Monday, January 25, 2010

ಪ್ರಚಲಿತ "ಪಂಚಕ"ಗಳು...

೧) ಐಪಿಲ್ನಲ್ಲಿ ನಾವ್ಯಾಕಿಲ್ಲ
ಕೇಳ್ತವ್ನೆ ಅಫ್ರಿದಿ...
ಗುಂಡ್ ಹಾರ್ಸಾವ್ರ ಜತೆ
ಚೆಂಡಾಡೋದಿಲ್ಲ ಅಂದವ್ರು..
ಮೋದಿ...!

೨) ಆಟದಲ್ಲಿ ರಾಜ್ಕೀಯ ಬ್ಯಾಡ
ಬೊಬ್ಬೆ ಹೋಡೀತಾನೆ
ಪಕ್ಕದ್ ಊರವ್ನು...
ನಮ್ಗಳ್ ಮನೆಗ್ ಬೆಂಕಿ ಹಚ್ಚಿ
ಕಾಯ್ಸಿಕೊಂಡವ್ನು ಅವ್ನು...!

೩) ಆಯ್ತು ನಮ್ದು ಮಾನ
ಮೂರ್ ಕಾಸಿಗೆ ಹರಾಜು...
ಬೊಬ್ಬೆ ಹೊಡೀತು ಪಾಕಿಸ್ತಾನು....
ನಮ್ಮವ್ರ ರಕ್ತ ಕುಡ್ದು ತೇಗ್ದಾಗ
ಅದ್ಕಿರಲಿಲ್ಲ ಗರಜು...!


೪) ಮಹಾರಾಷ್ಟ್ರ ಸರ್ಕಾರ ಅಂತು
ಬಂದ್ರೆ ಮರಾಠಿ ಹೊಡೀರಿ ಟ್ಯಾಕ್ಸಿ...
ದೇಶ ಒಡ್ಯೋ ಹೊಸಾ ತಂತ್ರ ಇದು
ನನ್ನ ಧಿಕ್ಕಾರಕ್ಕೆ
ನೀವೂ ದನಿಗೂಡ್ಸಿ...!

೫) ಇಂದಿನ ಧ್ವಜಾರೋಹಣಕ್ಕೆ
ಅಂಜುಮನ್ ಬಹಿಷ್ಕಾರ....
ಇದು ಬಿಸಿ ಸುದ್ದಿ...
೯೫ರಲ್ಲಿದ್ದ ದೇಶಭಕ್ತಿ ೨೦೧೦ಕ್ಕೆ
ಯಾಕಿಲ್ಲ ಕೇಳ್ಬೇಕು ಅವ್ರಿಗೆ ಗುದ್ದಿ...!

20 comments:

  1. ಪಂಚಕಗಳು ಪಂಚಿಂಗ್ ಆಗಿವೆ....ಚಂದ್ ಬರ್ದೀರ್ರೀ ದೇಸಾಯರ.....ಧನ್ಯವಾದ್ಗಳ್ರೀ....

    ReplyDelete
  2. ಅಗ್ಗದೀ ಛೊಲೋ ಅವ.. :)

    ReplyDelete
  3. ಮುಷ್ಟಿ ಬಿಗದು ಪಂಚ್ ಹೊಡದೀರಿ
    ಹಲ್ಲು ಮುರಿಯೊ ಹಂಗ!
    ಎದ್ದೀತೇನು ಪಾತಕಿ ಪಂಚಕ,
    ಆಗಲು ದಂತದ ಭಂಗ,
    ದೇಸಾಯರ ಸಂಗ?!

    ReplyDelete
  4. ಸರ್,

    ಪಂಚಿಂಗ್ ಅಂದ್ರ ಇದಾ ನೋಡ್ರಿ....ಸರಿಯಾಗಿ ಅವರಿಗೆ ಗೂಸ ಕೊಟ್ಟಿದ್ದೀರಿ..

    ReplyDelete
  5. ಸಕತ್ ಪ೦ಚಕದ ಪ೦ಚಿ೦ಗ್ರೀ ಯೆಪ್ಪಾ!!
    ಭಾಳ ಚಲೋ ಬರೆದಿರ್ರೆಲಾ!!

    ReplyDelete
  6. ಪಂಚಕ ಗಳು ಅಲ್ಲಾ.
    ಪಂಚರಂಗಿ ಇವು...

    ಸೊಗಸಾಗಿ ಬರೆದಿದ್ದೀರಿ...

    ReplyDelete
  7. ಛಲೋ ಅದಾವ್ರೀ ಪ೦ಚಿ೦ಗ್ ಪಂಚಕಗಳು, ಮುಂದುವರಿಸಿ.

    ReplyDelete
  8. ಪಿಂಚಿಂಗ್ ಪಂಚಕಗಳು !!ಭೇಷ್

    ReplyDelete
  9. ಧನ್ಯವಾದಗಳು ಭಟ್ರೇ..ಹೀಗೆ ಪ್ರೋತ್ಸಾಹ ಸಿಗುತಿರಲಿ..

    ReplyDelete
  10. @ ಆನಂದ, ಶಿವು, ಸೀತಾರಾಮ್ , ಹೆಗಡೇಜಿ, ಪರಾಂಜಪೆ ಸರ್ ,ಗೋರೆ ,ವಿಆರ್ ವಿ ಭಟ್
    ಎಲ್ಲರಿಗೂ ಧನ್ಯವಾದಗಳು ಇದು ಹೊಸಾ ಪ್ರಯತ್ನ ನಿಮ್ಮಗಳ ಮೆಚ್ಚಿಗೆ ದೊರೆತಿದ್ದು ಸಂತಸ ತಂದಿದೆ

    ReplyDelete
  11. ಕಾಕಾ ನಿಮ್ಮ ಪಂಚಕಾನೂ ಮಸ್ತ ಅದ ನೋಡ್ರಿ ಓದಿ ದಂಗಾದೆ....

    ReplyDelete
  12. IPL-na I-Pill antha bardiddu 'romanchana' untu maaDthu! ;)

    ReplyDelete
  13. rajaratnam kai eldaaro henga? Kindly go throuhg "mahakavi purushasaraswati" by JP raj ratnam. Desayara,,,,, mast aitri.... hangaa haiku baritaa irriii

    ReplyDelete
  14. ಚೆನ್ನಾಗಿ ಬರೆದ್ದೀರಿ ದೇಸಾಯರ. ಉಮೇಶ ದೇಸಾಯಿ ಬರಹ ದಿನಕರ ದೇಸಾಯಿ ಅವರನ್ನು ನೆನಪಿಸಿತು. ಒಟ್ನಲ್ಲಿ ದೇಸಾಯಿ ದರ್ಬಾರು.

    ReplyDelete
  15. ಸುಶ್ರುತ ಧನ್ಯವಾದಗಳು i-pil ಮೇಲೇನೂ ಪಂಚಕ ಬರೀಬೇಕಾತು

    ReplyDelete
  16. ಗೌತಮ್ ಹೆಗಡೆ ಅವರಿಗೆ ಧನ್ಯವಾದಗಳು..

    ReplyDelete
  17. ವಸಂತ್ ಧನ್ಯವಾದಗಳು...ನೀವು ಹೇಳಿದ ಪುಸ್ತಕ ಹುಡುಕಿ ಓದತೇನಿ..

    ReplyDelete
  18. ಸವಡಿ ಅವರೆ ದಿನಕರ ದೇಸಾಯರೆಲ್ಲಿ ಈ ದೇಸಾಯಿ ಎಲ್ಲಿ ಹೋಲಿಕೆನ ತಪ್ಪು ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete