Friday, November 11, 2011

ಯಯಾತಿ ಸಿಂಡ್ರೋಮು

"ಕೊಡು ಕೊಡು ಭಗವಂತ...."
ಇಲ್ಲ ಮಗಳ ಸಲುವಾಗಿ ವರ ಕೇಳಲಿಕ್ಕೆ ಹತ್ತಿಲ್ಲ ಅದಕಿನ್ನೂ ವ್ಯಾಳ್ಯೆ ಅದ. ಇದು ಏನಿದ್ರೂ ನಂದು ಡಿಮಾಂಡು.
ಯಾರಿಗೆ ಕೇಳಕೋಬೇಕು ಅಂತ ಗೊತ್ತಾಗಲಿಲ್ಲ ಹಿಂಗಾಗಿ ಆ ಜಾಗ..... ಅದ. ನಂದೇನೂ ಅಂಥಾ ಮಹತ್ವದ್ದು
ಕೋರಿಕೆ ಅಲ್ಲ ಆದ್ರ ಇದನ್ನು ಓದಿ ಯಾರಿಗರ ಕರುಣಾ ಬಂದು ,ಮುಂದಬಂದು ಸಹಾಯ ವಗೈರೆ ಮಾಡಾವ್ರಿದ್ರ
ನಂದೇನೂ ಅಭ್ಯಂತರ ಇಲ್ಲ.ಈ ವಿಷಯ ಮೊದ್ಲ ಹೇಳೂದು ಸರಿ ಅನಿಸ್ತು. ಅದಕ್ಕ ಹೇಳತೇನಿ.
ನೇರವಾಗಿ ಹೇಳತೇನಿ.ನನಗೂ ಈಗೀಗ"ಯಯಾತಿ ಸಿಂಡ್ರೋಮ್" ಸುರು ಆಗೇದ.ಇದೇನಿದು ಅಂತ ತಲಿಕೇಡಿಸ್ಕೊಬ್ಯಾಡ್ರಿ.
ಆ ಕತಿ ನಿಮಗೆಲ್ಲ ಗೊತ್ತಿದ್ದದ್ದ ಹಿಂಗಾಗಿ ಮತ್ತ ಅದನ್ನ ಏನು ಹೇಳೋದು.ಒಂದು ಬದಲಾವಣೆ ಅದ ನನಗ ಪುರೂರವ ನಂತ
ಮಗಾಇಲ್ಲ ಹಿಂಗಾಗಿ ಆ ಕತಿ ಇಲ್ಲಿ ರಿಪೀಟು ಆಗಲಾರದು. ಆದ್ರ ವಾಂಛ್ಹಾ ಮಾತ್ರ ಯಯಾತಿದು ನನ್ನೊಳಗ ಆವಾಹಿಸಿಕೊಂಡದ.
ಈ ಬದಲಾವಣೆ ನಾ ಫೀಲ್ ಮಾಡಲಿಕ್ಕೆ ಹತ್ತಿ ಭಾಳದಿನಾ ಆದ್ವು. ಸುರುಆಗಿದ್ದು ಮಾರಿಷಸ್ ನ್ಯಾಗ.ಅಲ್ಲೊಂದು ಬೀಚು ಅದರ
ದಂಡಿತುಂಬ ಲಾವಣ್ಯವತಿಯರ ದಂಡು..ಕೈಯಾಗ ಕೆಮರಾ ಇತ್ತು ಸುಂದರಿಯರನ್ನು ಕೆಮರಾದಾಗ ಸೆರಿಹಿಡಿಯೋ ಹಂಬಲ
ನಂದು.."ಏ ಅಂಕಲ್ ಕ್ಯಾ ಕರ್ ರಹೆ ಹೋ.." ಎನ್ನುವ ಕುಹಕ ಪ್ರಶ್ನೆ ಸಹೋದ್ಯೋಗಿಯದ್ದು ಹಾಗೆಯೇ ಇನ್ನೊಬ್ಬ ಸಹೋದ್ಯೋಗಿ
ಯ ಕಿಚಾಯಿಸುವ ಹಾಡು..."ಅಭಿ ತೋ ಮೈ ಜವಾನ್ ಹುಂ..". ಅಂಕಲ್ ಅನ್ನುವ ಪಟ್ಟ ದೊರೆತಿದ್ದು ಮಾರಿಷಸ್ ನೊಳಗ.
ಆ ಪದವಿಗೆ ಭೂಷಣ ಅನ್ನುವಹಂಗ ಹಣಿಕಿ ಹಾಕುವ ಬಿಳಿಕೂದಲ, ದಾಡಿ ಇತ್ಯಾದಿ.ಕೆಟ್ಟ ಅನಸ್ತದ ಯಾಕಂದ್ರ ವಯಸ್ಸಾತು ನನಗ
ಇದು ನನಗ ಬ್ಯಾರೆಯವ್ರು ಹೇಳಲಿಕ್ಕೆ ಸುರು ಮಾಡಿದ್ರು.ಏನು ಮಾಡುವುದು ತಿಳಿವಲ್ತು. ಡೈ ವಗೈರೆ ಭಾಳದಿನಾ ಟಿಕಾಯಿಸುವುದಿಲ್ಲ
ಮನಸ್ಸು ಇನ್ನೂ ರೆಕ್ಕಿಬಿಚ್ಚಿ ಹಾರಬೇಕಂತದ ಆಕಾಶಾನೂ ವಿಸ್ತಾರ ಅದ ಕಲರಫುಲ್ ಅದ ರೆಕ್ಕಿ ಬಡೀಲಿಕ್ಕೆ ಶಕ್ತಿ ಬೇಕಾಗೇದ
ನೀವು ಹೇಳಬಹುದು "ಶಕ್ತಿವರ್ಧಕ'ಔಷಧಿಗಳು ಬೇಕಾದಷ್ಟವ ಅಂತ ಆದ್ರ ನಾ ಹಪಾಪಿಸುವುದು ನಿಜವಾದ ಶಕ್ತಿಗೆ.
ಮೈಸೂರಾಗ ವಿಪ್ರೋ ಕ್ಯಾಂಪಸ್ಸಿನೊಳಗ ಎರಡುದಿನಾ ಆತು. ಸಿಂಡ್ರೋಮು ಇನ್ನೂ ಜಾಸ್ತಿಆಗೇದ. ಈಗಿನ ಪೀಳಿಗಿ ಭಾಳ ಚಾಲೂ.
ಓದತಿರಬೇಕಾದ್ರ ಒಬ್ಬರಿಗೊಬ್ಬರು ಪಟಾಯಿಸಿಕೊಳ್ತಾರ. ಅಕಸ್ಮಾತ ಒಂದ ಕಂಪನಿಯೊಳಗ ಕೆಲಸ ಸಿಕ್ತು ಅಂದ್ರಂತೂ ಕೇಳಬ್ಯಾಡ್ರಿ.
ಜೋಡಿನ ಊಟಾ ಮಾಡಬಹುದು..ನಗಾಡಬಹುದು ಇತ್ಯಾದಿ..! ಹೋಗಲಿ ಅದು ಅವರು ಪಡಕೊಂಡು ಬಂದಿದ್ದು ನೋಡಿ ನೋಡಿ
ಹೊಟ್ಟಿಉರಿ ಆಗಿ ಕಾಫಿ ಕುಡಿಯೋದು ಮಾತ್ರ ನಾ ಕೇಳಕೊಂಡು ಬಂದಿದ್ದು.ಏನುಮಾಡುವುದು ನಮ್ಮ ಕಾಲಕ್ಕ ಕಂಪ್ಯೂಟರ್ ಇರಲಿಲ್ಲ
ಕ್ಯಾಂಪಸ್ಸ ಇರಲಿಲ್ಲ ,ಗರ್ಲಫ್ರೆಂಡು ಇರಲಿಲ್ಲ , ಧೈರ್ಯಾನೂ ಇರಲಿಲ್ಲ. ಹಿಂಗ ಈ "ಇಲ್ಲ" ಅನ್ನುವುದರ ಪಟ್ಟಿ ಈಗ ಮಾಡಬಹುದು..
ಆಮ್ಯಾಲ ಒಂದು ವೇಳೆ ಇದ್ದಿದ್ರ ನಾ ಏನ ಮಾಡಬಹುದಾಗಿತ್ತು ಅನ್ನುವ ರಮ್ಯ ಕಲ್ಪನಾ ಮಾತ್ರ ನಾ ಈಗ ಮಾಡಬಹುದು.
ಸ್ವಲ್ಪ ಸೀರಿಯಸ್ ಆಗೂದಾದ್ರ ಈಗಿನ ಪೀಳಿಗೆ ನಮಕಿಂತಾನೂ ಸ್ವತಂತ್ರ ಅದ ,ಅವಲಂಬಿತ ಅಲ್ಲ ತಮ್ಮ ನಿರ್ಧಾರ ತಾವ ಮಾಡುವ
ಛಾತಿ ಅದ. ಹಿಂಗ ನೂರೆಂಟು ಪ್ಲಸ್ ಪಾಯಿಂಟ್ ಅವ.ಅದಕ್ಕ ಅವರಿಗೆ ಅಭಿನಂದನೆ ಹೇಳಬೇಕು.
ನನ್ನ ಸಮಸ್ಯಾ ಹಂಗ ಉಳದದ. ಪರಿಹಾರ ಸಿಗಬಹುದು ನಿಮ್ಮೊಡನೆ ಹಂಚಿಕೊಳ್ಳುವುದರಿಂದ ಅಂತ ಅನಿಸ್ತು.
ನೋಡ್ರಿ ಹಿರ್ಯಾರು, ಗೆಳ್ಯಾರು ಸಲಹಾ ಸೂಚನಾ ಕೊಡ್ರಿ. ಈ ಯಯಾತಿ ಸಿಂಡ್ರೋಮಿಗೆ ಏನರ ಔಷದಿ ಇದ್ರ ಹೇಳ್ರಿ..!!4 comments:

 1. ಯಯಾತಿಯವರ,sorry ದೇಸಾಯರ,
  ‘ಧೈರ್ಯಂ ಸರ್ವತ್ರ ಸಾಧನಮ್’ ಅಂತ ಹೇಳ್ತಾರ. ನೀವು ಮನಸ್ಸು ಮಾಡಿದರ ಬೇಕಾದ್ದು ಮಾಡಬಹುದು. ಆದರ ಹಿಂಗ ಹೇಳೋ ಮನಸ್ಸು ನನಗ ಆಗೂದುಲ್ಲ. ಯಾಕಂದರ ನಿಮ್ಮ ಮನಿಯವರ ಮುಖ ನೆನಪಾಗ್ತದ. ನಿಮಗೂ ಬಹುಶಃ ಆಗ್ತಿರಬಹುದು! ಒಂದು ಕೆಲಸಾ ಮಾಡರಿ. ಒಂದು ಲಿಮಿಟ್‍ನೊಳಗ ಕುದುರಿ ಓಡಸರಿ. ಸಿರ್ಫ ತಾಜಾ ಬಾತೇ ಕರೋ,ಬಸ್!

  ReplyDelete
 2. ಅಲ್ರೀ ದೇಸಾಯರ, ನೀವು ಯಯಾತೀನ ಅಂದೊಂಡ್ಕು ವೇಷ ಬರ್ಕೊಂಡು ಮೈಸೂರು ಬ್ಯಾಂಕ ಸರ್ಕಲದಾಗ ನಿಂದರ್ರಿ, ನಿಮ್ಮ ಥರಾನೇ ದೇವಯಾನಿ ಸಿಂಡ್ರೋಮು ಹತ್ತಿರೋ ಹುಡ್ಗೇನ ಸಾರಿ ಸಾರಿ ಆಂಟೀನ ನಾವು ಹುಡ್ಕೊಂಬತ್ತೀವ್ರಿ, ಅಲ್ಲೀ ಮಟ ತಡಕೊಳ್ರಲ, ಆಗೂದಿಲ್ಲಾ ? ಆಗೂದಿಲ್ಲಾ ಅನ್ನಾಂಗಿದ್ರ ಹೇಳ್ರಿ ನಮ್ಕಡಿ ಒಂದು ಮದ್ ಐತಿ ಅದಕ, ನೀವ ಹೀಂಗ್ ಬರ್ರಿ, ನಾವ್ ನಿಮ್ಮ ಬಣ್ಣ ಸುಣ್ಣ ಬಳ್ದು ರೆಡಿ ಮಾಡ್ತೇವಂತ, ಆಮೇಲೆ ನೋಡ್ರಿ ಯಾರೂ ಅಂಕಲ್ ಪಂಕಲ್ ಅನ್ನಾಂಗಿಲ್ಲ, ಅವರೇನಾರ ಹಂಗೇಳಾಕತ್ರ್ಯೋ ನಮ್ಗೇಳ್ರಲ್ಲ ಒದ್ದತ್ಲಾಗ ಹಲ್ ಪೂರ್ತಿ ಹೊಟ್ಯಾಗ ಹಾಕೋ ಜಬೋದಾರಿ ನಮ್ದದ! ಎಲ್ಡರೊಳಗ ಯಾವ್ದು ಅಂತ ನೀ..ವ ತೀರ್ಮಾನಕ್ ಬರ್ರಿ. ಸಲ್ಪು ಜಲ್ದೀ ಮಾಡ್ರಿ ಮತ್ತ ಲಗೊನ ಮುಗಿಸ್ಬಿಡೋನು!

  ReplyDelete
 3. nice one sir! samayaviddare baMdu hOgi, bareyabEkennisidare eradu maatu salahe/aashirvaada maaDi hOgi.
  http://subrahmanyahegde.blogspot.com/

  ReplyDelete
 4. ದೇಸಾಯಿಯವರ...

  ಮಗನ
  ಚಿಗುರು ಮೀಸೆ ನೋಡಿ ನನಗೂ..
  ಗೊತ್ತಾಗಲಿಕ್ಕ ಹತ್ಯದ.. "ವಯಸ್ಸಾತು" ಅಂತ..

  ಎಲ್ಲರಿಗೂ ಈ ವಯಸ್ಸಿನಲ್ಲಿ ಸಹಜ ಬಿಡ್ರಿ..

  ಎಲ್ಲವೂ "ಸಹ್ಯ"ದೊಳಗೆ ಇದ್ದರೆ..
  ಸಹಿಸಿಕೊಳ್ತಾರ..


  ನಿಮ್ಮ ಬರಹ ಇಷ್ಟವಾಯ್ತು...

  ReplyDelete