Thursday, June 11, 2009

ಸದಾ ಕಾಡುವ ಹಾಡು----೨

ಇಂದು ಬರೆಯಹೊರ‍ಟಿರುವುದು ೧೯೭೪ ರ ಹಾಡಿನ ಬಗ್ಗೆ. ಎಮರ್ಜೆನ್ಸಿ ಇನ್ನೂ ಬಂದಿರಲಿಲ್ಲ ಆದರೂ ದೇಶದ ಪರಿಸ್ಥಿತಿ
ಹದಗೆಟ್ಟಿತ್ತು ಮನೋಜ್ ಕುಮಾರ್ "ರೋಟಿ ಕಪಡಾ ಔರ್ ಮಕಾನ್ " ಸಿನೇಮ ತೆಗೆದ.ಈ ದೇಶದ ಸಾಮಾನ್ಯ ನಾಗರಿಕನ
ಕತೆ.... ಇಲ್ಲಿಯೂ ಸಹ ಒಬ್ಬ ಹುಡುಗಿ ಇವನಿಗೆ ಕೈ ಕೊಡುತ್ತಾಳೆ..ನಾಯಕನ ಎದೆ ಚೂರಾಗುತ್ತದೆ ಕಾಕತಾಳೀಯ ಎಂಬಂತೆ
ಅವಳ ನಿಶ್ಚಿತಾರ್ಥದ ದಿನ ನಾಯಕನ ಹಾಡು ಟಿವಿಯಲ್ಲಿ ಬರುತ್ತೆ . ಆ ಹಾಡು ಇಡಿ ಚಿತ್ರದ ಜೀವಾಳ..ಅವಳು ಮಾಡಿದ ದ್ರೋಹ ವರ್ಣಿಸಲು ಮಾತ್ರ ಆ ಹಾಡಲ್ಲ ತನ್ನ ಸುತ್ತಲಿನ ಸ್ಥಿತಿಯ ಬಗ್ಗೆ ನಾಯಕ ಕಳವಳ ವ್ಯಕ್ತ ಪಡಿಸುತ್ತಾನೆ....ಇಂದಿಗೂ ಆ ಹಾಡು
ಪ್ರಸ್ತುತ ಯಾಕಂದ್ರ ನಮ್ಮ ಈಗಿನ ಗತಿ ೧೯೭೪ ಕ್ಕಿಂತ ಭಿನ್ನ ಅಲ್ಲ....!

ಹಾಡು ಹಾಡಿದವರು ಕಂಚಿನ ಕಂಠದ ಮಹೇಂದ್ರ ಕಪೂರ್ ಈ ಹಾಡಿಗೆ ಅವರಿಗೆ ಫಿಲ್ಮಫೇರ್ ಪ್ರಶಸ್ತಿ ಸಹ ಬಂತು.... ಹಾಡು
ಈಗಲೂ ಯಾಕೆ ಪ್ರಸ್ತುತ ಅಂದ್ರೆ ಈ ಸಾಲು ಗಮನಿಸಿ.....
" कितना पढू ज्माने को
कितना गढू जमाने कॊ
कौन गुणोंकॊ गिनता है
कौन दुखॊंकॊ चुन्ता है "
ನಿಜ ತಾನೇ ಯಾರು ಸ್ವಾಮಿ ಇದ್ದಾರೆ ಈಗ ಅಂಥವರು..? ಕವಿ ಬಹಳ ಸೂಕ್ಷ್ಮ ಭಾವ ಕೆದಕುತ್ತಾನೆ. ಹಾಡು ಬರೆದವರು
"ಸಂತೋಷ ಆನಂದ್ " ಈ ಮಹಾನುಭಾವ ಹಿಂದಿ ಚಿತ್ರ ಗೀತೆಗಳಿಗೆ ಒಂದು ಹೊಸ ಆಯಾಮ ಕೊಟ್ಟಿದ್ದ, ಬರೆದದ್ದು ಕೆಲವೇ
ಹಾಡು ಒಂದೊಂದು ಅಪ್ಪಟ ಚಿನ್ನ...! ನನಗೆ ಸದಾ ಕಾಡುವ ಹಾಡು "ಔರ್ ನಹಿ ಬಸ್ ಔರ್ ನಹಿ ಗಮ ಕೆ ಪ್ಯಾಲೆ ಔರ್ ನಹಿ..." . ಮನೋಜ್ ಕುಮಾರ್ ನ ಪೂರಬ್ ಪಶ್ಚಿಮ್ ನ ಹಾಡು"ಜಿರೋ ದಿಯಾ ಮೇರೆ ಭಾರತ್ ನೆ..." ಈ ಹಾಡು ಅವರದು
ಮೊದಲ ಹಾಡಾಗಿರಬೇಕು. ಮುಂದೆ "ಶೋರ್" ಸಿನೇಮಾ..ಚಿತ್ರ ಮುಗ್ಗರಿಸಿದರೂ ಅದರ ಹಾಡುಗಳು ಇನ್ನೂ ಜೀವಂತವಾಗಿವೆ..
ಮನೋಜ್ ಕುಮಾರ್ ಆ ನಂತರ ತಮ್ಮ ಉಳಿದ ಚಿತ್ರಗಳಿಗೂ ಸಂತೋಷ್ ಆನಂದ ರಿಂದ ಹಾಡು ಬರ್ಸಿದರು,

ಯಾಕೆ ಆ ಹಾಡು ಸದಾ ಕಾಡುತ್ತದೆ....ಆ ಹಾಡಿನಲ್ಲಿ ವಿಚಿತ್ರ ಸೆಳೆತವಿದೆ ಆ ನೋವು ಎದೆ ಹಿಂಡುತ್ತದೆ..ಸುಮಾರು ೩೫ ವರ್ಷದ
ಹಿಂದೆಯೇ ನಮ್ಮ ನೈತಿಕತೆ ದಿವಾಳಿ ಯಾಗಿತ್ತು ಅದರ ಹಸಿ ಹಸಿ ಚಿತ್ರಣ ಇಲ್ಲಿದೆ-----
"बीमार हॊ गयी दुनिया
बॆकार हो गयी दुनिया
मरने लगी शर्म अब तो
बिक्ने लगे सनम अब तॊ"
ನಿಜ ತಾನೇ ಸುತ್ತಲಿನ ಜಗತ್ತು ಕೆಟ್ಟಿದೆ ಕೆಡುತ್ತ ಸಾಗಿದೆ..ಕವಿ ಮನ ಅದಕ್ಕೆ ರೋದಿಸಿದೆ...ಸಾಮಾನ್ಯ ಚಲನಚಿತ್ರದ ಒಂದು
ಸನ್ನಿವೇಶ ಕ್ರಿಯಾಶೀಲ ಕವಿಯಿಂದ ಎಂತಹ ಮಹತ್ತರ ಕೃತಿ ಹೊರತರಿಸುತ್ತದೆ...ಆದರೆ ಕವಿ ಅಸಹಾಯಕ ಸುತ್ತಲಿನ ಜಗತ್ತಿನ
ನೈತಿಕತೆ ಬುಡಮೇಲಾಗುತ್ತಿದ್ದರೂ ಏನೂ ಮಾಡದ ಅಸಹಾಯಕತೆ ಅವನನ್ನು ಕಾದುತ್ತಿದೆ ಆ ನೋವಾದರೂ ಎಂತಹುದು....
"कॊयि आग मचल जाये
सारा आलम जल जाये"
ಈ ಹಾಡು ಸದಾ ಕಾಡುವ ಹಾಡು....

5 comments:

 1. ನಿಮ್ಮ ಹತ್ತರ ಛಲೋ ಸಂಗ್ರಹ ಅದ!

  ReplyDelete
 2. ದೇಸಾಯಿಯವರೆ...

  ವಾಹ್....!!

  ಹಾಡುಗಳನ್ನು ಸಂಗ್ರಹಿಸಿ..
  ಅದರ ವಿಮರ್ಶೆ... ತುಂಬಾ ಸೊಗಸಾಗಿದೆ....

  ಎಷ್ಟು ಖುಷಿಯಾಗುತ್ತದೆ ಅಂದರೆ...
  ಸಾಯಂಕಾಲದ ಸಮಯದಲ್ಲಿ
  ಒಂದು ಪೆಗ್ ಹಾಕಿ ಈ ಹಾಡುಗಳನ್ನು ಕೇಳಬೇಕೆನ್ನಿಸುವಂತಿದೆ....
  ಸಣ್ಣನೆಯ ಬೆಳಕಿನಲ್ಲಿ....

  ವಾಹ್....!!

  ReplyDelete
 3. ನನಗೆ ಹಳೆಯ ಹಾಡುಗಳ ಪರಿಚಯ ಅಷ್ಟೊಂದಿಲ್ಲ.. ಕಿಶೋರ್, ರಫಿ, ಲತಾ ಮತ್ತು ಆಶಾ ಹಾಡಿರುವ ಜನಪ್ರಿಯ ಗೀತೆಗಳಲ್ಲಿ ಕೆಲವು ಮಾತ್ರ ನೆನಪಿವೆ.. ನೀವು ಮಾಡಿಕೊಡುವ ಮರೆಯಲಾಗದ ಈ ಹಳೆಯ ಹಾಡುಗಳ ಪರಿಚಯ ನನ್ನಂತವರಿಗೆ ತುಂಬಾ ಉಪಯುಕ್ತ. ಧನ್ಯವಾದಗಳು.

  ReplyDelete
 4. ನನಗೆ ಹಿಂದಿ ಬಾರದ ಕಾರಣ..ಹಿಂದಿ ಹಾಡುಗಳನ್ನು ಕೇಳುತ್ತಲೇ ಪಕ್ಕದಲ್ಲಿದ್ದವರ ಬಳಿ ಅರ್ಥ ಹೇಳಕೆ ತಲೆ ತಿನ್ನೋದು..ಖುಷಿಯಾಯಿತು ಓದಿ.
  -ಧರಿತ್ರಿ

  ReplyDelete
 5. ಸುನಾಥ ಸರ್ ಧನ್ಯವಾದಗಳು...
  ಹೆಗಡೆ ಅವರೆ ಪೆಗ್ ಹಾಕುವಾಗ ನನ್ನನ್ನು ಕರೀರಿ...
  ಉಮೇಶ ಹಳೆ ಹಾಡು,ಹಳೆ ವೈನು,ಹಳೆ ಪುಸ್ತಕ ಇವು ಕೊಡುವ ಮಜವೇ ಬೇರೆ...!
  ಧರಿತ್ರಿ ಮನೆಯಲ್ಲಿ ರೇಡಿಯೋ ಇದ್ದರೆ ವಿವಿಧಭಾರತಿ ಕೇಳ್ರಿ ನನ್ನ ಹಿಂದಿ ನಾ ಸುಧಾರಿಸಿಕೊಂಡಿದ್ದು ಹಿಂಗ....

  ReplyDelete