್ತಾಳೆ."ನೌಕರರ ಬೇಡಿಕೆ ಈಡೇರಿಕೆಗೆ ರಾಜಧಾನಿ ಚಲೋ" ಎಂಬ ಕರಪತ್ರ ಮುಡುಡಿ ಬಿಸಾಕುತ್ತಾಳೆ.

ಒಬ್ಬರಿಂದ ಏನೂ ಸಾಧ್ಯವಿಲ್ಲ ಇದು ನಾವೆಲ್ಲ ಆಗಾಗ ಅಂದುಕೊಳ್ಳೋ ಮಾತು. ಎಲ್ಲದಕ್ಕೂ ಇನ್ನೊಬ್ಬರೆಡೆಗೆ ಬೆರಳು ಮಾಡಿ ತೋರಿಸುವುದು ರೂಢಿಯಾಗಿದೆ. ೬೦ ದಶಕ ಕಳೆದಿವೆ ಸರಕಾರ ಪ್ರತಿವರ್ಷ ಹೊಸ ಹೊಸ
ಯೋಜನೆ ಪ್ರಕಟಿಸುತ್ತದೆ. ಯಾರಿಗೆ ಅದು ಮುಟ್ಟಬೇಕಾಗಿದೆಯೋ ಅದು ಅವರಿಗೆ ತಲುಪಿಯೇ ಇಲ್ಲ. ನಮ್ಮ ಯೋಜನಾವರದಿಗಳು.ಆಯವ್ಯಯಗಳು ಏನು ಮಾಡಿವೆ. ಯಾರಿಗೆ ಇದರ ಫಲ ದೊರೆಯಬೇಕಾಗಿತ್ತೋ ಇನ್ನೂ ಅವರ
ತಲೆಮೇಲೆ ಸೂರಿಲ್ಲ ಕೂಳಿಲ್ಲ. ನಿಜ ವೋಟಿನ ಸಮಯದಲ್ಲಿ ಇವರಿಗೆ ಕೈ ಮುಗಿಯುವ ರಾಜಕಾರಣಿಗೆ ಇವರು ಮತ್ತೆ ನೆನಪಾಗೋದು ಐದು ವರ್ಷಗಳ ನಂತರವೇ.ಇದು ಇಷ್ಟೇ ಎಂದು ನರಸಮ್ಮನಂತಹವರು ಯಾವಾಗೋ ಠರಾಯಿಸಿಬಿಟ್ಟಿದ್ದಾರೆ.
ಇದು ಬರೀ ಹಳ್ಳೀ ವಿಷಯ ಅಲ್ಲ, ಬೆಂಗಳೂರಿನಲ್ಲೂ ಈ ಶೋಷನೆ ಇದೆ. ಸಂಬಳ ಕಟ್ ಆಗುತ್ತೆ ಎಂಬ ಸಂಕಟಕ್ಕೆ ಹಸುಗೂಸುಗಳನ್ನು ಕರೆದುಕೊಂಡೇ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಾರೆ. ಮಗು ಆಗಾಗ ಅಳಬಾರದು ಎನ್ನೋ ಸಂಕಟಕ್ಕೆ ಆ
ಕೂಸಿಗೆ ನಿದ್ದೆ ಔಷಧಿ ಉಣಿಸೋ ಮಾಲಕರಿದ್ದಾರೆ. ತಾಯಿ ಆಗಾಗ ಮಗೂಗೆ ಹಾಲು ಉಣಿಸಿದರೆ ಉತ್ಪಾದನೆ ಕಡಿಮೆ ಆಗುತ್ತದೆ
ಇದು ಅವರ ಸಂಕಟ. ಹೇಗಿದೆ ಈ ವಿಷ ವರ್ತುಲ.....?

ಬೆಚ್ಚನೆ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕೂತು ಟಂಕಿಸುವುದರಿಂದ ಈ ಕತೆ ಓದಿ ಅಥವಾ ಇದರಿಂದ ನರಸಮ್ಮನಂತಹವರು ಉದ್ಧಾರ ಆಗುತ್ತಾರೆ ಎಂಬ ಯಾವ ನಂಬಿಕೆ ನನಗಿಲ್ಲ. ಮನ ಕಲಕಿದ ಕತೆ ಬಗ್ಗೆ ನಿಮ್ಮೊಡನೆ
ಹಂಚಿಕೊಳ್ಳುವ ಇರಾದೆ ಮಾತ್ರ ಇದೆ.

5 comments:

  1. ವಾಸ್ತವದ ಕಟುತ್ವ ತು೦ಬಿದ ಕಹಿಗುಳಿಗೆ. ನಾವು ಈ ವಿಷವರ್ತುಲದ ಭಾಗಗಳು. ಮನಕಲಕುವ ಕಥೆ.

    ReplyDelete
  2. ದೇಸಾಯಿ ಸರ್,

    ಮಯೂರದಲ್ಲಿನ ಕತೆಯನ್ನು ಓದಿದ್ದೇನೆ. ಆ ಕತೆಯಂತೂ ನಿಜಕ್ಕೂ ಮನಕಲಕುತ್ತದೆ. ನಮ್ಮ ನಿತ್ಯ ಸಮಾಜದ ಪರಿಸ್ಥಿತಿಯನ್ನು ಚೆನ್ನಾಗಿ ಪ್ರತಿಬಿಂಬಿಸಿರುವ ಕತೆಯನ್ನು ನೀವು ಮತ್ತೆ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ..

    ಧನ್ಯವಾದಗಳು.

    ReplyDelete
  3. ಈ ಕಹಿಗುಳಿಗೆಗಳಿಗೆ ಮುಕ್ತಿ ಇಲ್ಲವೇ ಸರ್ ಸುಮಾರು ಐವ್ವತ್ತು ವರ್ಷಗಳಿಂದೀಚೆಗೆ ಈ ಭೇದಬಾವ ಹೆಚ್ಚಾಗುತ್ತಲೇ ಇದೆ
    ಅನೇಕ ಜನ ನೀರಿನಿಂದ ಸೂರು,ಅನ್ನ ಕಳೆದುಕೊಂಡು ಒದ್ದಾಡುತ್ತಿದ್ದರೆ ಖೇಣಿ ಅಂತಹವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ
    ಉಪೇಂದ್ರ ಅಂತಹವರು ಅಲ್ಲಿ ಹೋಗಿ ರಂಜಿಸುತ್ತಾರೆ...!

    ReplyDelete
  4. ಶಿವು ನಿಮ್ಮ ಅನಿಸಿಕೆಗೆ ಸ್ವಾಗತ ಆದರೆ ಅದು ಮಯೂರ ಅಲ್ಲ ತುಷಾರ.

    ReplyDelete
  5. ವಿಷಯ ಪ್ರಸ್ತುತಿಗೆ ಧನ್ಯವಾದಗಳು. ಕತೆ ಓದಬೇಕೆನಿಸುತ್ತಿದೆ.

    ReplyDelete