Sunday, February 20, 2011

ಸೂರ್ ಮಾಗೂ ತುಲಾ ಮಿ ಕಸಾ...
















ಪ್ರಸ್ತುತ ಗೀತೆ ಮರಾಠಿದು.ಕವಿ ಸುರೇಶ್ ಭಟ್ . ಸುರೇಶ ಭಟ್ ಮರಾಠಿಗೆ ಗಜಲ್ ಗಳ ಪರಿಚಯಿಸಿದವರು.
೨೦೦೩ ರಲ್ಲಿ ದೇಹ ತ್ಯಜಿಸಿದ ಇವರು ಮರಾಠಿಸಾಹಿತ್ಯದ ರೆಂಬೆಯ ದಿಕ್ಕು ಹೊಸದೆಡೆರೆಗೆ ಪಸರಿಸುವಂತೆ
ಮಾಡಿದವರು. ಅದುವರೆಗೂ ಗಜಲ್ ಇದು ಉರ್ದು ಭಾಷೆಗೆ ಭೂಷಿತ ಅನ್ನುವ ಮಿಥ್ಯೆ ಹೋಗಲಾಡಿಸಿ
ಸರಳ ಸುಂದರ ಮರಾಠಿಯಲ್ಲೂ ಗಜಲ್ ಬರೆಯಬಹುದು ಅಂತ ತೋರಿಸಿಕೊಟ್ಟ ಮಹನೀಯ.ಇವರ ಅನೇಕ
ಹಾಡು ಮರಾಠಿ ಸಿನೆಮಗಳಲ್ಲೂ ಬಂದಿವೆ.ಲತಾ, ಸುರೇಶ್ ವಾಡಕರ್, ಹೀಗೆ ಅನೇಕ ಹೆಸರಾಂತರು ಇವರ
ಗೀತೆಗಳಿಗೆ ದನಿಯಾಗಿದ್ದಾರೆ.

ನಾ ಆಯ್ದುಕೊಂಡ ಗೀತೆಗೆ ದನಿ ನೀಡಿದವರು ರೇಶಿಮೆ ಕಂಠದ ಅರುಣ್ ದಾತೆ. ಇದಕ್ಕೆ ಸ್ವರ ಸಂಯೋಜನೆ
ಹೃದಯನಾಥ್ ಮಂಗೇಶ್ಕರ ಅವರದು. ಇದೊಂದು ರೀತಿಯಲ್ಲಿ ಪ್ರತಿಭೆಗಳ ತ್ರಿವೇಣಿ ಸಂಗಮ.

ಗೀತೆ ಜೀವನ ಅದು ಒಡ್ಡುವ ಸವಾಲು ಅದರ ಬವಣೆಗಳನ್ನು ಹೇಳುತ್ತದೆ. ಕವಿ ಜೀವನಕ್ಕೆ ಹೆಜ್ಜೆ ಹೆಜ್ಜೆಗೂ ಪ್ರಶ್ನೆಕೇಳುತ್ತಾನೆ. ಜೀವನ ಅಥವಾ ವಿಧಿ ನಿರ್ವಿಕಾರ. ಅಮೃತವನ್ನೇ ಮನುಜ ಉಂಡರೂ ಅದು ನೀಡುವ
ಬವಣೆ ತಪ್ಪಿದ್ದಲ್ಲ. ಕೊನೆಕೊನೆಗೆ ಹತಾಶಭಾವ ಈ ಕವಿತೆಯಲ್ಲಿ ಬಂದಿದೆ.

ಮರಾಠಿ ಭಾಷೆ ಸರಳ ಅಲ್ಲಿ ಕೆಲವು ಶಬ್ದಗಳಿವೆ "ಜಸಾ","ತಸಾ","ವಸಾ" ತೀರ ಸರಳ ಪದಗಳಾದರೂ
ಅವು ಹೊರಡಿಸೋ ದನಿ ವಿಶಿಷ್ಟವಾದದ್ದು.ಕನ್ನಡ ಭಾಷಾಂತರ ಸ್ವಲ್ಪಕಠಿಣವೇ ಅನಿಸಿತ್ತು. ನಾನೇನು ಅಕಾಡೆಮಿಕ್
ಆಗಿ ಭಾಷೆ ಕಲಿತವನಲ್ಲ. ಅನುವಾದ ಮಾಡುವಾಗ ತಪ್ಪೂ ನುಸುಳಿರಬಹುದು. ಕ್ಷಮೆ ಇರಲಿ.
-------------------------------------------------------------------------------------------------------

सुर मागु तुला मी कसा ?
जीवना तू तसा मी असा

तू मला, मी तुला पाहिलॆ
एक्मेकांस य्नाहाळिले
दुःख माझातुझा आरसा..!

एकदाही मनासारखा
तू न झालास माझा सखा
खेळलॊ खॆळ झाला जसा

खूप झाले तुझॆ बॊलणे
खूप झाले तुझे कॊपणे
मी तरीही जसाच्या तसा

रंग सारे तुझे झॆलूनि
शाप सारे तुझे घेवूनि
हिंडतॊ मी ही वॆडा पिसा

काय मागून काहि मिळे ?
का तुला गीत माझे कळे
व्य्रर्थ हा अमृताचा वसा..!
---------------------------------------------------------------------------------------------


ನಿನ್ನ ಶೃತಿಗೆ ಸಮನಾಗಿ ನಾ ಸ್ವರ ಮೀಟದೇ ಹೋದೆ..
ವಿಧಿ ನೀ ಹಾಗಾದರೆ ನಾನಿರುವುದು ಹೀಗೆ......

ಹೆಗಲಮೇಲೆ ಕೈ ಹಾಕಿ ಉಲಿವ ಸಖ ನೀನಾಗಲಿಲ್ಲ..
ಆದರೂ ನಿನ್ನ ಕೈಗೊಂಬೆ ನಾನು, ನೀ ಹೇಳಿದಹಾಗೆ ಕುಣಿದೆ..

ನಾ ನಿನ್ನನ್ನು ನೀ ನನ್ನನ್ನು ನೋಡುವೆವು..ಸದಾಕಾಲ
ನಿನ್ನೆದೆಯ ಕನ್ನಡಿಯಲಿ ನನ್ನದೇ  ದುಃಖದ ಛಾಯೆ ಇದೆ

ನಿನ್ನ ಜರೆಯುವಿಕೆ, ತೆಗಳುವಿಕೆ ಎಲ್ಲ ಸಹಿಸಿರುವೆ..
ಕಲ್ಬಂಡೆಯ ಮೇಲೆ ಕೆಂಡದಮಳೆ ಸುರಿದರೂ ನಗುತಲೇ ಇದೆ..

ನೀ ಬಳಿದ ಬಣ್ಣ, ನೀ ಕೊಟ್ಟ ಶಾಪದ ಮಾಲೆ ಧರಿಸಿ
ಓಲಾಡಿರುವೆ,  ತರಗೆಲೆ ಇದು ದೇಶ ಕಾಲ ಅಲೆದಿದೆ

ಬೇಡಿದರೇನು, ನಿನ್ನ ಸ್ತುತಿಗೀತೆ ಹಾಡಿದರೇನು..
ವಿಷಬಳ್ಳಿಯಿಂದ ಅಮೃತಫಲ ಇನ್ನೂ ಹುಟ್ಟದಿದೆ....!






7 comments:

  1. ದೇಸಾಯಿಯವರೇ, ಕವಿತೆಯೊಳಗಿನ ಭಾವ, ಭಾವನೆ maraaThi ಕವಿತೆಯನ್ನು ಸಮರ್ಥವಾಗಿ ಪ್ರತಿನಿಧಿಸಿದೆ. ಚೆನ್ನಾಗಿದೆ. ಇನ್ನಷ್ಟು ಇಂಥದ್ದು ಬರೆಯಿರಿ.

    ReplyDelete
  2. ಏನು ಅದ್ಭುತವಾದ ಗೀತೆ ಇದು!ವಿಷಾದದ ಛಾಯೆ ಕವನವನ್ನೆಲ್ಲ ವ್ಯಾಪಿಸಿದೆ. ಅಚಾನಕ್ ಆಗಿ ನನಗೆ ‘ಸಾಹಬಬೀಬಿ ಔರ ಗುಲಾಮ’ ಚಿತ್ರದ ‘ನ ಜಾವೊ ಸಯ್ಯಾ..’ ಗೀತೆ ನೆನಪಾಯಿತು. ಈ ಎರಡೂ ಗೀತೆಗಳಲ್ಲಿ ಅರ್ಥವ್ಯತ್ಯಾಸವಿದ್ದರೂ ಸಹ, ನಾಯಿಕೆಯರ ಮನದಾಳದ ವ್ಯಥೆ ಒಂದೇ ಆಗಿದೆ. ಒಂದು ಉತ್ತಮ ಕವನ ಹಾಗು ಉತ್ತಮ ಅನುವಾದಕ್ಕಾಗಿ ಧನ್ಯವಾದಗಳು.

    ReplyDelete
  3. ದೇಸಾಯಿ ಸರ್, ವಾಹ್..!!

    ಖರೆ ಅದ, "ಜೀವನ ತೂ ತಸಾ ಮಿ ಅಸಾ"
    ಅದ್ಭುತವಾದ ಹಾಡು..
    ಸುಂದರವಾದ ತಜುರ್ಮೆ..

    You made my Day :)

    ReplyDelete
  4. chendada anuvaada desaayiyavara.
    sitaaram

    ReplyDelete
  5. Kavana tumba ishtavaytu . . . by reaching last two lines it strikes the chord. thank you

    ReplyDelete
  6. ದೇಸಾಯಿಯವರೆ..

    ಮಸ್ತ್ ಹಾಡು..

    ಭಾವಾನುವಾದ ಕೂಡ ಸೂಪರ್.. !
    ಅಭಿನಂದನೆಗಳು...

    ReplyDelete
  7. ಉಮೇಶ್ ದೇಸಾಯ್ ಸರ್,

    ನಿಜಕ್ಕೂ ಖುಷಿಕೊಡುವ ಹಾಡು. ಅದರ ಭಾವಾನುವಾದವನ್ನು ಚೆನ್ನಾಗಿ ಮಾಡಿದ್ದೀರಿ...ಧನ್ಯವಾದಗಳು.

    ReplyDelete