Saturday, July 4, 2009

ಎರಡು ಘಟನೆಗಳು ..

ಕಳೆದ ವಾರದಲ್ಲಿ ನಡೆದ ಎರ‍ಡು ಘಟನೆಗಳು ತಲೆ ಕೆಡಿಸಿವೆ..ಎರಡೂ ರಾಜಕಾರಣಕ್ಕೆ ಸಂಬಂಧಿಸಿದ್ದು ಹಾಗೂ
ಕಾರಣಕರ್ತರು ಇಬ್ಬರೂ ದಲಿತ ಹಿನ್ನೆಲೆ ಉಳ್ಳವರು....ಮೀಸಲಾತಿ ಇಬ್ಬರಿಗೂ ಭಾರಿ ಲಾಭ ತಂದುಕೊಟ್ಟಿದೆ .ಆದರೆ ಅದರ ಲಾಭ
ಇವರು ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ಹೇಳಬೇಕು .

ಮೊದಲ ಘಟನೆ ಅಂದರೆ ಮೆಹಬೂಬ್ ನಗರದಲ್ಲಿ ಎಂಪಿ ಯೊಬ್ಬ ಗ್ರಾಮೀಣ ಬ್ಯಾಂಕಿನ ಮೆನೇಜರ್ ಕೆನ್ನೆಗೆ ಬಾರಿಸಿದ್ದು ಅದು ಎಲ್ಲ
ಚಾನಲ್ ನಲ್ಲಿ ಪ್ರಸಾರವಾಯಿತು. ಚಾನಲನವರ ನೇರ ಪ್ರಶ್ನೆಗಳಿಗೆ ಬೆದರಿದ ಎಂಪಿ ತಾನು ದಲಿತನಾಗಿದ್ದು ತನ್ನಮೇಲೆ ಅಪವಾದ
ಹೊರಿಸಲಾಗುತ್ತಿದೆ ಎಂದು ಹಲಬಿದ.ಒಂಥರಾ ಮುಖವಾಡ ಬೇಕಾಗಿತ್ತು ಅವನಿಗೆ ತಾ ಮಾಡಿದ ಭಾನಗಡಿ ಬಯಲಾದುದು ಅವನಿಗೆ
ಸಹಜವಾಗಿ ಸರಿ ಬಂದಿರಲಿಲ್ಲ .ಅದಕ್ಕೆಂದೇ ತಾ ದಲಿತ ಶೋಷಿತ ಹೀಗೆ ಅವನ ಪ್ರಲಾಪ ಸಾಗಿತ್ತು. ಆತ ಆರಿಸಿಬಂದಿದ್ದು ಮೀಸಲು
ಕ್ಷೇತ್ರದಿಂದ. ದಲಿತರು ಮಾತ್ರವಲ್ಲ ಬೇರೆ ಜನರೂ ಓಟು ಹಾಕಿದ್ದಾರೆ ಮೊನ್ನೆ ತಾನೇ ಪವಿತ್ರ ಸಂಸತ್ತಿನಲ್ಲಿ ಅವನಿಗೆ ಪ್ರವೇಶ ಸಿಕ್ಕಿದೆ
ಎಲ್ಲ ಸಾಧ್ಯ ಆಗಿದ್ದು ಅವನೊಬ್ಬ ದಲಿತಅನ್ನುವ ಏಕೈಕ ಕಾರಣಕ್ಕೆ. ಮೀಸಲಾತಿ ಅವನಿಗೆ ಲಾಭ ತಂದಿದೆ ಅಧಿಕಾರದ ರುಚಿ ಕೊಟ್ಟಿದೆ ಈ ಅಧಿಕಾರ ಆತ ಆರಿಸಿಕಳಿಸಿದ ಜನರ ಹಿತಕ್ಕಾಗಿ ಬಳಸಿಕೊಳ್ಳಬೇಕಾಗಿತ್ತು...ಆದರೆ ಹಾಗಾಗಿಲ್ಲ.

ಎರಡನೆ ಘಟನೆ ಸ್ವಲ್ಪ ಅತಿರೇಕತನದ ಉದಾಹರಣೆ...ಅಂದರೆ ಮಾಯಾವತಿ ಕೇವಲ ೧೨೦೦ ಕೋಟಿ ಖರ್ಚು ಮಾಡಿ ತನ್ನ, ಕಾಂಶಿರಾಮ್, ಅಂಬೇಡ್ಕರ್ ರ ಪ್ರತಿಮೆಗಳನ್ನು ಸ್ಥಾಪಿಸಿದ್ದು ಕೋರ್ಟು ವಿರುದ್ಧ ಆದೀತು ಎಂದು ತರಾತುರಿಯಲ್ಲಿ ಪ್ರತಿಮೆ ಅನಾವರಣ ಸಹ ಮಾಡಲಾಯಿತು.ಮಾಯಾವತಿ ಉತ್ತರ ಪ್ರದೇಶದಲ್ಲಿ ಕಳೆದ ಅಸೆಂಬ್ಲಿ ಚುನಾವಣೆ ಗೆದ್ದಾಗ ಈ ರೀತಿಯದೇನಾದರೂ ನಡೆದೀತು ಎಂದು ಆರಿಸಿ ಕಳಿಸಿದ ಮತದಾರ ಖಂಡಿತವಾಗಿ ಅಂದುಕೊಂಡಿರಲಿಕ್ಕಿಲ್ಲ.... ಜನ ಕಟ್ಟಿದ
ತೆರಿಗೆ ಹಣ ಈ ರೀತಿ ಪೋಲಾಗುತ್ತದೆ ಇದು ನೋಡಿದರೆ ಎಂಥವರಿಗೂ ನೋವಾಗುತ್ತದೆ. ಇಷ್ಟಕ್ಕೂ ಮಾಯಾವತಿಗೇನು
ಕಾಯಮ್ ಮುಖ್ಯಮಂತ್ರಿ ಸ್ಥಾನಇದೆಯೇ ಮುಂದಿನ ಚುನಾವಣೆಯಲ್ಲಿ ಈಗ ಆರಿಸಿಕಳಿಸಿದ ಮತದಾರ ತಿರುಗಿ ಬೀಳಬಹುದು...
ಆಮೇಲೆ ಯಾವ ಪುರುಷಾರ್ಥ ಸಾಧಿಸಿದಂತಾಯಿತು ಅದೇ ಹಣದಿಂದ ಅದೆಷ್ಟು ಬರಡು ನೆಲ ನೀರು ನೋಡಬಹುದಾಗಿತ್ತು,
ಹೊಟ್ಟೆಗಳಿಗೆ ಅನ್ನ ಸಿಗಬಹುದಾಗಿತ್ತು ಹಿಂದುಳಿದ ರಾಜ್ಯ ಎಂಬ ಕಪ್ಪು ಚುಕ್ಕೆ ಅಳಿದು ಆ ರಾಜ್ಯವೂ ಉಸಿರಾಡಬಹುದಾಗಿತ್ತು
ಆದರೆ ಆಗಿದ್ದೇ ಬೇರೆ....ಬಹುಷಃ ನಮ್ಮ ದೇಶದ ಸೌಭಾಗ್ಯ ಯಾಕೆಂದರೆ ಜನರ ಒಲವು ಒಂದು ವೇಳೆ ತೃತೀಯರಂಗದ ಕಡೆ
ತಿರುಗಿದ್ದರೆ ಮಾಯಾವತಿ ಪ್ರಧಾನಮಂತ್ರಿ ಯಾಗುತ್ತಿದ್ದಳು ಆಮೇಲೆ ವೃತ್ತ ವೃತ್ತ ಕ್ಕೂ ಅವಳ ಪ್ರತಿಮೆಯೇ ನೋಡಬೇಕಾಗಿತ್ತು.

ಮೇಲಿನ ಘಟನೆ ಅವಲೋಕಿಸಿದಾಗ ಒಂದು ವಿಷಯ ಮನದಟ್ಟಾಗುತ್ತದೆ ಅದೆಂದರೆ ಮೀಸಲಾತಿ ನಿಜಕ್ಕೂ ಯಶಸ್ವಿಯಾಗಿದೆಯಾ ಅಥವಾ ಅದೊಂದು ರಾಜಕೀಯ ದಾಳ ಆಗಿದೆಯಾ .ಏಕೆಂದರೆ ಬಡವರ ಸ್ಥಿತಿ ಇನ್ನೂ ಬದಲಾಗಿಲ್ಲ
ಮೊನ್ನೆ ಕೇರಿ ಅಂತ ಅನಿಸಿಕೊಳ್ಳುತ್ತಿದ್ದವು ಈಗ ಕಾಲೊನಿ ಅಂತ ನಾಮಾಂಕಿತವಾಗಿವೆ.ಆದರೆ ಈ ಕಾಲನಿಯಲ್ಲಿ ವಾಸಮಾಡುವ ಜನ ಹಾಗೆಯೇ ಇದ್ದಾರೆ...ಸರಕಾರ ಮೀಸಲಾತಿ ಕೊಟ್ಟಿದ್ದು ದಯೆ ಅಲ್ಲ ಅದು ಅವರ ಹಕ್ಕು ಎಂಬುದು ಇವರವಾದ. ನಿಜ ಇದ್ರೂ ಇರಬಹುದು ಆದರೆ ಮೀಸಲಾತಿಯ ದುರುಪಯೋಗನೂ ಆಗಿದೆ ಹಾಗೆಯೇ ಸರಕಾರಿ ಹುದ್ದೆ ಸಂಪಾದಿಸಲು, ಕಾಲೇಜು ,ಡಾಕ್ಟರ್ ಇಂಜಿನೀಯರ್ ಆಗಲು ಅದು ಉಪಯೋಗ ಆಗಿರಬಹುದು. ಆದರೆ ಅಂಬೇಡ್ಕರ್ ಆಶಯ ಬೇರೆಯೇ ಇತ್ತು ಮೀಸಲಾತಿಯಿಂದ ದಲಿತರೂ ಮುಂದೆ ಬರ್ತಾರೆ ಜನ ಉದ್ಧಾರ ಆಗ್ತಾರೆ ಈ ದೇಶ ಸುಧಾರಿಸುತ್ತದೆ ಎಂದು ಅಂಬೇಡ್ಕರ ಕನಸು ಕಟ್ಟಿರಬೇಕು....

ಮಾಯಾವತಿ ಹಾಗೂ ಆ ಎಂಪಿ ಉದಾಹರಣೆಗೆ ತಗೊಂಡರೆ ಅವರ ಕನಸು ಕನಸಾಗಿಯೇ ಉಳಿದಿದೆ ಅಂತ ನನ್ನ ಭಾವನೆ....

8 comments:

 1. ದೇಸಾಯರ,
  ಈ ಎರಡೂ ಘಟನೆಗಳು ಹುಂಬ ರಾಜಕಾರಣಿಗಳ ನಿರ್ಲಜ್ಜತನದ ಪ್ರತೀಕಗಳಾಗಿವೆ. ಏನು ಮಾಡುವದು? ಈಗ ಇದೇ ನಡೆಯತೊಡಗಿದೆ.
  ಗುಂಡೂರಾವ ಅವರು ಮುಖ್ಯ ಮಂತ್ರಿಯಾಗಿ ಇದ್ದಾಗಿನ ಘಟನೆ ಒಂದು ನೆನಪಿಗೆ ಬರುತ್ತಿದೆ. ಗುಂಡೂರಾಯರಿಗೆ ನಿಕಟವರ್ತಿಯಾಗಿದ್ದ
  ರಾಜಕಾರಣಿ--ಖಾನ್ ಎಂದು ಅವರ ಹೆಸರು--ಸಾರ್ವಜನಿಕವಾಗಿ ನಿಜಾಮುದ್ದೀನ ಎನ್ನುವ IGPಯ ಕಪಾಳಕ್ಕೆ
  ಹೊಡೆದಿದ್ದರು. ನಿಜಾಮುದ್ದೀನ ತುಟಿ ಬಿಚ್ಚದೆ ಈ ಅವಮಾನವನ್ನು ಸಹಿಸಿಕೊಂಡಿದ್ದರು!

  ReplyDelete
 2. ದೇಸಾಯಿ ಸರ್,

  ಎರಡು ಉದಾಹರಣೆಗಳನ್ನು ಓದಿದಾಗ ಯಾವ ಜನರೇ ಆಗಲಿ ದುರುಪಯೋಗದ ಅವಕಾಶ ಸಿಕ್ಕಾಗ ಹೇಗೆ ಉಪಯೋಗಿಸುತ್ತಾರೆನ್ನುವುದಕ್ಕೆ ಇವೇ ಸಾಕ್ಷಿ...

  ReplyDelete
 3. ದೇಸಾಯಿಯವರೆ.....

  ಸರಕಾರದ ಯೋಜನೆಗಳು ಒಳ್ಳೆಯ ಉದ್ದೇಶದಿಂದ ಇರುತ್ತವೆ....

  ಕೆಲವು ಇಂಥಹ ಘಟನೆಗಳು ನಡೆಯುತ್ತವೆ....

  ಆದರೆ ಶತ... ಶತಮಾನಗಳಿಂದ ....
  ತುಳಿಯಲ್ಪಟ್ಟ ಸಮಾಜಕ್ಕೆ "ಮೀಸಲಾಯಿತಿಯ" ಅವಶ್ಯಕತೆ ಇದೆ...

  ಯಾರಿಗೂ ಅನ್ಯಾಯವಾಗದೆ ಹಾಗೆ...
  ಈಗಿರುವ ಕಾನೂನಿನಲ್ಲಿ ಸುಧಾರಣೆ ಕೂಡ ಆಗ ಬೇಕಿದೆ...

  ReplyDelete
 4. ಸರಕಾರದ ಯೋಜನೆಗಳು ಉಪಯೋಗದ ಬದಲು ದುರುಪಯೋಗ ಆಗುವ ಸಂದರ್ಭಗಳೆ ಹೆಚ್ಚು. ಅವನು ದಲಿತನೆ ಆಗಿರಲೇ, ಮತ್ತೊಬ್ಬನೇ ಆಗಿರಲಿ, ತಿಪ್ಪೆಯ ಮೆಲ್ಲಿದ್ದವರನ್ನು ತಂದು ಉಪ್ಪರಿಗೆ ಮೇಲೆ ಕೂಡಿಸಿದಾಗ ಇವೆಲ್ಲ ಸಹಜ. ಅಧಿಕಾರದ ಅಮಲು ಏರಿದಾಗ ಅಧಿಕಾರದ ದುರುಪಯೋಗ ಮಾಡಿಕೊಳ್ಳದೇ ಇರಲಾರರು. ಮೀಸಲಾತಿ, ರಕ್ಷಣೆಗೆ ಕಾನೂನು ಇದೆಯೆಂದು ಸುಮ್ಮ ಸುಮ್ಮನೇ ಅಟ್ರೋಸಿಟೀ ಕೇಸು ಹಾಕುವ ಬೆದರಿಕೆ ಹಾಕಿ ಜನರನ್ನು ಹಿಂಸಿಸುವ ಜನ ತುಂಬಾ ಇದ್ದಾರೆ.

  ReplyDelete
 5. ಸುನಾಥ ಸರ್ ನಿಜ ಖಾನ್ ಸಾಹೇಬರ ಸಾಹಸದ ಬಗ್ಗೆ ಓದಿದ ನೆನಪು..ನಾವು ಪ್ರಜೆಗಳು ಪದೇ ಪದೇ ಎಡವುತ್ತಿದ್ದೇವೆ..
  ನಾವೇ ಸುಧಾರಿಸಿಕೊಳ್ಳಬೇಕಾಗಿದೆ....

  ReplyDelete
 6. ಶಿವು ಅವರೆ ಆ ಅಧಿಕಾರ ಕೊಟ್ಟವರು ನಾವೇ ಉಪ್ಪು ತಿನ್ನುವವರು ಈಗ ನೀರು ಕುಡಿಯುತ್ತಿದ್ದೇವೆ..

  ReplyDelete
 7. ಹೆಗಡೆ ಅವರೆ ಮೀಸಲಾತಿ ಬೇಕೆ ಬೇಡವೇ ಚರ್ಚೆ ಮಾಡಿ ಕಾಲಹರಣ ಮಾಡುವುದಕ್ಕಿಂತ ಮೀಸಲಾತಿ ದಯೆಯಿಂದ ಮೇಲೆ ಬಂದವರ ಮೆರವಣಿಗೆ ನಾಗರೀಕ ಸಮಾಜಕ್ಕೆ ಭೂಷಣವಲ್ಲ ಏನಂತೀರಿ...?

  ReplyDelete
 8. ಉಮೇಶ ಆಟ್ರೋಸಿಟಿ ಬಗ್ಗೆ ಹೇಳಿರುವಿರಿ ನಾ ಹಿಂದೆ ಕೆಲಸಮಾಡುತ್ತಿದ್ದ ಬ್ಯಾಂಕಿನಲ್ಲಿ ಒಬ್ಬ ಜವಾನ ಇದ್ದ. ಅವನ ರೋಪು
  ನೋಡುವಹಾಗಿತ್ತು ನಮ್ಮೆಲ್ಲರ ಬಾಯಿ ಕಟ್ಟಿ ಹಾಕಿತ್ತು ಯಾಕೆಂದರೆ ಜಾತಿನಿಂದನೆ ಆರೋಪ ಸಾಬೀತಿಗೆ ಸಾಕ್ಷಿ ಸಹ ಬೇಕಾಗಿಲ್ಲ..!

  ReplyDelete