Monday, June 13, 2011

ಕೇಳೆನ್ನ ಅರಸ...ಈ ಕವಿತೆ ನನ್ನ ಫೇವರೇಟ್ ಗಳಲ್ಲೊಂದು.ಈ ಹಾಡು ಕೇಳಿದಾಗಲೆಲ್ಲ ಒಂದು ಗುಂಗಲ್ಲಿ
ತೇಲುವಂತಾಗುತ್ತದೆ. ಹಾಡು ಒಂದು ಪರಿಪೂರ್ಣತೆ ಸಾಧಿಸಲು  ಅದರ ಸಾಹಿತ್ಯ,
ಸಂಗೀತ ಸಂಯೋಜನೆ  ಜೊತೆಗೆ  ಹಾಡುವ ಗಾಯಕ(ಕಿ)ಯ ಆತ್ಮ ಅದರಲ್ಲಿ
ಬೆರೆಯಲೇಬೇಕು. ಪ್ರಸ್ತುತ ಹಾಡು ಅಂತುಹುದೇ ... ಇಲ್ಲಿ ಎಲ್ಲವೂ ಮಿಳಿತವಾಗಿದೆ
ಕೇಳುಗ ತಲೆದೂಗಲೇ ಬೇಕು..

ಇದು ಮರಾಠಿ ಭಾವಗೀತೆ. ಸುರೇಶ್ ಭಟ್ ಬರೆದಿದ್ದು. ಲತಾ ಳ ದನಿ ಹಾಗೆಯೇ
ಪಂಡಿತ್ ಹೃದಯನಾಥ ಮಂಗೇಶ್ಕರ್ ಸಂಗೀತ...

ನಾನು ಭಾವಾನುವಾದಕ್ಕೆ ಪ್ರಯತ್ನಿಸಿರುವೆ ..ಪರಿಣಾಮ ನೀವೇ ಹೇಳಬೇಕು


माळ्वून टाक दीप चेत्वून अंग अंग
राजसा किती दिसात लाभला निवांत संग

त्या तिथे फुलाफुलात पॆंग्ते अजून रात
हाय तु करू नकॊस एवढ्यात स्वप्न भंग

गार गार हवेत घेवुनि मला कवेत ..
मोकळे करून टाक एकवार अंतरंग

दूरदूर तारकात बैसलि पहाट ह्नात
सावकाश घे टिपून एक एक रूपरंग

का तुला कसे कळेल ? कॊण एकटे जळेल ?
सांग का कधि खरेच एक्टा जळे पतंग ?

काय हा तुजा श्वास  दरवळे इथे सुवास
बॊल रे ह्ळूत उठॆल चांदण्य़ावरी तरंग            ಕೇಳೆನ್ನ  ಅರಸ...
        ------------------
 
        ನಂದಿಸಿಬಿಡು  ಆ  ದೀಪ....
        ಉರಿಹೊತ್ತಿಸು  ಅಂಗ ಅಂಗದಲಿ
        ಅರಸ, ಅದೆಷ್ಟು ಯುಗಗಳ ನಂತರ
        ಬಂದಿದೆ  ಏಕಾಂತ ಸಂಗ....

        ಮೊಗ್ಗುಗಳಲಿ   ಅದೋ
        ತೆವಳುತಿದೆ ಇನ್ನೂ ನಿಶಿಗಂಧ..
        ಸಡಿಲಿಸಿ ನಿನ್ನಪ್ಪುಗೆಯ ಪಟ್ಟ..
        ಮಾಡಬೇಡ ನೀ  ಸ್ವಪ್ನಭಂಗ.......!

        ಸುಂಯ ಗುಡುವ ತಂಗಾಳಿಯಲಿ
        ಹಿತವಾಗಿ ಅಪ್ಪುತ  ನೀ...
        ಆವಾಹಿಸಿಕೋ ನನ್ನ ನಿನ್ನಲ್ಲಿ ಪೂರ್ಣ
        ಬೆತ್ತಲಾಗಿಸು  ನನ್ನ  ಅಂತರಂಗ......!

        ದೂರದೂರ ತಾರೆಗಳ ಮರೆಯಲ್ಲಿ
        ಉಷೆ ಇನ್ನೂ ವಿರಮಿಹಿಸಿಹಳು....
        ನಿಧಾನವಾಗಿ ಸವಿ, ರುಚಿಕರ
        ನನ್ನ   ಪ್ರತಿ ರೂಪರಂಗ............!

     
        ಒಬ್ಬಳೇ  ಬೇಯುವ ನೋವು
        ನಿನಗರಿವಿಲ್ಲ  ಸಖ...
       ನೋಡಿಹೆಯಾ ಎಲ್ಲಿಯಾದರೂ
       ಒಂಟಿ ಸುಡುವ  ಪತಂಗ.....?

        ನಿನ್ನ ಉಸಿರಬಿಸಿ ಗಲ್ಲದ ತುಂಬ
        ಎಬ್ಬಿಸಿದೆ ಹಲವಾರು ಪುಳಕ....
        ಪಿಸು ನುಡಿಯಲು ನೀನು
         ಎದ್ದಿದೆ ಚಂದ್ರನಲ್ಲೂ  ತರಂಗ......!
 
5 comments:

 1. maraati barolla
  aadaroo bhaavaanuvaada ishtavaayitu..

  ReplyDelete
 2. maraathi arthavaagalilla. aadare lathaa daniyalli kelidaaga mana pulakagonditu. innu nimma bhaavaanuvaada adbhuta....

  haadina raaga latha haadida ekaika kannada haadu" bellane belagaayitu" ("veera sangolli Raayanna" chitraddu) nenapaayitu....

  ReplyDelete
 3. ದೇಸಾಯರ,
  ನಿಮ್ಮ ಅನುವಾದ ಓದಿಕೊಂಡು, ಮರಾಠಿ ಹಾಡನ್ನು ಕೇಳಿದೆ; ಹೀಗಾಗಿ ಹಾಡು ಅರ್ಥವಾಯಿತು. ಲತಾ ಅದ್ಭುತವಾಗಿ ಹಾಡಿದ್ದಾಳೆ. ಹಾಡಿನ ವಿಡಿಯೋ ಸಹ ಉತ್ತಮವಾಗಿದೆ. ನಮಗೆಲ್ಲರಿಗೂ ಒಂದು ಮಧುರ ಅನುಭವ ನೀಡಿದ ನಿಮಗೆ ನನ್ನ ಕೃತಜ್ಞತೆಗಳು.

  ReplyDelete
 4. ದೇಸಾಯ್ ಸರ, ನಾವು ಚಿಕ್ಕವ್ರಿದ್ದಾಗ ಬೆಳ್ಳಂಬೆಳಿಗ್ಗೆ ಮರಾಠಿ ಅಭಂಗಗಳನ್ನ ರೇಡಿಯೋದಾಗ ಕೇಳ್ತಿದ್ವಿ, ಕಾಲಾ ಬದ್ಲಾಗೋತು ಟಿವಿ ಬಂದ್ಬುಡ್ತು! ನಮಗ ಈಗೇನಾಗೇದಪಾ ಅಂದ್ರ ಇರೋ ಮಾಧ್ಯಮಗಳ್ನೆಲ್ಲಾ ’ಆಫ್’ ಮಾಡಿ ತಣ್ಣಗೆ ಸುಮ್ನೇ ಕೂಡ್ರಬೇಕು ಅನ್ನಿಸ್ತದ! ಹಾಡು ಭೇಷ್ ಅದ, ಜೊತೆಗೆ ಅರ್ಥ ಕೂಡ !

  ReplyDelete
 5. nice..

  visit my blog @ http://ragat-paradise.blogspot.com

  RAGHU

  ReplyDelete