Tuesday, June 28, 2011

ಜೋ ಜೋ ಲಾಲಿ..










ಈ ಜೀವಜಾತ್ರೆಯಲ್ಲಿ ನಾವು ನಿಜವಾಗಲೂ ಕಳೆದುಕೊಂಡಿದ್ದಂದರೆ ನಮ್ಮ ಬಾಲ್ಯ.
ಅದೆಂದೂ ಮರಳಿ ಬರಲಾರದು. ಬಾಲ್ಯದಲ್ಲಿ ಅನೇಕ ಸಂಗತಿಗಳು, ಗೆಳೆಯರ ಸಂಗ, ಆಟ ಅಮ್ಮನ
ಕೈತುತ್ತು ಅಕ್ಕರೆ. ಇವುಗಳಿಗೆ ಕಲಶವಿಟ್ಟಂತೆ ಅಮ್ಮ ಹಾಡುತ್ತಿದ್ದ ಲಾಲಿಹಾಡುಗಳು...!!
ನಿಜ ನಮ್ಮ ಮಲಗಿಸಲು ಅಮ್ಮ ಗುನುಗುತ್ತಿದ್ದ ಹಾಡಿನಲ್ಲಿ ಅದೆಂಥ ಇಂಪಿತ್ತು..ಹಾಗೆಯೇ ಒಂಥರಾ
ಸಮ್ಮೋಹನ ಆವರಿಸಿ ನಿದ್ದೆ ಕಣ್ಣು ತುಂಬಿಕೊಳ್ಳುತ್ತಿತ್ತು. ಅವಳ ಮಮತೆಯ ಮುಂದೆ ನಮ್ಮ ನೂರು ತಪ್ಪು
ಮಾಫ..! ಹೆತ್ತಮ್ಮಳ ಅಕ್ಕರೆ ಬಿಂಬಿಸಲು ಪದಗಳಿವೆಯೇ ಲಾಲಿ ಹಾಡು ನಮ್ಮ ಸಂಸ್ಕೃತಿಯ ಬಹು ಮುಖ್ಯ
ಅಂಗ. ಹೊರದೇಶದಲ್ಲಿ ಅದರಲ್ಲೂ ಪಾಶ್ಚಾತ್ಯರಲ್ಲಿ ಈ ಮಾರ್ದವತೆ ಇದೆಯೇ ನಾ ಅರಿಯೆ.
ನಮ್ಮ ಸಿನೆಮಾಗಳಲ್ಲಿ ಮಗು ಮಲಗಿಸುವಾಗ ನಾಯಕಿ ಅಥವಾ ಮತ್ತಾರೋ ಹಾಡಿಗೆ ದನಿಯಾಗಿದ್ದಾರೆ
ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ನಾಯಕ ಸಹ ಲಾಲಿ ಹಾಡಿದ್ದಾನೆ..
ಈ ಹಾಡು ಸುಂದರ ಮಾತ್ರವಲ್ಲ ರಾತ್ರಿಯ ನೀರವತೆಯಲ್ಲಿ ಈ ಹಾಡು ಕೇಳಿದೆವಾದರೆ ಮುನಿಸಿಕೊಂಡ
ನಿದ್ದೆ ನಮ್ಮ ಅಪ್ಪುವುದರಲ್ಲಿ ಸಂಶಯ ವಿಲ್ಲ. ಅನೇಕ ಗೀತಕಾರರು ಈ ಹಾಡುಗಳ ಸಾಹಿತ್ಯದಲ್ಲಿ
ಅಂತಃಕರಣ ಉಣ್ಣಿಸಿದ್ದಾರೆ ಹಾಡಿದ ಗಾಯಕ/ಗಾಯಕಿಯರು ಅಮೃತ ಹರಿಸಿದ್ದಾರೆ ಅಂತೆಯೇ ಈ ಹಾಡುಗಳು
ಎಂದೆಂದೂ ಮರೆಯಲಾಗದುವು ಅವು ಅಮರ ಯಾಕೆಂದರೆ ತಾಯಿ ಎಂದಿಗೂ ಅಮರ ಅಲ್ಲವೇ..
ಈಗಲೂ ವಿವಿಧಭಾರತಿಯಲ್ಲಿ ಈ ಹಾಡು ತೇಲಿಬರುತ್ತದೆ. ಸೈಗಲ್ ನ ದನಿ ಮಾರ್ದವತೆ ಸೆಳೆಯುತ್ತದೆ..
"ಸೋ ಜಾ ರಾಜಕುಮಾರಿ ಸೋಜಾ..." ಅವನ ವಿಶಿಷ್ಟ ಕಂಠದಲ್ಲಿ ಈ ಹಾಡು ಇಂದಿಗೂ ಅಮರ.
ತಾಯಿ ಹೆಂಗಸು..ಹಾಗೆಯೇ ಲತಾಳ ದನಿ ನೂರೆಂಟು ತಾಯಿಯರಿಗೆ ದನಿಯಾಗಿದೆ. ಲಾಲಿಹಾಡು ಅವಳು
ಅನೇಕ ಹಾಡಿರಬಹುದು...ಎಷ್ಟೋಜನ ಮಕ್ಕಳು ರೇಡಿಯೋದಲ್ಲೋ,ರಿಕಾರ್ಡಿನಲ್ಲೋ ಅವಳ ಇಂಪಾದ ದನಿ
ಕೇಳಿ ನಿದ್ದೆಗೆ ಜಾರಿರಬಹುದು..ಅವಳ ಅಸಂಖ್ಯಾತ ಮುತ್ತುಗಳಲ್ಲಿ ಎರಡು ಲಾಲಿ ಹಾಡು ಆರಿಸಿರುವೆ--
"ಧೀರೆ ಸೆ ಆ ಜಾ ರೆ ಅಖಿಯನ್ ಮೆ ನಿಂದಿಯಾ ಆ ಜಾ " (ಚಿತ್ರ --ಅಲಬೇಲಾ--ಸಂಗೀತ ಚಿತಲಕರ್ ದು)
"ಆಜಾರಿ ಆಜಾ ನಿಂದಿಯಾ ತೂ ಆ.."(ಚಿತ್ರ-- ದೋ ಬಿಘಾ ಜಮೀನ್ -- ಸಂಗೀತ ಸಲೀಲ್ ದಾ).
ಗುಡಿಯಲಿರುವ ದೇವರಿಗೂ ಈ ಲಾಲಿಹಾಡು ಪ್ರಿಯ. ಸಾಮಾನ್ಯವಾಗಿ ದೇವರಿಗೆ ಕಾಕಡಾರತಿ, ಮಂಗಳಾರತಿ
ಮತ್ತು ಶೇಜಾರತಿ ಅಥವಾ ಶೈಯ್ಯಾರತಿ ಹೀಗೆ ಮೂರುವಿಧ ಆರತಿ ವಿಧಾನಗಳು. ದೇವರಿಗೂ ನಿದ್ದೆ ಬೇಕು
ಅನ್ನುವುದು ಒಂದು ಸುಂದರ ಭಾವ. ಮರಾಠಿಯಲ್ಲಿ ಅದರಲ್ಲೂ ಪ್ರಸಿದ್ಧ ದೇವರಿಗೆ ಈ ರೀತಿ ಶೈಯ್ಯಾರತಿ ಹಾಡಿ
ಮಲಗಿಸುವ ಪರಂಪರೆ ಇದೆ..ಅರ್ಚಕ ಶೇಜಾರತಿ ಹಾಡಿ ಗರ್ಭಗುಡಿ ಬಾಗಿಲು ಹಾಕಿದರೆಂದರೆ ದೇವರಿಗೆ ಅಂದು
ಸಲ್ಲುವ ಎಲ್ಲ ಸೇವೆ ಸಮಾಪ್ತ ಅಂತ ಲೆಕ್ಕ. ಶಿವಾಜಿ ಗುರು ರಾಮದಾಸ್ ಬರೆದ ಹಾಡಿನಿಂದ ಈಗಿನ ಸಿನೇಮಾ
ಹಾಡಿನವರೆಗೂ ಮರಾಠಿಯಲ್ಲಿ ಲಾಲಿಹಾಡು ಇವೆ..ದೇವರಿಗೆ ಹಾಡಿದ ಕೆಲವು ಶೈಯ್ಯಾರತಿಗಳು..
"ಬಾಳಾ ಜೋ ಜೋರೆ ರಘುರಾಯಾ ದಶರಥ ನಂದನ..."
"ನವಖಳಾಂಚ ಪಲ್ಲಂಗ ಶಾಂತೇ ಶೋಭತೋ ಭರಾ ಮಾತೆ ಶಯನ ಕರಾ..."(ದುರ್ಗಾದೇವಿ ಶೈಯ್ಯಾರತಿ)
ಮರಾಠಿಗರ ಪ್ರಭಾವದಿಂದ ನಮ್ಮಲ್ಲೂ ಅನೇಕ ಶೇಜಾರತಿಗಳಿವೆ ಮುಖ್ಯವಾಗಿ ದತ್ತಾತ್ರೇಯನನ್ನು ಕುರಿತು..
"ನರಸಿಂಹ ಸರಸ್ವತಿ ಧರಿಸಿ ಮನದಲಿಪ್ರೀತಿ ಭರದಿ ಬೆಳಗುವೆ ಶೈಯ್ಯಾರತಿ ಸ್ವೀಕರಿಸು ಯತಿಪತಿ..".
ಸಿನೇಮಾ ಹಾಡುಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕನ್ನಡ ಹಿಂದಿ ಹಾಗೂ ಮರಾಠಿ ಹೀಗೆ ತಾಯಿಯ
ಲಾಲಿಗೆ ಭಾಷೆಯ ಬಂಧವಿಲ್ಲ.
೧)"ಲಲ್ಲಾ ಲಲ್ಲಾ ಲೋರಿ ದೂಧ್ ಕಿ ಕಟೋರಿ ದೂಧ ಮೆ ಬತಾಶಾ..." (ಮುಕೇಶ್)
೨) "ರಾಮ್ ಕರೆ ಐಸಾ ಹೋ ಜಾಯೆ ಮೇರಿ ನಿಂದಿಯಾ ತುಝೆ ಮಿಲ್ ಜಾಯೇ " (ಮುಕೇಶ್)
೩) "ಮೈ ಗಾವೂ ತುಮ್ ಸೋ ಜಾವೋ " (ರಫಿ)
೪) "ಆ ಜಾರಿ ಆ ನಿಂದಿಯಾ ತೂ ಆ " (ಕಿಶೋರ್)
೫) " ನಿಂಬೋಣೀಚಾ ಜಾಡಾ ಮಾಗೆ ಚಂದ್ರ ಝೋಪಲಾಗ ಬಾಯಿ.." (ಸುಮನ್ ಕಲ್ಯಾಣಪುರ್)
೬) " ಜೋ ಜೋ ಲಾಲಿ ನಾ ಹಾಡುವೆ ಚಿನ್ನ ನಿನ್ನ ಮುದ್ದಾಡುವೆ.."( ಜೇಸುದಾಸ್)
೭) "ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ.."(ಎಸ್ ಪಿ ಬಿ)
೮) "ತುಸು ಮೆಲ್ಲ ಬೀಸು ಗಾಳಿಯೇ ಈ ಲಾಲಿ ಸುವ್ವಾಲಿ ಕಂದ ಕೇಳಲಿ"(ಚಿತ್ರ)
೯) "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..."(ಎಸ್ ಪಿ ಬಿ)
೧೦) "ಸುರಮಯಿ ಅಖಿಯೊಂಮೆ ನನ್ಹಾ ಮುನಾಃ ಸಪನಾ ದೇ ಜಾರೆ..(ಜೇಸುದಾಸ್ )
೧೧) 'ವಟಪತ್ರ ಶಾಲಕಿ ಭೂಮಾತ ಲಾಲಿ....(ಪಿ. ಸುಶೀಲ)
ಇದೆಲ್ಲವುಗಳಿಗೆ ಕಲಶ ಇಟ್ಟಹಾಗೆ ನಮ್ಮ ಕೆ ಎಸ್ ನ್ ಬರೆದ "ಅತ್ತಿತ್ತ ನೋಡದಿರು..
ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ..."
ಈ ಹಾಡು ಮೂಲಗಾಯಕಿ ಸುಲೋಚನ ದನಿಯಲ್ಲಿತ್ತು. ಅದರ ಲಿಂಕ್ ಗಾಗಿ ಬಹಳ
ಕಷ್ಟ ಪಟ್ಟೆ ಸಿಗಲಿಲ್ಲ..
ಇನ್ನು ಅನೇಕ ಹಾಡುಗಳಿರಬಹುದು ನೆನಪಾದದ್ದು ಬರೆದಿರುವೆ. ಲಾಲಿ ಹಾಡು, ಅಮ್ಮ , ಹಿತವಾದ
ನಿದ್ದೆ ಎಲ್ಲ ಕಳಕೊಂಡು ಬಾಳುವ ಈ ಭಂಡ ಬಾಳು ಯಾಕಾಗಿ..??

5 comments:

  1. ಮತ್ತೆ ಹಳೆ ನೆನಪುಗಳು...
    ಬಾಲ್ಯ.. ಆ ಹಾಡುಗಳು..

    ಲಾಲಿಹಾಡುಗಳ ಸಂಗೀತ ಮತ್ತು ರಚನೆ ತುಂಬಾ ಸೊಗಸು ಅಲ್ಲವೆ?

    ಲಾಲಿ ಲಾಲಿ ಸುಕುಮಾರ.. ಈ ಹಾಡು ತುಂಬಾ ಇಷ್ಟ..

    ಹೀಗೆ ಇನ್ನೂ ಬೇರೆ ಬೇರೆ ಸಂದರ್ಭಗಳ ಹಾಡುಗಳನ್ನು ಕೊಡುತ್ತಾ ಇರಿ..
    ಸಂಗ್ರಹ ಯೋಗ್ಯ... ಧನ್ಯವಾದಗಳು..

    ReplyDelete
  2. ಹಳೆ ನೆನಪುಗಳು ಸೊಗಸು,ಬಾಲ್ಯಇನ್ನೂ ಸೊಗಸು
    ಧನ್ಯವಾದಗಳು

    ReplyDelete
  3. ಭಾರೀ ಬರ್ದಿರ್ರಿಯಪ್ಪಾ ! ಬಾಲ್ಯಾನ ಚೆನ್ನಾಗ್ ಮೆಲಕ್ ಹೊಡ್ದೀರಿ, ಮತ್ತೆ ಬರಾಂಗಿಲ್ ತಗೋರಿ, ಏನ್ಮಾಡೂನು ಬಾಲ್ಯಾನ ಯಾವತ್ತೊ ಇದ್ರ ಸಖತ್ತಾಗಿರ್ತಿತ್ತ ಅನ್ನಸ್ತದ ಹೌದಿಲ್ಲೋ ?

    ReplyDelete
  4. ದೇಸಾಯಿಯವರೇ,

    ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ಗೀತೆ ನನ್ನ ಬಳಿಯಿದೆ. ಬಹುಶಃ ನೀವು ಅಂತರ್ಜಾಲದಲ್ಲಿ ಹುಡುಕುವಾಗ ಇದು ಸಿಗಲಿಲ್ಲವೆನಿಸುತ್ತದೆ. ನಿಮ್ಮ ಮಿಂಚೆ ವಿಳಾಸವನ್ನು ನನ್ನ ಫೇಸ್ ಬುಕ್ಕಲ್ಲಿ ನಮೂದಿಸಿ, ಕಳುಹಿಸಿಕೊಡುವೆ. https://www.facebook.com/aravindh.rao

    ಇನ್ನು ಜೋಗುಳ ಹಾಡುಗಳ ನಿಮ್ಮ ನೆನಪು ಅಧ್ಬುತ. ಇದರ ಜೊತೆಗೆ ನನ್ನಪಟ್ಟಿಯಲ್ಲಿರುವ ಹಾಡುಗಳು ಹೊಂದಬಹುದೇನೋ ನೋಡಿ.

    ೧. ಮಲಗೇ ಮಲಗೇ ಗುಬ್ಬಿ ಮರಿ.. ಕೊಡಿಸುವೆ ನಿನಗೆ ತುತ್ತೂರಿ - (ಚಿತ್ರ ಗೊತ್ತಿಲ್ಲ, ಸುದೀಪ್ ನಟನೆಯದ್ದು ಅಂತ ಮಾತ್ರ ಗೊತ್ತಿದೆ)
    ೨. ಕಂದಾ.. ಓ ನನ್ನ ಕಂದ ಕೃಷ್ಣಾ ಮುಕುಂದ... - ಚಿತ್ರ - ಧರ್ಮಸೆರೆ.
    ೩. ಆಡೋಣಾ ನೀನು ನಾನು ಎಲ್ಲ ಸೇರಿ - ಚಿತ್ರ - ಕಸ್ತೂರಿ ನಿವಾಸ.
    ೪. ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ... - ಚಿತ್ರ - ರಾಮಲಕ್ಷ್ಮಣ.

    ನೆನಪಿಗೆ ಬಂದಷ್ಟು ತಿಳಿಸಿದ್ದೇನೆ.. ಮುಂದೆ ನೆನಪಾದರೆ ಖಂಡಿತ ತಿಳಿಸುತ್ತೇನೆ.

    ReplyDelete