Saturday, January 23, 2010

ಕೆಹನೆ ಕೊ ತೊ ದುನಿಯಾಂಮೆ ಮೈಖಾನೆ ಹಜಾರೊಂಹೈ...


ಮೇಲಿನ ಹಾಡಿನ ಸಾಲು ಉಮ್ರಾವ್ ಜಾನ್ ಚಿತ್ರದ್ದು. ಬರೆದವರು ಶಹರ್ಯಾರ್ ಅದರ ಸಂಗೀತ ಖಯ್ಯಾಮ್ ಅವರದು. ಹಿಂದಿ ಸಿನೇಮಾ ಕಂಡ ಅತ್ಯಂತ ಸಂವೇದನಾಶೀಲ ಸಂಗೀತ ನಿರ್ದೇಶಕ.ಮೇಲಿನ ಶೇರ್ ನ ಭಾವಾರ್ಥ ಹೀಗಿದೆ
ಜಗತ್ತಿನಲ್ಲಿ ಅನೇಕ ಮಧುಶಾಲೆಗಳು ಸುರೆ ಕುಡಿಸುತ್ತವೆ ಆದರೆ ನಾವು ಕಣ್ಣಿಂದಲೇ ಕುಡಿಸುತ್ತೇವೆ. ಖಯ್ಯಾಮರ ಜೀವನಶೈಲಿಯೂ
ಸ್ವಲ್ಪ ಇದೇ ತರಹದ್ದು ಅನೇಕ ಸಮಕಾಲೀನ ಸಂಗೀತ ನಿರ್ದೇಶಕರು, ಕೆಲ ದಿಗ್ಗಜರಿದ್ದರು ಆದರೆ ಅವರ ನಡುವೆಯೂ ಖಯ್ಯಾಮ
ಸಂಯೋಜಿಸಿದ ಹಾಡುಗಳು ಹೊಳೆದವು ಬೆಳೆದವು ಜನಾನುರಾಗಿಯಾದವು. ಆ ಗೀತೆಗಳಲ್ಲಿ ಒಂದು ವಿಶಿಷ್ಟವಾದ ಸೆಳೆತ ಇತ್ತು
ಇದು ಅವರದೇ ಎಂದು ಕೂಗಿ ಹೇಳುವ ಶೈಲಿ. ಮಾಡಿದ್ದು ಕೆಲವೇ ಚಿತ್ರಗಳು ಆದರೆ ಅವುಗಳ ಹಾಡು ಎಂದೂ ಮರೆಯಲಾರದ್ದು.
ದೂರ ಗುಡ್ದದಲ್ಲಿ ಹುಟ್ಟಿದ ನದಿ ಬಂಡೆಗಲ್ಲು ಬಳಸಿ ಹರಿವ ನದಿಯ ಕಲರವ , ಹಲವೊಮ್ಮೆ ರಾತ್ರಿ ಸುಳಿಯುವ ತಂಗಾಳಿಯ ತಂಪು
ಹೀಗೆ ಖಯ್ಯಾಮ್ ಸಂಯೋಜನೆಗಳು ಅಪರೂಪದ್ದು.

ಲಾಹೋರ್ ನಲ್ಲಿ ಜಿ. ಎ.ಚಿಸ್ತಿ ಅನ್ನುವವರ ಬಳಿ ಸಂಗೀತ ಕಲಿಯಲು ಸೇರಿಕೊಂಡ ಖಯ್ಯಾಮರಿಗೆ ಓದುವುದಕ್ಕಿಂತ ಸಂಗೀತದ ಗೀಳು.ಚಿಸ್ತಿ ಅವರಿಗೆಅಸಿಸ್ಟೆಂಟ್ ಆಗಿ ಕೆಲಸ ಎರಡನೇ ಮಹಾಯುದ್ಧದಲ್ಲಿ ಸೇವೆ ನಂತರ ಸೇರಿದ್ದು
ಬಾಂಬೆ.ಕೆಲದಿನಗಳ ನಂತರ ಸಂಗೀತ ಸಂಯೋಜನೆಯ ಅವಕಾಶ .ಮೊದಲು ಗಮನ ಸೆಳೆದ ಚಿತ್ರ "ಫಿರ್ ಸುಬಹ ಹೋಗಿ"
ಚಿತ್ರ ವಿಶಿಷ್ಟ ಅನ್ನಿಸೋ ಹಾಡು "ಆಸಮಾನ್ ಪೆಹೈ ಖುದಾ ಔರ್ ಜಮೀನ್ ಪರ್ ಹಮ್" ಹಾಗೂ ಮುಕೇಶ್ ,ಆಶಾ ಹಾಡಿದ
ಆಶಾಭವನೆ ಸದಾ ಬಿಂಬಿಸುವ "ವೊ ಸುಬಹ ಕಭಿ ತೊ ಆಯೇಗಿ...". ಖಯ್ಯಾಮ ಹೆಸರುವಾಸಿಯಾದರು. ಮುಂದೆ ಬಂದ
"ಶೋಲಾ ಔರ್ ಶಬನಮ್ " ನ ಕೈಫಿ ಆಜಮಿ ಬರೆದ ರಫಿ ಹಾಡಿದ "ಜಾನೆ ಕ್ಯಾ ಢುಂಢತಿ ರೆಹತಿ ಹೈ ಯೇ ಆಂಖೆ ಮುಝಮೆ..".
ಮೇಲೆ ಉಲ್ಲೇಖಿಸಿದ ಹಾಡು ಚಿತ್ರಸಾಹಿತ್ಯದಲ್ಲಿ ಅಪರೂಪದ್ದು.ಸಿನೇಮಾಹಾಡುಗಳ ಸಾಹಿತ್ಯ ಈ ಮಟ್ಟ ಸಹ ತಲುಪುತ್ತೆ ಅನ್ನೋದು ಬಹಳ ಜನರಿಗೆ ಆಶ್ಚರ್ಯ ತಂದಿತ್ತು. ರಫಿಯ ಶಾಂತ ಸ್ವರ ಎಲ್ಲ ಹಿಡಿದಿಟ್ಟುಕೊಂಡ ಸುಲಲಿತ ಸಂಗೀತ ಸಂಯೋಜನೆ. ಖಯ್ಯಾಮ ಹೆಸರು ಸ್ಥಾಯಿಯಾಯಿತು.

ಖಯ್ಯಾಮ ಅವರಿಗೆ ಸಾಹಿತ್ಯದ ಪ್ರೀತಿ ಅಪಾರ ಗೀತೆಯ ಸಾಹಿತ್ಯಕ್ಕೆ ಸಂಯೋಜನೆ ಚ್ಯುತಿ ತರುತ್ತಿರಲಿಲ್ಲ
ಬದಲು ಪೂರಕವಾಗಿರುತ್ತಿತ್ತು. ಅನೇಕ ಯಶಸ್ವಿ ಗೀತಕಾರರ ಜೊತೆ ಖಯ್ಯಾಮ್ ಕೆಲಸ ಮಾಡಿದ್ದಾರೆ ಸಾಹಿರ್, ಕೈಫಿ,ಮಜರೂಹ,
ನಕ್ಷಲಾಲ್ ಪುರಿ , ಶೆಹರ್ ಯಾರ್ ಹೀಗೆ ಅನೇಕ ಕವಿಗಳ ಜೊತೆಗೆ ಖಯ್ಯಾಮ್ ಜುಗಲಬಂದಿ ಮಾಡಿದ್ದರು.ಕವಿಗಳನ್ನು ಗೌರವಿಸುತ್ತಿದ್ದ ಖಯ್ಯಾಮ್ ಗೀತೆಗಳಿಗೆ ಜೀವ ತುಂಬುತ್ತಿದ್ದರು.

ಖಯ್ಯಾಮ್ ಅನೇಕ ಗಾಯಕರ ಜೊತೆಗೆ ಕೆಲಸ ಮಾಡಿದ್ರು.ಅವರ ಸಂಯೋಜನೆಯಲ್ಲಿ ತಲತ್,ರಫಿ,ಮುಕೇಶ್ ಹಾಗೂ ಕಿಶೋರ್ ಮಿಂದೆದ್ದಿದ್ದಾರೆ. ಹೊಸ ಗಾಯಕರಿಗೂ ಖಯ್ಯಾಮ ಪ್ರೋತ್ಸಾಹ ಕೊಟ್ಟಿದ್ರು ನಿತಿನ್ ಮುಕೇಶ್ , ತಲತ್ ಅಜೀಜ್ ಹಾಗೂ ಭುಪಿಂದರ್ ಹೀಗೆ. ಖಯ್ಯಾಮ್ ಹೆಂಡತಿ ಜಗಜೀತ್ ಕೌರ್ ಒಳ್ಳೆ ಹಾಡುಗಾರ್ತಿ
ಅವರು ಹಾಡಿದ ಶಗುನ್ ಚಿತ್ರದ "ತುಮ್ ಅಪನಾ ರಂಜೋಗಮ್ ...." ಹೃದಯಕ್ಕೆ ಹತ್ತಿರವಾದದ್ದು.ಇದೇ ಚಿತ್ರದ ರಫಿ ಹಾಗೂ
ಸುಮನ್ ಹಾಡಿದ "ಪರಬತೊಂಕೆ ಪೇಡೊಂಪರ್ ಶಾಮ್ ಕ ಬಸೇರಾ ಹೈ..." ಸಂಜೆಯರಂಗಿನ ಮಧುರ ಅನುಭೂತಿ ಈ ಹಾಡಿನಲ್ಲಿದೆ.ಇನ್ನು ಲತಾ ಜೊತೆ ಖಯ್ಯಾಮ ರ ಸಾಂಗತ್ಯ ಹಾಲು ಜೇನಿನಷ್ಟೇ ಮಧುರ.. ಸುಮ್ಮನೆ ಈ ಕೆಳಗಿನ ಹಾಡುಗಳ
ಮೇಲೆ ಕಣ್ಣು ಹಾಯಿಸಿ....
೧) ಬಹಾರೊಂ ಮೇರಾ ಜೀವನ್ ಭಿ ಸವಾರೊ....(ಆಖ್ರಿ ಖತ್..)
೨)ಮೇರೆ ಘರ್ ಆಯಿ ಏಕ್ ನನ್ಹಿ ಪರಿ....(ಕಭಿ ಕಭಿ)
೩)ಅಪನೆ ಆಪ್ ರಾತೊಂಕೊ ಚಿಲಮನೆ ಸರಕತೆ ಹೈ..( ಶಂಕರ್ ಹುಸೇನ್ )
೪) ಆ ಜಾರೆ ಆಜಾರೆವೋ ಮೇರೆ ದಿಲ್ಬರ್ ಆಜಾ...(ನೂರಿ)
೫) ಯೇ ಮುಲಾಕಾತ್ ಏಕ್ ಬಹಾನಾ ಹೈ....(ಖಾನದಾನ್)
೬) ನ ಜಾನೆಕ್ಯಾ ಹುವಾ ಖಿಲಾ ಗುಲಾಬ್ ಕಿ ತರಹ ಬದನ್...(ದರ್ದ)
೭) ದಿಖಾಯಿ ದಿಯೇ ಯೂಂ ಕೆ ಬೇಖುದ್ ಕಿಯಾ...(ಬಾಜಾರ್)
೮) ಚಾಂದನಿ ರಾತ್ ಮೆ ಏಕ್ ಬಾರ್ ತುಝೆ ದೇಖಾ ಹೈ...( ದಿಲೇ ನಾದಾನ್..)
೯) ಐ ದಿಲೇ ನಾದಾನ್ ....( ರಝಿಯಾ ಸುಲ್ತಾನ್ ..)

ಆಶಾ ದನಿಯಲ್ಲಿ ಉಮ್ರಾವ್ ಜಾನ್ ಹಾಡು ಹಾಡಿಸಲು ಖಯ್ಯಾಮ್ ಮುಂದಾದಾಗ ಅದೊಂದು ಐತಿಹಾಸಿಕ ಬ್ಲಂಡರ್ ಎಂದೇ ಹೇಳಲಾಯಿತು ಆದರೆ ಖಯ್ಯಾಮ ಸಂಗೀತ ಆಶಾ ಹಾಡು ಇಂದಿಗೂ ಉಮ್ರಾವ್ ಜಾನ್ ಸಂಗೀತ ಕ್ಲಾಸಿಕ್ ಅನಿಸಿಕೊಳ್ಳುತ್ತದೆ.
ಖಯ್ಯಾಮ್ ರಫಿಯ ದನಿಯಲ್ಲಿ ಗಾಲಿಬ್ ಗಜಲು ಹಾಗೂ ಮಧುಕರ್ ರಾಜಸ್ಥಾನಿ ಬರೆದ ಹಾಡುಗಳಿಗೂ ಸಂಗೀತ ನೀಡಿದರು.
" ಪಾಂವ ಪಡೂ ತೋರೆ ಶಾಮ್ ಬ್ರಿಜ ಮೆ ಲೌಟ ಚಲೋ..."
" ಗಜಬ್ ಕಿಯಾ ತೇರೇ ವಾದೆಪೆ ಜೋ ಐತಬಾರ್ ಕಿಯಾ..." ಪ್ರಮುಖ ಹಾಡುಗಳು.ಇವು ನಾನ್ ಫಿಲ್ಮಿ ಆದ್ರೂ ಇವುಗಳ
ಜನಪ್ರಿಯತೆಗೆ ಅಡ್ಡಿಯಾಗಿಲ್ಲ.

ತಗೊಂಡ ಕೆಲಸ ಶ್ರದ್ಧೆಯಿಂದ ಮಾಡಿ ಹಾಡು ನೆನಪಿನಲ್ಲಿ ಉಳಿಯುವ ಮಹತ್ತರ ಕೆಲಸ ಖಯ್ಯಾಮ್ ಮಾಡಿದ್ದಾರೆ. ಯಾವ ಪ್ರಲೋಭನೆಗೂ ಒಳಗಾಗದೆ ತಾನು ನಂಬಿಕೊಂಡು ಬಂದ ಸಂಗೀತವನ್ನೇ ಆರಾಧಿಸಿದರು. ಮಾಡಿರೋ ಚಿತ್ರ ಕಮ್ಮಿ ಆದರೆ
ಗುಣಮಟ್ಟದಲ್ಲಿ ಕೊರತೆ ಇಲ್ಲ.

ಸಹೃದಯರಲ್ಲಿ ವಿನಂತಿ ಇದು ನನ್ನ ಐವ್ವತ್ತನೆಯ "ಅಂಬೋಣ.." ಪ್ರೋತ್ಸಾಹ ಹೀಗೆ ಮುಂದುವರೆಯಲಿ

10 comments:

 1. ದೇಸಾಯರ,
  ಅರ್ಧ ಶತಕ ಬಾರಿಸಿದಿರಿ! ತುಂಬಾ fast batting!
  ಖಯ್ಯಾಮರ ಸಂಗೀತ ಸಂಯೋಜನೆ, ಗೀತೆಯ ಸಾಹಿತ್ಯಕ್ಕೆ ಪೂರಕವಾಗಿರುತ್ತಿತ್ತು ಎನ್ನುವ ನಿಮ್ಮ ಟಿಪ್ಪಣಿ ಅಗದೀ righ ಅದ.

  ReplyDelete
 2. ದೇಸಾಯಿಯವರೆ...

  ಎಷ್ಟು ಸುಂದರ ಹಾಡುಗಳನ್ನು ನೆನಪಿಸಿ ಬಿಟ್ಟಿದ್ದೀರಿ...
  ನನ್ನ ಸಂಗ್ರಹದಿಂದ ಆ ಹಾಡುಗಳನ್ನು ಮತ್ತೆ ಕೇಳಲು ಸಿಡಿ ತೆಗೆದಿರಿಸಿ ಕೊಂಡೆ..

  ಹಳೆಯ ಕವಿತೆಗಳು..
  ಅವುಗಳ ಅರ್ಥಗಳು...
  ಅದರ ಸಂಗೀತ...
  ಅದನ್ನು ಹಾಡಿದ ಕಂಠಗಳು... ಎಲ್ಲವೂ ಅತ್ಯದ್ಭುತ...!!!!

  ನೀವು ಅರ್ಧ ಶತಕ ಬಾರಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು...

  ReplyDelete
 3. ಅರ್ಧ ಶತಕ ವೀರರಿಗೆ ಅಭಿನ೦ದನೆಗಳು. ತಮ್ಮ ಹೊದೆತದ ವೇಗ ಚೆನ್ನಾಗಿದೆ. ಅದ್ಭುತ ಹಳೆಯ ಹಾಡುಗಳನ್ನು ನೆನಪಿಸಿದ್ದಿರಾ!! ಧನ್ಯವಾದಗಳು.

  ReplyDelete
 4. congrats sir!
  ನೀವು ನೆನಪಿಸಿದ ಹಾಡುಗಳಲ್ಲಿ ಕೆಲವನ್ನು ನಾನು ಕೇಳಿಲ್ಲ.
  ನಿಮಗನುಕೂಲವಾದಾಗ ಎಂದಾದರೂ ಈ‌ ಹಾಡುಗಳ ಬಗ್ಗೆ ಬರೆಯುತ್ತೀರೆಂಬ ನಿರೀಕ್ಷೆಯಲ್ಲಿ :)

  ReplyDelete
 5. ಕಾಕಾ ನಿಮ್ಮಂಥ ಹಿರಿಯರ ಮಾರ್ಗದರ್ಶನದಿಂದ ೫೦ ರನ್ ಹೊಡೆದೆನಿ ಇನ್ನೂ ಪ್ರೋತ್ಸಾಹ ಹಿಂಗ ಕೊಡ್ರಿ..

  ReplyDelete
 6. ಹೆಗಡೇಜಿ ನಿಮ್ಮಲ್ಲಿ ಸಿಡಿಗಳ ಭರಪೂರ್ ಸಂಗ್ರಹ ಇದೆ ಹಾಗಾದ್ರೆ ಹಾಡು ನನಗೆ ಸದಾ ಎದೆಯಲ್ಲಿರುತ್ತದೆ ನೆನಪಾದಾಗ ಅದರ
  ವಿವರ ಸಹಿತ ಎಲ್ಲ ಮನಸ್ಸಿನಲ್ಲಿ ಮೂಡುತ್ತದೆ.ನಾ ಸಿಡಿ ಕೇಳುವುದು ಕಡಿಮೆ ಪ್ರತಿಕ್ರಿಯೆಗೆ ಧನ್ಯವಾದಗಳು..

  ReplyDelete
 7. ಗೋರೆ ಅವರೆ ಸಿಕ್ಸರ್ ನಾನೂ ಹೊಡೀಬೇಕಂತೀನಿ ಆದ್ರ ಔಟಾಗಬಾರದಲ್ಲ ನೀವೂ ಆಸರೆ ಕೊಡ್ತೀರಿ ತಾನೆ

  ReplyDelete
 8. ಸೀತಾರಾಮ್ ಅವರೆ ಧನ್ಯವಾದಗಳು...ಹಳೇ ಹಾಡು ನನಗೆ ಪ್ರಾಣಪ್ರಿಯ..

  ReplyDelete
 9. ಆನಂದ ಹಾಡುಗಳ ರೂವಾರಿ ಖಯ್ಯಾಮ್ ಬಗ್ಗೆ ಬರೆಯುವ ಉದ್ದೇಶ ಇತ್ತು ಇನ್ನು ಹಾಡುಗಳ ವಿಶ್ಲೇಷಣೆ ಅನಗತ್ಯ ಯಾಕಂದ್ರ
  ಮುತ್ತುಗಳ ಬಗ್ಗೆ ಹೆಂಗ ವಿಮರ್ಶಿಸೋದು....

  ReplyDelete