Tuesday, January 11, 2011
ಹರಾಜಪ್ಪೋ ಹರಾಜು...
ಮೊನ್ನೆ ಶನಿವಾರ==ರವಿವಾರ ಎಲ್ಲ ಚಾನೆಲ್ ಗಳು ಒಂದೇ ರಾಗ ಹಾಡುತ್ತಿದ್ದವು.ಅದೆಂದರೆ ಐಪಿಎಲ್-೪ ರ
ಆಟಗಾರರ ಹರಾಜು. ಐಪಿಎಲ್ ಜ್ವರ ಅದಾಗಲೇ ಶುರುಆಗಿದೆ. ವಿಶ್ವಕಪ್ ಜ್ವರ ಏರಬೇಕಾಗಿತ್ತು ಆದ್ರೆ
ಐಪಿಎಲ್ ನ "ಝಣ ಝಣ"ದ ಮುಂದೆ ಅದು ಮಂಕಾಗಿದೆ. ಪುಣ್ಯ ಅಂದ್ರೆ ಐಪಿಎಲ್ ಸುರುಆಗೋವಾಗ ವಿಶ್ವಕಪ್
ಮುಗಿದಿರುತ್ತದೆ. ಒಂದುವೇಳೆ ಅವು ಏಕಪ್ರಕಾರದಲ್ಲಿ ನಡೆದಿದ್ದಾದರೆಅದೆಷ್ಟೋ ಆಟಗಾರರು ವಿಶ್ವಕಪ್ ಧಿಕ್ಕರಿಸಿ
ಐಪಿಎಲ್ಗೆ ಮುಗಿಬೀಳುತ್ತಿದ್ದರು. ಅದು ಸಹಜವೂ ಸರಿ.ಯಾಕಂದ್ರೆ ದುಡ್ಡು ಅದರ ಮುಂದೆ ಮತ್ತೇನಿದೆ...ಅಲ್ವೆ?
ನಮ್ಮ ಹುಡುಗ್ರು ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದಿದ್ದೆ ಬಂತು ನಮ್ಮ ಬೋರ್ಡು ಚಿನ್ನದಮೊಟ್ಟೆ ಇಡುವ ಕೋಳಿ
ಐಪಿಎಲ್ ಕಂಡುಹಿಡಿದ್ರು ಮೋದಿ ಎನ್ನುವ ಹಪಾಪಿ ಆದರೆ ಬುದ್ಧಿವಂತ ಬಲೆ ನೇಯ್ದ . ಕೊಳ್ಳುವ ಆಟ ಸುರು ಆತು
ಪಟೌಡಿ, ಗವಾಸ್ಕರ್, ಶಾಸ್ತ್ರಿ ಮುಂತಾದ ಖ್ಯಾತನಾಮರು ಆಡಳಿತಮಂಡಳಿ ಸೇರಿದ್ರು. ಇಡೀ ವಿಶ್ವ ಬೆರಗಾಗುವಂತೆ
ಮೊದಲ ಟೂರ್ನಿ ಮುಗಿಯಿತು. ಚುನಾವಣೆ ನೆವ ಎರಡನೇ ಟೂರ್ನಿ ಆಫ್ರಿಕಾದಲ್ಲಾಯಿತು. ಮೂರನೇದು ಮತ್ತೆ ಸ್ವದೇಶದಲ್ಲಿ. ಈಗ ನಾಲ್ಕರ ಹೊಸಿಲಲ್ಲಿರುವೆವು. ಮೂರನೇದಕ್ಕಿಂತ ನಾಲ್ಕನೇದು ಮಿಗಿಲಾಗಿರುತ್ತದೆ..ಈಗ ಎಂಟರ
ಬದಲು ಹತ್ತು ಟೀಮು. ಡಾಲರ್ಗಳಲ್ಲಿ ಮೊನ್ನೆ ಬಿಕರಿಯಾದ ಆಟಗಾರರ ಕಿಸ್ಮತ್ ನ ಏನು ಬಣ್ಣಿಸಲಿ...!
ಹಾಗೆ ನೋಡಿದರೆ ಸಾಕರ್ ಹಾಗೂ ಅದ ನಡೆಸುವ ಕ್ಲಬ್ಬುಗಳು ಹಣದ ಹೊಳೆ ಹರಿಸಿ ಖ್ಯಾತನಾಮರನ್ನು ಖರೀದಿಸುತ್ತವೆ.ಅಲ್ಲೂ ಆಟಗಾರರ ಪ್ರಾಮಾಣಿಕತೆ ಬಗ್ಗೆ ಅನೇಕ ಪ್ರಶ್ನೆಗಳಿವೆ. ಆದರೆ ಅದನ್ನು ನಿವಾಳಿಸಿ ಒಗೆಯುವಂತೆ ಐಪಿಎಲ್ ಬೆಳೆದಿದೆ.ಇಲ್ಲಿ ಕೋಟಿ ಕೊಟ್ಟು ಖರೀದಿಸುವುದು ತೀರ ಮಾಮೂಲಿ ವಿಷಯ. ದೇಶಕ್ಕಾಗಿ
ಒಂದೆರಡು ಪಂದ್ಯವಾಡಿದವ ಕೋಟಿ ಕೋಟಿ ಬಾಚಿಕೊಂಡ. (ಉದಾ : ತಿವಾರಿ) ಅದೇ ತರಹದ ಪ್ರತಿಭೆ ಇದ್ರೂ
ಆ ಆಡುವ ಅವಕಾಶ ಸಿಗದಿದ್ದುದಕ್ಕೆ ಕೇವಲ ಹತ್ತಿಪ್ಪತ್ತು ಲಕ್ಷದಲ್ಲಿ ತೃಪ್ತಿ ಪಡುವ ಅನಿವಾರ್ಯತೆ ಗೆ ಸಿಲುಕಿದ ನತದೃಷ್ಟರೂ (ಉದಾ: ಮನೀಷ್ ಪಾಂಡೆ) ಇದ್ದಾರೆ. ತನ್ನ ತಾಯ್ನಾಡು ಅದನ್ನು ನಾ ಪ್ರತಿನಿಧಿಸಬೇಕು ಎನ್ನುವ
ಮಹದಾಸೆ ತರುಣ ಕ್ರಿಕೆಟಿಗರಲ್ಲಿ ಈಗಿಲ್ಲ. ಅನ್ನ ನೀಡುವ ಮಾಲೀಕರಿದ್ದಾರೆ ಅವರನ್ನು ತೃಪ್ತಿಪಡಿಸಿದರಾಯಿತು ಅನ್ನುವ ಧೋರಣೆ ಬೆಳೆಯುತ್ತಿದೆ ಉದಾ: ಪೋಲಾರ್ಡ ಎಂಬ ದೈತ್ಯ ಪ್ರತಿಭೆ. ತನ್ನ ದೇಶಕ್ಕಾಗಿ ಆಡುವಾಗ ಅವನದು ಶೂನ್ಯ ಸಾಧನೆ.. ಆದರೆ "ಮುಂಬೈ ಇಂಡಿಯನ್ಸ" ಅಥವಾ " ರೆಡ್ ಬ್ಯಾಕ್ "ಪರ ಆಡುವಾಗ ಅವನ
ಕರಾಮತ್ತು ವರ್ಣಿಸಲು ಸಾಧ್ಯವಿಲ್ಲ. ನಮ್ಮ ದೇಶದ ಮುರಳಿ ವಿಜಯ್ , ರೈನಾ , ಉತ್ತಪ್ಪ್ ಎಲ್ಲ ಇದೇ ಸಾಲಿನಲ್ಲಿ
ಬರ್ತಾರೆ..! ಹಾಗಂತ ಇವರು ಮಾಡಿದ್ದು ತಪ್ಪಲ್ಲ .ಬೆಂಕಿ ಹತ್ತಿದೆ ಅದರ ಶಾಖಕ್ಕೆ ಮೈ ಕಾಯಿಸಿಕೊಳ್ಳುತ್ತಿದ್ದಾರೆ.
ನಮ್ಮ ಹಿರಿಯ ಆಟಗಾರರು ನಿವೃತ್ತಿಯಾದಮೇಲೆ ಪಟ್ಟ ಅಥವಾ ಪಡುತ್ತಿರುವ ಪಾಡು ನಮ್ಮ ಮುಂದಿದೆ.
ಚಂದ್ರಶೇಖರ್ ಕಾಲು ಮುರಿದುಕೊಂಡು ವೀಲ್ ಚೇರ್ ವಾಸಿಯಾಗಿದ್ದು, ದೈತ್ಯ ಪ್ರತಿಭೆಯ ಸೋಳ್ಕರ್ ನ ಕೊನೆಗಾಲದ ದುರವಸ್ಥೆ ಎಲ್ಲ ಇದೇ ದೇಶದಲ್ಲಿ ಆದಿದ್ದು. make hay when sun shines ಅನ್ನುವ ಹಾಗೆ
ತರುಣ ಆಟಗಾರರು ದುಡಿದುಕೊಳ್ಳುತ್ತಿದ್ದಾರೆ ಅಥವಾ ರಾಶಿ ರಾಶಿ ಹಣ ಬಾಚಿಕೊಳ್ಳುತ್ತಿದ್ದಾರೆ....
ಯಾಕೆಂದರೆ ಇದು ಪ್ರಸ್ತುತ ಭಾರತ ಪೆಪ್ಸಿ ಅನ್ನೋ ಹಾಗೆ "ಯಂಗಿಸ್ತಾನ್ ವಾವ್.."
Subscribe to:
Post Comments (Atom)
ಉಮೇಶ್ ಸರ್,
ReplyDeleteಸತ್ಯದ ಅನಾವರಣವನ್ನು ಹಾಗೆ ಬರೆದಿದ್ದೀರಿ. "ಬೆಂಕಿ ಹತ್ತಿದೆ ಅದರ ಶಾಖಕ್ಕೆ ಮೈ ಕಾಯಿಸಿಕೊಳ್ಳುತ್ತಿದ್ದಾರೆ." ಎನ್ನುವ ಮಾತು ಐಪಿಎಲ್ ಗೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ ಅಲ್ವಾ..
ಮುಂಡೆ ಮದುವೇಲಿ ಉಂಡವನೇ ಜಾಣ!
ReplyDelete