Sunday, August 22, 2010

ಮಧುಶಾಲೆ ಮತ್ತು ಸಖಿ

೧)ಅವಳೊಡಲಲ್ಲಿ ಮಧುಕಲಶವಿತ್ತು
ತುಟಿಯಿಂದ ಜೇನೂ
ತೊಟ್ಟಿಕ್ಕುತ್ತಿತ್ತು... ಅದ್ಯಾಕೊ
ನನ್ನ ಮಧುಪಾತ್ರೆ ಮಾತ್ರ ಯಾವಾಗಲೂ
ಖಾಲಿ ಯಾಗಿಯೇ ಉಳಿಯಿತು...!

೨) ಬಸವಳಿದು ಬೆಂಡಾದ ಜೀವಕೆ
ಎರಡು ಹನಿ ಮಧು
ನಾಲಿಗೆಯ ಮೇಲೆ ಸುರಿದಳು ಸಖಿ..
ದಾಹ ಇಂಗಿತು...
ಸಮುದ್ರ ಕುಡಿದಂತಾಯಿತು...!

೩) ಕೊನೆಕಿರಣ.. ಕೊನೆಯ ಆಸೆಯೂ
ಕಮರಿದೆ..ಬಾಳ ಯುದ್ಧದಲಿ ಜಯ
ಮರೀಚಿಕೆ ಯಾಗಿದೆ...
ಸುರಿ ಸಖಿ ಮಧುವ ಎದೆಯ ಕಿಚ್ಚು
ತಂಪಾಗಲಿ..ನಾಳೆ ಇಂದಿನಂತಾಗದಿರಲಿ....!

೪) ಮಧು ಶಾಲೆಯ ಬಾಗಿಲು ಮುಚ್ಚಿದೆ
ಮನ ವಿನ್ನೂ ಹಂಬಲಿಸಿದೆ..
ವಿಷಾದ ಮಡುಗಟ್ಟಿದ ನಿಶೆ..ಈ ಹಾಳು
ಮನಸ್ಸು ಇನ್ನೂ ಆ ಬೆಳ್ಳಿಗೆರೆಗಾಗಿ
ಪರಿತಪಿಸುತಿದೆ....!

೫) ಅವಳು ತೋರಿದಳು ಕನಸಿನ ಸೌಧಕೆ ದಾರಿ
ಹೆಜ್ಜೆ ತಪ್ಪಿತೇನೋ ಹಿಡಿದೆನು
ಮಧುಶಾಲೆಯ ಹಾದಿ...
ಇಬ್ಬಂದಿ ಮನವೇ ನೀ ದಿಕ್ಕು ತೋರು...
ಮುಕ್ತಿಯ ಮಾರ್ಗವೇನು...?!

19 comments:

  1. ದೇಸಾಯರ,
    ಶಾಯರಿ ಮಸ್ತ ಅದ. ಆದರ ನೀವು ಖರೇನ ಮಧುಶಾಲೆಯ ಹಾದಿ ಹಿಡದಿಲ್ಲ, ಹೌದಲ್ಲೊ?

    ReplyDelete
  2. ಎಲ್ಲವೂ‌ ಚೆನ್ನಾಗಿವೆ.

    cheers! :) :D

    ReplyDelete
  3. ದೇಸಾಯ್ಯವರೆ...
    ಒಂದಕ್ಕಿಂತ ಒಂದು "ನಶೆ" ಏರಿಸುವಂತಿದೆ..

    "ನನ್ನ ಮಧು ಪಾತ್ರೆ ಖಾಲಿಯಾಗೇ ಉಳಿಯಿತು"
    ಚಂದದ ಕಲ್ಪನೆ..

    ಕನ್ನಡದಲ್ಲಿ ಈ ಥರಹದ ಗಝಲ್ ಮಾದರಿಯ ಚುಟುಕು ಬಹಳ ಕಡಿಮೆ..
    ನಶೆಯೇರಿಸುವ ಇಂಥಹ ಚುಟುಕು ಇನ್ನಷ್ಟು ಬರಲಿ..

    ಅಭಿನಂದನೆಗಳು..

    ReplyDelete
  4. ದೇಸಾಯರೇ, ತು೦ಬ ಚೆನ್ನಾಗಿದೆ,

    ReplyDelete
  5. ದೇಸಾಯ್ ಸರ್,

    ಸಮುದ್ರ ಕುಡಿದಂತಾಯಿತು...ಪ್ರಯೋಗವೇ ಎಷ್ಟೋಂದು ಅರ್ಥಕೊಡುತ್ತದಲ್ಲವೇ?

    ReplyDelete
  6. ದೇಸಾಯಿಯವರಿಗೆ ನಮನಗಳು.ನಿಮ್ಮ ಬ್ಲಾಗಿಗೆ ಬಂದ ಮೊದಲ ಸಲವೇ ನಿಮ್ಮ ಬ್ಲಾಗಿನ ನಶೆ ಏರಿದೆ.ಇನ್ನು ನಾನು ನಿಮ್ಮ ಬ್ಲಾಗಿನ ಖಾಯಂ ಗಿರಾಕಿ.ಅದ್ಭುತ ಘಜಲ್ ಗಳು.ಇನ್ನಷ್ಟು ಬರಲಿ.ಧನ್ಯವಾದಗಳು ಸರ್.

    ReplyDelete
  7. saar, kikku erutaa ide... bega maduve aagbeku :D

    ReplyDelete
  8. ನಶೆ ಏರಿಸುವ ಶಾಯರಿಗಳು!

    ReplyDelete
  9. ಕಾಕಾ ನಿಮ್ಮ ಕಳಕಳಿಗೆ ಧನ್ಯವಾದಗಳು. "ಜಾಲಿ ಬಾರಿನಲ್ಲಿ..."ಬರೆದ ಲಕ್ಶ್ಮಣ ರಾವ್ ಅವರೂ "ನಿನ್ನೊಡಲೆ ಮಧುಕಲಶ ವಾಗಿರಲು ಬೇರೆ ಮಧು ಯಾಕೆ ನನಗೆ" ಅಂತಾನೂ ಬರೆದಿದ್ದರು...!

    ReplyDelete
  10. ಆನಂದ್..! ನಿಮಗೂ ಚಿಯರ್ಸರಿ....!

    ReplyDelete
  11. ಭಟ್ರೆ ಧನ್ಯೋಸ್ಮಿ..!

    ReplyDelete
  12. ಹೆಗಡೇಜಿ ನೀವು ಸ್ವಲ್ಪ ಜಾಸ್ತಿ ಹೊಗಳ್ತೀರಿ..ನಾನೇನು ಗಜಲ್ ಬರದಿಲ್ಲ ತುಂಡು ತುಂಡು ಸಾಲು ಗೀಚಾವ,
    ನಿಮ್ಮ ಬ್ಲಾಗಿನಾಗೂ ನನಗ ಗಜಲ್ ಕವಿ ಅಂದೀರಿ...ನಿಮ್ಮ ಅಪೇಕ್ಷಾ ಈಡೇರಿಸಲಿಕ್ಕೆ ದೇವ್ರು ಶಕ್ತಿ ಕೊಡಲಿ

    ReplyDelete
  13. ಪರಾಂಜಪೆ ಅವರಿಗೆ ಧನ್ಯವಾದಗಳು...

    ReplyDelete
  14. ಶಿವು ಅವರಿಗೆ ಕಲ್ಪನೆ ನಮ್ಮ ಕವಿಗಳ ಹಕ್ಕು ಏನಂತೀರಿ

    ReplyDelete
  15. ಡಾಕ್ಟರ್ ಸುಸ್ವಾಗತ. "ಲಾಖೊಂ ಹೈ ಯಹಾಂ ದಿಲ್ ವಾಲೆ" ಹಾಡು ಇನ್ನೂ ಗುನುಗುನಿಸುತ್ತಿರುವೆ,
    ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು

    ReplyDelete
  16. ಶಿವಪ್ರಕಾಶ್ ಕಿಕ್ ಏರಿಮದ್ವೆ ಯಾಗಬೇಡ್ರಿ...ನಿಧಾನವೇ ಪ್ರಧಾನ ಮತ್ತೆ ಬ್ರಹ್ಮಚರ್ಯವೇ ಜೀವನ....!

    ReplyDelete
  17. ಸೀತಾರಾಮ್ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು.....

    ReplyDelete
  18. ನಮಸ್ತೆ ಉಮೇಶ್ ಜಿ, ನಮಸ್ತೆ

    ಇದೆ ಮೊದಲ ಭಾರಿಗೆ ನಿಮ್ಮ ಬ್ಲಾಗ್ ಭಾವಲೋಕಕ್ಕೆ ಬಂದಿದ್ದೇನೆ. ಅಬ್ಬ..! ಏನಿಲ್ಲ ನಿಮ್ಮ ಬ್ಲಾಗಿನಲ್ಲಿ, ಕಥೆ, ಕವಿತೆ, ಅನುಭವ, ಶಾಯರಿ...ಬಹಳ ಖುಷಿಯಾಯಿತು.

    ನಿಮ್ಮ ಶಾಯರಿ ಓದುತ್ತಿದ್ದರೆ, ಖಲೀಲ್ ಗಿಬ್ರಾನ್ ರ ನೆನಪು ಬರುತ್ತೆ.

    ಶುಬವಾಗಲಿ, ಬಿಡುವಾದಾಗ ಒಮ್ಮೆ ನನ್ನ ಬ್ಲಾಗ್ಗಳೆಡೆಗೆ ಕಣ್ಣು ಹಾಯಿಸಿ.

    ಪ್ರೀತಿಯಿಂದ,

    ಲಿಂಗೆಶ್ ಹುಣಸೂರು,
    ಬಿಂದುವಿನಿಂದ ಅನಂತದೆಡೆಗೆ...

    ಸಂಸ್ಥಾಪಕ, ಚುಕ್ಕಿಯ ಸಂಸ್ಥೆ (ರೀ),
    ಹುಣಸೂರು, ಮೈಸೂರು ಜಿಲ್ಲೆ.

    ReplyDelete