Friday, July 17, 2009

ತಾಜ ಮಹಲ್ --ಕೆಲ ಹನಿಗಳು

೧) ಸೂರ್ಯ ಚಂದ್ರ ನಕ್ಷತ್ರ ತಾಜ್
ಎಲ್ಲ ಶಾಶ್ವತವಾಗಿವೆ
ಅಂತೆಯೇ ಮುಮ್ತಾಜ್ ಳ ಗೆಜ್ಜೆಗೆ
ಸ್ಪಂದಿಸುತಿರುವ ಸುಲ್ತಾನನ ಹೃದಯ ಕೂಡ...!

೨) ಅದೆಷ್ಟೋ ಪ್ರೇಮಿಗಳು ತಾಜ್
ಎದಿರು ನಿಂತು ಅಮರ ಪ್ರೇಮದ ವಾಗ್ದಾನ
ಮಾಡುತ್ತಾರೆ....
ಹೊರಗೆ ಬಂದು ಬೇರೆ ದಾರಿ ತುಳಿಯುತ್ತಾರೆ...!

೩) ಬಡಪಾಯಿ ಕೂಲಿ ಅವ ಇಟ್ಟಿಗೆ ಮೇಲೆ ಇಟ್ಟಿಗೆ
ಸೇರಿಸಿ ಕಟ್ಟಿದ ತಾಜ್...
ಶಹಜಹಾನ್ ನ ಪ್ರೇಮ ಹೊಗಳುವವರೇ ಎಲ್ಲ
ಕೂಲಿಯ ಬೆವರಿಗೆ ಸ್ಪಂದಿಸುವರಾರಿಲ್ಲ.....!

೪) ಪ್ರತಿ ಬೆಳದಿಂಗಳ ರಾತ್ರಿಯಲಿ
ಕೈಯಲಿ ಮಧು ಬಟ್ಟಲು ಹಿಡಿದು
ಶಹಜಹಾನ್ ಕಾಯುತ್ತಿದ್ದಾನೆ
ಗೋರಿಯಿಂದೆದ್ದು ಬರುವ ಮುಮ್ತಾಜ್ ಳಿಗಾಗಿ.....

೫) ಬಿಳಿ ಸಂಗಮವರಿ ಕಲ್ಲದು
ಪ್ರೇಮ ಕಾವ್ಯ ಬರೆಯಿಸಿಕೊಂಡ
ಪತ್ರ ವಾಗಿದ್ದು
ತಾಜ್ ನ ಪವಾಡ...!

೬) ತಾಜ್ ನ ನೆರ‍ಳಲಿ ನಿಂತರೆ ಸಾಕು
ಜೀವನವಿದು ಮಿಲನ ಅಗಲಿಕೆಯ
ಹೊರತು ಮತ್ತೇನಲ್ಲ ಎಂಬ
ಸತ್ಯ ಹೊಳೆಯುತ್ತದೆ....

೭) ಎರಡು ಆತ್ಮಗಳವು ತಾಜ್ ನ
ಅಂಗಳದಲಿ ಮಿಲನ ವಾಗುತ್ತಲೆ ಇವೆ
ಮೌನ ಸಾಮ್ರಾಜ್ಯದಲಿ
ಈ ಶಬ್ದಗಳ ಬಡಿವಾರ ಬೇಕೆ....

೮) ಹೇ ಪ್ರೀತಿ ಆ ಸುಲ್ತಾನನ
ಹಳವಂಡವಾಗಿ ಕೈದಾಗಬೇಡ...
ಬಾ ಈ ಬಡವನ ಗುಡಿಸಿಲಿಗೂ
ಕತ್ತಲಾಗಿದೆ ನಿಜ ನಿನಗಾಗಿ ಪ್ರಣತಿ ಹಚ್ಚುವೆ
ಮತ್ತೆ ಕಾಯುವೆ ...
( ಈ ೮ ನೇದ ಹನಿಮೂಲ ಸಾಹಿರ್ ಬರೆದ ಶೇರು ...ಮೂಲಕ್ಕೆ ಆಭಾಸ ಅನಿಸಿದರೆ ಕ್ಷಮೆ ಇರಲಿ.....)

11 comments:

 1. ಸರ್
  ನಿಮ್ಮ ಬ್ಲಾಗಿಗೆ ಇವತ್ತೇ ಬಂದೆ. ಇಷ್ಟವಾಯಿತು. ಅದಕ್ಕೆ ನನ್ನ ಬ್ಲಾಗ್ ರೋಲಿಗೆ ಸೇರಿಸಿಕೊಂಡಿದ್ದೇನೆ. ಇನ್ನು ಮೇಲೆ ಆಗಾತ ಬರುತ್ತಿರುತ್ತೇನೆ. ತಾಜಮಹಲಿನ ಗ್ಗೆ ನಿಮ್ಮ ಎಂಟು ಹನಿಗಳು ಬಹಳ ಸುಂದರವಾಗಿವೆ. ಮೊದಲನೆಯದೇ ನನ್ನನ್ನು ಅತಿಯಾಗಿ ಸೆಳೆದು ಬಿಟ್ಟಿತು. ಪ್ರೇಮದ ನಡುವೆ ಮೆಲ್ಲುಸಿರೂ ಸವಿಗಾನವಾಗಬಲ್ಲದು...

  ReplyDelete
 2. idanna odi mugisuvastaralli taj mahal nan kanugalla munde matte bandu nintitu... 3 years back i saw that spot sir...

  nice writ-up sir!

  ReplyDelete
 3. ಉಮೇಶ್ ದೇಸಾಯಿ, ಬಹಳ ಚೆನ್ನಾಗಿವೆ. ಬಹಳ ದಿನಗಳ ನಂತರ ಬಂದೆ, ಬಯ್ಬೇಡಿ

  ReplyDelete
 4. ತಾಜಮಹಲ ಅಮರವಾಗುವದು ಏತಕ್ಕೆ?
  ಕವಿಗಳ ಶಾಯರಿಗಳಿಂದ!

  ReplyDelete
 5. ಉಮೇಶ್ ಸರ್,

  ಕವನ ಚೆನ್ನಾಗಿದೆ.

  ಅದೆಷ್ಟೋ ಪ್ರೇಮಿಗಳು ತಾಜ್
  ಎದಿರು ನಿಂತು ಅಮರ ಪ್ರೇಮದ ವಾಗ್ದಾನ
  ಮಾಡುತ್ತಾರೆ....
  ಹೊರಗೆ ಬಂದು ಬೇರೆ ದಾರಿ ತುಳಿಯುತ್ತಾರೆ...!

  ಇದು ಹೊಸತನವೆನಿಸಿತು.....

  ReplyDelete
 6. ಸತ್ಯನಾರಾಯಣ್ ಅವರಿಗೆ ವಂದನೆಗಳು ಆಗಾಗ ಬರ್ರೀ ಏನಾದರೂ ಟೀಕಾ-ಸಲಹಾ ಕೊಡ್ರಿ

  ReplyDelete
 7. ವಿಜಯ್ ನಾ ಇನ್ನೂ ತಾಜ ನೋಡಿಲ್ಲ ಅದರ ವರ್ಣಿಸಿ ಮತ್ತೆ ಬರೀಬಹುದೇನೋ ನಿನ್ನೆ ಫೋನ್ ಮಾಡಿದ್ರಿ ಆದರೆ ನಾ ಧಾರವಾಡದಲ್ಲಿದ್ದೆ ಮುಂದೆಂದಾದರೂ ಭೇಟಿ ಆಗೋಣ

  ReplyDelete
 8. ಪರಾಂಜಪೆ ಅವರಿಗೆ ಬೈಯ್ಯುವ ದುಸ್ಸಾಹಸ ಮಾಡಲಾರೆ ಆದರೆ ನಿಮ್ಮಂತಹ ಹಿರಿಯರು ಬರುತ್ತಿದ್ದು ಟೀಕೆ-ಟಿಪ್ಪಣಿ ಮಾಡುತ್ತಿದ್ದರೆ ಚೆನ್ನ ಏನಂತೀರಿ...

  ReplyDelete
 9. ಸುನಾಥ ಸರ್ ಈ ವಾದ ಅನೇಕದಿನಗಳಿಂದ ಇದೆ ಮೊನ್ನೆ ನನ್ನ ಕಸಿನ್ ಮನೆ ಓಪನಿಂಗ್ ಇದ್ದಾಗ ಚರ್ಚೆ ಬಂತು ವಿಷಯ ಇಷ್ಟೇ
  ಲತಾ ಖ್ಯಾತ ಹಾಡುಗಾರ್ತಿ ಆಗಲು ಅವಳ ಜತೆ ಕೆಲಸ ತಗೊಂಡ ಸಂಗೀತ ನಿರ್ದೇಶಕರೂ ಕಾರಣ...ಅನಿಲ್ ಬಿಶ್ವಾಸ್, ಮದನ್ ಮೋಹನ್ ಹೀಗೆ...ನಿಮ್ಮ ಅಭಿಪ್ರಾಯವೂ ಸ್ವಲ್ಪ ಹೀಗೆ ಇದೆ ವಸ್ತು ದೊಡ್ಡದೋ ಅಥವಾ ವಸ್ತು ಹೊಗಳಿ ಬರೆದ ಕವಿತೆ ದೊಡ್ಡದೋ....

  ReplyDelete
 10. ಶಿವು ಮೆಚ್ಚಿ ಬರೆದಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ಛಾಯಾಕನ್ನಡಿಯಲ್ಲಿ ತಾಜ್ ಸೆರೆಹಿಡಿದೀದಿರಾ

  ReplyDelete