Monday, November 4, 2013

ಮತ್ತೆ ಮತ್ತೆ ದೀಪಾವಳಿ.

ಈಗಿನ ದೀಪಾವಳಿ ಹೀಗೇ ಅಲ್ಲ
ನಮ್ಮ ನಿಮ್ಮ ಮಾತು ಹಳೆಯದಾಯಿತಲ್ಲ....
ಮಗಳು ಮಾಲಿಂಗನ ಬಳ್ಳಿ ನೋಡಿಲ್ಲ...
ಹಿತ್ತಾಳಿ ಕೊಳಗ ಹಂಡೆಗಳಿಗೆ ಮನೆ ಸಾಲದಲ್ಲ..
ಅಸಲು ತುಂಬಿಡಲು ನೀರೇ ಬಂದಿಲ್ಲ....!
ಆದರೂ ಇವಳು ಏಳುತ್ತಾಳೆ ಅವಳ ಎಬ್ಬಿಸುತ್ತಾಳೆ ಗದರಿ..
ಆರತಿ ಹಿಡಿದು ನಿಂತ ಮಗಳ ಕಣ್ಣಲ್ಲಿಣಕಿದೆ ಮುಗಿಯದ ನಿದ್ದೆ..
ಮುಂಜಾನೆಯ ಪೇಪರಿನಲ್ಲಿ ದೀಪ ಹಿಡಿದ ರೂಪದರ್ಶಿ..ಕೆಳಗೆ
ಅದೇ ಸುದ್ದಿ ಸಾವು ಸೂತಕ ಮೋದಿ ರಾಹುಲ್ ಸಿದ್ದು ಎದ್ದಾಯಿತು ನಿದ್ದೆಗೊಂದು ಗುದ್ದಿ...!
ಉಂಡಿ,ಚಕ್ಕಲಿ ಚೂಡ ಧಾರವಾಡದ ಪೇಡ....
ಶುಗರ್ ಲೆವಲ್ ತೂಕಹಾಕಿ ತಿನ್ನಬೇಕು ಜಾಸ್ತಿ ಬೇಡ..
ಅಳಿವಿನಂಚಿನ ಸಂಪ್ರದಾಯ ರಂಗೋಲಿ ಹಾಡು ನಗು ಎಲ್ಲ ಮಾಯ..
ಪಟಾಕಿ ತಯಾರಿಸುವವ ಬೆಂದರೂ ಸಿಡಿಯುತ್ತಾನೆ ಕಿಡಿಯಾಗಿ..
ಹೊಗೆ ವಾಸನೆ ಮಾಸ್ಕು ಹಾಕಿ ಬಾಂಬು ಹೊಡಿಯುವ ಖಯಾಲಿ...
ಬಿಡವಲ್ಲದು ಚಾಳಿ..ಪರ್ಯಾವರಣದ ಮಾನದ ಕಿಮ್ಮತ್ತು ಅರೆಪಾವಲಿ..
ಮುಗಿಯದ ಆಫರ್ರುಗಳ ಭರಾಟೆ ಕನ್ನಡ ಚಾನೆಲ್ ಹಾಕಿದರೆ ಅದೇ ಹಳೆ ಹರಟೆ...!
ಹಬ್ಬ ಮುಗಿಸಿ ಬಸ್ಸಿಳಿದವನ ಮುಖದಲ್ಲೂ ಸೋಲೇ ಇದೆ...
ಮತ್ತೆ ಮತ್ತೆ ಈ ದೀಪಾವಳಿ ಬರಲಿದೆ...

ಮತ್ತೆ ಮತ್ತೆ ಹೌದು ಮತ್ತೆ ಮತ್ತೆ...

4 comments:

  1. ದೇಸಾಯರ,
    ಬದಲಾಗುತ್ತಿರುವ ಸಂಸ್ಕೃತಿಯನ್ನು ಕವನದಲ್ಲಿ ಸರಿಯಾಗಿ ಹಿಡಿದಿದ್ದೀರಿ. ‘ಕಾಲಾಯ ತಸ್ಮೈ ನಮಃ!’
    ‘Blog ಬಂದ್ ಮಾಡೀರೇನ್ರಿ, ದೇಸಾಯರ?’ ಅಂತ ನಿನ್ನೆ ನಿಮ್ಮನ್ನ ಕೇಳಿದ್ದೆ.
    ಇಂದs ಅಂಗಡಿ open ಮಾಡಿ, ‘ಸಾಕಷ್ಟು ಮಾಲು ಒಳಗ ಅದs' ಅಂತ ತೋರಿಸಿದಿರಿ!

    ReplyDelete
  2. ದೀಪಾವಳಿಯ ಸಂಭ್ರಮ ಮತ್ತು ಅಪಾಯಗಳನ್ನು ಸಮರ್ಥವಾಗಿ ಚಿತ್ರಿಸಿದ್ದೀರ Umesh Desai ಸಾರ್.

    ReplyDelete
  3. ಬದಲಾವಣೆಗಳು ಸಾಗುತ್ತಲೇ ಇರುತ್ತವೆ, ತುಂಬಾ ಚೆನ್ನಾಗಿದೆ ಕವನ

    ReplyDelete
  4. BhaaLa Choolo adari Sara... BhaaLa Dhanyavada sara - Vitthal Kulkarni

    ReplyDelete