Friday, March 4, 2011

ದಾಸ್ತಾನ್-ಎ-ಶಾಮ್ ...

ಸಂಧ್ಯಾಕಾಲ --ಮುಸ್ಸಂಜೆ--ನಮ್ಮ ಧಾರವಾಡದ ಕಡೆ ಹೇಳೂದಾದ್ರೆ ಮೂರುಸಂಜಿ. ಈ ಘಳಿಗೆ ಅಥವಾ ಸಮಯ
ಒಂಥರಾ ಸಂಧಿಕಾಲದ್ದು. ಹಗಲು ರಾತ್ರಿಗೆ ಕೈ ಕುಲುಕಲು ಈ ಸಮಯ ಸೇತುವೆ ಆಗುತ್ತದೆ. ಇದನ್ನು ದಾಟಿಯೇ
ಅವರ ಮಿಲನವಾಗುತ್ತದೆ.ಅಂದರೆ ಸಾಯಂಕಾಲ ಬಹು ಮುಖ್ಯಕಾಲ. ಇಂತಹ ಸಾಯಂಕಾಲ ನಮ್ಮ ಅನೇಕ ಗೀತೆಗಳಿಗೆ ಹಾಡುಗಳಿಗೆ ವೇದಿಕೆಯಾಗಿದೆ.
ನನಗೆ ನನ್ನ ಬಾಲ್ಯದ ನೆನಪು. ಸಂಜೆ ಆಗುತ್ತಿದ್ದಂತೆ ಆಟ ಮುಗಿಸಿ ಕೈ ಕಾಲು ತೊಳೆದು ಅವ್ವ ದೇವರ ಮುಂದೆ ದೀಪ
ಹಚ್ಚುವಾಗ ಕೈ ಮುಗಿದು "ಶುಭಂಕರೋತಿ ಕಲ್ಯಾಣಂ..." ಹೇಳುವುದು ರೂಢಿ. ಮುಂದೆ ಅಭ್ಯಾಸದ ಸಮಯ. ಹಳ್ಳಿಕಡೆ  ಹೊಲಕ್ಕೆ ಹೋಗಿದ್ದ  ದನಕರುಗಳು ,ರೈತರು ವಾಪಸ್ ಮನೆಗೆ ಬರುವ ಸಮಯ.
 ಗೋಧೂಳಿ ಅಂತ ಹಿರಿಯರು ಭಾಳ  ಸೊಗಸಾಗಿ ಹೆಸರು ಇಟ್ಟಾರ.
 ಈಗ ದಿನಾ ಬದಲಾಗ್ಯವ. ದುಡಿಯೋ ಧಾವಂತದಾಗ ಅನೇಕ ಹಗಲು ಒಮ್ಮೆಲೆ ರಾತ್ರಿ  ಆಗಿಹೋದ್ವು.
 ನಡುವ ಬರುವ ಸಂಜೆ ತನ್ನ ಇರುವು ಸಾರದೇ ಹಾಗೆಯೇ ಕರಗಿ ಹೋತು. ನನ್ನಂಥ ಬಿಎಮ್ ಟಿಸಿ ಪಯಣಿಗರ ಕತಿ ಅಂತು ಕೇಳಬ್ಯಾಡ್ರಿ. ಡ್ರೈವರ್ ಬಸ್ಸಿನ್ಯಾಗಿನ ದೀಪ ಹಚ್ಚಿದಾಗ ಗೊತ್ತಾಗ್ತದ ಸಾಯಂಕಾಲ ಆತು ಅಂತ
ಮನಿ ಮುಟ್ಟಿದಾಗ ಸಂಜೆ ಆಗಲೇ ರಾತ್ರಿಯ ತೆಕ್ಕೆಯಲ್ಲಿ ಕರಗಿ ಹೋಗಿರತದ. ಇರಲಿ ವಾಸ್ತವದ ಕಹಿ ಇದ್ದಿದ್ದ. ಸ್ವಲ್ಪ
ಕಲ್ಪನಾ ಲೋಕಕ್ಕೆ ಹೋಗೋಣು. ಸಂಜೆ ನಮ್ಮ ಅನೇಕ ಗೀತೆಗಳಿಗೆ ವೇದಿಕೆ ಅಂತ ಮೊದಲೇ ಹೇಳಿದೆ...
ಅನೇಕ ಸಿನೇಮಾ ದಾಗ ನಾಯಕ ಮೂರುಸಂಜಿನ್ಯಾಗ ತನ್ನ ಗೆಳತಿಯನ್ನು ನೆನೆಯೋದು...ಹಳೇ ಸಿನೆಮ ಆದ್ರೆ
ಸ್ಟುಡಿಯೋ ದ ಕೃತಕ ಸೆಟ್ ನಲ್ಲಿ ಓಡಾಡುತ್ತ ಹಲಬುತ್ತಿರುತ್ತಾನೆ. ಹೊಸ ಸಿನೇಮಾದಾಗೂ ಬದಲಾಗಿಲ್ಲ. ಅವಳಿಲ್ಲದೆ
ಬಂದ " ಈ ಸಂಜೆ ಯಾಕಾಗಿದೆ..." ಅನ್ನುವ ಮೂಲಭೂತ ಪ್ರಶ್ನೆ ಎತ್ತುತ್ತಾನೆ.

ಈ ಸಂಜೆ ಬರೇ ಸಿನೇಮಾ ಹಾಡಿಗೆ ಸ್ಫೂರ್ತಿ ಅಲ್ಲ , ಅನೇಕ ಕವಿಗಳು ಈ ಸಾಯಂಕಾಲದ ಬೇಗೆಗಳಿಗೆ ದನಿಯಾಗಿದ್ದಾರೆ.ಪ್ರಕೃರ್ತಿ ವರ್ಣನಾ ಮಾಡುವುದರ ಜೊತೆಗೆ ಅನೇಕ ಭಾವಗಳಿಗೆ ಕನ್ನಡಿ ಹಿಡಿದಿದ್ದಾರೆ.
ವರಕವಿಯ
 "ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ..".
 ಎಂಥಾ ಸೊಗಸಾದ ಚಿತ್ರ  ಕೆಂಪಡರಿದ ಆಕಾಶ "ನಂಜ" ಹಿಡಿದವರಂಗ ಕಾಣಸ್ತದ.
 ರಾಷ್ಟ್ರಕವಿ ಹಿಂದಿಲ್ಲ. ತಮ್ಮ ನೆಚ್ಚಿನ ಕವಿಶೈಲದಲ್ಲಿ ಕುಳಿತು
ಸಂಜೆ ಸೊಬಗು ಅನುಭವಿಸುತ್ತ ಹೇಳಿದ ಮಾತು
.."ಪಶ್ಚಿಮ ಗಿರಿಶಿಖರದಲಿ ಸಂಧ್ಯೆಯ ರವಿ;
 ನಿರ್ಜನ ಕವಿಶೈಲದೊಳಬ್ಬನೆ ಕವಿ;
 ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ ಅನಂತ ಶಾಂತಿ".

 ನಮ್ಮ ಇನ್ನೊಬ್ಬ ಹೆಮ್ಮೆಯ ರಾಷ್ಟ್ರಕವಿ ಸಂಜೆಯ ಸೊಬಗನ್ನು ಹೇಳುವ ಪರಿಯೇ ವಿಶಿಷ್ಟ. ಸಾಯಂಕಾಲದ
ತಳಮಳ ವನ್ನು ಶಕುಂತಲೆಯ ಒಳಗುಗಿಗೆ ತಳುಕು ಹಾಕಿ
"ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ.."   ಎಂದು ಹೇಳುತ್ತಾರೆ. ತಮ್ಮ ಇನ್ನೊಂದು ಕವಿತೆಯಲ್ಲಿ
" ಶ್ರೀ ಹರಿಪಾದ ಅಪೂರ್ವ ಪಕ್ಷಿಯ ಹಾಗೆತೋರಿರಲು
 ದಟ್ಟ ಪೊದೆಗಳ ನಡುವೆ ,
 ಕೂಡಲೇ ಹೂಡಿ ಬಿಲ್ಲಿಗೆಬಾಣ ಬಿಟ್ಟನು ಗುರಿಗೆ,
  ತಾಗಿದ್ದೆ ತಡ ಛಿಲ್ಲೆಂದು ಚಿಮ್ಮಿತು ರಕ್ತ..ಕೆಂಪಾಯಿತು
  ನೀಲಿಯ ಗಗನ".

 ಅದೆಂತಹ ಅದ್ಭುತ ಕಲ್ಪನೆ. ಜಯಂತ ಕಾಯಕಿಣಿ ತಮ್ಮ "ಈಗ" ಅನ್ನುವ ಕವಿತೆಯಲ್ಲಿ ಮುಂಬಯಿ ಮಹಾನಗರಿಯ
ಚಿತ್ರಣ ಅದೆಷ್ಟು ಸೊಗಸಾಗಿ ನೀಡಿದ್ದಾರೆ. ಈ ಕವಿತೆಯ ಕೊನೆಯ ಸಾಲು..
"ಅಲ್ಲಿ ಕಾಮಾಟಿಪುರದಲ್ಲಿ
ಹದಿನೇಳರ ಬಾಲೆಯ ಹೊಟ್ಟೆಗೆ ಅವರು ಒದೆಯುತ್ತಾರೆ
ಬಿಡಿಸಿಕೊಳ್ಳಲು ನಾವಾರೂ ಅಲ್ಲಿಲ್ಲ..".

ಸಂಜೆ ವಾಸ್ತವ ವೇನು. ಬರೀ ಪ್ರಕೃರ್ತಿ ಬಣ್ಣ ಬದಲಾಯಿಸುವುದಲ್ಲ. ಬಿರುಬಿಸಿಲಲಿ ಬೆಂದ ಭುವಿ ಅರೆಗಳಿಗೆ ಕನಸಿನಲ್ಲಿ
ಮೈಮರೆಯುವ ಸಮಯ. ಮರಾಠಿ ಕವಿಗಳೂ ಈ ಸಂಜೆಯ ವರ್ಣನೆ ಹೀಗೆ ಮಾಡಿದ್ದಾರೆ..
"ಸಾಂಜ್ ಹೀ ಗೋಕುಳಿ ಸಾವಲಿ ಸಾವಲಿ..
ಸಾವಳ್ಯಾಚಿ ಜಣು ಸಾವಲಿ.."(ಸುರೇಶ್ ಭಟ್)

"ರಂಗಾಚ್ಯಾ ಹಾ ಉಘಡೂನಿ ಪಂಖಾ ಸಾಂಜ್ ಕುಣಿ ಹಾ ಕೇಲಿ.."(ಮಂಗೇಶ್ ಪಾಡ್ ಗಾಂವಕರ್)
"ಯಾ ಚಿಮಣ್ಯಾಂನೋ ಪರತ ಫಿರಾರೆ ಘರಾ ಕಡೆ ಆಪುಲ್ಯಾ.."(ಗದಿಮಾ).

ಸಿನೇಮಾ ಹಾಡಿಗಂತೂ ಈ ಸಾಯಂಕಾಲದ ವ್ಯಾಳ್ಯಾ ಒಂಥರಾ ಹೇಳಿಮಾಡಿಸಿದಂಗ. ನಾಯಕ ಮಹಾಶಯ ಅವಳನ್ನು ನೆನೆಯುತ್ತ ತೋಟದಲ್ಲೋ, ಸಮುದ್ರ ದಂಡೆಯಲ್ಲೋ ಅಥವ ಮನೆ ಮಾಳಿಗಿ ಮ್ಯಾಲೋ ಕೂತು ಹಾಡು
ಹೇಳತಾನ. ಹಿಂದಿ ಸಿನೇಮಾದಾಗ ಈ "ಶಾಮ್-ಎ-ಗಮ್" ಹಾಡುಗಳಿಗೆ ಲೆಕ್ಕವಿಲ್ಲ. ಬಹಳಷ್ಟು ಹಾಡು ವಿರಹುದುರಿ
ಹೆಚ್ಚಿಗೆ ಮಾಡುವಂತಹವು. ಶಾಮ್ ಅಥವಾ ಸಂಜೆ ಈ ಶಬ್ದ ಹಾಡಿನಲ್ಲಿ ನುಸುಳದಿದ್ದರೂ ಆ ಹಾಡು ಆನಾಯಕನ
ವೇದನೆ ಒಂಥರಾ ದುಃಖದ ಮಾಹೌಲ್ ನಿರ್ಮಿಸುತ್ತಿತ್ತು. ಕೆಲವೊಮ್ಮೆ ಸಂಜೆ ತುಂಟ ಗೀತೆಗಳಿಗೂ ವೇದಿಕೆಯಾಗಿದೆ..
ಈ ತುಂಟ ಗೀತೆಯ ಕ್ಲಾಸಿಕ್ ಉದಾಹರಣೆ ಗೀತಾಬಾಲಿ ಹಾಗೂ ಭಗವನ್ ಮೇಲೆ ಚಿತ್ರಿತವಾದ..
"ಶಾಮ್ ಢಲೆ ಮೇರೆ ಖಿಡಕಿ ತಲೆ ತುಮ್ ಸೀಟಿ ಬಜಾನಾ ಛೋಡದೋ....". ಈ ಹಾಡು ಎಂದೂ ಮರೆಯಲಾರದ್ದು.

ನಾ ಮೊದಲೇ ಹೇಳಿದಂತೆ ಹಾಡುಗಳು ಅನೇಕವಿವೆ. ಎಲ್ಲದರ ಪಟ್ಟಿ ಇಲ್ಲಿ ಬರೆಯುವುದು ಅಪ್ರಸ್ತುತ, ನನಗೆ ತೀರ
ಸೇರಿದ ಐದಾರು ಹಾಡು ಅವುಗಳ ಪಟ್ಟಿ ಕೊಟ್ಟಿರುವೆ....
೧) ಶಾಮೆ ಗಮ್ ಕಿ ಕಸಮ್ ಆಜ್ ಗಮಗೀನ್ ಹಮ್ (ತಲತ್ )
೨) ಫಿರ್ ವಹಿ ಶಾಮ್ ವಹಿ ಗಮ್ ವಹಿ ತನಹಾತಿ ಹೈ....(ತಲತ್)
೩) ಹುಯಿ ಶಾಮ್ ಉನಕಾ ಖಯಾಲ್ ಆ ಗಯಾ.. ಉಸೀ ಜಿಂದಗಿ ಕಾ ಸವಾಲ್ ಆ ಗಯಾ...(ರಫಿ)
೪) ಯೇ ಶಾಮ್ ಕಿ ತನಹಾಯಿಯಾಂ ಐಸೆ ಮೆ ತೇರಾ ಗಮ್ (ಲತಾ)
೫) ಕಹಿ ದೂರ್ ಜಬ್ ದಿನ್ ಢಲ್ ಜಾಯೇ(ಮುಕೇಶ್)
೬) ಖಾಲಿ ಹಾತ್ ಶಾಮ್ ಆಯಿ ಹೈ ಖಾಲಿ ಹಾತ್ ಜಾಯೇಗಿ..(ಆಶಾ).

ಈ ಲೇಖನದ ನಾ ಮೆಚ್ಚಿದ ಶಾಮ್ ಕುರಿತಾದ್ ಹಾಡು ಹಾಕಿರುವೆ....

18 comments:

 1. ದೇಸಾಯರ,
  ವೊ ಫುರಸತ್ ಕೆ ದಿನ್, ವೊ ಫುರಸತ್ ಕೇ ಶಾಮ್!
  ಎಲ್ಲಿ ಹೋದವೊ ಗೆಳೆಯಾ, ಆ ಕಾಲ?
  ಸಂಜೆಯ ಸೌಂದರ್ಯವನ್ನು ಸಮಗ್ರವಾಗಿ ಸಂಗ್ರಹಿಸಿ, ನಮ್ಮ ಹೃದಯವನ್ನು ತಂಪು ಮಾಡಿದಿರಿ.
  ಬಹಾರೇ ಏ ಯಾದೇ ಹಮಾರೆ ಸಾಥ ರಹನೇ ದೋ,
  ನ ಜಾನೇ ಜಿಸ ಗಲೀ ಮೇ ಜಿಂದಗೀ ಕೀ ಶಾಮ ಹೋ ಜಾಯೇ!

  ReplyDelete
 2. ಆಜ್ ಕಿ ಶಾಮ್ ದೇಸಾಯಿ ಸರ್ ಕೆ ನಾಮ್..
  ವಾಹ್..! ಶ್ಯಾಮ್ ಕಿ ಮೆಹಫಿಲ್ ಕೆ ಬಾರೆ ಮೇ ಕ್ಯಾ ಬತಾವು.. ?
  ದೇಸಾಯಿ ಸರ್, ಸುಂದರವಾದ ಲೇಖನ..

  ಸಂಜಿ ವ್ಯಾಳ್ಯಾ ಮತ್ತ ಹಾಡು ನೆನಪಾದವು,..
  "ಏ ಶಾಮ್ ಮಸತಾನಿ, ಮಧಹೊಶ್ ಕಿಯೇ ಜಾಯ್...'

  "ಕಭಿ ಶಾಮ್ ಢಲೇ ಮೇರೆ ದಿಲ್ ಮೇ ಆಜಾನ, ಕಭಿ ಚಾಂದ್ ಖಿಲೇ ತೊ ಮೇರೆ ದಿಲ್ ಮೇ ಆಜಾನ..'

  ReplyDelete
 3. ದೇಸಾಯಿಯವರೆ...

  ಈ ಸೂರ್ಯೋದಯದ ಸಮಯದಲ್ಲಿ ಸುಂದರ ಸಂಜೆಯ ನೆನಪಲ್ಲಿ ಮುಳುಗಿದೆ...

  ಎಂಥಹ ಹಾಡುಗಳು ವಾಹ್ !!

  ಮುಳುಗುವ ಸೂರ್ಯ...
  ವಿರಹ...
  ನಿರಾಸೆ...
  ನೆನಪು...
  ಮತ್ತು ಭರವಸೆಯನ್ನೂ ಕೊಡುತ್ತಾನೆ...

  ಉತ್ಸವ್ ಸಿನೇಮಾದ.. ಒಂದು ಹಾಡು ಇದರ ಯಾದಿಯಲ್ಲಿ ಸೇರಿಸಿಬಿಡಿ...

  ಜೈ ಹೋ ಉಮೇಶ ಭಯ್ಯಾ... !

  ReplyDelete
 4. ದೇಸಾಯ್ ಸರ್;ಸೂಪರ್ ಹಾಡು ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು.

  ReplyDelete
 5. wow sir, enta haaDu tumba istavaytu... thank you

  ReplyDelete
 6. ಉಮೇಶ್ ಸರ್ ಒಳ್ಲೆ ಲೇಖನ..ಏಕ್ ಶಾಮ್ ಕೀ ದಾಸ್ತಾಂ ಸುನಾತೆ ಸುನಾತೆ ಕಿತ್ನೆ ಶಾಮ್ ಗುಜರ್ ಗಯೇ
  ಏಕ್ ಶ್ಯಾಮ್ ಕೆ ದಿವಾನೆ ಹಜಾರೊಂ ಶಾಮ್ ಕೀ ತನ್ಹಾಯಿ
  ಔರ್ ಕಿತನೆ ರಾಧಾ ಗುಜರ್ ಗಯೆ

  ReplyDelete
 7. ಮಹಾಬಲಗಿರಿ ಭಟ್ ಅವರಿಗೆ ಧನ್ಯವಾದ

  ReplyDelete
 8. ಧನ್ಯವಾದಗಳು ನಾಗರಾಜ್

  ReplyDelete
 9. ಕಾಕಾ ನಿಮ್ಮ ಹಾರೈಕೆ ಹಿಂಗ ಇರಲಿ.ನೀವು ಹೇಳಿದ ಶೇರೂ ಚಂದ ಅದ

  ReplyDelete
 10. ಅನಿಲ್ ನಿಮ್ಮ ಉತ್ಸಾಹದ ಮುಂದೆ ನಾ ಏನೂ ಅಲ್ಲ.ಪ್ರತಿಕ್ರಿಯಾಕ್ಕ ಧನ್ಯವಾದ

  ReplyDelete
 11. ಹೆಗಡೇಜಿ ಪ್ರತಿಕ್ರಿಯಾಕ್ಕ ಧನ್ಯೋಸ್ಮಿ. ನೀವು ಹೇಳಿದ ಹಾಡು ಹಾಕಲಿಕ್ಕೆ ಆಗಲಿಲ್ಲ. ಆದ್ರ ಅವು ಅಮರ ಗೀತೆಗಳು

  ReplyDelete
 12. ಡಾಕ್ಟರ್ ಸರ ಮೆಚ್ಚಿಕೊಂಡಿದ್ದಕ್ಕ ಧನ್ಯವಾದ

  ReplyDelete
 13. ಅಪರೂಪಕ್ಕೆ ಬಂದು ಮೆಚ್ಚಿದ್ದಕ್ಕೆ ಧನ್ಯೋಸ್ಮಿ ಸುಗುಣಾ ಅವರೆ

  ReplyDelete
 14. ಆಜಾದ್ ಭಾಯಿ ಶುಕ್ರಿಯಾ

  ReplyDelete
 15. ಉಮೇಶ್ ಸರ್,
  ಮುಸ್ಸಂಜೆಯ ಬಗ್ಗೆ ಸೊಗಸಾದ ಲೇಖನ. ನೀವು ಹಾಕಿರುವ ಹಾಡು ತುಂಬಾ ಚೆನ್ನಾಗಿದೆ. ನನಗೆ "ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ..". ಮೆಚ್ಚಿನ ಹಾಡು ಕೂಡ...

  ReplyDelete