Friday, August 7, 2009

ವಾಡೆಯ ನೆನಪಲ್ಲಿ ಹನಿಗಳು...





೧) ಗೇಟಿನ ಕಮಾನಿಗೆ ನೇತು ಹಾಕಿದ
ಬೋರ್ಡು ಈಗಿಲ್ಲ
ಮೂಲೆಯಲ್ಲಿ ಕೆಟ್ಟು ನಿಂತಿದೆ ಗಡಿಯಾರ
ಕಾಲ ಪ್ರವಾಹದಂದದಿ ಸಾಗಿದೆ
ವಾಡೆಯ ವೈಭವ ಬರೀ ನೆನಪಿನಲ್ಲಿದೆ..

೨) ದೇಸಾಯರ ವಾಡೆಯಲ್ಲಿ ದೇಸ್ಗತಿ ಇತಿಹಾಸ
ದರಬಾರಿನ ಸೀನು ಮುಗಿದು
ನಿಂತಿದೆ ಹರಕು ಪರದೆ...
ಥಳಕು ಬಳಕು ಕತ್ತಲೆಯಲಿ ಕರಗಿದೆ...

೩) ಮುಡಿದು ಎಸೆದ ಮಲ್ಲಿಗೆಮಾಲೆ ವಾಡೆ ಈಗ..
ಹಗಲುಗಳಿಗೆ ನೀರವತೆ ಕರಗಿದೆ
ರಾತ್ರಿಗಳಿಗೆ ಕರಾಳ ಕಪ್ಪು ಆವರಿಸಿದೆ..!

೪) ಹಳೆನೆನಪುಗಳನ್ನು ಮೆಲುಕು ಹಾಕಿದೆವು
ಆ ಸಂಜೆ ಎದೆ ಭಾರವಾಗಿತ್ತು
ಧ್ವನಿ ನಡುಗಿತ್ತು...
ಕವಿತೆ ಬರೆದ ಹಾಳೆ ತೊಯ್ದಿತ್ತು...!

೫) ಕಾಲರಾಯನ ಹಸಿವು ಇಂಗಿಲ್ಲ ಇನ್ನೂ...
ಹಸಿ ನಾಲಿಗೆ ಚಾಚಿ
ವಾಡೆಯ ಮೈಯನ್ನು ಇಂಚಿಂಚು
ನೆಕ್ಕುತ್ತಿದ್ದಾನೆ....

ನಮ್ಮ ವಾಡೆ ನನ್ನ ಪಾಲಿಗೆ ನನ್ನ ಅಂತರಂಗದ ಸಂಗಾತಿ ಅದರ ನೆನಪು ಎಂದೂ ಅಜರಾಮರ. ಆದರೆ ಅದರ
ಅವನತಿ ಈ ಕಣ್ಣಿಂದ ನೋಡಿರುವೆ ನೋವಿದೆ ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ಇದೆ....































6 comments:

  1. ದೇಸಾಯರ,
    ಏಕ ಜಮಾನಾ ಥಾ, ಏಕ ಜಹಾಂ ಥಾ....!
    -ಕಾಕಾ

    ReplyDelete
  2. ದೇಸಾಯಿ ಸರ್‌ರ..

    ನಿಮ್ಮ ನೋವು ನಮಗ ಆರ್ಥಾ ಆಗ್ತೇತ್ರಿ... ಎನ್ ಮಾಡೋದು ಹೇಳ್ರೀ.. ಎಲ್ಲ ಕಾಲನ ಮಹಿಮೆ.. ಹೊಸದೆಲ್ಲ ಒಂದ್ ದಿನಾ ಹಳೇದು ಆಗ್ಲೇ ಬೇಕು... ಅದರ ಜಗದಾಗ ಹೋಸಾಡು ಬರ್ಲೇಬೇಕು.. ನಂ ಊರಾಗೂ ಒಂದ್ ವಾಡೆ ಐತಿ.. ನಾಡಿಗೇರ್ ವಾಡೆ ಅಂತ..ಪ್ರತಿ ವರ್ಷ ಅಲ್ಲಿ ಸವಾಯಿ ಗಂಧರ್ವರ ಪುಣ್ಯ ತಿಥಿ ನಡೀತೇತಿ ಅಷ್ಟೊಂದು ಹಳತಾಗಿಲ್ಲ ಆದ್ರೂ ಮೊದಲಿನ ವೈಭವಾ ಈಗಿಲ್ಲ ನೋಡ್ರೀ..

    ReplyDelete
  3. ದೇಸಾಯ್ ಸರ್,

    ಕೇರಳದಿಂದ ನಿನ್ನೆ ಬಂದೆ. ಈಗ ಒಂದೊಂದೆ ಬ್ಲಾಗ್ ನೋಡುತ್ತಿದ್ದೇನೆ.
    ಬೇಂದ್ರೆಯವರ ವಾಡೆ ಫೋಟೋ ನೋಡಿ ತುಂಬಾ ಖುಷಿಯಾಯ್ತು. ಅದಕ್ಕೆ ತಕ್ಕಂತ ಬರಹಗಳನ್ನು ಕೊಟ್ಟಿದ್ದೀರಿ...ಧನ್ಯವಾದಗಳು.

    ReplyDelete
  4. ಕಾಕಾ ನೀವು ಹೇಳೋದು ಖರೆ ಆದ್ರ ಆ ಜಮಾನಾದ ಖದರ್ರು ಬ್ಯಾಡ ಆದ್ರ ನೆನಪು ಸಹ ಕೆಲವೊಮ್ಮೆ ಬರೂದಿಲ್ಲ....!

    ReplyDelete
  5. ಉಮೇಶ ನಾಡಿಗೇರ್ ವಾಡೆ ಬಗ್ಗೆ ನಾನೂ ಕೇಳೇನಿ ಯಾವಾಗರೆ ಒಮ್ಮೆ ಭೆಟ್ಟಿ ಕೊಡುವ ವಿಚಾರ ಅದ

    ReplyDelete
  6. ಶಿವು ಅದು ಬೇಂದ್ರೆ ಅವರ ವಾಡೆ ಅಲ್ಲ ಅದು ಈ ಹತಭಾಗ್ಯ ದೇಸಾಯರದು...

    ReplyDelete