ದಿ.೦೫/೦೩/೨೦೦೯ ರಂದು ನನ್ನ ಮೊದಲ ಬ್ಲಾಗು ಪ್ರಕಟವಾಯಿತು..ಅಥವಾನಾನೇ ಪೋಸ್ಟಮಾಡಿದ್ದೆ. ಆಗಿನ್ನೂ ಹೊಸದು ಯಾರಾದ್ರೂ ಕಾಮೆಂಟ ಹಾಕಿದ್ರೆ ಅವರಿಗೆ ಧನ್ಯವಾದ ಹೇಳೋದು ಒಂಥರಾ
ಖುಷಿಯ ಸಂಗತಿ. ನಿಧಾನವಾಗಿ ಹಿಂಬಾಲಕರ ಪಟ್ಟಿ ಬೆಳೀತು ಆದರೆ ಕಾಮೆಂಟಿಗರ ಸಂಖ್ಯೆ ನಮ್ಮ ಭಾಷಾದಾಗ
ಹೇಳೂದಾದ್ರ "ಕುಂಟಿಗ್ಯೋ ಕುರಿಗ್ಯೋ.." ಅನ್ನತಿತ್ತು. ಆದ್ರು ಬರೆಯುವುದು ನಿಲ್ಲಿಸಲಿಲ್ಲ. ಈಗ ಈ ತಿರುವಲ್ಲಿ ನಿಂತಿರುವೆ.ಸಾಗಿ ಬಂದ ದಾರಿ ಒಮ್ಮೆ ತಿರುಗಿ ನೋಡುವ ಮನಸ್ಸಾಗಿದೆ.
ಮೊದಲು ಧನಾತ್ಮಕ ಅಂಶ ಹೇಳಿಬಿಡುವೆ..
೧) ಈ ಬ್ಲಾಗ್ ನನಗೆ ಹೊಸ ಚೆಹರೆ ಅಂದರೆ ಹೊಸ ಅಸ್ತಿತ್ವ ದೊರಕಿಸಿಕೊಟ್ಟಿದೆ. ನಾನೇನಾದರೂ ಹೇಳಲು ಬರೆಯಲು ಬಯಸಿದಾಗ ಬ್ಲಾಗ್ ನನಗೆ ಮಾಧ್ಯಮವಾಗಿದೆ.
೨) ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಯಾವ ಸಂಪಾದಕರ ಕಬು ದ ಹೆದರಿಕೆ ಇಲ್ಲ. ನಮಗನಿಸಿದ್ದನ್ನು ನೇರವಾಗಿ
ಹೇಳಬಹುದು ಹಾಗೆಂದು ನನ್ನ ಅನುಭವಕ್ಕೆ ಬಂದ ಯಾವ ಬ್ಲಾಗ್ ಬರಹದಲ್ಲೂ ಉಡಾಫೆ ಇಲ್ಲ.
೩) ಹೊಸ ಮಿತ್ರರು. ಹೌದು ಇದು ದೊಡ್ಡ ಉಪಲಬ್ಧಿ. ವಯಸ್ಸಿನ ಅಂತರ ಇಲ್ಲದೆ ಇಲ್ಲಿ ಮಿತ್ರರಾಗಬಹುದು.
ನಾ ಈ ವಿಷಯದಲ್ಲಿ ಲಕ್ಕಿ. ವಿಭಿನ್ನ ಸ್ತರದ ವೃತ್ತಿಯ ಜನ ಮಿತ್ರರಾಗಿದ್ದಾರೆ.
೪) ನಾ ಬರೆದದ್ದು ಬೇರೆಯವರು ಮೆಚ್ಚಿ/ತೆಗಳಿ ದಾಗ ಸ್ಪಂದನ ಬೆಳೆಯುತ್ತದೆ.ಇದು ಬ್ಲಾಗ್ ನಿಂದ ಸಾಧ್ಯ.
ಇನ್ನು ಬ್ಲಾಗ್ ನಿಂದ ಋಣಾತ್ಮಕ ಅಂಶವೂ ಇವೆ...
೧) ಬ್ಲಾಗನಲ್ಲಿ ಬರೆದದ್ದು ಯಾವ ಪ್ರಕಾರದ ಸಾಹಿತ್ಯ. ಇದು ಬರೆದವನ ಆತ್ಮರತಿಯೇ.. ನನ್ನ ಹಾಗೂ ಇತರೇ
ಕೆಲವರ ಬ್ಲಾಗ್ ಬರಹ ನೋಡಿದರೆ ಈ ಮಾತು ನಿಜ ಅನಿಸಬಹುದೇನೋ..
೨) ನಾವು ಬರೆದದ್ದು ಎಂದೂ ಶ್ರೇಷ್ಠ ವಲ್ಲ ಹೀಗಂತ ತಿಳದವ್ರು ಹೇಳ್ತಾರ. ನಾವು ಬರೆದ ಬುಕ್ಕು ಮಾರಾಟಮಾಡಲಿಕ್ಕೆ ಮಾರಾಟಗಾರ್ರು ತಯಾರಿಲ್ಲ. ಪ್ರಕಾಶಕರಲ್ಲಿ ಹಿಂಜರಿತವಿದೆ. ಇದು ವಾಸ್ತವ ಐಬು ನಮ್ಮಲ್ಲಿಲ್ಲ
ಅಂತ ಹೇಳಲು ಧೈರ್ಯ ಸಾಲುತ್ತಿಲ್ಲ.
೩) ಗುಂಪುಗಾರಿಕೆ. ಸಾಹಿತ್ಯದ ಇತರೇ ಪ್ರಕಾರಗಳಂತೆ ಈ ಪಿಡುಗು ಇಲ್ಲೂ ಇದೆ, ನಿಜ ಈ ಮಾತು ಹಲವರು
ಅಲ್ಲಗಳೆಯುತ್ತಾರೆ.ಗೌತಮ್ ಹೆಗಡೆ ಈ ಬಗ್ಗೆ ಗಮನ ಸೆಳೆದಿದ್ರು.ನಾನೂ ಅದನ್ನು ಅಲ್ಲಗಳೆದು ಅವರ ಬ್ಲಾಗ್ ನಲ್ಲಿ
ಕಾಮೆಂಟು ಹಾಕಿದ್ದೆ. ಆದರೆ ಸ್ವಂತ ಅನುಭವ ಪಾಠ ಕಲಿಸಿದೆ.ಸತ್ಯ ಒಪ್ಪಿಕೊಂಡಿರುವೆ. ಇಲ್ಲಿ ತಮ್ಮ ಭಾಷೆ,ಪ್ರಾಂತ
ಹೀಗೆ ಅವುಗಳದೇ ಆದ ವರ್ಗೀಕರಣಗಳಿವೆ..
೪) ಹಿಂಬಾಲಕರು.ಹಿಂಬಾಲಕರ ಸಂಖ್ಯೆ ನೂರಿದ್ದರೂ ಕಾಮೆಂಟು ಬರೋದು ಇಪ್ಪತ್ತು-ಮುವ್ವತ್ತು. ಇನ್ನು ಹಿಂಬಾಲಕರು ಐವ್ವತ್ತಿದ್ದ ನನ್ನಂಥವದರಿಗೆ ಹತ್ತು ದಾಟೋಲ್ಲ. ಹಾಗಾದ್ರೆ ಹಿಂಬಾಲಕರು ಅದೇಕೆ ಕಾಮೆಂಟು ಹಾಕೋಲ್ಲ. ನನಗಂತೂ ಉತ್ತರ ಗೊತ್ತಿಲ್ಲ.
ಮೇಲಿನ ನನ್ನ ಮಾತು ಅರ್ಥ ಇಲ್ಲದ್ದು ಇಲ್ಲಿ ಎಲ್ಲವೂ ಸರಿಯಿದೆ ಇವೆಲ್ಲ ನನ್ನ ಕಲ್ಪನೆಗಳು ಮಾತ್ರ ಎಂದು ಯಾರಾದರೂ ಹೇಳಿದರೆ ನಾ ತುಂಬಾ ಖುಷಿಪಡ್ತೇನೆ( ಅದು ನಿಜ ಆಗಿದ್ರೆ). ನನ್ನ ಕಳಕಳಿ ಇಷ್ಟೇ. ಈ ಬ್ಲಾಗ್ ಸಮೂಹದ ಅಳಿವು ಉಳಿವು ಒನಪು ಒಯ್ಯಾರ ನಾವೇ ಮಾಡಬೇಕು. ಯಾರಾದ್ರೂ ಬ್ಲಾಗ ಬರೆದರೆ ಆ ಬ್ಲಾಗಿನ
ತಿರುಳು ನೋಡಿ ಕಾಮೆಂಟಿಸೋಣ. ಅವನ/ಅವಳ ಭಾಷೆ,ಪ್ರಾಂತ ಇತ್ಯಾದಿ ಯಾಕೆ ಗಣನೆಗೆ ತಗೋಬೇಕು.
ಈಗಾಗಲೇ ಬ್ಲಾಗ್ ಹಾಗೂ ಬ್ಲಾಗ್ ಸಾಹಿತ್ಯದ ಬಗ್ಗೆ ಅನೇಕ ಮೇಧಾವಿಗಳು, ಸಂಪಾದಕರುಗಳು ತಮಗೇ
ತಿಳಿದ ರೂಪದಲ್ಲಿ ವರ್ಣಿಸುತ್ತಿದ್ದಾರೆ. ಈ ಒಂದು ಘಟ್ಟದಲ್ಲಿ ನಾವು ಸುಧಾರಿಸಿಕೊಳ್ಳೋಣ.ತಪ್ಪು ಒಪ್ಪು ಹಂಚಿಕೊಳ್ಳೋಣ. ನಮ್ಮ ಈ ಬ್ಲಾಗ್ ವನ ನಳನಳಿಸೋಣ.
ಈ ಲೇಖನ ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಬರೆದಿಲ್ಲ. ಗೌತಮ್ ಅವರ ಹೆಸರು ಬರೀ ಪ್ರಾಸ್ತಾವಿಕ ಮಾತ್ರ.
This comment has been removed by the author.
ReplyDeleteದೆಸಾಯರೇ, ತಮಗೆ ಹಾರ್ದಿಕ ಶುಭಾಶಯಗಳು, ತಾವು ಹೇಳಿದ ವಿಷಯಗಳೆಲ್ಲಾ ಹೌದು ಎನ್ನಲೋ ಅಲ್ಲಾ ಎನ್ನಲೋ ಅಥವಾ ಭಾಗಶಃ ಹೌದು ಎನ್ನಲೋ ಎನ್ನುವ ಮನಸ್ಸಿನಲ್ಲಿದ್ದೇನೆ, ಬರೆಯುವಾತನಿಗೆ ಭಾಷೆಯ ವ್ಯಾಕರಣ ಮತ್ತು ಕಾಗುಣಿತ ಇವೆರಡು ಮಾರ್ಗ ತಹಬಂದಿಗಳು. ಇವುಗಳನ್ನು ತಪ್ಪಿದವರಿಗೆ ನಾವು ಬರಿದೇ 'ಚೆನ್ನಾಗಿದೆ ಚೆನ್ನಾಗಿದೆ ' ಎನ್ನುತ್ತಾ ನಡೆದರೆ ಭಾಷೆಗೆ ಅಪಚಾರವಾಗುತ್ತದೆ, ಇದಲ್ಲದೇ ಲೇಖಕ ಕೂಡ ತನ್ನ ತಪ್ಪನ್ನು ತಿದ್ದಿಕೊಂಡು ಬೆಳೆಯುವುದಿಲ್ಲ. ಹೀಗಾಗಿ ಯಾವುದೇ ಮುಲಾಜಿಲ್ಲದೇ ಓದಿದ್ದಕ್ಕೆ ವಿಮರ್ಶಾತ್ಮಕ ಪ್ರತಿಕ್ರಿಯೆ ಹಾಕಬೇಕಾದದ್ದು ನಮ್ಮ ಧರ್ಮ. ಇನ್ನು ಪ್ರಾದೇಶಿಕ ಭಾಷಾ ವ್ಯಾಮೋಹದಿಂದ ಒಳ ಸಂಘಟನೆಗಳು-ಗುಂಪುಗಳು ಬೇಸರತರಿಸುವಂತಹ ವಿಷಯ. ನಾವು ಬರೆದ ಕೃತಿಗಳು ಇವತ್ತಿನ ವೃತ್ತ ಪತ್ರಿಕೆಗಳಲ್ಲಿ ಬರುವ ಅನೇಕ ವೃತ್ತಿನಿರತ ಲೇಖಕರಿಗಿಂತಾ ಚೆನ್ನಾಗಿರುತ್ತವೆಂದು ಓದಿದ ಮಹನೀಯರೊಬ್ಬರು ಹೇಳಿದ್ದಾರೆ. ಓದುಗರ ತೀರ್ಪೇ ಅಂತಿಮವಾದುದರಿಂದ ಎಲ್ಲಾ ಬ್ಲಾಗಿಗರು ಬರೆಯುದನ್ನೆಲ್ಲಾ ಪುಸ್ತಕವೆಂದು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೂ ಅನೇಕ ಪ್ರೌಢ ಬ್ಲಾಗಿಗರ ಬರೆಹಗಳು ಪುಸ್ತಕಗಳಾಗಿವೆ, ಆಗುತ್ತಿವೆ. ಅಂತಹ ಪುಸ್ತಕಗಳನ್ನು ಕೊಂಡು ಓದುವ ಜನರೂ, ಪ್ರಕಾಶಕರೂ ಖಂಡಿತಾ ಇದ್ದಾರೆ. ಬರೆಯುವಾತನಲ್ಲಿ ಓದಿಸುವ ಶಕ್ತಿ ಇದ್ದರೆ ಆತ ಎಲ್ಲಿದ್ದರೂ ಸಾಹಿತ್ಯಾಸಕ್ತರು ಹುಡುಕಿಬಂದು ಓದುತ್ತಾರೆ. ಹೀಗಾಗಿ ನಮಗೆ ನೆಲೆಯೇ ಇಲ್ಲ-ತ್ರಿಶಂಕು ಸ್ಥಿತಿ ಎಂಬ ಮನೋಗತವನ್ನು ಬದಿಗಿರಿಸಿ ಮುನ್ನಡೆಯಿರಿ ಎಂಬುದು ನಿಮಗೂ ಹಾಗೂ ಇತರ ಬ್ಲಾಗಿಗರಿಗೂ ನನ್ನ ಸಲಹೆ.
ReplyDeleteಲೇಖಕ ವಿಮರ್ಶಕನೂ ಆಗಿ ತಾನು ಬರೆದದ್ದನ್ನು ವಿವೇಚಿಸಿ ಪ್ರಕಟಿಸಿದರೆ ಆ ಬರೆಹಕ್ಕೆ ಮನ್ನಣೆ ಸಿಗುತ್ತದೆ. ವಿಷಯ ಯಾವುದೇ ಇದ್ದರೂ ಅದರ ಹಿನ್ನೆಯಲ್ಲಿ ಸಂದೇಶವೊಂದನ್ನು ಸಾರುವಂತಿದ್ದರೆ ಅಥವಾ ಕೃತಿ ಮಾಹಿತಿಪೂರ್ಣವಾಗಿದ್ದರೆ ಅದು ಸಹಜವಾಗಿ ಆದ್ಯತೆ ಗಳಿಸುತ್ತದೆ.
ದೀಪಕ್ಕೆ " ದೀಪ " ಎಂದು ಯಾರೂ ಬೋರ್ಡು ಹಾಕುವುದಿಲ್ಲ ಎಂದು ಹಿಂದೊಮ್ಮೆ ನನ್ನ ಲೇಖನವೊಂದರಲ್ಲಿ ತಾನು ಬರೆದಿದ್ದೆ, ಈಗಲೂ ಈ ಶುಭ ದೀಪಾವಳಿಯ ಸುಸಮಯದಲ್ಲಿ ತಮಗೆ ಅದನ್ನೇ ಹೇಳಬಯಸುತ್ತೇನೆ. ದೀಪ ಎಲ್ಲಿದ್ದರೂ ತನ್ನ ಸಹಜಗುಣಧರ್ಮದಿಂದ ಬೆಳಗುತ್ತದೆ ಹೇಗೋ ಹಾಗೇ ನಮ್ಮ ಕೃತಿಗಳು ಮೌಲಿಕವಾಗಿದ್ದಾಗ, ಅಗ್ಗದ ಜನಪ್ರಿಯತೆಯನ್ನು ಬೆನ್ನಟ್ಟದೇ ಹೋದಾಗ, ಪ್ರಶಸ್ತಿ ಪತ್ರವನ್ನು ಕ್ರಯಕ್ಕೆ ಕೊಂಡುಕೊಳ್ಳದಾಗ ಅವುಗಳಿಗೆ ಒಂದಿಲ್ಲೊಂದು ದಿನ ಗೌರವ ಸಿಕ್ಕೆ ಸಿಗುತ್ತದೆ. ಮಹಾನ್ ದಾರ್ಶನಿಕ ಗುರು ಡೀವೀಜಿಯವರ 'ಮಂಕುತಿಮ್ಮನ ಕಗ್ಗ', ನರಸಿಂಹ ಸ್ವಾಮಿಯವರ 'ಮೈಸೂರು ಮಲ್ಲಿಗೆ ' ಇವೆಲ್ಲಾ ಒಂದುಕಾಲಕ್ಕೆ ಹಳೇ ಪೇಪರ್ ಮಾರುವವರ ಅಂಗಡಿಗೆ ತಲ್ಪಿದ್ದವಂತೆ! ಯಾವುದೋ ಕಾಲಘಟ್ಟದಲ್ಲಿ ಕೃತಿಕಾರರ ಯೋಗ ಮತ್ತು ಓದುಗರ ಸುಯೋಗದಿಂದ ಒಬ್ಬಿಬ್ಬರು ಅದನ್ನು ಕಂಡು, ಕೊಂಡು, ಓದಿ, ಪ್ರಕಾಶಿಸಿದ ಮೇಲೆ ಆ ಇಬ್ಬರಿಗೂ ಬಹಳ ಗೌರವ ದೊರೆಯಿತು, ನಾಗರಿಕ ಸಮಾಜ ಅವರನ್ನು ಗುರ್ತಿಸಿತು. ಅಂಥವರ ಪಾಡೇ ಹಾಗಿದ್ದಾಗ ಇನ್ನೂ ಸಾಹಿತ್ಯದ ವಿಷಯಗಳಲ್ಲಿ ನಾವೆಲ್ಲಾ ಹಸುಗೂಸುಗಳಾಗಿರುವುದರಿಂದ ನಮಗೆ ಆದ್ಯತೆ ಸಿಗುವುದೇ ಇಲ್ಲವೇನೋ ಎಂದುಕೊಂಡರೆ ಅದು ನಮ್ಮ ಅಂತಃಶಕ್ತಿಯ ಕೀಳರಿಮೆಗೆ ಕಾರಣವಾಗುತ್ತದೆ. ನಮ್ಮ ಪಾಡಿಗೆ ನಾವು ಬರೆಯೋಣ, ಮುನ್ನಡೆಯೋಣ, ನಾವು ಯಾವ ಗುಂಪಿಗೋ, ಸಾಲಿಗೋ ಸೇರಿದವರಲ್ಲ, ನಮ್ಮದು ಎಲ್ಲರೂ ಸೇರಿ ಬದುಕುವ ಮಹಾಮನೆ, ಸರಸ್ವತಿಯ ಆವಾಸಸ್ಥಾನ. ಯಾರೋ ಏನೋ ಹೇಳುತ್ತಾರೆಂದು ಅದಕ್ಕಾಗಿ ನಾವು ಕರುಬುವ ಅವಶ್ಯಕತೆಯಿಲ್ಲ. ನಾನಂತೂ ಎಲ್ಲರ ಬಳಗದಲ್ಲೂ ಇದ್ದೇನೆ.
ಬರವಣಿಗೆ ಅಡಿಗೆಯಿದ್ದಹಾಗೇ. ಅದು ಕೆಲವರಿಗೆ ರುಚಿಸಬಹುದು ಇನ್ನು ಕೆಲವರಿಗೆ ಕೆಟ್ಟರುಚಿ ಎಂದು ಅನಿಸಬಹುದು. ನೂರಕ್ಕೆ ನೂರರಷ್ಟು ಓದುಗರು ಎಲ್ಲವನ್ನೂ, ಎಲ್ಲರನ್ನೂ ಮೆಚ್ಚಲೇಬೇಕೆಂದೇನಿಲ್ಲ. ಬಹುಸಂಖ್ಯಾಕ ಓದುಗರು ಅವರು ಬ್ಲಾಗಿಗರಾಗಿರಲಿ ಯಾ ಹೊರಗಿನ ಓದುಗರಾಗಿರಲಿ ನಮ್ಮ ಕೃತಿಗಳನ್ನು ಓದಿ ಹರ್ಷಿಸಿದರೆ ಅದಕ್ಕಿಂತಾ ಬಹುಮಾನ, ಪ್ರಶಸ್ತಿ ಬೇರೇ ಬೇಕೇ ? ಬ್ಲಾಗಿಗರನೇಕರು ಹಿಂಬಾಲಿಸಿದರೂ ಎಲ್ಲರೂ ನೆಟ್ ನಲ್ಲಿ ಬಹಳ ಸಮಯ ಇರುವುದಿಲ್ಲ. ಒಮ್ಮೆ ಹೊಸ ಬ್ಲಾಗ ಕಂಡು ಆದ ಖುಷಿಯಲ್ಲಿ ಆಮೇಲೆ ಸಾಧ್ಯವಾದಾಗ ಓದೋಣ ಎಂದು ಹಿಂಬಾಲಿಸುತ್ತಾರೆ. ಹಿಂಬಾಲಿಸುವವರೆಲ್ಲಾ ಸದಾಕಾಲದ ಓದುರಾಗಬೇಕಿಲ್ಲ, ಓದುಗರೆಲ್ಲಾ ಹಿಂಬಾಲಕರಾಗಬೇಕೆಂದೇನೂ ಇಲ್ಲ ಅಲ್ಲವೇ ? ಕೆಲವರಿಗೆ ಓದಲು ನಿಜವಾಗಿಯೂ ಸಮಯಮಿತಿ ಅಡ್ಡಿ ಬರುತ್ತದೆ. ದಿನನಿತ್ಯದ ಪತ್ರಿಗೆಳನ್ನೂ ಪೂರ್ರ್ತಿ ಓದದ ನನ್ನಂಥವರು ಎಷ್ಟಿದ್ದಾರೋ ಗೊತ್ತಿಲ್ಲ, ಆದರೂ ಖರೀದಿಸಿ ಇದುವ ಸ್ವಭಾವ ಇದೆ,ಒಂದು ವಾರ ತಡವಾಗಿ ಓದುವುದೂ ಇದೆ: ಅವು ಆಯ್ದ ಲೇಖನಗಳಿಗೆ ಮಾತ್ರ! ಪ್ರತಿಕ್ರಿಯೆಗಳನ್ನು ನಾವು ಅವಲಂಬಿಸಿದಷ್ಟೂ ನಮಗೆ ನಿರಾಸೆಯಾಗಬಹುದು, ಅದಕ್ಕೇ ಪ್ರತಿಕ್ರಿಯೆಗಳು ಜಾಸ್ತಿ ಬರಲಿ, ಬರದೇ ಇರಲಿ ನಮ್ಮ ಪ್ರವೃತ್ತಿ ನಿರತವಾಗಿರಲಿ, ನಿರಂತರವಾಗಿರಲಿ ಎಂದು ಆಶಿಸುತ್ತ ನನ್ನ ಈ ದೀರ್ಘ ಪ್ರತಿಕ್ರಿಯೆಯಲ್ಲಿ ತಮಗೇನಾದರೂ ಬೇಸರ ತರಿಸುವ ಅಂಶಗಳು ಇದ್ದರೆ ಕ್ಷಮೆಯಿರಲಿ ಎಂದು ಪ್ರಾರ್ಥಿಸುತ್ತ ತತ್ಕಾಲಕ್ಕೆ ನಿರ್ಗಮಿಸುತ್ತಿದ್ದೇನೆ, ನಮಸ್ಕಾರ
ಸರ್ ನಮಸ್ಕಾರ
ReplyDeleteಬಹುಪಾಲು ಬ್ಲಾಗ್ನಲ್ಲಿ ಬರೆಯುವ ಬರಹಗಳು ಬರೆದವನ ಆತ್ಮರತಿ, ಇದು ನನ್ನ ಅನಿಸಿಕೆಯೂ ಹೌದು. ಯಾವುದೇ ಕ್ಷೇತ್ರದಲ್ಲಿ ಪರಿಪುರ್ಣರನ್ನ ಅಥವಾ ಐಬುಗಳಿಲ್ಲದವರನ್ನ ಹುಡುಕುವುದು ಕಷ್ಟವೇ ಸರಿ ಆದರೂ ಕೆಲವು ಬಾಲೀಶ ನೆಲೆಗಟ್ಟಿನಲ್ಲಿ ಬರಹವನ್ನ, ಬರೆದವನನ್ನ ವರ್ಗೀಕರಿಸುವುದು ಬರವಣಿಗೆಗೆ ಸಲ್ಲದು. ನೀವು ಹೇಳಿದ ಋಣಾತ್ಮಕ ಛಾಯೆಗಳು ಮರೆಯಾಗಲಿ ಎನ್ನುವುದು ಆಶಯ.
ದೇಸಾಯರ,
ReplyDeleteಬೇಂದ್ರೆಯವರು ಒಮ್ಮೆ ಹೇಳಿದ್ದರು:"ಗಟ್ಟಿ ಕಾಳು ಉಳಿತಾವ,ಜೊಳ್ಳು ಹಾರಿ ಹೋಗತಾವ."
ಈ ಮಾತು ಮುದ್ರಿತ ಸಾಹಿತ್ಯಕ್ಕ ಹಾಗು ಬ್ಲಾಗ್ ಸಾಹಿತ್ಯಕ್ಕ, ಎರಡಕ್ಕೂ ಒಪ್ಪತದ.
ಮದ್ರಣದಾಗ ಬಂದದ್ದೆಲ್ಲಾ ಶ್ರೇಷ್ಠ ಅಲ್ಲ, ಬ್ಲಾಗಿನ್ಯಾಗ ಬಂದದ್ದೆಲ್ಲಾ ಕನಿಷ್ಠ ಅಲ್ಲ. And vice versa.
ಪ್ರತಿಕ್ರಿಯೆಯೊಳಗೂ ಪಕ್ಷಪಾತತನ ಇರತದ. ಆದರ ಈ ಮಾತಿಗೆ ಕನ್ನಡ ಸಾಹಿತ್ಯದ ವಿಮರ್ಶಕರೂ ಹೊರತಾಗಿಲ್ಲ.
ಬ್ಲಾಗಿನೊಳಗರ ಈ ವಿಷಯಕ್ಕ ಸುಧಾರಣಾ ಕಾಣಲಿ ಅನ್ನೋ ನಿಮ್ಮ ಹಂಬಲಕ್ಕ ನನ್ನ ಬೆಂಬಲ ಅದ.
ಭಟ್ ಸರ್ ನಿಮ್ಮ ಪ್ರತಿಕ್ರಿಯೆಓದಿದೆ. ನೀವು ಬರೆದ ರೀತಿ ನಾನು ನನ್ನಲ್ಲಿಯೇ ಮೂಡಿದ ಅನೇಕ ಪ್ರಶ್ನೆಗಳಿಗೆಉತ್ತರ ಹುಡುಕುವ ದಿಕ್ಕಿನಲ್ಲಿ ಈ ಲೇಖನ ಬರೆದಿರುವೆ.ನೀವು ಬ್ಲಾಗ್ ಬರಹ ಅಡಿಗೆಗೆ ಹೋಲಿಸಿರುವಿರಿ. ಇಲ್ಲಿ ಬಾಣಸಿಗನಿಗೆ
ReplyDeleteಓದುಗರ ಕಾಮೆಂಟುಗಳೇ ಸವಾಲುಗಳು .ಅವು ಇದ್ದರೆ ಮುಂದಿನ ಅಡಿಗೆ ಹೆಚ್ಚು ರುಚಿಯಾದೀತು ಇದು ನನ್ನ ಭಾವನೆ.
ಕಾಮೆಂಟಿಸಲು ಸಮಯದ ಅಭಾವ ವಗೈರೆ ನೀವು ಹೇಳಿದ ಮಾತು ಒಪ್ಪೋಣ, ಆದರೆ ಅದು ಬೇರೆ ಆಯಾಮ ಪಡಕೊಂಡು ಆ ಕೆಲವು ಕ್ಷುಲ್ಲಕ ಸಂಗತಿಗಳ ಅರ್ಹತೆ ಇರದಿದ್ದ ಮಾತ್ರಕ್ಕೆ ಕಾಮೆಂಟಿಸದಿರುವುದು ತಪ್ಪು ಅಂತ ನನ್ನ
ಭಾವನೆ. ಇಲ್ಲಿ ನಾವು ಬರೆದಿದ್ದು ಓದಲೆ ಬೇಕು ಹೊಗಳಲೇ ಬೇಕು ಎಂಬ ಮುಲಾಜಿಲ್ಲ. ಆದರೆ ಬೇರೆ ಬೇರೆ ಮಾನದಂಡಗಳೇ ಪ್ರಮುಖವಾಗಿ ಬರಹಕ್ಕಿಂತ ಬರಹಗಾರನ ಹಿನ್ನೆಲೆ ವಗೈರೆ ಮುಖ್ಯವಾಗಬಾರದು. ನಮ್ಮ ಬ್ಲಾಗ್ ಸಮೂಹ ಇತರೇ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ಭಿನ್ನವಾಗಿರಲಿ ಇದೇ ನನ್ನ ಕಳಕಳಿ. ನೀವು ಹೇಳಿದ ಒಂದು ತರಹದ
"ನಿಷ್ಕಾಮ ಕರ್ಮ" ಸಾಧಿಸುವುದು ತೊಂದರೆ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವೆ. ಇನ್ನು ನೀವು ಹೇಳಿದ ಮಾತುಗಳು ಬೇಜಾರು ಖಂಡಿತ ತಂದಿಲ್ಲ. ಬದಲಾಗಿ ಹೊಸ ಸಾಧ್ಯತೆಗಳ ದಿಕ್ಕು ತೋರಿದೆ.ನಿಮಗೆ ಧನ್ಯವಾದಗಳು
ಧನ್ಯವಾದಗಳು ನಾಗರಾಜ್ ಋಣಾತ್ಮಕಗುಣಗಳು ತೊಲಗಲಿ..ನಮ್ಮ ಬ್ಲಾಗ ಬಳಗ ಸರಿಯಾದ ದಿಕ್ಕಿನಲಿ ಬೆಳೆಯಲಿ
ReplyDeleteಆತ್ಮರತಿಗಿಂತ ಮಿಗಿಲಾಗಿ ಏನನ್ನಾದರೂ ಸಾಧಿಸಲಿ ಇದು ಸದಾಶಯ.
ಕಾಕಾ ನನ್ನ ಲೇಖನ ಬರೆಯುವಾಗ ಭಾಳ ಅಳುಕಿತ್ತು , ನಾ ಹೇಳಬೇಕಾದದ್ದು ಸರಿಯಾಗಿ ಹೇಳ್ತೆನೋ ಇಲ್ಲವೋ ಅದು ಓದುಗರಿಗೆ ತಲುಪುತ್ತದೋ ಇಲ್ಲವೋ ಅಂತ.ನಿಮ್ಮ ಪ್ರತಿಕ್ರಿಯೆ ನೋಡಿ ಧೈರ್ಯ ಬಂತು.ಬೆಳೆಯುವ ಕಳೆಗಿಡ ಈಗಲೇ
ReplyDeleteಅಂದರೆ ಚಿಗಿಯುವ ಮುನ್ನವೇ ಚಿವುಟಬೇಕು ಇದು ನನ್ನ ಹಂಬಲ. ನಿಮ್ಮ ಸಾಥ್ ಕೂಡಿದರೆ ಅದು ಸಾರ್ಥಕ ಕಾಣಬಹುದು
ಯಾಕ್ರೀ ಯಳವತ್ತಿ ಕೊನೆ ಲೇಖನ ಅಂತೀರಿ ಹಂಗೆಲ್ಲ ಮಾಡಬ್ಯಾಡ್ರಿ. ಬರೀರಿ ಓದರಿ ತಪ್ಪ ಅನಿಸಿದ್ರ ಬೈರಿ.
ReplyDeleteಆಮ್ಯಾಲ ಸಾಹೇಬ ಗಿಹೇಬ ಅನ್ನಬ್ಯಾಡ್ರಿ ಹೆದರಿಕಿ ಆಗತದ. ನನ್ನ ಲೇಖನದ ಉದ್ದೇಶ ಬೆಸಿಗಿ ಹಾಕೂದು ಹೊರತು
ಬಿಸಿಮುಟ್ಟಿಸೋದ ಅಲ್ಲ.
ದೇಸಾಸ್ ಸರ್,
ReplyDeleteಈ ಲೇಖನದಲ್ಲಿ ಅನೇಕ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಬೆಳಕು ಚೆಲ್ಲಿದ್ದೀರಿ..ಸುನಾಥ್ ಸರ್ ಹೇಳಿದ ಮಾತೇ ನನ್ನ ಮಾತು. ಜೊತೆಗೆ ಗುಂಪು ಇತ್ಯಾದಿಗಳು ಇದ್ದರೂ ಅದನ್ನೆಲ್ಲಾ ಮೀರಿ ನಾವು ಬೆಳೆಯಬೇಕಿದೆ ಮತ್ತು ಬೆಳೆಸಬೇಕಿದೆ. ಅದಕ್ಕಾಗಿ ಎಲ್ಲರಲ್ಲಿಯೂ ಪ್ರಾಮಾಣಿಕ ಮನಸ್ಥಿತಿ ಬೇಕು ಆ ಮನಸ್ಥಿತಿ ಬರಲಿ ಎಂದು ಆಶಿಸುತ್ತೇನೆ.
ಉಮೇಶ್ ಭಾಯ್...
ReplyDeleteಶ್ರೀಯುತ ಭಟ್ಟರು ಮತ್ತು ಸುನಾಥ ಸರ್ ಹೇಳಿದ ಅಭಿಪ್ರಾಯವೇ ನನ್ನದು..
ಇನ್ನು "ಬ್ಲಾಗಿಗರು ಆತ್ಮರತಿ" ಮಾಡಿಕೊಳ್ಳುತ್ತಾರೆ ಅನ್ನುವದಕ್ಕೆ ನನ್ನ ಅಭಿಪ್ರಾಯ ಬೇರೆ ಇದೆ..
ಎಲ್ಲರೂ ಆತ್ಮರತಿ ಮಾಡಿಕೊಳ್ಳುತ್ತಾರೆ...
ಹೆಚ್ಚಿನ ಲೇಖಕರು, ಸಂಪಾದಕರುಗಳು...
ಅದೇಕೆ ನಮ್ಮ ಮಾತಿನಲ್ಲೂ ಸಹ
"ನಮ್ಮನ್ನು ನಾವೇ ಹೊಗಳಿ ಕೊಳ್ಳುತ್ತೇವೆ..."
ಹೆಸರಾಂತ ಸಾಹಿತಿಗಳೂ ಇದಕ್ಕೆ ಹೊರತಾಗಿಲ್ಲ..
ಕನ್ನಡದ ಶ್ರೇಷ್ಠ ಬರಹಗಾರ ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ
ಪುರುಷತ್ವ ಮೇಲುಗೈ ಬಗೆಗೆ ಪೂರ್ವಗ್ರಹ ಪೀಡಿತರಾಗಿ ಬರೆಯುತ್ತಾರೆಂದು ನಮ್ಮ ಸುನಾಥ ಸರ್
ಉದಾಹರಣೇಗಳ ಸಹಿತ ಸಾಬೀತು ಮಾಡಿದ್ದಾರೆ..
ನಮ್ಮನ್ನು ನಾವೇ ಹೊಗಳಿಕೊಳ್ಳುವದು ಯಾವುದೋ ಒಂದು ರೀತಿಯಲ್ಲಿ ವ್ಯಕ್ತವಾಗಿರುತ್ತದೆ...
ಇದಕ್ಕೆ ಬ್ಲಾಗಿಗರೂ ಹೊರತಾಗಿಲ್ಲ...
ಆತ್ಮರತಿಯನ್ನು ನಾನು ಸಮರ್ಥನೆ ಮಾಡುತ್ತಿಲ್ಲ...
ಅದು ಸಹಜವಾದರೂ....
ಅದರಿಂದ ಹೊರಗೆ ಬರುವ ಪ್ರಯತ್ನ ನಾವು ಮಾಡೋಣ...
ಇನ್ನೂ ಒಂದು ವಿಷಯ..
ಇತ್ತೀಚೆಗೆ ಶುರುವಾದ "ಬಜ್" ಬಗೆಗೆ ಹೇಳಲೇ ಬೇಕು...
ಇದರಿಂದಾಗಿ ನನಗೆ ನಮ್ಮ ಸ್ನೇಹಿತರ ಬ್ಲಾಗುಗಳಿಗೆ ಹೋಗಲಾಗುತ್ತಿಲ್ಲ...
ಕೆಲಸದ ಒತ್ತಡದ ನಡುವೆ ಈ ರೀತಿ ಬ್ಲಾಗ್ ಬರೆಯುವ ನನಗೆ "ಬಜ್" ನನ್ನ ಸಮಯ ಹಾಳುಮಾಡುತ್ತಿದೆಯೇ ಅಂತ ಅನಿಸುತ್ತಿದೆ...
ಈ ಬಜ್ ನಮ್ಮ ಸ್ನೇಹಿತರೊಡನೆ ಮಾತನಾಡುವದು..
ಕಾಲೆಳೆದು ತಮಾಶೆ ಮಾಡುವದರಲ್ಲಿ ಸಮಯ ಜಾಸ್ತಿ ಹೋಗುತ್ತಿದೆ..
ಅದರಿಂದಾಗಿ ಬ್ಲಾಗುಗಳಿಗೆ ಹೋಗಲಾಗುತ್ತಿಲ್ಲ..
ಹಾಗಾಗಿ ಬಜ್ ಗೆ ವಿದಾಯ ಹೇಳುವದಿಲ್ಲ..
ಆದರೆ ಅಲ್ಲಿ ಬರುವದನ್ನು ಕಡಿಮೆ ಮಾಡಿ ಬ್ಲಾಗುಗಳಿಗೆ ಭೇಟಿ ನೀಡುತ್ತೇನೆ..
ಇದು ನನ್ನ ವಯಕ್ತಿಕ ಅಭಿಪ್ರಾಯ....
ನಿಮ್ಮಲ್ಲಿ ಪ್ರತಿಭೆಯಿದೆ...
ನಾವೆಲ್ಲ ಓದುತ್ತೇವೆ.. ಅನುಮಾನವೇ ಬೇಡ...
ಈ ಬ್ಲಾಗ್ ಇನ್ನೂ ಜನಪ್ರಿಯಗೊಳ್ಳಲಿ...
ಜೈ ಹೋ...!
ಶಿವು ಅನಿಸಿಕೆಗೆ ಧನ್ಯವಾದ.ನಾವು ಬ್ಲಾಗಿಗರು ಒಂದುವೇಳೆ ಗುಂಪುಗಾರಿಕೆ ಈಗಲೇ ಮಟ್ಟ ಹಾಕಿದರೆ ನಮ್ಮ ಗುರುತು ಋಜುವಾತುಪಡಿಸುವ ಅವಶ್ಯಕತೆ ಇಲ್ಲ, ನನ್ನ ಲೇಖನ ನನ್ನೊಳಗೆ ಉದ್ಭವಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾಗಿತ್ತು. ಮಿತ್ರರನೇಕರ ಕಾಮೆಂಟುಗಳು ಈ ನಿಟ್ಟಿನಲ್ಲಿ ಸಹಾಯ ಮಾಡಿವೆ.
ReplyDeleteಹೆಗಡೇಜಿ ನೀವು ಆತ್ಮರತಿ ಬಗ್ಗೆ ಹೇಳಿರುವಿರಿ. ಅತಿ ಸವ್ರತ್ರ ವರ್ಜತೆಅದು ಮಿತಿಯಲ್ಲಿರಲಿ..ಇದು ನನ್ನ ಆಶಯ.
ReplyDeleteಬಜ್ ಇದು ಅಭಿವ್ಯಕ್ತಿ ಮಾಧ್ಯಮ ಆಗಲಾರದು.ನಾನೂ ಆ ಸುಳಿಯಲ್ಲಿ ಸಿಲುಕಿರುವೆ. ಬದಲಾಗಲಿರುವೆ..ನಾನೂನು.
ನಿಮ್ಮ ಪ್ರೋತ್ಸಾಹಕ್ಕೆ ಹಾರೈಕೆಗೆ ಧನ್ಯವಾದಗಳು
ದೇಸಾಯಿ ಅವರೆ,
ReplyDeleteವಿ.ಆರ್.ಭಟ್‌ರ - "ಬರೆಯುವಾತನಲ್ಲಿ ಓದಿಸುವ ಶಕ್ತಿ ಇದ್ದರೆ ಆತ ಎಲ್ಲಿದ್ದರೂ ಸಾಹಿತ್ಯಾಸಕ್ತರು ಹುಡುಕಿಬಂದು ಓದುತ್ತಾರೆ" - ಈ ಅಭಿಮತಕ್ಕೆ ನನ್ನದೂ ಸಂಪೂರ್ಣ ಸಹಮತವಿದೆ. ಇನ್ನು ನನ್ನ ಪ್ರಕಾರ ಪ್ರತಿಕ್ರಿಯೆ ಬರಹಗಾರನ ಮುಂದಿನ ಬರಹಕ್ಕೆ ಸ್ಪೂರ್ತಿ ಒಪ್ಪುವೆ. ಆದರೆ ಅದೇ ಅಂತಿಮ ತೀರ್ಪಲ್ಲ. ಪ್ರತಿಕ್ರಿಯೆ ಇದ್ದರೆ ಮಾತ್ರ ಬರಹ ಚೆನ್ನಾಗಿದೆ ಇಲ್ಲದಿದ್ದರೆ ಕಳಪೆ ಎಂದು ತಿಳಿಯಬಾರದು. ಎಷ್ಟೋ ಸಲ ಓದಿದವರಿಗೆ ಕಮೆಂಟಿಸಲು ಸಮಯವಿರುವುದಿಲ್ಲ. ಇಲ್ಲಾ ಇನ್ನಾವುದೋ ಕಾರಣದಿಂದ ಪ್ರತಿಕ್ರಿಯೆ ಮಾಡಲಾಗದಿದ್ದರೂ ಮನಸಲ್ಲೇ ಮೆಚ್ಚಿಕೊಂಡಿರುತ್ತಾರೆ. ಇನ್ನು ಕೆಲವರಿಗೆ ತಪ್ಪು ಹೇಳಿದರೆ ಸರಿ ಬರದು. ಇದರಿಂದ ಉಂಟಾಗುವ ವೈಮನಸ್ಸಿಗಿಂತ ಸುಮ್ಮನಿರುವುದೇ ಲೇಸೆಂದೇ ಹೆಚ್ಚಿನವರು ತಪ್ಪನ್ನು ಹೇಳಲು ಹೋಗುವುದಿಲ್ಲ.
ಬರಹದ ಗುಣಮಟ್ಟವನ್ನು ಎಷ್ಟು ಜನ ಓದಿದ್ದಾರೆ ಇಲ್ಲಾ ಎಷ್ಟು ಕಮೆಂಟ್ ಬಂದಿದೆ ಎನ್ನುವುದರ ಮೇಲಿಲ್ಲ. ಒಂದು ಬರಹವನ್ನು ಓದದ ಮೇಲೆಯೂ ಬಹಳ ಕಾಲ ಅದರ ಒಂದು ಸಾಲು, ಕೆಲವು ಪದಗಳು ಓದುಗನ ಮನಸಲ್ಲಿ ಉಳಿವಂತಾದರೆ ಅಷ್ಟೇ ಸಾಕು. ಅದು ಸಾರ್ಥಕ ಗೊಳ್ಳುತ್ತದೆ. ಇದು ನನ್ನ ಅಭಿಮತವಷ್ಟೇ.
ಯಾರೇ ಓದಲಿ ಬಿಡಲಿ, ಬರವಣಿಗೆ ನಮ್ಮ ಮನಸಿನ ಶಾಂತಿಗೆ ಸಂಬಂಧಿಸಿದ್ದು. ಬರೆಯುವುದರಿಂದ ನಮಗೆ ಸಮಾಧಾನ, ನೆಮ್ಮದಿ ದೊರಕುವುದು ಎಂದಾದಲ್ಲಿ ಅದನ್ನು ನಿಲ್ಲಿಸಲೇ ಬಾರದು. ಬರೆದ ಮೇಲೆ ಬರಹ ಸಾರ್ವಜನಿಕವಾಗುವುದು. ಅಲ್ಲಿಯವರೆಗೆ ಅದು ಕೇವಲ ವೈಯಕ್ತಿಕ!
ಬರವಣಿಗೆ ನಿಲ್ಲಿಸದಿರಿ. ಅದು ನಿಮ್ಮ ಸ್ವಂತದ್ದು. ಪ್ರತಿಕ್ರಿಯೆ ಪರರದ್ದು. ಅದರ ಹಂಗು ನಿಮ್ಮ ಬರವಣಿಗೆಯ ಮೇಲೆ ಉಂಟಾಗದಿರಲಿ.
ಬರೆಯುತ್ತಿರಿ... ಬರುತ್ತಿರುವೆ.
ದೇಸಾಯಿ ಅವರೆ
ReplyDeleteವಿ.ಆರ್.ಭಟ್‌ರ - "ಬರೆಯುವಾತನಲ್ಲಿ ಓದಿಸುವ ಶಕ್ತಿ ಇದ್ದರೆ ಆತ ಎಲ್ಲಿದ್ದರೂ ಸಾಹಿತ್ಯಾಸಕ್ತರು ಹುಡುಕಿಬಂದು ಓದುತ್ತಾರೆ" - ಈ ಅಭಿಮತಕ್ಕೆ ನನ್ನದೂ ಸಂಪೂರ್ಣ ಸಹಮತವಿದೆ.ಪ್ರತಿಕ್ರಿಯೆಯಗಳ ಸ೦ಖ್ಯೆ ಲೇಖನದ ಗುಣಮಟ್ಟಕ್ಕೆ ಆಧಾರವಲ್ಲ ಎ೦ಬುದನ್ನು ಅರಿತುಕೊಳ್ಳಬೇಕು.ನಕಾರಾತ್ಮಕತೆಯನ್ನು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಿಕೊ೦ಡಾಗ ಅದರ ಪರಿಣಾಮ ಅಧ್ಬುತ.ನಿಮ್ಮ ಬರವಣಿಗೆ ಮು೦ದುವರಿಯಲಿ.
ಉಮೇಶ್ ಸರ್ರ..ಭಾಳ್ ಛಲೋ ಹೇಳಿದ್ರಿ...ಹಹಹ...ಹೌದು ಹೆಚ್ಚಾಗಿ ಧನಾತ್ಮಕ ವಿಷಯಗಳನ್ನೇ ಪ್ರತಿಕ್ರಿಯೆಯಲ್ಲಿ ನಮೂದಿಸಿ ಋಣಾತ್ಮಕಗಳನ್ನು ಮನಸಲ್ಲೇ ಇಟ್ಟುಕೊಳ್ಳುವುದು ಮನೋಗುಣ..ಇದು ಬಹುಪಾಲು ಅನುಸರಿಸೋ ಸ್ವಸೂತ್ರಿತ ನಿಯಮ...ಆದ್ರೆ ಕೆಲವರು ಟೀಕಾಪ್ರಿಯರೇ ಇರ್ತಾರೆ...!! ನಿಮ್ಮ ಒಂದು ಮಾತು ಖಂಡಿತಾ ಒಪ್ಪುವ ಮಾತು...ಬರೆದು ಬ್ಲಾಗಿಗೆ ಹಾಕುವುದಕ್ಕೆ ಮುಂಚೆ ಒಮ್ಮೆ ಪರಿಶೀಲಿಸಿದರೆ ಒಳ್ಲೆಯದು ಇದರಿಂದ ಗುಣಮಟ್ಟ ಸುಧಾರಿಸುತ್ತದೆ...ಆದ್ರೆ ಇದು ಅಧಿಕಾಂಶ ಸಮಯಾಭಾವದ ಕಾರಣವೋ ಅಥವಾ..ಬೇರೆ ಯಾವುದೋ ಕಾರಣಕ್ಕೋ...ಆಗದೇ ಹೋಗಬಹುದು,...ಒಳ್ಳೆಯ ಚಿಂತನೆಗೀಡುಮಾಡೋ ಲೇಖನ...
ReplyDeleteಸರ್, ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ಈ ನಿಮ್ಮ ಬ್ಲಾಗೋದಯವಾದ ಖುಷಿಯಲ್ಲಿ ನನ್ನದೂ ಒಂದು ಶುಭಾಶಯ ಮತ್ತು ಅಭಿನಂದನೆ. ನಿಮ್ಮ ಮೊದಲಿನ ಬರಹಗಳನ್ನು ನಾನು ಬಹುಶ: ಓದಿರುವುದಿಲ್ಲ. ಅಪ್ಪಿತಪ್ಪಿ ಓದಿದ್ದರೆ, ಕಣ್ಣಾಡಿಸಿದ್ರೆ ಒಂದಿರಬಹುದು... ನೆನಪಿಲ್ಲ.
ReplyDeleteಹೌದು. ಇಲ್ಲಿ ವಯಸ್ಸಿನ ಅಂತರವಿಲ್ಲದೇ, ಭಾಷೆ, ಸ್ಥಳಗಳ ಅಂತರವಿಲ್ಲದೇ ಮಿತ್ರವೃಂದ ತಾನಾಗಿಯೇ ಬೆಳೆದಿರುತ್ತದೆ. ಕೆಲವರು ಆತ್ಮೀಯರೂ ಆಗುತ್ತಾರೆ. ಕೆಲವರು ಹಾಯ್! ನಲ್ಲೇ ನಿಲ್ಲಬಹುದು. ಇನ್ನು ಕಾಮೆಂಟಿಸುವುದು ಬಿಡುವುದು ಓದುಗರ ಸಮಯಾವಕಾಶ, ಒಲವು ಇತ್ಯಾದಿಗಳೂ ಸೇರಿರಬಹುದು. ಪುಸ್ತಕ ಪ್ರಕಟಣೆಯ ವಿಷಯ ಬಂದಾಗ ಸ್ವಲ್ಪ ಹಿಂಜರಿಕೆಯೇ ಆಗುತ್ತದೆ. ಪ್ರಕಾಶಕರ ಅಭಾವ ಅಥವಾ ಮೂಲಬಂಡವಾಳ, ಮಾರಾಟ, ಇತ್ಯಾದಿ ಅಡೆತಡೆಗಳು. ಕೆಲವೊಮ್ಮೆ ನಾವು ಬರೆವುದನ್ನು ನಮಗೆ ತಿಳಿದವರಿಗೆ ಅಥವಾ ಮತ್ತೊಬ್ಬ ಮಿತ್ರರಿಂದ ಅಭಿಪ್ರಾಯ, ಸಲಹೆ ಕೇಳಿ ಬ್ಲಾಗಿನಲ್ಲಿ ಅಂಚಿಸಲೂ ಬಹುದು. ಇದು ಅವರವರ ವೈಯಕ್ತಿಕ ವಿಚಾರ ಎನ್ನಬಹುದು. ಇವಿಷ್ಟು ನನ್ನ ಅನಿಸಿಕೆಗಳು.
ಮತ್ತೊಮ್ಮೆ ಶುಭಾಶಯಗಳು.
ಸ್ನೇಹದಿಂದ,
ತೇಜಸ್ವಿನಿ ನಿಮ್ಮ ಅಭಿಮಾನದ ನುಡಿಗಳಿಗೆ ಋಣಿಯಾಗಿರುವೆ. ನನ್ನ ನಾನು ಅರಿತುಕೊಳ್ಳಲು ಹಾಗೆಯೇ ಬೇರೆ ಬೇರೆ ಜನರ ಅಭಿಪ್ರಾಯ ತಿಳಿದುಕೊಳ್ಳಲು ಈ ಲೇಖನ ಬರೆದೆ. ನಿಮ್ಮೆಲ್ಲರ ಹಾರೈಕೆಯ ನುಡಿ ಹೊಸ ಹುರುಪು ಕೊಟ್ಟಿದೆ.
ReplyDeleteಕುಸು ಮುಲಿಯಾಲ ಅವರೆ ನಕಾರ ವನ್ನು ಸಕಾರವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವೆ.ನಿಮ್ಮೆಲ್ಲರ ಪ್ರೀತಿ ಹೀಗೆ ಸಿಗುತಿರಲಿ
ReplyDeleteಆಜಾದ್ ಭಾಯಿ ನನ್ನ ಲೇಖನ ಚಿಂತನೆಗೀಡುಮಾಡುವಂತಿದೆ..ನಿಮ್ಮ ಮಾತೇ ಸ್ಫೂರ್ತಿದಾಯಕವಗಿತ್ತು.ನಾವೆಲ್ಲ ಎಲ್ಲೋ ಕಳೆದುಹೋಗುತ್ತಿದ್ದೇವೇನೋ ಅನ್ನೋ ಹೆದರಿಕೆ ಇತ್ತು ಈಗ ತಿಳಿಯಾಗಿದೆ..ನಾವೆಲ್ಲ ಒಂದೇ..ಅಲ್ವಾ
ReplyDeleteಚಂದ್ರು ಮೊದಲಬಾರಿ ಬ್ಲಾಗಿಗೆ ಬಂದು ಹಿತನುಡಿ ಹೇಳಿರುವಿರಿ..ಧನ್ಯವಾದಗಳು. ಉದ್ದಾಮ ಸಾಹಿತಿ ಅನಿಸಿಕೊಂಡವ್ರ
ReplyDeleteರಚನೆಗಳೇ ಪ್ರಕಾಶನಕ್ಕೆ ಹೆಣಗುತಿರುವಾಗ ನನ್ನಂತಹ "ಮುದ್ದಾಮ್" ಸಾಹಿತಿಗಳ ಪಾಡು ಆ ದೇವರಿಗೆ ಪ್ರೀತಿ..
sunaathara abhuipraayave nannadu.
ReplyDeletesaar, it depends on individuals...
ReplyDeletegumpugaarike adu idu ella common.. naavu jasti talekedisikoLbardu ansutte...
ella articles odoke patience athava time irade iroru kelavomme title and content interesting idre odtaare...
about comment: naavu avara blog ge hogi comment haaki bandre maatra comment haakoru irtaare... kelavaru avara blog ge hogi comment haakri bidri, they don't mind to comment on our articles. obbobbaru ondontara..