Tuesday, March 26, 2013

ಸಂಜೆಯಾಯಿತು ಮನವೇ..




ಈ ಕವಿತೆಯ ಮೂಲ ಮರಾಠಿದು..ಮಂಗೇಶ್ ಪಾಡಗಾಂವಕರ್ ಬರೆದಿದ್ದು..
ನನ್ನ ಮೆಚ್ಚಿನ ಕವಿಗೆ ಮೊನ್ನೆ ತಾನೆ ೮೫ ಮುಗೀತು..
ತೀರಸರಳ ಶಬ್ದಗಳಲ್ಲಿ ಕವಿತೆಯನ್ನು ಬರೆಯುವುದು ಇವರ ವಿಶೇಷತೆ..
original words in this link...
http://www.aathavanitli-gani.com/Song/Dolyat_Sanjaveli_Anu





ಸಂಜೆಯಾಯಿತು ಮನವೇ..
--------------------------

ಸಂಜೆಯಾಯಿತು ಮನವೇ ದುಃಖಿಸದಿರು ನೀ ಮತ್ತೆ...
ದೂರದ ಗುಡಿಯ ಕಲ್ಲಿಗೆ ಮತ್ತೆ ಹೇಳದಿರು ನಿನ್ನ ಕಹಾಣಿ..

ಜಗಜಂಜಡದಲಿ ಬೇಯುತಿರಲು ಯಾಂತ್ರಿಕ ದೇಹಗಳು
ಹೀಗಿರುವಾಗ ಈ ಉದಾಸ ಗೀತೆಯ ಹಾಡದಿರು ಮನಸೆ..

ಹಾದಿಗುಂಟ ಹರಡಿಬಿದ್ದ ಹೂಗಂಧ ಹುಡುಕದಿರು ಮತ್ತೆ..
ಈ ಊರಿನ ಮಣ್ಣು ದಾರಿಹೂಗಳ ನೆನಪಿನ ಠೇವಣಿ ಇಟ್ಟುಕೊಳ್ಳದು..

ಜಗದ ನಿಯಮ ನಿನಗಾಗಲಿ ಎನಗಾಗಲಿ ತಿಳಿಯದು...
ನನ್ನ ಕಣ್ಣ್ರೆಪ್ಪೆಯ ಒಳಗೆ ಬಂಧಿಸಿಟ್ಟಿಹೆ..ಮರುಭೂಮಿಯನು.

5 comments:

  1. ಇಷ್ಟವಾಯಿತು ಭಾವಾನುವಾದ. ಆದರೆ ಇನ್ನಷ್ಟು ಗೇಯತೆ ಇದ್ದಿದ್ದರೆ ಒಳ್ಳೆಯದಾಗುತ್ತಿತ್ತು. ಹಾಡುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿ ನನ್ನದು. ಆರಂಭದ ಎರಡನೆಯ ಸಾಲಿನಲ್ಲಿ ಕೊನೆಗೆ ಬಳಸಿದ 'ಕಹಾಣಿ' ಬದಲು ಕಥೆ ಎಂದಿದ್ದರೆ ಪ್ರಾಸಕ್ಕೆ ಸರಿಹೋಗುತ್ತಿತ್ತು ಅನಿಸುತ್ತದೆ.
    ಆದರೂ, ನಿಮ್ಮ ಪ್ರಯತ್ನಕ್ಕೆ ನನ್ನ ಮಾರ್ಕ್ಸು.

    ReplyDelete
  2. ಮಂಗೇಶ್ ಪಾಡಗಾಂವಕರ್ ಅವರನ್ನು ಕನ್ನಡಿಗರಿಗೆ ಪರಿಚಯಿಸುವತ್ತ ಹೆಜ್ಜೆ ಇಟ್ಟಿರುವ ತಮಗೂ ನಮನಗಳು.

    ReplyDelete
  3. ತುಂಬಾ ಚೆನ್ನಾಗಿದೆ ದೇಸಾಯಿ ಜಿ...

    ಎರಡು ಭಾಷೆಗಳನ್ನೂ ಎಂಜಾಯ್ ಮಾಡ್ತೀರಲ್ಲ..
    ಹೊಟ್ಟೆಕಿಚ್ಚಿನ ಅಭಿನಂದನೆಗಳು...

    ReplyDelete
  4. ತುಂಬಾ ಚೆಂದದ ಕವಿತೆ.ನನ್ನ ಬ್ಲಾಗಿಗೂ ಭೇಟಿ ಕೊಡಿ ದೇಸಾಯಿ ಸಾಹೇಬರೇ.

    ReplyDelete
  5. ದೇಸಾಯರ,
    ಮತ್ತೊಂದು ಭಾವಪೂರ್ಣ ಮರಾಠಿ ಕವನದ ಅನುವಾದವನ್ನು ಸಮರ್ಥವಾಗಿ ಮಾಡಿ ಕೊಟ್ಟೀರಿ.
    ಕವನದ ಭಾವ ಹೃದಯವನ್ನು ತಟ್ಟಿತು.
    ನಿಮಗೆ ಧನ್ಯವಾದಗಳು.

    ReplyDelete