Saturday, May 30, 2009

ಸಂವಾದ

ಬೊಗಸೆ ಕಂಗಳವು ಉದಕ ಸುರಿಸಿ
ಕೇಳಿವೆ ಅದೇ ಪ್ರಶ್ನೆ
ನನ್ನಂತರಂಗದ ತಿದಿಯನೊತ್ತಿ ಕಾಡಿದ
ಪ್ರಶ್ನೆ......
"ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ"
ಉತ್ತರ ತರವಲ್ಲ ಹೇಳಲು ಪದಗಳಿಲ್ಲ
ಭಾವನೆಗಳಿಗೆ ಭಾಷೆಯ ಬರಗಾಲವಿದೆ....
ಎರಡು ಜೀವ ತೇಯ್ದವು
ನಿನ್ನ ಬಾಳು ನಳನಳಿಸಲೆಂದು...
ಅವಳು ನಿನ್ನ ಬಿಟ್ಟು ಹೋದಳು..
ಅದಷ್ಟೇ ಅವಳಿಗೆ ಸಾಧ್ಯ ವಾಗಿದ್ದು...!
ಇವಳು ಬೇಡಿದ್ದಳು ಕೈ ಚಾಚಿ
ದೇವರು ಪತ್ರಿಸಿದ ನಿನ್ನ ನೇರವಾಗಿ..
ಇವಳ ವಿಳಾಸಕ್ಕೆ.....
ಅಂಗಳದಲ್ಲೇನೋ ಅವಳು ತಂದಳು..
ಇವಳು ನಿನ್ನ ಕೈ ಹಿಡಿದು ನಡೆಸಿದಳು.
ಕಪ್ಪು ರಾತ್ರಿಗಳಲಿ ಬೆಚ್ಚನೆ ಪ್ರೀತಿಗಾಗಿ
ನೀ ಹಪಾಪಿಸಿದಾಗ ಇವಳು ಪ್ರೀತಿ
ಉಡಿ ತುಂಬಿದಳು, ಉಣ್ಣಿಸಿದಳು...
ನಿನ್ನ ಮೊದಲ ನಗು ಅವಳು ಕಂಡಿದ್ದಳು
ನೀನೀಗ ಕಂಬನಿ ಮಿಡಿದಾಗ ಇವಳು ತೊಡೆದಳು.

ಹೇಳು ಕಂದ ಈಗ ಆ ಪ್ರಶ್ನೆ ತರವೇ
ಎರಡು ಜೀವ ಬಿತ್ತಿದ ಪ್ರೀತಿಯ ಸೆಲೆ ನೀನು..
ಬೇರು ಎಲ್ಲಿಯಾದರೇನು
ನನ್ನಂಗಳದ ನಗುವ ಹೂ ನೀನು....!

6 comments:

  1. bahaLa chandada kavana....

    iShTavaayitu....

    abhinaMdanegaLu...

    ReplyDelete
  2. ವಾಹ್! ಕ್ಯಾ ಖೂಬ್ ಹೈ!

    ReplyDelete
  3. ಚಂದ ಕವನ. ಇಷ್ಟ ಆಯ್ತು. :-)

    ಅಂದಹಾಗೆ, ನಿಮ್ಮ ಬ್ಲಾಗಿನ ಬಣ್ಣಗಳನ್ನ ಬದಲಾಯಿಸಿ ಪ್ಲೀಸ್.. ಕಣ್ಣಿಗೆ ತುಂಬಾ ಆಯಾಸ ಆಗತ್ತೆ..

    ReplyDelete
  4. ಕವನಾ ಭಾಳ ಛಂದ ಐತ್ರೀ.. ಭಾವಾರ್ಥ ಭಾಳ ಇಷ್ಟ ಆತು... ಹಿಂಗ ಬರೀತಾ ಇರ್ರೀ..

    ReplyDelete
  5. ಕವನ ತುಂಬಾ ಚನ್ನಾಗಿದೆ

    ReplyDelete
  6. ಎಲ್ಲರಿಗೂ ಧನ್ಯವಾದಗಳು ಸುಶ್ರುತ ನಿಮ್ಮ ಸಲಹೆ ಪಾಲಿಸಿರುವೆ.
    ನಿಮ್ಮೆಲ್ಲರ ಕಳಕಳಿ ಹೀಗೇ ಮುಂದುವರೀಲಿ...

    ReplyDelete