ಹೀಗೊಂದು ಲಹರಿ..
-------------------------
ಮೈಥಿಲಿ ಗೆಲ್ಲಲೇಬೇಕಿತ್ತು...
ಮಂದಾಕಿನಿ ಸೋಲಲೇಬೇಕಿತ್ತು ಬಿಡಿ..
ಎಷ್ಟಿದ್ದರೂ ಚಾಣಕ್ಯನೀತಿಯ ಉತ್ತಿ ಹೊತ್ತು ಮೆರೆದ ದೇಶವಲ್ಲವೇ ಇದು..
ಭಾವನೆಗಳ ದಾಸ ಆ ಭಾಸ ಬರೀ ಸುಭಾಷಿತ ಉಲಿಯಲು ಲಾಯಕ್ಕು...!
ಅಟಕಾಯಿಸಿದ ಹುಲ್ಲು ಮೆದೆಯ ಬೇರಿಂದ ಕಿತ್ತು ಸುಡುವ ಚಾಣಕ್ಯನ ಛಲ..ಅವನಲ್ಲಿಲ್ಲ..
ಅಂತೆಯೇ ದೊಡ್ಡಣ್ಣನ ಬಿಳಿಮನೆ, ಜಿನೀವಾದ ತಂಪುಕೋಣೆಯಿಂದ ಹೊಮ್ಮಿದ ಒಪ್ಪಂದ..
ದೂರದ ಕಂದಹಾರಿನಲ್ಲೋ ಮತ್ತೆಲ್ಲೋ ಅಪ್ಪಳಿಸಿದ ದ್ರೋನ ದ ಕಿಡಿಯಲ್ಲೂ
ಅವನದೇ ನೆರಳು..ಅದೇಕೇ ನಮ್ಮ ನಿಮ್ಮ ಆಳುವವರು ರೂಪಿಸುವ ಕರಡು,ಮಸೂದೆ
ಗಳಲೂ ಮೂಡಿದೆ ಅವನದೇ ಅವ್ಯಕ್ತ ಮುದ್ರೆ.....!
ಅದೇ ಭಾಸ ಆ ಹುಲ್ಲುಮೆದೆಯ ಗಲ್ಲ ಸವರಿ ಹೂ ಅರಳಿಸಿದರೂ ಸಿಗಲಿಲ್ಲ..ಕಿಮ್ಮತ್ತು..
ಅದಾವುದೋ ಮಾಸಲು ಪುಸ್ತಕದ ಅಕ್ಷರಗಳಲಿ....
ಪಂಡಿತ ಪಾಮರರ ಉಲಿಯುವಿಕೆಯಲ್ಲಿ...ನಮ್ಮ ನಿಮ್ಮ ಭಾವನೆಗಳಲಿ ಬಂದಿ ಅವ..
ಅವನಿಗೊಂದು ಪ್ರತಿಮೆ ಮಾಡಿ ಗಾಳಿ ಬಿಸಿಲು ಮಳೆಗಳಿಗವನೊಡ್ಡಿ ನಿಲ್ಲಿಸಿದ್ದೇವೆ...
ಸ್ಥಾಯಿ ಈಗ ಭಾಸ..ಬೇಕಿಲ್ಲ ಜಗಕೆ ಅವನ ಸಹವಾಸ.....
(ನಿನ್ನೆ ಮಹಾಪರ್ವ ಧಾರಾವಾಹಿಯ ಇಬ್ಬರು ಪಾತ್ರಧಾರಿಗಳ ಸಂವಾದದಿಂದ ಪ್ರೇರಿತವಿದು...)

ಈ ಧಾರಾವಾಹಿಯನ್ನು ನಾನು ನೋಡಿಲ್ಲ. ನಿಮ್ಮ ಲಹರಿಯನ್ನು ಓದಿದ ಬಳಿಕ, ಈ ಧಾರಾವಾಹಿಯನ್ನು ನೋಡುವ ಅವಶ್ಯಕತೆ ಭಾಸವಾಗುತ್ತಿದೆ.
ReplyDeleteಸರ....ಧಾರಾವಾಹಿ ಶುರುನ್ಯಾಗ ನೋಡಿದ್ದಷ್ಟ :(
ReplyDelete