Monday, April 6, 2009

ಮತ

ವಿಚಿತ್ರ ಆದರೂ ಸತ್ಯ.ನಮ್ಮ "ಬೂಡಾ"ರಿಗೆ ಒಳಗೊಳಗೆ ಅಳುಕಿದೆ.. ಹೊರಗಡೆ ತೋರಿಸಿಕೊಳ್ಳುತ್ತಿಲ್ಲ. ಆಪರೇಶನ ಕಮಲ ಮುಂದುವರೆದಿದೆ ನಿಜ ಆದ್ರೆ ಅದು ಓಟು ತರುತ್ತಾ...ಈ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಇರಲೇಬೇಕು.’ಹೆಬ್ಬಾಗಿಲು’ ಎಂದು ಬಿಂಬಿತವಾಗಿರುವ ಕರ್ನಾಟಕದ ಕೋಟೆ ಭದ್ರ ವಾಗಿದೆಯೇ.... ಟಿಕೆಟ ಹಂಚುವಲ್ಲಿ ಜಾತಿ ಪ್ರಮುಖ ಪಾತ್ರ ವಹಿಸಿದೆ.ಆದರೆ ಉತ್ತರ
ಕರ್ನಾಟಕದಲ್ಲಿ ಲಿಂಗಾಯತ ಒಳ ಪಂಗಡಗಳಲ್ಲಿ ಅಸಮಾಧಾನ ಇದ್ದೇ ಇದೆ. ಜಾತಿ ಸಮೀಕರಣ ಇಟ್ಟುಕೊಂಡೇ ಮತ ಯಾಚಿಸ ಬೇಕಾಗಿದೆ ಯಾಕೆಂದರೆ ಹೇಳಿಕೊಳ್ಳುವ ಯಾವ ಸಾಧನೆ ಇದೆ ಈ ಸರಕಾರದ್ದು....ಈ ಅಳುಕು ಹುಳುಕೂ ಕೂಡ..ಆಡಿ ತೋರಿಸುವಂತಿಲ್ಲ.ಮತದಾರ ಪ್ರಭು ಮತ್ತೊಮ್ಮೆ ದಯೆ ತೋರಬಹುದು ಎಂಬ ನಿರೀಕ್ಷೆ ಅವರದು.ಹಾಗೆ ನೋಡಿದ್ರೆ ಎದುರಾಳಿ ವೀಕ್
ಆಗಿದ್ದಾರೆ ಕಾಂಗ್ರೆಸ್ ತನ್ನೆಲ್ಲ ಹಿರಿತಲೆಗಳನ್ನು ಅಖಾಡಾಕ್ಕೆ ಇಳಿಸಿದೆ.ಬ್ಯಾಟರಾಯನಪುರದ ಹುಡುಗ ಕೃಷ್ಣ ಮಾತ್ರ ತರುಣ...ಆದರೆ
ಎದುರಾಳಿ ಅನಂತರನ್ನು ಸೋಲಿಸುವ ಛಾತಿ ಇದೆಯೇ...?
ನಿಲ್ಲುವವರೇ ಇಲ್ಲ ಆದರೂ ಒತ್ತಾಯದಿಂದ ನಿಂತುಕೊಂಡಿದ್ದಾರೆ ಏನು ಮಾಡುವುದು ಅಭ್ಯರ್ಥಿಗಳೆಇಲ್ಲವಲ್ಲ. ಸಾಂಗ್ಲಿಯಾನ ಅಂದು
ಮಾನ ಉಳಿಸಿದ್ದಕ್ಕೆ ಇಂದು ಬಡ್ಡಿ ವಸೂಲಿಮಾಡುತ್ತಿದ್ದಾರೆ. ಬದಲಾದ ಸ್ಥಿತಿ ನೋಡಿ ಒಂದೇ ವೇದಿಕೆಹಂಚಿಕೊಂಡವರು ಇಂದು
ಎದುರಾಳಿಗಳು. ಈ ರಾಜಕೀಯದಲ್ಲಿ ಬೇಳೆ ಬೇಯುವುದೇ ಮುಖ್ಯ.ಯಾವ ಮೌಲ್ಯಗಳಿಗೂಇಲ್ಲಿ ಬೆಲೆ ಇಲ್ಲ.ಏನೇ ಆಗಲಿ ಮತದಾರ
ಪ್ರಭು ಎಲ್ಲ ’ಎಕ್ಕಾ’ ಇಟ್ಟುಕೊಂಡಿದ್ದಾನೆ. ಯಾವಾಗ ಹಾಕಬೇಕು ಅವನಿಗೆ ಗೊತ್ತಿದೆ ಹಾಗೆಯೇ ರಾಜಕೀಯದವರಿಗೂ ಗೊತ್ತಿದೆ
ತಮ್ಮ ನಶೀಬು ಅವನ ಮುಷ್ಟಿಯಲ್ಲಿ ಬಂಧಿತ ವಾಗಿದೆ.

1 comment:

  1. ದೇಸಾಯಿಯವರೆ...

    ರಾಜಕೀಯ ವಿಶ್ಲೇಷಣೆ ಚೆನ್ನಾಗಿದೆ...

    ಈ ರಾಜಕೀಯ ನನಗೆ ಅರ್ಥವಾಗುವದಿಲ್ಲ ನೋಡ್ರಿ.....
    ಸ್ವಲ್ಪಾನೂ ನ್ಯಾಯ, ನೀತಿ ಇಲ್ದಿರೋ ಜನರ ಕೈಗೆ ದೇಶ ಕೊಡಬೇಕಲ್ರಿ..
    ಇದು ಬೇಜಾರ ಆಗ್ತದೆ...

    ಧನ್ಯವಾದಗಳು...

    ReplyDelete