Sunday, May 24, 2009

ಹುಬ್ಬಳ್ಳಿ ಅಂದರೆ ಬಾಯಲ್ಲಿ ನೀರು

ಈ ಹಾಳು ಬೆಂಗಳೂರಿಗೆ ಬಂದು ಮೊನ್ನೆ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ನು ಮರೆತಿಲ್ಲ....

ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...
ಅದರಲ್ಲೂ ಆ ಮಾರ್ವಾಡಿ ಮಾಡುವ ಕಚೋರಿಯ ರುಚಿಯೋ ರುಚಿ.... ಹಳೆಯ ತಲೆಮಾರಿನವರು ಇನ್ನೂ ನೆನಪಿಡುವ
ಶಿವಲಾಲ್ ಅಮರಸಿಯ ಖಾರ,ಗುರೂನ ಅಂಗಡಿ ದೋಸೆ ಎಲ್ಲ ಈಗ ಇಲ್ಲ. ಆದರೇನು ಹೊರಗಿನಿಂದ ಬಂದವರು ತಂದ ಕಚೋರಿ,ಭೇಲ್, ಸಮೋಸಾ ಗಳು...... ಸಂಜೆ ಆದರೆ ಸಾಕು ಅಲ್ಲಿ ಹೊಸಲೋಕ ತೆಗೆದುಕೊಳ್ಳುತ್ತದೆ.
ಮುಗಿ ಬೇಳುವ ಗಿರಾಕಿಗಳು , ಕುಶಲ ಅಂಗಡಿಯವರು, ಸುತ್ತಲಿನ ಪರಿಸರ ಹೇಗೆ ಇರಲಿ ಬಾಯಲ್ಲಿ ನೀರು ಸೋರುವುದಂತೂ ನಿಜ ಅ ರುಚಿಗೆ.....
. ಇನ್ನು ಹೊಟೆಲ್ ಗಳ ವಿಶಯಕ್ಕೆ ಬಂದರೆ ಬಹಳ ಹಳೆಯ ಹೋಟೆಲ್ ಆದರೂ ಬ್ರಾಡ್ವೇದ ಕಾಮತ್ ಹೋಟೆಲ್ ತನ್ನ ರುಚಿ ಇನ್ನು
ಕಾಯ್ದುಕೊಂಡಿದೆ. ಇಲ್ಲಿ ಸಿಗುವ ಮಸಾಲೆ ದೋಸೆ ಯ ರುಚಿ ಅಪ್ರತಿಮ.....ಅಂತೆಯೇ ಮತ್ತೊಂದು ಹಳೆಯ ಹೊಟೆಲ್ ಕೋರ್ಟ್ ಆವರಣದ ಕ್ಯಾಂಟಿನಿನ ಪೂರಿ ಭಾಜಿ... ಈ ಭಾಜಿಗೆ ಒಂಥರಾ ಸಿಹಿ ಮಿಶ್ರಿತ ಖಾರದ ರುಚಿ ಖರೇ ಹೇಳಬೇಕು ಅಂದ್ರ ಯಾವ ಪಿಜ್ಜ , ಬರ್ಗರ್ ಈ ಭಾಜಿ ರುಚಿ ಮುಂದ ಮೂಲಿಸಮಾನ.....!
ಹುಬ್ಬಳ್ಳಿಯ ಸಾವಜಿ ಹೊಟೆಲ್ ನಲ್ಲಿ ಸಿಗುವ ಚಿಕನ್ ,ಖೈಮಾ,ಮಟನ್ ಗಳ ಗಮ್ಮತ್ತೇ ಬೇರೆ ಹಾಗೆಯೇ ಶೆಟ್ಟರ ಅಂಗಡಿಗಳ
ಮೀನಿನ ರುಚಿಯೂ ಮಜಾನೇ....
ಏನು ಮಾಡೋದು ಈ "ಬೆಂಗಾಡೆಂಬ ಬೆಂಗಳೂರಿನಲ್ಲಿ" ಮಸಾಲೆ ದೋಸೆಯೇ ಗತಿ ಇಲ್ಲಿ ಸಿಗುವ ಮುದ್ದೆ, ನಾಟಿಕೋಳಿಗೆ
ಹುಬ್ಬಳ್ಳಿಯ ದಮ್ ಇಲ್ಲ...ಈ ಮಾತಿಗೆ ಒಪ್ಪದವರು ಒಮ್ಮೆ ಹುಬ್ಬಳ್ಳಿಗೆ ಹೋಗಿ ಬರ್ರಿ ಆ ದುರ್ಗದ ಬೈಲಿನ್ಯಾಗ ಅಡ್ಡಾಡ್ರಿ..
ತಿನ್ರಿ ಆಮೇಲೆ ಹೋಲಸರಿ ಈ ಬೆಂಗಳೂರಿನ ಒಣ ತಿನಿಸು ಹಾಗೂ ಆ ಹುಬ್ಬಳ್ಳಿಯ ರಸಭರಿತ ತಿನಿಸುಗಳನ್ನು....!

7 comments:

  1. ನಿಮ್ಮ ಅಂಬೋಣಕ್ಕ ನನ್ನದು ಸೋಲಾ ಅಣೆ ಚಾರ ಪೈ ಒಪ್ಪಿಗಿ ಅದ.

    ReplyDelete
  2. Hubballi thindi hesaru heli namma hotte urisbyaadree.

    ReplyDelete
  3. ಸುನಾಥ ಅವರಿಗೆ ಹುಬ್ಬಳ್ಳಿತಿನಿಸುಗಳ ಬಗ್ಗೆಹೆಚ್ಚಿಗೆ ಹೇಳುವುದು ಬ್ಯಾಡ ಅನಸ್ತದ ಆದ್ರ ಪರಾಂಜಪೆ ಅವರ ನಿಮ್ಮ ಅಂದರ
    "ಈ ಬೆಂಗಾಡೆಂಬ ಬೆಂಗಳೂರಿನವರ" ಹೊಟ್ಟೆ ಉರಿಸಬೇಡಿ ಎಂದಿರುವಿರಿ...ನಾನೂ ಇಲ್ಲಿದ್ದು ಎರಡು ವರ್ಷಾತು ಇಲ್ಲಿಜನರಿಗೆ
    ರುಚಿ ಇಲ್ಲ ಅದೇ ವಿದ್ಯಾರ್ಥಿ ಭವನ ನಾ ಒಮ್ಮೆ ಮಾತ್ರ ಹೋಗಿದ್ದೆ ...ಇರಲಿ ಮುಂದ ಅದರ ಬಗ್ಗೆನೇ ಬರ್ಯಾವಿದ್ದೇನಿ...

    ReplyDelete
  4. ಹೌದ್ರೀ... ನಂ ಹುಬ್ಬಳ್ಳಿ ತಿಂಡಿ ತಿನಿಸಿನ ರುಚೀನೆ ಬ್ಯಾರೆ ನೋಡ್ರೀ.. ಇದ್ದದ್ದರಾಗ ರಾಜಾಜಿನಗರದ ನಳಪಾಕ ಹೊಟೆಲ್ ದಾಗ ನಂ ಕಡೆಯವು ಐಟಮ್ಸ್ ಸಿಗ್ತಾವ್ ನೋಡ್ರೀ... ಉಳಿದದ್ದೆಲ್ಲ ಬಾರೆ ನಾರ್ತ್ ಇಂಡಿಯನ್ ಐಟಮ್ಸ್ ರೀ

    ReplyDelete
  5. really very good write-up sir!

    ReplyDelete
  6. ಚೆನ್ನಾಗಿದೆ. ಮತ್ತೆ ಏನರ ನಮುಗೂ ಕೊಡ್ರಲ್ಲ ನೀವು ಒಬ್ಬರೇ ತಿನಬೇಕು ಅಂತ ಅದ ಏನು?.

    ReplyDelete