Saturday, May 23, 2009

ರಾಧೆ ಹೇಳಿದ್ದು...

ಕ್ರಿಷ್ಣ ನೀ ಹೀಗೆ ಅಂತ ನಾ ತಿಳಿದಿರಲಿಲ್ಲ
ನಿನ್ನ ತಲೆಮೇಲೆ ಕಿರೀಟ ಇದೆ ಎಂದ ಮಾತ್ರಕ್ಕೆ
ರಾಧೆ ನಿನ್ನ ನೋಡುವ ರೀತಿ
ಬದಲಾಯಿಸಬೇಕೆಂದಿದೆಯೆ...?
ನಿನ್ನ ದೂತ ಉದ್ಧವ ಹೇಳುತ್ತಾನೆ
ಅವನ ಮರೆ ವ್ಯಾಮೋಹ ತ್ಯಜಿಸು ಎಂದು...!

ನಿಜ ಆ ಗಳಿಗೆಯಲ್ಲಿ ಕಾಲು ನಿನ್ನೆಡೆಗೆ
ಸೆಳೆದಿದ್ದವು...
ಬಳಸಿದ ಗಂಡನ ಕೈ ಕಿತ್ತೆಸೆದು ಬರುವ ಜೋರಿತ್ತು..
ದಾಹವದು ಬತ್ತದ ತೊರೆ ತೀರದ ತುಡಿತ
ಯಮುನೆಯ ಮರುಳು ನನ್ನ ಅನೇಕ ಬಳೆಗಳ
ಚೂರು ಜೀರ್ಣಿಸಿಕೊಂಡಿತ್ತು...
ಹಬ್ಬಿ ಹರಡಿದ ಮಲ್ಲಿಗೆ ಚಪ್ಪರ ಹೂ
ತೊನೆಯುತ್ತಿತ್ತು....

ಈಗ ಬರಿ ನಿನ್ನ ನೆನಪಿನ ಛಾಯೆ ಮಾತ್ರ
ಉಳಿದಿದೆ ಆದರೆ ಅದರ ಮೇಲೂ ನಿನ್ನ ಕಣ್ಣೇಕೆ...
ಹೇಳು ಕ್ರಿಷ್ಣ ಈ ವೇದಾಂತಿಯ ಸೋಗೇಕೆ...
ನಿನ್ನ ನೆನಪ ಸುರತದಲ್ಲೂ ವೈರಾಗ್ಯದ ಛಾಯೆ
ನುಸುಳಲೇಕೆ...
ನಿಜ ಹೇಳಲೇ... ನಿನ್ನ ನೆನಪು ಕೆಂಡಕ್ಕೆ ಬೂದಿ
ಮುಚ್ಚಿದಂತಿದೆ...ಅದ ಕಿತ್ತುಕೊಳ್ಳ ಬೇಡ
ಗಂಡ ಪಕ್ಕದಲ್ಲಿದ್ದರೂ ಅದು ಹಚ್ಚುವ
ಶಾಖದ ಮಜವೇ ಬೇರೆ.....

--------------------------------------------------------------------------------------------------------------------------------------------------

ನಾ ಮೊದಲೆ ಹೇಳಿ ಬಿಡುವೆ... ಮನು ಅವರು ಬರೆದ ಕತೆ ಇದಕ್ಕೆ ಪ್ರೇರಣೆ... ನಿಜವಾಗಿಯೂ ಆ ರಾಧೆ ಯ
ಭಾವನೆ ಹೇಗಿತ್ತು ನನಗೆ ಗೊತ್ತಿಲ್ಲ..... ಈ ರಾಧೆ ನನ್ನ ಕಲ್ಪನೆಯ ಕೂಸು ಮಾತ್ರ.

2 comments:

  1. ಮಸ್ತ್ ಆಗಿದೆ ಕವನ.....
    ರಾಧೆಯ ತುಡಿತದ ಭಾವ ಚೆನ್ನಾಗಿ ವ್ಯಕ್ತವಾಗಿದೆ...

    ಅಭಿನಂದನೆಗಳು...

    ReplyDelete
  2. ದೇಸಾಯರ,
    ಈ ರಾಧಾ ಕಲ್ಪನೆಯ ಕೂಸs ಆಗಿರಲಿ, ಅವಳ ಭಾವನಾ ಮನಸ್ಸಿಗೆ ತಟ್ಟೋ ಹಂಗ ಬರದೀರಿ. ಕಿರೀಟದ ಕೃಷ್ಣನ ಮ್ಯಾಲೆ ಸಿಟ್ಟು ಬರತದ ನೋಡರಿ!

    ReplyDelete