ಹೌದು ಭಾವನುವಾದ ಈ ಪ್ರಕಾರದಲ್ಲಿ ಇದು ನನ್ನ ಮೊದಲ ಹೆಜ್ಜೆ.ಆರಿಸಿಕೊಂಡ ಕವಿತೆ ನನ್ನ ಮೆಚ್ಚಿನ ಗದಿಮಾ-ಗಜಾನನ ದಿಗಂಬರ್ ಮಾಡಗುಲಕರ್- ಅವರ ಮರಾಠಿ ಗೀತೆ. ಮಿತ್ರ ಪರಾಂಜಪೆ
ಅವರಿಗೆ ತೋರಿಸಿದ್ದೆ ಅವರು ಹಸಿರು ಝಂಡಾ ತೋರಿದ್ದಾರೆ. ತಪ್ಪು ಒಪ್ಪು ಮುಕ್ತವಾಗಿ ಹೇಳಿರಿ..
ಗದಿಮಾ ಮರಾಠಿಗರ ಸಾಂಸ್ಕೃತಿಕ ದ್ಯೋತಕ. ಸುಮಾರು ೧೯೪೦ ಯಿಂದ ೧೯೭೭ ರವರೆಗೆ ಅವರು ಮರಾಠಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ.ಆದು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಗದಿಮಾ ಕವಿತೆ, ಕಾದಂಬರಿ, ಭಾವಗೀತೆ.
ಕತೆ ಚಿತ್ರಕತೆ, ಸಿನೇಮಾದ ಸಂಭಾಷಣೆ ಹೀಗೆ ಅನೇಕ ಪ್ರಕಾರಗಳಲ್ಲಿ ಅವರು ಕೈ ಆಡಿಸಿದರು. ಅವರು ಬರೆದ
ಗೀತರಾಮಾಯಣವಂತೂ ಜನಜನಿತ. ಸಿನೇಮಾಕ್ಕೆ ಬರೆದ ಗೀತೆಗಳಲ್ಲೂ ತಮ್ಮ ಕವಿತ್ವದ ಛಾಪು ಒತ್ತಿದ್ದ ಮಹನೀಯ. ಅವರು ಹಾಗೂ ಸುಧೀರ್ ಫಡಕೆ ಮರಾಠಿ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟವರು.
ಇವರಿಬ್ಬರ ಸಂಗಮದಿಂದ ಅನೇಕ ಅಮರಗೀತೆಗಳು ಬಂದಿವೆ.
ನಾ ಪ್ರಸ್ತುತ ಆಯ್ದ ಗೀತೆ "ಜಗಾಚಾ ಪಾಠೀವರ್ " ಚಿತ್ರದ್ದು.ತೀರ ಸರಳ ಶಬ್ದಗಳಲ್ಲಿ ವಿಸ್ತಾರ ಜೀವನದ ಕತೆ ಈ
ಗೀತೆ ಹೇಳುತ್ತದೆ. ಮರಾಠಿಯ ಮೂಲರಚನೆ ಸಹ ಕೊಟ್ಟಿರುವೆ.
एक तारा सुखाचा शंबर धागे दुःखाचे
जरतारि आयुश्य माणसा तुझिया आयुष्याचे
पांघरसि जरि असला कपडा, यॆसि उघडा जासि उघडा
कपड्या साठि करिसि नाटक तीन प्रवेशांचे
मुकि अंगडि बाल पणाचि,रंगीत वसने तारूण्याची
जीर्ण शाल मग उरे शॆवटि, लॆणे वार्ध्क्याचे
या वस्त्रा चे विणतॊ कॊण ? एक सारखि नसते दोन
कुणात दिसले त्रीखंड्यात हात विणकर्याचे...!
-------------
ನನ್ನ ಭಾವಾನುವಾದ ಹೀಗಿದೆ.....
ಹೇ ಮನುಜ ನಿ ಧರಸಿದ ದಿರಿಸಿನಲಿ...
ಒಂದೆಳೆ ಸುಖದ್ದಾದರೆ ನೂರೆಳೆ ದುಃಖದ್ದು
ನಿನ್ನೀಡೀ ಆಯುಷ್ಯದ ಕತೆಯಿದು...
ಥಳಥಳಿಸುವ ವಸ್ತ್ರದ ಹಿಂದಡಗಿದೆ ಸತ್ಯ
ಬಂದಾಗ ನೀ ಬೆತ್ತಲೆ ಹೋಗುವಾಗ ಅಂತೆಯೇ
ವಸ್ತ್ರಕ್ಕಾಗಿ ಹೂಡಿದ ಮೂರಂಕದ ನಾಟಕವಿದು..
ಸಾದಾಸೀದ ಅಂಗಿ ಬಾಲ್ಯ,ಜಗಮಗಿಸುವುದು ತಾರುಣ್ಯದ್ದು
ಜೀರು ಜೀರು ಅಂಗಿ ಉಳಿದುದು ಕೊನೆಗೆ
ಮುಪ್ಪಿನಾವಸ್ಥೆಯ ಸಾಕ್ಷಿ ಹೇಳುತಿಹುದು
ಈ ವಸ್ತ್ರವ ನೇದವನಾರು? ಒಂದರ ಹಾಗೆ ಇನ್ನೊಂದಿಲ್ಲ
ಮೂಜಗ ತಿರುಗಿ ಹುಡುಕಿದರೂ....
ನೇಕಾರನ ಕೈಯ ಕರಾಮತು ತಿಳಿಯದಿಹುದು...!
ಮಿತ್ರರೇ ಇನ್ನೊಂದು ಮಾತು ನಾ ಅವಶ್ಯ ಹೇಳಲೇ ಬೇಕು.ಮರಾಠಿ ಗೀತೆಯ ಅವತರಣಿಕೆ ನನಗೆ ಸಿಕ್ಕಿದ್ದು
www.aathavanitli-gani.com/ ಈ ಸೈಟನಿಂದ. ಈ ಸೈಟು ಅದೆಷ್ಟು ಮಾಹಿತಿ ಒಳಗೊಂಡಿದೆ
ಕತೆ, ಕವಿತೆ,ನಾಟ್ಯ ಗೀತೆ ಹೀಗೆ ಅನೇಕ ಭಾಗಗಳಿವೆ... ಮಾಹಿತಿಮೇಲಿಂದ ಮೇಲೆ ಅಪ್ ಡೇಟ ಆಗುತ್ತಿರುತ್ತದೆ.
ನಮ್ಮ ಕನ್ನಡದಲ್ಲೂ ಇಂತಹ ಸೈಟಿಲ್ಲ ಅನ್ನುವ ಕೊರಗು ಕಾಡಿದೆ...
ಚಿತ್ರ: ಗದಿಮಾ
ಚಿತ್ರಕೃಪೆ: ಅಂತರ್ಜಾಲ.
ಉಮೇಶ್ ಸಾರ್..
ReplyDeleteಮರಾಠಿ ಗೊತ್ತಿಲ್ಲದ ನನಗೆ.. ನಿಮ್ಮ ಭಾವಾನುವಾದದ ಕೊನೆಯ ಎರಡು ಪ್ಯಾರಾಗಳು ತುಂಬಾ ಇಷ್ಟವಾಯಿತು.. ಮತ್ತು ಒಂದೆಳೆ ಸುಖದ್ದಾದರೆ ನೂರೆಳೆ ದು:ಖದ್ದು ಎಂಬ ಸಾಲು ಕೂಡ.. ಎಷ್ಟೊಂದು ಅರ್ಥವಡಗಿದೆ ಈ ಒಂದು ಪುಟ್ಟ ಸಾಲಿನಲ್ಲಿ.... ಧನ್ಯವಾದಗಳು.
ಶ್ಯಾಮಲ
Chennaagide saar.. Bahala arthapoornavaada saalugalu.. "Baruvaagaloo bettale, hoguvaagaloo bettale.. Naduve yellaa kattale"
ReplyDeleteದೇಸಾಯರ,
ReplyDeleteಅಷ್ಟಿಷ್ಟು ಮರಾಠಿ ತಿಳಿಯುವ ನನಗೆ, ಅನುವಾದವನ್ನು ಓದಿದ ಮೇಲೆ, ಮೂಲವನ್ನು ಮತ್ತೊಮ್ಮೆ ಓದಿ ತಿಳಿದುಕೊಂಡೆ. ಸುಂದರವಾದ ಮೂಲಕವನ. ಆಷ್ಟೇ ಸೊಬಗಿನ ನಿಮ್ಮ ಅನುವಾದ. ಮರಾಠಿ ಸಾಹಿತ್ಯದ ಅನುವಾದವನ್ನು ದಯವಿಟ್ಟು ಮುಂದುವರೆಸಿರಿ.
ದೇಸಾಯ ರವರೇ ಮರಾಠಿ ನನಗೆ ಗೊತ್ತಿಲ್ಲ.ಆದರೆ ನಿಮ್ಮ ಭಾವಾನುವಾದ ನನಗೆ ಇಷ್ಟವಾಯಿತು.ಹುಟ್ಟು ಸಾವುಗಳ ನಡುವೆ ನಮ್ಮದು ನಾಟಕವೇ..! ನಾವು ಕೇವಲ ಪಾತ್ರಧಾರಿಗಳು.
ReplyDeleteದೇಸಾಯರ, ನಾವು ಚಿಕ್ಕವರಿರುವಾಗಿಂದ್ ಹಿಡ್ದೂ ಇಲ್ಲೀಮಟ ಬೆಳಿಗ್ಗೆ ಮರಾಠಿ ಭಕ್ತಿ ಗೀತೆಗಳನ್ನು ಕೇಳ್ಕೋತ ಕೆಲ್ಸ ಮಾಡ್ತೀವ್ರಿ. ಅರ್ಥ ಗೊತ್ತಿಲ್ಲಂದ್ರೊ ನಡೀತದ, ಅಂದಾಜಿನ್ಯಾಗ ಅರ್ಥಮಾಡ್ಕೋತ ಹೋಗ್ತೇವಿ. ಹಾಡು ಮಸ್ತದ ಮತ್ತ ನಿಮ್ಮ ಅನುವಾದ ಕೂಡ. ಒಳ್ಳೇ ಕೆಲ್ಸ ಮಾಡ್ಲಾಕ್ ಹತ್ತೀರಿ, ಹೀಂಗ...ಮುಂದುವರ್ಸ್ರಿ, ಧನ್ಯವಾದ
ReplyDeleteಶಾಮಲ ಅವರಿಗೆ ಧನ್ಯವಾದ ಮೊದಲಪ್ರಯತ್ನ ಸ್ವಲ್ಪ ಅಳುಕಿತ್ತು ನಿಮ್ಮ ಪ್ರೋತ್ಸಾಹ ನೋಡಿ ಖುಷಿ ಇಮ್ಮಡಿಯಾಗಿದೆ
ReplyDeleteಗೋರೆಸಾಬ್ ಮೆಚ್ಚಿದ್ದಕ್ಕೆ ಧನ್ಯವಾದಗಳು
ReplyDeleteಕಾಕಾ ಮೂಲವನ್ನೂ ಮೆಚ್ಚಿ ಅನುವಾದನೂ ಮೆಚ್ಚಿದ ನಿಮಗೆ ಧನ್ಯವಾದಗಳು. ನಿಮ್ಮ ಮಾತು ಪಾಲಿಸಲು ಪ್ರಯತ್ನಿಸುವೆ
ReplyDeleteಮೊದಲಬಾರಿ ಬಂದು ಅಕ್ಕರೆಯ ಪ್ರತಿಕ್ರಿಯೆ ನೀಡಿದ ಕುಸು ಮುಲಿಯಾಲ ಅವರಿಗೆ ಧನ್ಯವಾದಗಳು
ReplyDeleteಭಟ್ ಅವರೆ ನಿಮ್ಮ ಪ್ರತಿಕ್ರಿಯೆ ತಾನಿಕ್ ಇದ್ದಹಾಗೆ..ಧನ್ಯವಾದಗಳು
ReplyDeleteಚೆಂದದ ಭಾವಾನುವಾದ.
ReplyDelete