Wednesday, July 8, 2009

ಸದಾ ಕಾಡುವ ಹಾಡು---3

ಹಿಂದಿ ಸಿನೇಮಾ ಇರುವವರೆಗೂ ಕೆಲ ಹಾಡು ಸದಾ ಗುನುಗುನಿಸಲ್ಪಡುತ್ತವೆ...ಬಹುಷಃ ಸೂರ್ಯ ಚಂದ್ರ ಇರುವವರೆಗೂ ಅಂತ ಹೇಳಬಹುದೇನೋ ಈ ಹಾಡುಗಳಲ್ಲಿ ಒಂದು ಅದ್ಭುತ ರೀತಿಯ ಶಬ್ದಗಳ ಚಾಲಾಕಿತನ ಇದೆ
ಈ ಸಾಲು ಗಮನಿಸಿ "ಖಾಲಿ ಹಾಥ ಶಾಮ್ ಆಯಿ ಹೈ ಖಾಲಿ ಹಾಥ ಜಾಯೇಗಿ ..", " ಅಪನಾ ಕಿನಾರಾ ನದಿಯಾಕಿ ಧಾರಾ ಹೈ..", " ಪಾನಿ ಪಾನಿರೆ ನೈನೊಂಮೆ ಭರ್ ಜಾ ನಿಂದೇ ಖಾಲಿ ಕರ್ ಜಾ...".ಮೇಲಿನ ಸಾಲುಗಳಲ್ಲಿ ಕವಿ ತನ್ನ ಪ್ರತಿಭೆ ಪ್ರದರ್ಶಿಸಿದ್ದು ಮಾತ್ರವಲ್ಲ ಬದಲು ಶಬ್ದಗಳ ಬಲೆ ನೇಯ್ದಿದ್ದಾನೆ ಆ ಬಲೆಯಲ್ಲಿ ಬಿದ್ದು ಒದ್ದಾಡುವ ನಾವು ನಿಧಾನವಾಗಿ ಅವನ
ಪ್ರಭಾವ ವಲಯಕ್ಕೆ ಸಿಗುತ್ತೇವೆ ಆ ಕಲೆಗಾರನ ಕುಸುರಿ ಕೆಲಸಕ್ಕೆ ಮಾರು ಹೋಗುತ್ತೇವೆ.... ಮೇಲಿನ ಎಲ್ಲ ಹಾಡು ಬರೆದವರು
ಗುಲ್ಜಾರ್ . ಹಿಂದಿ ಸಿನೆಮಾ ಕಂಡ ಪ್ರತಿಭೆಯ ಖನಿ ಈತ. ಈತ ಬರೀ ಹಾಡು ಸಂಭಾಷಣೆ ಗೆ ಮಾತ್ರ ಸೀಮಿತವಾಗಲಿಲ್ಲ ಬದಲು ತೀರ ಸಂವೇದನೆಯ ಸಿನೇಮಾ ತೆಗೆದ ವಾಹ್ ಎನಿಸಿಕೊಂಡ. ಒಮ್ಮೆ ಕಣ್ಣು ಹಾಯಿಸುವ....."ಪರಿಚಯ್ ","ಕೋಶಿಶ್ ", " ಖುಷಬೂ","ಮಾಚಿಸ್ " ," ಇಜಾಜತ್" ಎಂತೆಂತಹ ಸಿನೇಮಾಗಳು...ನಾನು "ಮೌಸಮ್" ಉಲ್ಲೇಖಿಸುವದನ್ನು ಮರೆತೆ.
ಗುಲ್ಜಾರ್ ಸಂವೇದನಶೀಲ ಕಥೆಗಾರ ಕೂಡ. ನಾನು ಇಲ್ಲಿ ಹೇಳಹೊರಟಿರುವುದು ಒಂದು ಹಾಡಿನ ಬಗ್ಗೆ ಪೀಠಿಕೆ ಉದ್ದ ಅನಿಸಿತೇ ಆದರೆ ಹಾಡಿನ ಸೂಕ್ಷ್ಮತೆ ಅನುಭವಿಸಬೇಕಾದರೆ ಕರ್ತನ ಗುಣಗಾನ ಮಾಡಲೇ ಬೇಕಲ್ಲ.

ಶೇಖರ್ ಕಪೂರ್ ನಿರ್ದೇಶಿಸಿದ ಎರಡನೇ ಚಿತ್ರ ಮಾಸೂಮ್. ಅವು ನನ್ನ ಪಿಯುಸಿ ದಿನಗಳು ಊರಲ್ಲೆಲ್ಲ ಚಿತ್ರದ ಪೋಸ್ಟರು ಹಾಲುಗಲ್ಲದ ಜುಗಲ್ ಹಂಸರಾಜ್ ರಾರ‍ಾಜಿಸುತ್ತಿದ್ದ. ಹಾಡು ಬರೆದವರು ಗುಲ್ಜಾರ್ ಆರ್ ಡಿ ಸಂಗೀತ ಒಂದೊಂದು ಹಾಡು ಅದ್ಭುತ..ಯಾವ ಹಾಡು ಹೆಸರಿಸಬೇಕು. ಎದೆಗೆ ತಟ್ಟಿದ ಇಂದಿಗೂ ಕಾಡುವ ಹಾಡು "ತುಜ್ ಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂಂ ಮೈ ತೇರೆ ಮಾಸೂಮ್ ಸವಾಲೊಂಸೆ ಪರೇಶಾನ ಹೂಂ ಮೈ...".ನಿಜವೇ ನಾವೆಲ್ಲ
ಅಂದುಕೊಳ್ಳೊಲ್ಲವೇ ಛೆ ಈ ಹಾಳು ಜೀವನ .ಹಾಡೂ ಅದೇ ಹೇಳುತ್ತೆ ಆದರೆ ಹೇಳುವ ಧಾಟಿ ಅದೆಷ್ಟು ಕಲಾತ್ಮಕ.....!
ಕೆಲವರಲ್ಲಿ ಪ್ರತಿಭೆ ಧಂಡಿಯಾಗಿರುತ್ತದೆ ಇಲ್ಲ ವಾದರೆ ಇಂತಹ ಸಾಲು ಹುಟ್ಟಲು ಸಾಧ್ಯವೇ ಇಲ್ಲ..." ಜೀನೆ ಕೆ ಲಿಯೇ ಸೋಚಾಹಿ ನಹಿ ದರ್ದ್ ಸಂಭಾಲನೆ ಹೋಂಗೆ ಮುಸ್ಕುರಾಯೆ ತೋ ಮುಸ್ಕುರಾನೆಕಿ ಕರ್ಜ ಉತಾರನೆ ಹೋಂಗೆ ಮುಸ್ಕುರಾವೂಂ ಕಭಿ ತೊ ಲಗತಾ ಹೈ ಜೈಸೆ ಹೋಟೋಂಪೆ ಕರ್ಜ ರಖಾ ಹೈ..."ಅದೆಂತಹ ಅದ್ಭುತ ಕಲ್ಪನೆ ಎಲ್ಲ ಧರ್ಮಗ್ರಂಥಗಳೂ ಹೇಳತಾವ ಪುಣ್ಯ, ಕರ್ಮ, ನಾಳಿನ ಅನಿಶ್ಚಿತತೆ. ಆದರೆ ಸಾಮಾನ್ಯ ಮನುಷ್ಯ ನೋಡಿ ದಂಗು ಹೊಡೆದಿದ್ದಾನೆ..ಅವನಿಂದು ನಗುತ್ತಿದ್ದಾನೆ, ಖುಷಿಯಾಗಿದ್ದಾನೆ ಆದರೆ ನಾಳೆ ಪರಿಸ್ಥಿತಿ ಬಿಗಡಾಯಿಸಿದಾಗ ತಳಮಳ ಗೊಳ್ಳುತ್ತಾನೆ. ಜೀವನ ಪ್ರಶ್ನೆ ಕೇಳುತ್ತಲೇ ಇದೆ ಉತ್ತರ ಹೇಳಲಾಗುತ್ತಿಲ್ಲ ನಿನ್ನೆ ಮನಃಪೂರ್ತಿ ನಕ್ಕಿದ್ದಕ್ಕೆ ಇಂದು ಬಡ್ಡಿ ಕೀಳುತ್ತಿದೆ ಈಗ ನಕ್ಕರೂ ಅದೊಂದು ನಾಳೆ ತಾ ತೀರಿಸಬೇಕಾಗಿರುವ ಸಾಲ ಎಂಬುದು ಗೊತ್ತಾದಾಗ ನಗಲು ಮನಸ್ಸೆಲ್ಲಿ ಬರುತ್ತದೆ.....?

ಎರಡನೇ ನುಡಿ ಈ ಹಾಲಿನ ಹೈ ಲೈಟ ಅಂತ ಹೇಳಬೇಕು...ಕವಿ ಹೊರಳಿದ್ದಾನೆ ನಗುವುದರ ಬಗ್ಗೆ
ಹೇಳುತ್ತ ಕಣ್ಣೀರಿನ ಬಗ್ಗೆ ಹೇಳುತ್ತಾನೆ... ಸಾಲು ಗಮನಿಸಿ .....

आज अगर भर आइ है
बूंदे बरस जायेगि
कल क्या पता जिनके लिये
आंखे तरस जायेगि
जाने कहां गुम हुवा कहां खॊया
एक आंसू छुपाके रखा था
ಕಣ್ಣೀರು ಎಲ್ಲ ಕಾಲದಲ್ಲು ಸಿಗಲಾರವು ಅಥವ ನಾವು ಅಳಬೇಕೆಂದುಕೊಂಡಾಗ ಅವು ಸುರಿಯಲಾರದೇ ಹೋಗಬಹುದು ಅವನ್ನು ಜತನದಿಂದ ಕಾಯ್ದುಕೋಬೇಕಾಗಿದೆ...ಇದೊಂಥರಾ ವಿಚಿತ್ರ ಕಲ್ಪನ ಹೀಗಾಗಬಹುದೇ ಕವಿ ಉತ್ಪ್ರೇಕ್ಷೆ ಮಾಡತಿದ್ದಾನೆಯೇ ಗೊತ್ತಿಲ್ಲ. ಆದರೆ ಶಬ್ದಗಳು ಸೃಷ್ಟಿಸುವ ಅದ್ಭುತ ಕುಸುರಿಗಾರಿಕೆ ಇದೆ ಅಲ್ಲ ಅದಕ್ಕೆ ಉಘೆ ಉಘೆ ಅನ್ನದೇ ವಿಧಿಯಿಲ್ಲ. ಈ ಗೀತೆ ಗೀಳಾಗಿ ಕಾಡುವುದು ಶಬ್ದಗಳ ಕಲೆಗಾರಿಕೆಯಿಂದ ಮಾತ್ರ. ಚಿತ್ರದ ಸನ್ನಿವೇಶಕ್ಕೆ ಈ ಹಾಡು ಅನುರೂಪ ವಾಗಿತ್ತು ಅಥವಾ ಈ ಹಾಡು ಸನ್ನಿವೇಶ ಮೀರಿ ಎಲ್ಲ ಸಂವೇದನಾಶೀಲ ಮನಸ್ಸುಗಳು ಸದಾ ಗುನುಗಲು ಆಶಿಸುವ ಹಾಡು.... ಮರೆಯದ ಅಥವಾ ಮರೆಯಲು ಸಾಧ್ಯವೇ ಇಲ್ಲದ ಸದಾ ಕಾಡುವ ಈ ಹಾಡು....!

10 comments:

 1. Desai Sir,
  I don't know much hindi but I listen lot of old hindi songs sung by Rafi and Mukesh.. Thanks for writing about wonderful songs.. keep writing like this.. and inform us about much more wonderful songs...

  ReplyDelete
 2. ದೇಸಾಯರ,
  ಈ ಹಾಡುಗಳನ್ನು quote ಮಾಡಿ ಮನಸ್ಸನ್ನ ಸೂರೆ ಮಾಡಿಬಿಟ್ರಿ.
  ‘ಯಾದೇಂ ಅಪನೀ ಹಮಾರೇ ಸಾಥ ರಹನೇ ದೋ
  ನ ಜಾನೇ ಕಿಸ ಗಲೀ ಮೇ ಜಿಂದಗೀ ಕೀ ಶಾಮ ಹೋಗೀ" ಅಂತ
  ಈ ಹಾಡುಗಳಿಗೆ ಹೇಳಬಹುದೇನೋ!

  ReplyDelete
 3. ನಿಜ. ಗುಲ್ಜಾರ್ ನಂತಹ ಒಳ್ಳೆ ಲೇಖಕ ಸಿಕ್ಕಿದ್ದು ನಮ್ಮ ಭಾಗ್ಯ. ಮತ್ತೆ ಪಂಚಮ ದಾ ಅಷ್ಟೇ ಚೆನ್ನಾಗಿ ಮ್ಯೂಸಿಕ್ ಕೊಟ್ಟವರು. They are great personalities...
  one more song which i like most is
  "dil tha pyasa bas hamne sara sagar ko ghut me piliya" in between lines of movie saaya song o sathiya but,i dont know who has written it.

  ReplyDelete
 4. ದೇಸಾಯಿಯವರೆ....

  ನಾನು ನಿಮ್ಮ ಬ್ಲಾಗಿನಲ್ಲಿ ತುಂಬಾ ಇಷ್ಟಪಡುವದು ಈ ಲೇಖನವನ್ನು....
  ಹಾಡುಗಳು...
  ಅದರ ಸಂಗಡ ನಿಮ್ಮ ವಿವರಣೆ...
  ಆ... ಹಾಡುಗಳನ್ನು ನಾವು ದಿನವಿಡಿ ಗುನುಗುವಂತೆ ಮಾಡಿಬಿಡುತ್ತೀರಿ...

  ಈ ಮಾಲಿಕೆ ತುಂಬಾ ಸೊಗಸಾಗಿ ಬರ್ತಿದೆ....
  ಒಂದೊಂದು ಹಾಡಿಗೂ ವಿವರಣೆ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು...
  ಒಂದು ಲೇಖನದಲ್ಲಿ ಎರಡು, ಮೂರು ಹಾಡುಗಳಿದ್ದರೆ ಸಾಕು ಅನಿಸುತ್ತದೆ....

  ಈಗ ಬರುತ್ತಿರುವದು ಚೆನ್ನಾಗಿದೆ...
  ಇದು ನನ್ನ ವಯಕ್ತಿಕ ಸಲಹೆ ಅಷ್ಟೆ....
  ಅಪಾರ್ಥ ಬೇಡ....

  ಮತ್ತೊಮ್ಮೆ ಹಳೆಯ ಹಾಡುಗಳನ್ನು ನೆನಪಿಸಿದ್ದಕ್ಕೆ ವಂದನೆಗಳು...

  ReplyDelete
 5. ನಾನು ಹಳೆ ಹಿಂದಿ ಗೀತೆಗಳನ್ನು ತುಂಬಾ ಇಷ್ಟಪಡುತ್ತೇನೆ. ಹಿಂದಿ ಅಷ್ಟಾಗಿ ಬರದಿದ್ರೂ ಹಾಡುಗಳ ಅರ್ಥ ಕೇಳಿ ತಿಳಿದುಕೊಳ್ಳೋದು ನನ್ನ ಅಭ್ಯಾಸ. ಪ್ರತಿ ಹಾಡುಗಳಿಗೂ ವಿವರಣೆ ಹೆಚ್ಚಿದ್ದರೂ ಪರ್ವಾಗಿಲ್ಲ, ಅರ್ಥವಾಗದ ನನ್ನಂಥವರಿಗೆ ತುಂಬಾ ಬೇಕಾಗುತ್ತದೆ ಸರ್. ನಿಮ್ಮನೆಗೆ ಬರೋದು ತಡವಾಯಿತು..ಕೆಲಸಗಳ ಒತ್ತಡ! ಇನ್ನು ಮುಂದೆ ನಾನೇ ಬರ್ತೀನಿ
  -ಧರಿತ್ರಿ

  ReplyDelete
 6. dear ravishankarji welecome and thanks for your comment.and thanks for ur appreciation...

  ReplyDelete
 7. ಸುನಾಥ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಜವೇ ನೆನಪಿನ ದೀವಟಿಗೆ ಕೈ ಯಲ್ಲಿದ್ದರೆ ಸವೆಸುವ ದಾರಿ ಸುಗಮ ಅಲ್ಲವೆ?

  ReplyDelete
 8. ಗೋಪಾಲ ಮೆಚ್ಚಿದ್ದಕ್ಕೆ ಧನ್ಯವಾದಗಳು ಗುಲ್ಜಾರರ ವೈಯುಕ್ತಿಕ ಬದುಕು ಸ್ವಲ್ಪ ದುರಂತ ಅಂತಾನೇ ಹೇಳಬೇಕು. ಮಗಳು ಬೊಸ್ಕಿ(ಮೇಘನಾ)ಗಾಗಿ ಅನೇಕ ಕವಿತೆ ಬರೆದಿದ್ದರು...

  ReplyDelete
 9. ಹೆಗಡೆ ಅವರೆ ಮೆಚ್ಚಿದ್ದಕ್ಕೆ ಧನ್ಯವಾದಗಳು ಹಾಗೂ ನಿಮ್ಮ ಸಲಹೆಗೆ ಸ್ವಾಗತ ಪಾಲಿಸಲು ಪ್ರಯತ್ನ ಪಡುವೆ...

  ReplyDelete
 10. ಧರಿತ್ರಿ ಸುಸ್ವಾಗತ ಹೀಗೆ ಬರ್ಕೊತ ಇರ್ರಿ ನನ್ನ ಹೊಗಳಿಕೋತ ಇರ್ರಿ ಮೊನ್ನೆ ಡಾಕ್ಟರ್ ನಿಮ್ಮದು ಐಡಿಯಲ್ ವೇಟ್ ಎಂದರು
  ನಿಮ್ಮೆಲ್ಲರ ಹೊಗಳಿಕೆಗಳಿಗೆ ವೇಟ್ ಏರುಪೇರಾದೀತೋ ಏನೋ ...ತಪ್ಪು ಹೇಳಿದಾಗ ನಿರ್ದಾಕ್ಷಿಣ್ಯ ವಾಗಿ ಬಯ್ರೀ...

  ReplyDelete