Saturday, April 11, 2009

ಅಶಯ

ಆಶಯ
-------
ನನ್ನ ನಿನ್ನ ನಡುವೆ
ಪ್ರಶ್ನೆಯೊಂದು ಮಲಗಿದೆ...
ಉತ್ತರ ಹುಡುಕುವ ಗೋಜಿನಲಿ
ಬಹಳ ದೂರ ಬಂದಾಗಿದೆ...

ಅಲ್ಲಿ ಹುಲ್ಲು ಹಾಸಿನ ಮೇಲೆ
ನವಿರಾದ ಇಬ್ಬನಿ..
ಸುಮ್ಮನೆ ಬೆರಳಾಡಿಸಿದರೆ ಸಾಕು
ದೊರೆತೀತು ನಿಧಿಯ ಖನಿ..

ಆ ನಿಧಿಯ ಮುಂದೆ ಉತ್ತರದ
ಗೊಡವೆ ಏಕೆ ನಮಗೆ....ಇರಲಿ
ಪ್ರಶ್ನೆ ಅದರ ಪಾಡಿಗೆ
ಸಿಕ್ಕು ಬಿಡಿಸೋಣ ಮುಂದಿನ ಬಾರಿ
ಅನುಭವಿಸೋಣ ಈಗ ಈ ಕ್ಷಣದ
ಆರ್ದತೆ ಯನ್ನು ಇಬ್ಬನಿ ಹನಿ
ತಂದಿರುವ ಅನುಭೂತಿಯನ್ನು....!

2 comments:

  1. ಚೆನ್ನಾಗಿದೆ, ಮುಂದುವರಿಸಿ

    ReplyDelete
  2. ಧನ್ಯವಾದಗಳು, ನಿಮ್ಮ ಹೊಸ ಬ್ಲಾಗ್ ಓದಿದೆ ಬಹಳ ಛಲೋ ಇತ್ತು.

    ReplyDelete