Friday, June 5, 2009

ಸದಾ ಕಾಡುವ ಹಾಡು...1

ಏನಾದರೂ ಹೊಸದು ಬರೆಯಬೇಕು ಎನ್ನುವ ತುಡಿತ ಈ ರೀತಿ ಮಾಡು ಅಂತಿದೆ .ಮೊದಲೇ ಹೇಳಿಬಿಡುವೆ ನಾ ಸಾಹಿತ್ಯ್
ಅಷ್ಟಾಗಿ ಓದಿಕೊಂಡವನಲ್ಲ ಅನೇಕ ಹಿರಿಯರು ಹಾಡಿನ ಮೂಲಕ ತಮ್ಮ ಛಾಪು ಬಿಟ್ಟುಹೊಗಿದ್ದಾರೆ..ಅನೇಕರು ನನಗೆ ಪ್ರಿಯರು
ತಮ್ಮ ರಚನೆ ಗಳ ಮೂಲಕ ನನ್ನ ಅಂತರಂಗ ಕಲಕಿದ್ದಾರೆ. ಒಂದು ವಿಷಯ ನಾನು ಇಲ್ಲಿ ಹೇಳುವುದು ಹಾಡು ನನ್ನ ತಟ್ಟಿದ ಬಗೆ
ಪ್ರಸ್ತುತ ಆ ಗೀತಗಾರ ನ ಹಿನ್ನೆಲೆ ಅಥವಾ ವೈಯುಕ್ತಿಕ ಜೀವನ ನನಗೆ ಗೌಣ."ಕರ್ಮಸಿದ್ದಾಂತ" ದಲ್ಲಿ ನಂಬಿಕೆ ಇಟ್ಟವ.

ನಾ ಆಯ್ದುಕೊಂಡ ಮೊದಲ ಕವಿ ಇಂದೀವರ್. ಅವರು ಬರೆದ ಉಪಕಾರ್ ಸಿನೇಮಾದ ಮನ್ನಾಡೆ ಹಾಡಿದ ಹಾಡು ನಾ
ಸದಾ ಗುನುಗುತ್ತಿರುತ್ತೇನೆ.... " ಕಸ್ಮೆ ವಾದೆ ಪ್ಯಾರ್ ವಫಾ ಸಬ್ ಬಾತೇ ಹೈ ಬಾತೊಂಕಾ ಕ್ಯಾ". ಉಪಕಾರ್ ಸಿನೇಮಾದ
ಜೀವಾಳ ಈ ಹಾಡು .ನಮ್ಮ ಮುಂದಿರುವ ಶೂನ್ಯ ವನ್ನು ಸದಾ ನೆನಪಿಗೆ ತಂದುಕೊಡುತ್ತದೆ... ಆದರೂ ನಾವೇಕೆ ಬದಲಾಗುವುದಿಲ್ಲ ಯಾಕೆ ಈ ಜಂಜಡದಲ್ಲಿ ಸಿಕ್ಕು ಒದ್ದಾಡುತ್ತೇವೆ..? ಈ ಹಾಡು ಅನೇಕ ಪ್ರಶ್ನೆ ಕೇಳುತ್ತದೆ..ಉತ್ತರ ಗೊತ್ತಿಲ್ಲದ
ಪ್ರಶ್ನೆಗಳು...ಒಂಥರಾ ನಿರ್ವಿಕಾರ ಭಾವ ಇದೆ ಇಲ್ಲಿ. ಒಂದು ಚಿತ್ರಗೀತೆ ಸಹ ಈ ಮಟ್ಟ ಮುಟ್ಟಬಹುದು ಇದು ಸೋಜಿಗದ ಸಂಗತಿ. "ಹೋಗಾ ಮಸೀಹಾ ಸಾಮನೆ ತೇರೆ ಫಿರಭಿನ ತೂ ಬಚ್ ಪಾಯೇಗಾ" ಈ ಸಾಲಲ್ಲಿ ನಮ್ಮ ಬಾಳಿನ ಸಾರಾಂಶವಿದೆ
" ತೇರಾ ಅಪನಾ ಖೂನ ಹಿ ಆಖಿರ್ ತುಝ್ ಕೋ ಆಗ್ ಲಗಾಯೇಗಾ..." ವೃದ್ಧಾಶ್ರಮದಲ್ಲಿ ಇರುವ ಹಿರಿ ಜೀವ ಹೌದೆಂದು ತಲೆ
ಆಡಿಸಬಹುದು. ಒಂದು ಸನ್ನಿವೇಶಕ್ಕೆ ಹೊಂದಿಸಿ ಚಿತ್ರ ಗೀತೆ ಬರೆಯಬಹುದು ಆದರೆ ಉಪಕಾರ್ ಸಿನೇಮಾದಲ್ಲಿ ಇದು ಒಂದು
ಅಂತರಗಂಗೆ ಯಂತೆ ಹರಿಯುತ್ತದೆ....ಇಡಿ ಚಿತ್ರ ಆವರಿಸಿಕೊಳ್ಳುತ್ತದೆ.

ಬಹಳ ದಿನಗಳ ಹಿಂದೆ ವಿವಿಧಭಾರತಿಯ ಜಯಮಾಲಾ ನಡೆಸಿಕೊಡುವಾಗ ಸ್ವತಃ ಇಂದೀವರ್ ಅವರು ಈ ಹಾಡು ಒಂದು
ಇಂಗ್ಲೀಷ ಕವಿತೆಯ ಪ್ರೇರಣೆಯಿಂದ ಬಂದಿದ್ದಂತೆ ಆ ಇಂಗ್ಲೀಷ ಕವಿತೆಯ ಸಾರಾಂಶ ಹೀಗಿದೆ-----ಒಬ್ಬ ವ್ಯಕ್ತಿ ತೀರಿಕೊಂಡಿರುತ್ತಾನೆ ಗೋರಿಯಲ್ಲಿ ಮಲಗಿದರೂ ಚಡಪಡಿಕೆ..ತನ್ನ ಹೆಂಡತಿ ಮಕ್ಕಳು ತಾನು ಸತ್ತರೆ ಸಾಕು ಎಂದು ಕಾದಿದ್ದರು
ನನ್ನ ಗೋರಿಯ ಬಳಿ ಅವರೆಂದೂ ಬರಲಾರರು ಎಂದು ಈ ವೇದನೆ ಯಲ್ಲಿರುವಾಗಲೇ ತಾ ಸಾಕಿದ ನಾಯಿ ಅಲ್ಲಿಗೆ ಬರುತ್ತದೆ ಅವನಿಗೆ ಖುಷಿ ಆಗುತ್ತದೆ...ಇದಾದರೂ ಬಂತಲ್ಲ ಅದೇ ಸಂತೋಷದಲ್ಲಿ ಅದರ ಜತೆ ಮಾತಾಡುತ್ತಾನೆ..ಬಂದಿದ್ದಕ್ಕೆ
ಧನ್ಯವಾದ ಹೇಳುತ್ತಾನೆ.. ಅ ನಾಯಿ ಹೇಳುತ್ತದೆ.." ನೀ ಹೋದ ಮೇಲೆ ನಿನ್ನ ಹೆಂಡತಿ ಸರಿಯಾಗಿ ಊಟ ಹಾಕುತ್ತಿಲ್ಲ ಬಹಳೇ ಹಸಿವಾಗಿತ್ತು ಎಲ್ಲೂ ಏನೂ ಸಿಕ್ಕಿಲ್ಲ ನಿನ್ನ ನೆನಪಾಯಿತು ನಿನ್ನ ಗೋರಿ ಬಗೆದು ನಿನ್ನ ಮೂಳೆ ಕಚ್ಚಿಕೊಂಡು ಹೋಗಲು ಬಂದಿರುವೆ"

ಆ ಇಂಗ್ಲೀಷ ಕವಿತೆಯ ವಿಷಣ್ಣಭಾವ " ಕಸ್ಮೆ ವಾದೆ ಪ್ಯಾರ ವಫಾ ಸಬ್ ಬಾತೆ ಹೈ ಬಾತೊಂಕಾ ಕ್ಯಾ" ದಲ್ಲೂ ಇದೆ...

5 comments:

 1. ದೇಸಾಯರೇ
  ಹಳೆಯ ಜಮಾನಾದ ಹಾಡುಗಳ, ಗಿತರಚನಕಾರರ ಬಗ್ಗೆ ಬರೆದು ನೆನಪಿನಾಳದಲ್ಲಿದ್ದ ಸು೦ದರ ನೆನಪುಗಳನ್ನು ಹೊರ ತೆಗೆದಿದ್ದೀರಿ.

  ReplyDelete
 2. ಹಳೆ ಹಾಡುಗಳೆಲ್ಲ ಅರ್ಥಗರ್ಭಿತವಾಗಿರ್ತಿದ್ವು, ನಮಗೆ ಜೀವನದ ಪಾಠ ಹೇಳಿ ಕೊಡ್ತಿದ್ವು. ಈಗ ಬರೀ ಪ್ರಾಸ ಕೂಡ್ಸೋದ ತ್ರಾಸ ಆಗಿರ್ತೆತಿ ಇನ್ನ ಅರ್ಥ ಎಲ್ಲಿಂದ ತುಂಬತಾರ ಹೇಳ್ರೀ.... ಇದ ರೀತಿ ನಮಗೆ ಮರ್ತು ಹೋಗಿರೋ ಹೆಚ್ಚು ಹೆಚ್ಚು ಹಳೆ ಹಾಡುಗಳ ಪರಿಚಯ ಮಾಡಿ ಕೊಡ್ತಾ ಇರ್ರೀ.. ಮತ್ತ ಬರ್ತೇನಿ..ಶರಣು

  ReplyDelete
 3. ದೇಸಾಯರ,
  ಈ ಹಳೇ ಹಾಡುಗೋಳ ಕೆಲವು ಸಾಲು ನಮ್ಮನ್ನು ಬಿಡೋದ ಇಲ್ಲ. ನಮ್ಮನ್ನ ಕಟೀತಾನ ಇರ್ತಾವ. ಒಳ್ಳೇ ಸಾಹಿತಿಯ ಕವನಕ್ಕಿಂತ ಏನೂ ಕಡಿಮಿ ಇಲ್ಲ ನೋಡರಿ ಈ ಸಿನೆಮಾಗೀತೆಗಳು.
  ನನಗ ನೆನಪಾದಂಥಾ ಎರಡು ತುಣಕು ಇಲ್ಲಿ ಕೊಡತೇನಿ:
  (೧)ವಕ್ತನೇ ಕಿಯಾ ಕ್ಯಾ ಹಸೀ ಸನಮ್
  ಹಮ್ ರಹೇ ನ ಹಮ್,ತುಮ್ ರಹೇ ನ ತುಮ್
  (೨)ಪರದಾ ನಹಿ ಜಬ್ ಕೋಯೀ ಖುದಾಸೇ
  ಬಂದೋಂಸೆ ಪರದಾ ಕರನಾ ಕ್ಯಾ?

  ReplyDelete
 4. ದೇಸಾಯಿಯವರೆ.....

  ಮನೋಜ್ ಕುಮಾರ್ ನ ಈ ಸಿನೇಮಾ ಕೂಡ ನನಗಿಷ್ಟ....
  ನಾನೂ ಕೂಡ ಈ ಹಾಡನ್ನು ಆಗಾಗ ಕೇಳುತ್ತಿರುತ್ತೇನೆ....
  ಜೀವನದ ಬಗೆಗಿನ ಆ ಹಾಡುಗಳು ತುಂಬಾ ಚೆನ್ನಾಗಿರುತ್ತಿದ್ದವು...

  ಮತ್ತೊಮ್ಮೆ ಹಳೆಯ ಹಾದನ್ನು ನೆನಪಿಸಿದ ನಿಮಗೆ ಧನ್ಯವಾದಗಳು..

  ಸುನಾಥ ಸರ್ ನೆನಪಿಸಿದ ಹಾಡುಗಳೂ ಚೆನ್ನಾಗಿವೆ...

  ನಿಮ್ಮ ಈ ಲೇಖನ ಬಹಳ ಇಷ್ಟವಾಯಿತು...

  ReplyDelete
 5. ಪರಾಂಜಪೆ ಸರ್ ಹಳೆಯದೆಲ್ಲವೂ ಮಧುರ ಅಲ್ಲವೇ...
  ಉಮೇಶ ನಿಜ ಪ್ರಾಸ ಕೂಡ್ಸುದು ತ್ರಾಸ್ ಆಗೈತಿ
  ಸುನಾಥ ಸರ್ ನಿಮಗೆ ಹಳೆ ಹಾಡುಗಳ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ ಗೋಲ್ಡನ್ ಏಜ್ ನೋಡಿದವರು..ನೀವು...!
  ಹೆಗಡೆ ಸರ್ ನಿಮ್ಮ ಕಳಕಳಿ ಹೀಗೆ ಮುಂದುವರೆಯಲಿ...
  ಎಲ್ಲರಿಗೂ ಧನ್ಯವಾದಗಳು...!

  ReplyDelete