Saturday, September 4, 2010
ಕರಾಳ ಛಾಯೆ...
ಮತ್ತೊಮ್ಮೆ ಬಿಳಿ ತೊಗಲಿನ ಹೇಡನ್ ಅಬ್ಬರಿಸಿದ್ದಾನೆ..ಅಥರ್ಟನ್ ದನಿ ಸೇರಿಸಿದ್ದಾನೆ. ಅವರು ಟಾರ್ಗೆಟ್ ಮಾಡಿದ್ದು
ಭಾರತೀಯ ಉಪಖಂಡದವರನ್ನು .ಇವರ ಹಣೆಬರಹವೇ ಹೀಗೆ ಇದು ಅವರ ಮಾತಿನ ಸಾರಾಂಶ. ಅವರ ಕುಹಕಕ್ಕೆ
ಟೀಕೆಗೆ ತಕ್ಕಂತೆ ಪಾಕಿ ತ್ರಿವಳಿಗಳು ಕುಣಿದಿದ್ದಾರೆ. ಕ್ರಿಕೆಟ್ ಜಗತ್ತು ಮತ್ತೊಮ್ಮೆ ದಂಗು ಬಡೆದಿದೆ ನನ್ನಂಥ ಅದೆಷ್ಟೊ
ಅಭಿಮಾನಿಗಳು ಕಂಗಾಲಾಗಿದ್ದಾರೆ. ದುಡ್ಡು ತಗೊಂಡು ಆಡುವುದು ತಂಡ ಹೋಗಲಿ ದೇಶದ ಹಿತಾಸಕ್ತಿ ಸಹ ಅವರು
ಗಮನಿಸಲಿಲ್ಲ.ದುಡ್ಡು ಇಷ್ಟು ಮುಖ್ಯವೆ...?
ಈ ಮೂವರ ವರ್ತನೆಗೆ ಪಿಸಿಬಿ ತಲೆ ತಗ್ಗಿಸಬೇಕಾಗಿತ್ತು ಆದರೆ ಅದು ಭಾರತದ ಕೈವಾಡ ಇದೆ ಎಂಬ ಉಲಕೋಚಿತನದ ಹೇಳಿಕೆ ನೀಡುತ್ತಿದೆ.ಇದು ಮೂರ್ಖತನ ಅಲ್ಲದೇ ಮತ್ತೇನು ಅಂಗೈ ಹುಣ್ಣಿಗೇಕೆ ಕನ್ನಡಿ...?
ತನ್ನ ಮಾತು ಕೇಳುವ ಬಟ್ ನನ್ನು ಕಪ್ತಾನುಮಾಡಿದಾಗಲೆ ಅದು ಈ ಪ್ಲಾನ್ ಮಾಡಿತ್ತು ಈಗ ಪಿಸಿಬಿ ಜಗತ್ತಿನ ಇತರೇ
ಕ್ರಿಕೆಟ್ ಬೋರ್ಡಿಗೆ ಹೋಲಿಸಿದರೆ ಪಾಪರ್ ಹೀಗಾಗಿ ಅದು ಹಣ ಬಾಚಿಕೊಳ್ಳಲು ಈ ತಂತ್ರ ಹೂಡಿರಬಹುದು.
ಬುಕ್ಕಿ ಕೊಟ್ಟ ಹಣದಲ್ಲಿ ಪಿಸಿಬಿ ಯ ಶೇರು ಏನು ತ್ರಿವಳಿಗಳು ಬಾಯಿಬಿಡಬಹುದೇನೋ...!
ಏಸಿಯಾಕಪ್ ನಲ್ಲಿ ಅಮೀರ್ ಮೊಬೈಲ್ ನಲ್ಲಿ ಮಾತನಾಡುವಾಗ ಪಿಸಿಬಿ ಅವ ತನ್ನ ಹೆಲ್ಮೆಟ್ ಸರಿಪಡಿಸಿಕೊಳ್ಳುತ್ತಿದ್ದ ಎಂದು ತಿಪ್ಪೆ ಸಾರಿಸಿತ್ತು. ಸಿಡ್ನಿ ಯಲ್ಲಿ ಮ್ಯಾಚು ಅಂತೂ ಅಬ್ಬಬ್ಬಾ ಅದೆಷ್ಟು ಸಲ
ಬೇಕೂಂತಲೇ ಕ್ಯಾಚ್ ಬಿಡಬಹುದು..! ನೆಪಮಾತ್ರಕ್ಕೆ ವಿಚಾರಣೆ ಮಾಡಿ ಆಟಗಾರರನ್ನು ಆಜೀವ ಬಹಿಷ್ಕಾರ ಹಾಕುವ ನಾಟಕ ಆಡಲಾಯಿತು ಇವರ ವರ್ತನೆಗೆ ಬೇಜರಾದ ಯುಸುಫ್ ನಿವೃತ್ತಿ ಘೋಶಿಸಿದ .ಆದರೆ ಮತ್ತೆ
ಅವನ ಕಾಲು ಹಿಡಿದು ಮತ್ತೆ ಕರೆತರಲಾಯಿತು.
ಮೇಲಿನ ಎಲ್ಲ ಘಟನೆಗೆ ಕಲಶ ಪ್ರಾಯ ಎಂಬಂತೆ ನೋ ಬಾಲ್ ಹಗರಣ.ಈ ಮೀಡಿಯಾ ಅದೆಷ್ಟು ಶಕ್ತಿಶಾಲಿ ಅಂದರೆ ಏನೂ ಊಹಿಸಲು ಸಾಧ್ಯಇಲ್ಲ. ತ್ರಿವಳಿಗಳು ದುಡ್ಡುತಿಂದಿದ್ದಾರೆ ಸ್ವಲ್ಪ ಬೋರ್ಡಿನ ಬಾಯಿಗೂ ಮೆತ್ತಿದ್ದಾರೆ
ಎಲ್ಲ ಕೂಗಾಟ ಹಾರಾಟ ನಿಂತಿದೆ. ಲಾಕರ್ ನಲ್ಲಿ ದುಡ್ಡು ಸಿಕ್ಕಿ ಪ್ರಕರಣ ಅಂತ್ಯ ಕಂಡಿದೆ.ಆಜೀವ ನಿಷೇಧದ ಭೀತಿಯಲ್ಲಿದ್ದಾರೆ ತ್ರಿವಳಿಗಳು...! ದುಡ್ಡು ಎಷ್ಟು ದಿನಾ ಉಳಿಯುತ್ತದೆ ಗಳಿಸಿದ ಹೆಸರುಮಾತ್ರ ಧೂಳಾಗಿದೆ.
ಮೊಹ್ಮದ್ ಅಮೀರ್ ನಾ ಇತ್ತೀಚೆಗೆ ಬಹುವಾಗಿ ಮೆಚ್ಚಿಕೊಂಡ ಬಾಲರ್. ಅಗಾಧ ಪ್ರತಿಭಾವಂತಇನ್ನೂ ಮೀಸೆ ಸಹ ಮೂಡಿಲ್ಲ ಆದರೂ ಪ್ರಪಾತಕ್ಕೆ ಬಿದ್ದು ಬಿಟ್ಟಿದ್ದಾನೆ. ಮೇಲೆತ್ತಲು ಯಾರೂ ಮುಂದೆ ಬರುವುದಿಲ್ಲ
ತವರುನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ತಾಲಿಬಾನ್ ಕಾಟ ಬೇರೆಯವರ ನೆಲದಲ್ಲಿ "ಹೋಮ್ ಸಿರೀಸ್" ಆಡುವ
ಅನಿವಾರ್ಯತೆ. ಇಂಗ್ಲೆಂಡ್ ಆತಿಥ್ಯ ವಹಿಸಿತ್ತು ಕಾಂಗರೂಗಳ ನಡುವೆ ನಡೆದ ಪಂದ್ಯಗಳೂ ಸೊಗಸಾಗಿದ್ದವು.
ಆದರೆ ಉಂಡಮನೆಗೆ ಎರಡು ಬಗೆಯುವ ಪಾಕಿಸ್ತಾನದ ಹಳೇ ಚಾಳಿ..! ಸ್ವತಃ ಪಾಕಿಸ್ತಾನದಲ್ಲಿ ಅರಾಜಕತೆಇದೆ
ಮಹಾಪೂರ ಬಂದು ದೇಶ ದಿವಾಳಿಯ ಅಂಚಿನಲ್ಲಿದೆ ಮೇಲಾಗಿ ಈಗ ಇರೋದು ಪವಿತ್ರ ರಮಜಾನ್ ಮಾಸ ಬೇರೆ
ಆದರೆ ಇದಾವುದು ದುಡ್ಡು ಎಣಿಸೋವಾಗ ಅವರ ಅರಿವಿಗೆ ಬಂದಿಲ್ಲ ..! ಅದಕೆಂದೆ ದಾಸರು ಹಾಡಿದ್ದು
"ದುಗ್ಗಾಣಿ ಕೆಟ್ಟದು..." ಅಂತ. ಕ್ರಿಕೆಟ್ ಇಂತಹ ಕಲುಷಿತ ಜನರಿಂದ ಹಾಳಾಗುವುದಲ್ಲ ಅದರ ಶುಭ್ರತೆಗೆ ರಾಡಿ ರಾಚುವುದಿಲ್ಲ. ಸ್ವಾರ್ಥ ಸಾಧನೆಯೇ ಗುರಿಯಾಗಿಟ್ಟವ ಎಂದೂ "ಟೀಮ್" ಕಟ್ಟಲಾರ.
ಮತ್ತೊಮ್ಮೆ ಮಗದೊಮ್ಮೆ ಈ ಕಿರಾತಕ ತ್ರಿವಳಿಗೆ ಧಿಕ್ಕಾರ...!
Subscribe to:
Post Comments (Atom)
ದೆಸಾಯರೇ;ನೀವು ಹೇಳೂದು ಖರೆ.ಬೇಸರ ಆಗೈತಿ.
ReplyDeleteದೇಸಾಯಿ ಸರ್,
ReplyDeleteನೀವು ಹೇಳಿದ್ದು ಸರಿ..... ಇಂಥಹ ಕೆಲವು ಕೊಳ್ಕು ಹುಳುಗಳಿಂದ ಎಲ್ಲರ ಮೇಲೂ ಅನುಮಾನ ಬರುತ್ತದೆ..... ಅಲ್ಲಾ.... ಇವರು ಮಾಡೊದೆಲ್ಲಾ ಮಾಡಿ, ಭಾರತದ ಮೇಲೆ ಗೂಬೆ ಕೂಡಿಸಿದ್ದಾರಲ್ಲಾ... ನನ್ನ್ದೊಂದು ದಿಕ್ಕಾರ ಇವರೆಲ್ಲರ ವಿರುದ್ಧ....
ನಿಮ್ಮ ಆಕ್ರೋಶ ಸಾತ್ವಿಕವಾದದ್ದು!
ReplyDeleteದೇಸಾಯಿ ಸರ್,
ReplyDeleteನೀವು ಹೇಳುವುದು ನಿಜ. ನನಗೂ ಇವರ ಅವತಾರಗಳನ್ನು ನೋಡಿ ಬೇಸರವಾಗುತ್ತದೆ...ನನ್ನ ಕಡೆಯಿಂದಲೂ ಅವರಿಗೆ ದಿಕ್ಕಾರವಿದೆ.
ಈಗಂತೂ ಕ್ರಿಕೆಟ್ ಸುದ್ದಿ ಅಂದರೆ ಆಟ ಬಿಟ್ಟು ಎಲ್ಲಾ ಹಗರಣಗಳಿಗೇ ಸುದ್ದಿಯಾಗುತ್ತದೆ
ReplyDeleteನನಗ೦ತೂ ಈ ಕ್ರಿ"ಕೆಟ್ಟಾಟ" ಅಸಹ್ಯವೆನಿಸತೊಡಗಿದೆ.
ReplyDeleteಮನಸ್ಸಿಟ್ಟು ಆಡುವ ಆಟವನ್ನು ದುಡ್ಡಿಗೆ ಮಾರಿಕೊಳ್ಳುವುದು ಅಸಹ್ಯ ಹುಟ್ಟಿಸುತ್ತದೆ.
ReplyDeleteಭಾರತದ ಮೇಲೆ ಗೂಬೆ ಕೂರಿಸುವದು ಪಾಕಿಸ್ತಾನದ ಹಳೆಯ ಚಾಳಿ.ಆದರೆ ಕ್ರಿಕೆಟ್ಟನ್ನು ಹೊಲಸುಗೈದದ್ದರಲ್ಲಿ ಭಾರತದ ಪಾಲೂ ಇದೆ. ಅಝರುದ್ದೀನ ಪ್ರಕರಣನ್ನು ಮರೆತುಬಿಟ್ಟಿರಾ? ಆ ಮಹಾನುಭಾವನನ್ನು ನಾವು ಶಾಸಕನನ್ನಾಗಿ ಚುನಾಯಸಿದ್ದೇವೆ!
ReplyDeleteದೇಸಾಯರ,ಪಾಕಿಸ್ತಾನದ ಎಲಿ ತುಂಬಾ ನೊಣಾ ಹಾರಾಡತಾವ, ನಮ್ಮ ಎಲಿ ಮ್ಯಾಲೂ ನೊಣಾನ ಅವ!
ಬಹಳ ಸಮರ್ಪಕವಾಗಿ ಬರೆದಿದ್ದೀರಿ, ಪಾಕಿಸ್ತಾನ ಹೆಸರೇ ಹೇಳುತ್ತದೆ ನೋಡಿ ಅದು ಪಾಕಂಡಿಗಳ ಸ್ಥಾನ! ಬೇಸರವೆಂದರೆ ಭಾರತದಲ್ಲಿರುವ ಅನೇಕ ಮುಸ್ಲಿಂ ಬಾಂಧವರು ಕದ್ದು ಮುಚ್ಚಿ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ, ಲೇಖನ ಸ್ವಲ್ಪ ನೋವನ್ನೂ ತಂದಿತು, ಇದು ಭಾರತ ಅನುಭವಿಸುತ್ತಿರುವ ಶೋಚನೀಯ ಕಥೆ ! ಧನ್ಯವಾದಗಳು
ReplyDeleteದೇಸಾಯಿ ಸರ್,
ReplyDeleteಮುಂಚೆ ಕ್ರಿಕೆಟ ಅಂದರೆ ಬಹಳ ಇಷ್ಟವಾಗಿತ್ತು ,, ಇತ್ತೀಚಿನ ಹಗರನಗಳನ್ನು ನೋಡಿದ ಮೇಲೆ ಕ್ರಿಕೆಟ್ ವ್ಯಾಮೋಹವೆ ಹೊಗ್ತಾ ಇದೆ ,,,
ಸಕಾಲಿಅಕ್ ಬರಹ ...
ಕ್ರಿಕೆಟ್ ಅಂದರೇ ಜೂಜು.... ಹಣಕ್ಕಾಗಿ ದೇಶವನ್ನೇ ಮಾರಿಕೊಳ್ಳುವಂತಹ ನೀಚ ರಾಜಕಾರಣಿಗಳೇ ನಮ್ಮಲ್ಲಿರುವಾಗ... ಯಃಕಶ್ಚಿತ್ ಕ್ರೀಡೆ ಯಾವ ಲೆಕ್ಕ ಇವರಿಗೆ? ನಮ್ಮಲ್ಲೂ ಇಂತಹವರು ಬಹಳಿದ್ದಾರೆ. ಕಣ್ಣಿಗೆ ಬಿದ್ದಿಲ್ಲ. ಕಣ್ಣಿಗೆ ಬಿದ್ದ ಕ್ರಿಕೆಟಿಗರೆಲ್ಲಾ ನಿವೃತ್ತಿಯ ಸೋಗು ಹಾಕಿ ಹೋದವರೇ. ಈಗ ಎಲ್ಲವೂ ಕಾಂಚನಮಯ! ನಾನೀ ಆಟವನ್ನು ನೋಡುವುದ ಬಿಟ್ಟೇ ಎಷ್ಟೋ ವರುಷಗಳಾದವು.!
ReplyDeleteದೇಸಾಯಿಯವರೆ...
ReplyDeleteಯಾಕೋ ಈ ಕ್ರಿಕೆಟ್.. ಬರಿ ಆಟವಾಗಿ ಉಳಿದಿಲ್ಲ..
ಏನೇನೋ ಆಗಿಬಿಟ್ಟಿದೆ...
ನನಗೂ ಮೊದಲಿನಷ್ಟು ಆಸಕ್ತಿ ಇಲ್ಲ..
ಬಹಳ ಬೇಸರವಾಗಿಬಿಟ್ಟಿದೆ...
ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ...
@ ಡಾಕ್ಟರ್ ಸಾಹೇಬರಿಗೆ ಅನಿಸಿಕಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
ReplyDelete@ ದಿನಕರ್ ಕೆಟ್ಟಚಾಳಿ ಪಾಕಿಗಳದ್ದು ಅನಿಸಿಕೆಗೆ ಧನ್ಯವಾದಗಳು..
@ ಧನ್ಯವಾದಗಳು ಸೀತಾರಾಮ್ ಸರ್..
@ ಮೊದಲ್ಲೆಲ್ಲ ದೇವರು ಅವತಾರ ಎತ್ತುತ್ತಿದ್ದರಮ್ತೆ..ಈಗ ಇವರ ಅಪರಾವತಾರ ನಾವು ನೋಡಬೇಕಾಗಿದೆ..
@ ದೀಪಸ್ಮಿತಾ ಕ್ರಿಕೆಟ್ ಆಟ ಸುಂದರವೇ ಆಗೀಗ ಕೊಳಕು ಅಂಟಿಕೊಳ್ಳುತ್ತದೆ....
@ ಬೇಡ ಪರಾಂಜಪೆ ಅವರೆ ಅಸಹ್ಯ ಆಟದ ಮೇಲೆ ಬೇಡ ಕೊಳಕುಆಟಗಾರರ ಮೇಲೆ ಪಡೋಣ...
@ ಆನಂದ್ ಅನಿಸಿಕೆಗೆ ಧನ್ಯವಾದಗಳು..
@ ಕಾಕಾ ನಿಮ್ಮ ಅಭಿಪ್ರಾಯ ನಾ ಸಂಪೂರ್ಣ ಒಪ್ಪುವುದಿಲ್ಲ ಬೇರೆ ಎಲ್ಲರಿಗಿಂತಲೂ ಭಾರತದ ಕ್ರಿಕೆಟ್ ಬೋರ್ಡು
ಕಳಂಕಿತರನ್ನು ವಜಾ ಮಾಡಿತ್ತು.ಈಗ ಅಜರುದ್ದಿನ ಕಾಂಗ್ರೆಸ್ನ ಎಂಪಿ ನಿಜ ಆದರೂ ಅದರಹಿಂದೆ ಅಲ್ಪಸಂಖ್ಯಾತ
ತುಷ್ಟೀಕರಣ ಇದೆ....
@ ಭಟ್ ಅವರಿಗೆ ಧನ್ಯವಾದಗಳು..
@ ಶ್ರೀಧರ್ ಕ್ರಿಕೆಟ್ ಈಗಲೂ ಒಳ್ಳೆಯ ಆಟಾನೇ ಒಂದೆರಡು ಕೊಳಕು ಹುಳಗಳು ಇಡೀ ಆಟ ಕೆಡಿಸಲಾರವು
@ ತೇಜಸ್ವಿನಿ ನಿಮ್ಮ ಮಾತು ಪೂರ್ತಿ ಒಪ್ಪುವುದಿಲ್ಲ ಈಗಾಗಲೇ ತಪ್ಪಿತಸ್ಥರಿಗೆ ಸಜೆ ಯಾಗಿದೆ ಶಿಕ್ಷೆ ಜೋರಾಗಿದ್ದರೆ ಎಲ್ರೂ ಎಚ್ಚೆತ್ತುಕೊಳ್ಳುತ್ತಾರೆ...
@ ಹೆಗಡೇಜಿ ಅಭಿಪ್ರಾಯಕ್ಕೆ ಧನ್ಯವಾದಗಳು.....