Wednesday, July 22, 2009

ಗಾನ ಗಂಗೆಯ ಜತೆ.....ಎರಡು ವರ್ಷದ ಹಿಂದಿನ ದಸರಾ ನಾ ಎಂದೂ ಮರೆಯದ ದಿನ ಆ ದಿನ ಸಾಕ್ಷಾತ್ ಗಾನಸರಸ್ವತಿ
ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ವಿಷಯ ಹೀಗಿತ್ತು -----ನನ್ನ ಭಾವ
ಡಾ. ಗೋವಿಂದ ಜಾಲೀಹಾಳ ಇವರು "ಜಾ.ಗೋ" ಎಂಬ ಕಾವ್ಯನಾಮದಿಂದ ಅನೇಕ ರಚನೆ ಮಾಡಿದ್ದಾರೆ
೩ ಕವನಸಂಕಲನ ಹೊರತಂದಿದ್ದಾರೆ.ವಿಶೇಷ ಅಂದರೆ ಭಾರತೀಯ ಶಾಸ್ತ್ರೀಯ ಸಂಗೀತಗಾರರು ಹಾಗೂ
ಅವರುಗಳ ಸಂಗೀತ-ಶೈಲಿಗಳನ್ನು ಕುರಿತು ೧೬ ಕವಿತೆಗಳನ್ನು "ಸಂಗೀತಕವಿತಾಕುಸುಮಮಾಲಾ" ಎಂಬ
ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ ಇದು "ಗೋವಾ ದರ್ಪಣ" ದಲ್ಲಿ ಪ್ರಕಟವೂ ಆಗಿತ್ತು.
ಗಂಗೂಬಾಯಿ ಹಾನಗಲ್ ಮೇಲೆ ಬರೆದ ಕವಿತೆ ಅವರಿಗೆ ನೀಡಿ ಅವರ ಆಶೀರ್ವಾದ ಪಡೆಯುವ ಇರಾದೆ
ಅವರಿಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಬರಲಾಗಲಿಲ್ಲ ಹೀಗಾಗಿ ಮಗ ಮಿಲಿಂದ,ನಾನು ಹಾಗೂ ಆ ವೇಳೆ ಅಲ್ಲಿಯೇಇದ್ದ ನನ್ನ ಹೆಂಡತಿ,ಮಗಳು "ಗಂಗಾ ಲಹರಿ"ಗೆ ಕಾಲಿಟ್ಟೆವು.
ಅಲ್ಲಿದ್ದರು ಗಾನಸರಸ್ವತಿ ತೀರ ಸರಳವಾದ ನಡೆನುಡಿ,ಮಾತು ...ಹಾಗೆನೋಡಿದರೆ ಹುಬ್ಬಳ್ಳಿಯ ಹಳೆ ತಲೆಮಾರು
ಎಲ್ಲ ಅವರಿಗೆ ಪರಿಚಿತ ನನ್ನ ತಂದೆ,ದೊಡ್ಡಪ್ಪ ಮುಂತಾದವರ ನೆನಪು ತೆಗೆದು ಮಾತಾಡಿದರು. ನನ್ನ ಮಗಳ
ಹೆಸರು ಕೇಳಿದರು ಸುನಿಧಿ ಎಂದರೆ " ಹಾಡ್ ಹಾಡ್ತೀಯೇನು ಕಲಿತೀ ಏನ..." ಎಂದು ಕೇಳಿದರು. ಬನ್ನಿ ಕೊಟ್ಟು
ನಮಸ್ಕರಿಸಿದಾಗ ಅಪ್ಯಾಯತೆಯಿಂದ ಹರಸಿದರು....

ಪಂಡಿತಾ ಗಂಗೂಬಾಯಿ ಹಾನಗಲ್
-------------------------------
ಶಾರೀರದ ವಜ್ರದುಂಡಿಯ ಕಲ್ಲ ಕಡೆ-ಕಡೆದು
ಶಾಸ್ತ್ರೀಯ ಶುದ್ಧ ಸಂಗೀತದ ಅಂತರ್ಗಂಗೆಯ
ಪ್ರವಹಿಸಿದ ಸಂಗೀತ-ಭಗೀರಥಿ ! ಹೊಂಗೆಯ
ಮರದಡಿಯ ತಂಪು,ಮಾಮರಕಾಸರೆ ಪಡೆದು
ಹಾರಿಬಂದು ಹಾಡಿದ ಕೋಗಿಲೆಯ ಧ್ವನಿಯಿಂಪು,
ಕಾದ ಕಬ್ಬಿಣ ಶಲಾಕೆಯ ನಿಗಿ-ನಿಗಿ ಕೆಂಪು,
ನಿಖರ ತಾಕತ್ತು ,ಪ್ರಖರ ಪ್ರಹಾರ ಹೊಡೆದು
ಚಕಿತಗೊಳಿಪ ಗತ್ತು ಇವುಗಳೆಲ್ಲ ಮೇಳವಿಸಿದ
ಸಂಗೀತಸರಸತಿಯ ಹೆಮ್ಮೆಯ ನಾಸಿಕ ಧರಿಸಿದ
ಸಿಂಗಾರದ ಮುತ್ತಿನ ನತ್ತು ! ಕಂನಾಡು ಪಡೆದು
ನಾಡಿಗಿಡೀ ನೀಡಿದ ಕಿರಾನಾ-ಸಂಪತ್ತು ,
ತಾಯಿ ಅಂಬೂಬಾಯಿ ಹುಲಗೂರ ಗುರುದತ್ತು
ರಚನೆ: ಜಾ.ಗೋ
(ಡಾ.ಗೋವಿಂದ ಜಾಲೀಹಾಳ)

ಮೇಲಿನ ಕವನ ಗಂಗಾಮಾಯಿಗೆ ಓದಿ ತೋರಿಸುವ ಸೌಭಾಗ್ಯ ನನ್ನದಾಗಿತ್ತು. ಸುಮಾರು ಒಂದು-ಒಂದೂವರಿ
ತಾಸು ಅವರೊಡನೆ ಕಳೆದೆವು. ಅವರ ಮ್ಯುಸಿಯಂ ಒಂದು ಅಪರೂಪ ಅದ ನೋಡುವಾಗ ನಮ್ಮ ಭಾರತದೇಶದ
ಸಂಗೀತ ಪರಂಪರೆಯ ಭವ್ಯತೆ ಗೋಚರವಾಗುತ್ತದೆ. ಆ ಶರಧಿಯಲ್ಲಿ ನಾವು ತೃಣ ಸಮಾನರು. ಅಲ್ಲಿಯ ಭಾವಚಿತ್ರಗಳು, ಸಂಗೀತ ಉಪಕರಣಗಳು ಭವ್ಯ ಇತಿಹಾಸದ ಕುರುಹುಗಳಾಗಿ ಪ್ರಜ್ವಲಿಸಿವೆ.ನಿಜವೇ ತಾನೇ
ಸಂಗೀತ ನಮ್ಮ ದೇಶದಲ್ಲಿ ಎಲ್ಲ ಮತ ,ಪ್ರಾಂತ ,ಜಾತಿ ಮೀರಿ ಪ್ರಜ್ವಲಿಸುತ್ತಿರುವ ನಕ್ಷತ್ರ...ತಲೆ ಮಾರಿಂದ ಹೊಸ
ಪೀಳಿಗೆಗೆ ಈ ಅಮೃತವಾಹಿನಿ ಹರಿದು ಬರುತ್ತಲೇ ಇದೆ...

17 comments:

 1. sir article tumba channagide!

  thanks for dedicating to one of my fav singer Gangajji...

  ReplyDelete
 2. ದೇಸಾಯಿಯವರೇ, ಅದೃಷ್ಟವಂತರು ನೀವು.. ನಿಮ್ಮ ಭಾವನವರ ಕವಿತೆ ಚೆನ್ನಾಗಿದೆ.

  ReplyDelete
 3. ನೀವೇ ಧನ್ಯ . ಇಂತಹ ಮಹಾನ್ ಸನ್ನಿವೇಶ ಎಲ್ಲರಿಗು ದೊರಕುವದಿಲ್ಲ. .ಡಾ.ಗೋವಿಂದ ಜಾಲೀಹಾಳ ಅವರ ಕವಿತೆ ತುಂಬಾ ಚೆನ್ನಾಗಿದೆ.

  ReplyDelete
 4. ಕವಿತೆ ಚೆನ್ನಾಗಿದೆ. ಲೇಖನವು ಸಾ೦ದರ್ಭಿಕವಾಗಿದೆ. ಅಗಲಿದ ದಿವ್ಯಾತ್ಮಕ್ಕೆ ನುಡಿನಮನ ದ ರೂಪದಲ್ಲಿ ಮೂಡಿ ಬಂದಿದೆ.

  ReplyDelete
 5. ಥ್ಯಾಂಕ್ಸ್, ಗಂಗೂಬಾಯಿಯವರ ಜೊತೆಗಿನ ಒಂದು ನೆನಪನ್ನು ನಮ್ಮೊಮದಿಗೆ ಹಂಚಿಕೊಂಡಿದ್ದಕ್ಕೆ. ಸಂಗೀತಕ್ಕೆ ಇತಿಹಾಸ ಇದೆ; ಭೂಗೋಳ ಇಲ್ಲ ಎಂಬ ಅವರ ಮಾತೊಂದನ್ನು ನೆನ್ನೆ ಪತ್ರಿಕೆಯೊಂದರಲ್ಲಿ ಓದಿ, ಆ ತಾಯಿಗೆ ನಮನ ಸಲ್ಲಿಸಿದ್ದೆ.

  ReplyDelete
 6. ದೇಸಾಯಿ ಸರ್,

  ಆ ಮಹಾನ್ ಸಾಧಕಿಯನ್ನು ಹತ್ತಿರದಿಂದ ನೋಡಿ ಮಾತಾಡಿಸಿದ ನೀವೇ ಅದೃಷ್ಟವಂತರು...

  ReplyDelete
 7. ದೇಸಾಯರ,
  ನಿಮಗೆ ಅಭಿನಂದನೆಗಳು.
  ಡಾ|ಜಾಲೀಹಾಳರು ಬಳಸಿದ ಪದ ‘ಕಂನಾಡು’ ಓದಿ ಸಂತೋಷವಾಯಿತು. ಯಾಕೆಂದರೆ ಇದು ಶಂಬಾ ಜೋಶಿಯವರ ಪದ.

  ReplyDelete
 8. ದೇಸಾಯಿಯವರೆ...

  ನಿಜಕ್ಕೂ ನೀವು ಪುಣ್ಯವಂತರು...

  ಸಂಗೀತಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ..
  ಗಂಗಜ್ಜಿಯ ಆತ್ಮಕ್ಕೆ ದೇವರು ಶಾಂತಿ ನೀಡಲಿ...

  ನಿಮ್ಮ ಭಾಮಿನಿ ಕವನ ತುಂಬ ಚೆನ್ನಾಗಿ ಬಂದಿದೆ....

  ReplyDelete
 9. vijay thanks for appreciating..

  ReplyDelete
 10. ಸುಶ್ರುತ ಧನ್ಯವಾದಗಳು ನೀವು ಎಂದಾದರೂ ಹುಬ್ಬಳ್ಳಿಗೆ ಹೋದರೆ "ಗಂಗಾ ಲಹರಿ"ಗೆ ಅವಶ್ಯ ಭೆಟ್ಟಿಕೊಡ್ರಿ

  ReplyDelete
 11. ಧನ್ಯವಾದಗಳು ಗೋವಿಂದ

  ReplyDelete
 12. ಧನ್ಯವಾದಗಳು ಪರಾಂಜಪೆ ಸರ್ ನನ್ನ ಭಾವನವರಿಗೆ ಅನಿಸಿಕೆ ತಿಳಿಸುವೆ

  ReplyDelete
 13. ಧನ್ಯವಾದಗಳು ಸತ್ಯನಾರಾಯಣ್ ಸಂಗೀತ ಅದರಲ್ಲೂ ಹಿಂದುಸ್ತಾನಿ ಅದು ಜಾತಿ ಮತ ಗಣನೆಗೆ ತಗೊಂಡಿಲ್ಲ

  ReplyDelete
 14. ಧನ್ಯವಾದಗಳು ಶಿವು ಅ ಗಳಿಗೆ ಅನಾಯಾಸವಾಗಿ ಬಂದಿತ್ತು ನಾ ಮಾಡಿದ ಪುಣ್ಯ

  ReplyDelete
 15. ಸುನಾಥ ಸರ್ ಧನ್ಯವಾದಗಳು

  ReplyDelete
 16. ಹೆಗಡೆಜಿ ಧನ್ಯವಾದಗಳು

  ReplyDelete
 17. ಅವರ ಅದ್ಭುತ ಚೇತನಕ್ಕೆ ನನ್ನ ಗೌರವಪೂರ್ವಕ ನಮನ.

  ReplyDelete