
ತುಕ್ಕು ಹಿಡಿದು ಮೂಲೆ ಸೇರಿದ
ಟ್ರಂಕಿನಲಿ ಒಪ್ಪವಾಗಿ ಜೋಡಿಸಿಟ್ಟ
ಅವ್ವಳ ನೀಲಿ ಸೀರೆ..
ಕೈಗೆತ್ತಿಕೊಂಡಾಗಲೆಲ್ಲ ಭಾರದ
ಅರಿವಾಗುವುದಿದೆ..ನವಿರು ಸ್ಪರ್ಶ..
ತಲೆಗೂದಲಲ್ಲಿ ಅವ್ವ ಬೆರಳಾಡಿಸಿದಂತೆ..
ಆಗಾಗ ಸೀರೆ ಸವರುತ್ತೇನೆ..
ಆವರಿಸುತ್ತಾಳವಳು ಮೈ ತುಂಬ
ಈ ಸುಖಕ್ಕೆ ಅದಾವ ಒಡವೆ ವಸ್ತ ಸಾಟಿ..!
ಸೀರೆಯದು ಬತ್ತದ ಒರತೆ...
ಮೀಯುತ್ತೇನೆ...ನಾ ಮನದುಂಬಿ
ಅವ್ವಳ ತೊಡೆ ಮೇಲಾಡುವ ಕೂಸಾಗುತ್ತೇನೆ....
ದೇಸಾಯಿಯವರೆ...
ReplyDeleteಅಮ್ಮಾ..
ಎಲ್ಲಿದ್ದರೂ..
ನೀ..
ಬರುವೆ..
ಪ್ರೀತಿ, ಮಮತೆಯ..
ನೆನಪಲ್ಲಿ...
ಕಣ್ಣು
ತುಂಬಿ ಬರುವ..
ಹನಿ..
ಹನಿಗಳಲ್ಲಿ...
ಚಂದದ ಕವನಕ್ಕೆ ಅಭಿನಂದನೆಗಳು...
ದೇಸಾಯಿ ಸರ್,
ReplyDeleteಅಮ್ಮನ ಮೇಲಿನ ಪ್ರೀತಿ ಸೀರೆಯ ಸ್ಪರ್ಶದ ನೆನಪು ಭಾವನಾತ್ಮಕವಾಗಿ ಮೂಡಿಬಂದಿದೆ.
ಭಾವಾನಾತ್ಮಕ ಅನುಭೂತಿ.
ReplyDelete