Monday, August 30, 2010

ನಿರುತ್ತರ


ಆ ಸಸಿಗೆ ನೀರೆರೆದು ಕೈ ತೊಳೆದು
ಜನುಮ ಸಾರ್ಥಕವಾಯಿತೆಂಬ ಖುಷಿಯಲಿ
ನಾ ತೇಲಿದೆ.. ಅದರ ಸ್ಪರ್ಶದಿ ಆನಂದ ಹೊಂದಿ
ಗೆದ್ದವನಂತೆ ಬೀಗಿದೆ..

ತೇಲಿಹೊರಟವನನ್ನು ತಲೆಕೆಳಗು ಮಾಡಿತ್ತು
ಅವ್ವಳ ನಗು...ನಗುವದು ಕುಹಕದ್ದು..!
ನನ್ನ ಹಮ್ಮು ಬಿಮ್ಮು ಎಲ್ಲ ಕಳೆದು
ಬಟಾಬಯಲಲ್ಲಿ ಬೆತ್ತಲಾಗಿ ನಿಲ್ಲಿಸಿ ನಕ್ಕ
ಕೇಕೆಯ ನಗುವದು..

ಇದು ರುಣಸಂದಾಯದ ಮಾತಲ್ಲ..
ಅವ್ವಳ ಸಾಲ ಮರುಪಾವತಿಸುವನಾರಿಲ್ಲ
ಹಾಲುಣಿಸಿದವಳಿಗೆ ನೀರೆರೆದು ಸಾಗಿದವನೆ
ಈ ವೇಷವೇಕೆ...

ಪಡೆದುದು ಸಾಗರದಷ್ಟು..
ಮರಳಿಸಿದ್ದುದು ಬಿಂದು ಮಾತ್ರ..
ನಾಳಿನ ನೆರಳಿಗೆ ಇಂದು ಬೀಜ ಮೊಳೆಸಿರುವೆ..
ಮಗಳು ಹಸಿರು ನೋಡಲಿ ಎಂದೂ ಹಂಬಲಿಸಿರುವೆ..
ನನ್ನೆದೆಯ ಬಗೆದು ಬೆತ್ತಲಾಗಿಸಿ ತಿರುಗಿ ನೋಡದೆ ಹೋದವ ನೀನು
ಈಗ ಸಸಿಯೊಂದು ಮೊಳೆಸಿ ಬೀಗುವುದೇಕೆ...
ಕೇಳಿಸಲಿಲ್ಲ ನಿನಗೆ ನನ್ನ ಆರ್ತನಾದ..
ಅರಿಯಲಿಲ್ಲ ನನ್ನ ಬೆತ್ತಲೆಯ..
ಅದಾರೋ ಅಲ್ಲ ನೀನೆ ಅವನು , ಅಲ್ಲಿ ಇದ್ದೆ
ಉದ್ದುದ್ದ ಅಡ್ಡಡ್ಡ ವಾಗಿ ನನ್ನ ಸೀಳಿದ್ದೆ
ನನ್ನ ನೋವಿಗೆ ಮಿಡಿಯದೆ
ಮರಳಿ ನೋಡದೆಸಾಗಿಹೋಗಿದ್ದೆ
ನಾ ನಿನಗೆ ಬೇಡವಾಗಿದ್ದೆ.. ಅಂಬರವೇ ಅಮೃತ
ಸುರಿಸುವಾಗ ಕಪ್ಪು ಮೈಯ ನನ್ನ ಅಪ್ಪುಗೆಯ ಬಿಸಿ
ನಿನಗೆ ಬೇಕಿರಲಿಲ್ಲ..

ಅವ್ವಳ ಪ್ರಶ್ನೆಗೆ ನಿರುತ್ತರಿ ನಾನು
ನಾ ಕೊಟ್ಟಿದ್ದೇನು....
ಪಡೆದಿದ್ದೇನು..ಗೊಂದಲವಿದೆ,ದ್ವಂದ್ವವೂ ಇದೆ
ಆ ಗುಡ್ಡದಲ್ಲಿ ನಾ ನೆಟ್ಟ ಸಸಿ
ಗಾಳಿಗೆ ಓಲಾಡುತ್ತ ಅಣಕಿಸುತಿದೆ...!

12 comments:

  1. ಈ ಕವನ ಮೂಡಿ ಬಂದ ಹಿನ್ನೆಲೆ ಹೀಗಿದೆ.೨೯/೦೮/೧೦ ನಾ ಮೊದಲಬಾರಿ ಸಸಿ ನೆಟ್ಟೆ. ಮಣ್ಣು ಹಾಕಿ ನೀರೆರೆದಾಗ ಅದೇನೋ ವಿಚಿತ್ರ ತೃಪ್ತಿ ಇತ್ತು. "ಅಳಿಲು ಸೇವೆ" ಎಂದು ತಬೆತಾತ ಕೊಂಡೆ ಬೆಳಿಗ್ಗೆ ಎದ್ದಾಗ
    ಈ ವಿಚಾರ ಬಂತು..ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಮೂಡಿದ ಪ್ರಶ್ನೆಯನ್ನೇ ನಿಮಗೂ ಕೇಳಿರುವೆ...
    ಗೊತ್ತಿದ್ದರೆ ತಿಳಿಸಿ...

    ReplyDelete
  2. manada oLa hokku keLuva prashne idu.... uttara yaarigu tiLidilla....

    chennaagide sir kavana....

    ReplyDelete
  3. ಮೊನ್ನೆ ಸಸಿ ನೆಟ್ಟು ಬ೦ದ ನ೦ತರ ನಿಮಗೆ ಅನಿಸಿದ್ದನ್ನು ಕವನರೂಪಕ್ಕೆ ಇಳಿಸಿದ್ದೀರಿ. ನಿಜವಾಗಿಯೂ ಇದು ನಿಮ್ಮೊಬ್ಬರ ಅನಿಸಿಕೆಯಲ್ಲ, ನಮ್ಮೆಲ್ಲರ ಅನಿಸಿಕೆ. ಕವನದಲ್ಲಿ ವಿಷಾದ, ಅಣಕ, ಆರ್ತನಾದ ಎಲ್ಲವೂ ಧ್ವನಿಸಿದೆ. ತು೦ಬಾ ಚೆನ್ನಾಗಿದೆ. ಅ೦ದ ಹಾಗೆ ನಿಮ್ಮ ಪ್ರಸ್ತುತ email Id ಕೊಡಿ ಗುರೂ, ನೀವು ಕೊಟ್ಟ ಹಿ೦ದಿ ಕವನ ಕನ್ನಡೀಕರಿಸಿದ್ದೆ, ಅದರ ಬಗ್ಗೆ ನಾನು ನಿಮಗೆ ಕಳಿಸಿದ ಮೇಲ್ bounce ಆಗಿದೆ.

    ReplyDelete
  4. ಪ್ರಕೃತಿ ಮಾತೆಯಿಂದ ಮಾನವ ಪಡೆದದ್ದು ಅಪಾರ, ಅಪರಿಮಿತ!
    ಅವನು ಹಿಂತಿರುಗಿಸಿದ್ದು ಅಲ್ಪ ಅತ್ಯಲ್ಪ, ನಗಣ್ಯ!
    ಆದರೂ ಬೀಗುವದೇಕೋ?
    ಅದು ನಮ್ಮ ಭವಿಷ್ಯದ ಉಪಯೋಗಕ್ಕೆ ಉಳಿತಾಯ,
    ಬರಲಿರುವ ಪೀಳಿಗೆಗೆ ಅತ್ಯಲ್ಪ ಕಾಣಿಕೆ ಆದರೆ ಮಾತೆಗೆ ಏನು ಅಲ್ಲ. ಅಲ್ಲಿಯೂ ನಮ್ಮ ಸ್ವಾರ್ಥವಿದೆ ಅಲ್ಲವೇ!
    ಮನ ತಟ್ಟಿದ ಕವನ!
    ಧನ್ಯವಾದಗಳು ದೇಸಾಯಿಯವರೇ.

    ReplyDelete
  5. ದೇಸಾಯರ,
    ವಿಚಾರಪೂರ್ಣ ಕವನ ಅದ. ಈ ವಿಷಯದಾಗ ನಾವೂ ಸಹ ನಿರುತ್ತರ ಕುಮಾರರ ಇದ್ದೇವಿ.

    ReplyDelete
  6. Something is better than nothing alwa sir..
    but we will keep doing this good work :)

    ReplyDelete
  7. ನಮಗೆ,ಪ್ರಾಣ,ತ್ರಾಣ,ಪ್ರಾಣವಾಯು ಎಲ್ಲವನ್ನೂ ಕೊಡುತ್ತಿರುವ ಸಸ್ಯಗಳನ್ನು ಉಳಿಸಿ ಬೆಳೆಸಬೇಕೆಂಬ ಸಂದೇಶ ನೀಡುವ ಅರ್ಥಪೂರ್ಣ ಕವನ.ಧನ್ಯವಾದಗಳು ಸರ್.

    ReplyDelete
  8. oh!! i would not call this as scribbling!! this is serious kavana. good one!!
    ಅವ್ವನ ಪ್ರಶ್ನೆಗೆ ನನ್ನಲ್ಲೂ, ಬಹುಶಃ ಯಾರಲ್ಲೂ ಉತ್ತರವಿಲ್ಲ.

    ReplyDelete
  9. ಚೆನ್ನಾಗಿದೆ ಸಾರ್... ಮುಂದೆ ನಾನೂ ಕೆಲವು ಗಿಡ ನೆಡಬೇಕು ಅಂತ ತೀರ್ಮಾನಿಸಿದ್ದೇನೆ...

    ReplyDelete
  10. @ ದಿನಕರ್ ಅನಿಸಿಕೆಗೆ ಧನ್ಯವಾದಗಳು ಅಂದು ಎಲ್ಲಾರೂ ನಿಮ್ಮನ್ನೇ ನೆನೆಸಿದ್ರು...

    @ ಪರಾಂಜಪೆ ಅವರಿಗೆ ಮೂಡಿಬಂದ ಮಿಶ್ರಭಾವ ಹೀಗೆ ಕವಿತೆ ಅನಿಸಿಕೊಂಡಿದೆ ಅನಿಸಿಕೆಗೆ ಧನ್ಯೊಸ್ಮಿ..

    @ ಸೀತಾರಾಮ್ ಸರ್ ಧನ್ಯವಾದಗಳು ನಿಮ್ಮ ಬ್ಲಾಗು ಓದ್ದೆ ಫಾಲೋ ಅಂತ ಹೇಳ್ದೆ ಆದ್ರೆ ಎಲ್ಲೋ ತಪ್ಪಾಗಿದೆ ಮತ್ತೆ ಪ್ರಯತ್ನಿಸುವೆ....
    @ ಕಾಕಾ ಈ ನಿರುತ್ತರ ಕುಮಾರರ ಸಂತತಿಗೆ ಅಳಿವಿಲ್ಲವೇನೋ....
    @ ಶಿವಪ್ರಕಾಶ್ ನಿಮ್ಮ ಉತ್ಸಾಹ ಮೆಚ್ಚಲೇಬೇಕು ಬಹುಷಃ ನಾವು ಅಥವಾ ನಮ್ಮ ಪೀಳಿಗೆಯವರು ಆವಾಗ ಅಸಡ್ಡೆ ತೋರಿದ್ದರ ಫಲ..ಇರಲಿ ಈಗ ನಿಮ್ಮೊಡನೆ ಹೊಸ ಹೆಜ್ಜೆ ಹಾಕುವ

    @ ಡಾಕ್ಟರ್ ಸಾಹೇಬರಿಗೆ ಧನ್ಯವಾದಗಳು. ನೀವು ಇದ್ದಿದ್ದರೆ ಕಾರ್ಯಕ್ರಮ ಇನ್ನಷ್ಟು ರಂಗೇರುತ್ತಿತ್ತು
    @ ಮಾಲತಿ ಅವರಿಗೆ ಬ್ಲಾಗಿಗೆ ಸುಸ್ವಾಗತ ಆಗಾಗ ಬರತೀರಿ...
    @ ವಸುಧೇಶ್ ಸ್ವಾಗತ ಮೆಚ್ಚಿದ್ದಕ್ಕೆ ಧನ್ಯವಾದಗಳು ಆಗಾಗ ಬರ್ರಿ ಸಿಗರಿ
    @ ಗೋರೆ ಸಾಬ್ ನಿಮ್ಮ ನಿರ್ಧಾರ ಸ್ತುತಿಗೆ ಅರ್ಹ

    ReplyDelete
  11. ದೇಸಾಯ್ ಸರ್,

    ನಾವು ಅವತ್ತು ಮಾಡಿದ ಕೆಲಸಕ್ಕೆ ಬೀಗುತ್ತಿರುವುದು ನಿಜ. ಆದ್ರೆ ನಿಮ್ಮ ಕವನ ನಿಜಕ್ಕೂ ಕಣ್ಣುತೆರೆಸುತ್ತದೆ...ಅದಕ್ಕಾಗಿ ಧನ್ಯವಾದಗಳು.

    ReplyDelete