Friday, August 7, 2009

ಮಾಸ್ತರರ ಅಂಗಳದಾಗ....
ನಲವತ್ತು ವರ್ಷ ಆಗಿತ್ತು ಅಲ್ಲೇ ಇದ್ದೆ ಯಾಕೋ ಮಾಸ್ತರರು ಅಪರಿಚಿತರಾಗೇ ಇದ್ರು .ಯಾರದೋ ಮದುವಿ
ದತ್ತಾತ್ರೇಯ ಗುಡಿಯಾಗ ಅವರೂ ಬಂದಿದ್ರು ಅವ್ವ ಹಾಗೂ ನಾನು ಅವರ ಕಾಲಮುಟ್ಟಿ ನಮಸ್ಕಾರ ಮಾಡಿದ್ವಿ ನೆನಪು
ಬಹಳ ಮಸುಕು ಮಸುಕು. ಮುಂದ ದೊಡ್ಡಾವ ಆದೆ ಮಾಸ್ತರರ ಕವಿತಾ ಲಗೂನ ತಿಳಿಯೂದಿಲ್ಲ ಆದ್ರೂ ಅವರ ಭಾಷಾ
ಅಗದಿ ನಾವು ಮನ್ಯಾಗ ಮಾತಾಡಿದಂಗ...ಬೇಂದ್ರೆ ಅವರು ಹಿಂಗ ನಿಧಾನವಾಗಿ ನನ್ನ ಆವರಿಸಿದ್ದರು...ನಾ ಬೆಳೀಲಿಕ್ಕೆ
ನೆರವಾದರು. ಸುನಾಥ ಕಾಕಾ ಅವರ ಬೇಂದ್ರೆ ಕವಿತಾ ವಿಶ್ಲೇಷಣಾ ಓದಿ ಪ್ರಭಾವಿತನಾದೆ. ಬೇಂದ್ರೆ ಇನ್ನೂ ಹತ್ರ ಅನಿಸಿದರು
ಒಂದs ಎರಡ..s ಅವರ ರಚನಾಗಳು ...ಅಗದಿ ಶಬ್ದದ ಬಲ್ಯಾಗ ಕೆಡವಿ ಹಾಕತಿದ್ರು ಬಿಡಿಸಿಕೊಳ್ಳೋ ಮನಸು ಬಂದ್ರ ಕೇಳ್ರಿ..!

ಅವರ ಮನಿ ನೋಡಬೇಕು "ಬೇಂದ್ರೆ ಭವನ" ನೋಡಬೇಕು ಅಂತ ಅಂದ್ಕೊಂಡಿದ್ದೆ ಆದ್ರ ವ್ಯಾಳ್ಯಾ ಕೂಡಿರಲಿಲ್ಲ.
ಮೊನ್ನೆ ಆರನೇ ತಾರೀಕು ಯೋಗಾಯೋಗ ಕೂಡಿ ಬಂತು. ಮ್ಯುಸಿಯಮ್ ಛಲೋ ಅದ ಮಾಸ್ತರರ ಜೀವನದ ಅನೇಕ
ಮಜಲುಗಳ ದರ್ಶನ ಆಗ್ತದ. ಅಪರೂಪ ಅನಿಸೋ ಛಾಯಾಚಿತ್ರಗಳು ಪ್ರತಿಯೊಂದಕ್ಕೂ ವಿವರಣೆ ಇದೆ ಹೀಗಾಗಿ ಅವು
ಅಪರಿಚಿತಆಗಿ ಉಳಿಯೂದಿಲ್ಲ ಅದರಾಗ ಸ್ವತಃ ಬೇಂದ್ರೆ ಮಾಸ್ತರರ ಉಕ್ತಿ ಅವ ಒಂದೊಂದು ಮುತ್ತು...

" ಭಾರತ ಅಂಬೋ ಹೆಸರು- ಹೆಸರಾಗಬೇಕು ಅದು ಕಡ್ಡೀ ಕಸಾ ಅಲ್ಲಾ...."

" ಮಾತಿಗೂ ಮೌನಕೂ ಜಾತಿ ವೈರವು ಇಲ್ಲಾ ,ಮೌನನಲು,ಕಿವುಡನಲು , ಮೌನಿಯಲು ನಾದವಿದೆ.."

" ಕಾಲಾಗಿನ ಮುಳ್ಳು ಕಣ್ಣಾಗೈತಿ ಅಂತs ಹಳ್ಳಿ ಮಣ್ಣ ಆಗೈತಿ..."

ಅವರಿಗೆ ಬಂದ ಡಾಕ್ಟರೇಟ್ ಪದವಿ, ಪದ್ಮಶ್ರೀ ಎಲ್ಲಾ ಅವ ಆದ್ರ ಜ್ನಾನಪೀಠ ಕಾಣಲಿಲ್ಲ ಯಾಕ್ ಅಂತ ಕೇಳಿದೆ ಅದು
ಅವರ ಮನ್ಯಾಗ ಅದ ಅಂತ ತಿಳೀತು ಒಂದು ನಮೂನಿ ಅನಿಸ್ತು ವಿಪರ್ಯಾಸ ನೋಡ್ರಿ ಅದು ಅವರಿಗೆ ಬಂದದ್ದು ಖರೇ
ಆದ್ರ ಜನಾ ಅವರ ಕವಿತಾ ಮೆಚ್ಚಿಕೊಂಡಿದ್ದಕ್ಕ ಬಂದದ ಆದ್ರ ಅದರ ದರ್ಶನ ಭಾಗ್ಯ ಇಲ್ಲಾ ಅಂದ್ರ ಹೆಂಗ....?

ಶ್ರೀ ಮಾತಾ ದ ಅಂಗಳದಾಗ ಅಡ್ಡಾಡುವಾಗ ಮೈ ಪುಳಕಗೊಂಡಿತ್ತು...ಸ್ವತಃ ಬೇಂದ್ರೆ ಅವರು ಕೂತ್ಕೋತಿದ್ರು....ಮಂದಿ ಜತಿ
ಹರಟಿ ಹೊಡೀತಿದ್ರು ...ಆ ಅಂಗಳದಾಗ ನಾನೂ ಅಡ್ಡಾಡಿದೆ .ಇದಕ್ಕೂ ಪುಣ್ಯಾ ಯಾವುದ್ರೀ....
ಅಲ್ಲಿ ಬೀಸೂ ಗಾಳಿ ಆ ಮಣ್ಣಿನ ತೇವ ಅಲ್ಲಿಯ ಪ್ರಶಾಂತ ವಾತಾವರಣ ಎಲ್ಲಾ ಹೇಳತಿದ್ವು ಮಾಸ್ತರರು ಇನ್ನೂ ಅಲ್ಲೇ ಎಲ್ಲೋ
ಇದ್ದಾರ ಹೊಸಾ ಕವಿತಾದ ತಯಾರಿ ನಡಸ್ಯಾರ...!

10 comments:

 1. ದೇಸಾಯರ,
  ಅಂತೂ ‘ಬಾರೋ ಸಾಧನಕೇರಿಗೆ’ ಅಂತ ಬೇಂದ್ರೆಯವರು ಕರೆದದ್ದಕ್ಕೂ ನೀವು ಹೋಗಿ ಬಂಧಂಗಾತು ನೋಡ್ರಿ!

  ReplyDelete
 2. ದೇಸಾಯಿ ಸರ್ ರ..

  ಬೇಂದ್ರೆ ಅಜ್ಜನ ನೆನಪು ನನಗೂ ಆಗಾಗ ಕಾಡತೇತ್ರೀ.. ನಂಗ ಅವ್ರನ್ನ ಕಣ್ಣಾರೆ ನೋಡೋ ಸೌಭಾಗ್ಯ ಅಂತೂ ಸಿಗ್ಲಿಲ್ಲ.. ಆದ್ರ ಅವ್ರ ಪದಾ ಓದೋ ಭಾಗ್ಯ ಅಂತೂ ಸಿಕ್ಯದ.. ಧಾರವಾಡದ ಗಂಡು ಕನ್ನಡ ಭಾಷೆಯ ಸೊಗಡಿನ ಅವರ ಪದಗಳು ಎಲ್ಲಾರ್‍ಗೂ ಅರ್ಥ ಆಗುವಂತವು. ಒಂದು ವಿಶಿಷ್ಟತಾ ಅಂದ್ರ, ಅವು ಒಂದೊಂದು ಸರ್ತಿ ಓದಿದಾಗ್ಲೂ ಒಂದೊಂದು ಥರಾ ಅರ್ಥ ಆಗೋವು. ಜೀವನದ ಪಾಠಾ ಕಲಿಸೋವು. ಅಜ್ಜನ ನೆನಪು ತರಿಸಿದ್ದಕ್ಕ ಥ್ಯಾಂಕ್ಸ್ ರೀ.

  - ಉಮೇಶ್

  ReplyDelete
 3. ದೇಸಾಯಿಯವರೆ....

  ನನ್ನ ಕಂಪ್ಯೂಟರ್‍ಗೆ ವೈರಸ್ ಬಂದಿತ್ತು...
  ಕೆಲಸದ ಒತ್ತಡವೂ ಇತ್ತು...
  ಹಾಗಾಗಿ ಬರಲಾಗಲಿಲ್ಲ....
  ಬೇಸರಿಸ ಬೇಡಿ....

  ಬೇಂದ್ರೆಯವರ ನೆನಪು ಮಾಡಿಸಿದ್ದಕ್ಕೆ ಧನ್ಯವಾದಗಳು...
  ಅವರಕವನಗಳು ತುಂಬಾ ಚೆನ್ನಾಗಿರ್ತದೆ....
  ಅವುಗಳನ್ನು ಓದುವಾಗಲೂ "ಲಯ" ಕಾಣ ಬಹುದು...

  "ಹೆಜ್ಜ್ಯಾಕ...
  ಗೆಜ್ಜ್ಯಾಕ...
  ತಾಳದ ಚಿಂತ್ಯಾಕ...
  ಕುಣಿಯೋಣು ಬಾರ.... ಕುಣಿಯೋಣು..."

  ತಾಳ,ಗೆಜ್ಜೆ ಏನೂ ಬೇಡ ಅನ್ನುತ್ತಲೆ...
  ಲಯ ಕೊಟ್ಟಿರುತ್ತಾರೆ...

  ಅವರೊಂದು ಅದ್ಭುತ ಪ್ರತಿಭೆ....

  ಧನ್ಯವಾದಗಳು...

  ReplyDelete
 4. ದೇಸಾಯ್ ಸರ್,

  ಬೇಂದ್ರೆಯವರನ್ನು ಬೇಟಿಮಾಡಿದ್ದೀರಿ. ಅದೃಷ್ಟವಂತರು. ಅವರ ಫೋಟೋಗಳ ಸಮೇತ ಉತ್ತಮ ವಿವರವನ್ನು ಕೊಟ್ಟಿದ್ದೀರಿ...

  ಧನ್ಯವಾದಗಳು.

  ReplyDelete
 5. ಕಾಕಾ ಬಾ ಅಂತ ಅವ್ರು ಕರದು ಬಹಳ ದಿವ್ಸ ಆಗಿತ್ತು ಹೋಗೂದಾಗಿರಲಿಲ್ಲ ಅಂತೂ ೦೬-೦೮-೦೯ ರಂದು ಪುಣ್ಯಕಾಲ ಬಂತು

  ReplyDelete
 6. ಉಮೇಶ್ ನೀವು ಸರ್ ಪರ್ ಅನ್ನಬ್ಯಾಡ್ರೀ ಬೇಂದ್ರೆ ಅವರ ಮನಿಗೆ ಹೋಗೋ ಆಶಾ ಇತ್ತು ಅದು ಪೂರೈಸಿದಂತಾತು

  ReplyDelete
 7. ಹೆಗಡೇಜಿ ಧನ್ಯವಾದಗಳು ನೀವು ಧಾರವಾಡಕ್ಕೆ ಎಂದಾದರೂ ಹೋದ್ರ ಶ್ರೀ ಮಾತಾಕ್ಕ ಅವಶ್ಯ ಭೇಟಿ ನೀಡಿ ನಿಮ್ಮ ಕೆಮೆರಾಕ್ಕ
  ಒಳ್ಳೇ ಆಹಾರ ಸಿಗ್ತದ...!

  ReplyDelete
 8. ಶಿವು ಧನ್ಯವಾದಗಳು

  ReplyDelete
 9. ಬೇಂದ್ರೆ ಅವರು ಯಾವದೇ ಸಂದರ್ಭದಲ್ಲೂ ತಮ್ಮ ಕವಿತಾ ಸಾಮರ್ಥ್ಯ ತೊರಿಸಿದವರು ಅದಕ್ಕೆ ಸಾಕ್ಷಿ ಯಾಗಿ "ನೀ ಹೀಂಗ ನೋಡಬ್ಯಾಡ ನನ್ನ" ಹಾಡು. ಅವ್ರಿಗೆ ಒಂದು ನನ್ನ ಸಾಷ್ಟಾಂಗ ನಮಸ್ಕಾರ. ಅವರನ್ನು ನೆನಪು ಮಾಡಿದಕ್ಕೆ ನಿಮಗೂ ಕೂಡ ಧನ್ಯವಾದಗಳು.

  ReplyDelete
 10. ಧನ್ಯವಾದ ಗೋಪಾಲ ನೀವು ಅದ ಊರಾವ್ರು ಅವರ ಪ್ರಭಾವ ನಿಮ್ಮ ಮ್ಯಾಲೂ ಬಿದ್ದಿರಬೇಕಲ್ಲ

  ReplyDelete