Sunday, May 17, 2009

ಚುನಾವಣೆ---ಪರಿಣಾಮ

ಪರಿಣಾಮ ಹೊರಬಂದಿದೆ ಮತದಾರ ಮತ್ತೊಮ್ಮೆ ತನ್ನ ಪ್ರಭುತ್ವ ತೋರಿದ್ದಾನೆ.. ಯಾವ ಜಾತಿ,ಧರ್ಮ,ರಾಮ
ಮಸೀದಿ ಅವನ ಮೇಲೆ ಪರಿಣಾಮ ಬೀರಿಲ್ಲ. ಅವನಿಗನಿಸಿದ್ದನ್ನು ನೇರವಾಗಿ ಹೇಳಿದ್ದಾನೆ ಅವನ ನೇರ ನುಡಿ ಹಲವ
ರನ್ನು ಬೆಚ್ಚಿ ಬೀಳಿಸಿದೆ...ಹಲವರಿಗೆ ಖುಷಿ ಕೆಲವರಿಗೆ ಕಳವಳ. ಈ ಪರಿಣಾಮ ಯಾಕೆ ಹೀಗೆ ಬಿಜೆಪಿ ತಲೆ ಕೆಡಿಸಿ
ಕೊಂಡಿದೆ ಆದರೇನು ಕೈ ಮೀರಿ ಹೋಗಿದೆ....

ನಾ ಇಲ್ಲಿ ಕೆಲ ವಿಷಯ ಚರ್ಚಿಸುತ್ತೇನೆ ನನ್ನ ನಿಲುವಲ್ಲಿ ಈ ಕೆಳಗಿನ ಸಂಗತಿಗಳು ನಿರ್ಣಾಯಕ ಎನ್ನಿಸಿದವು.

೧) ರಾಹುಲ್ ಗಾಂಧಿ:
-------------
ಈ ಹುಡುಗ ಬೆಳೆದು ನಿಂತ ಪರಿ ಹಲವು ಹಿರಿಯರ ನಿದ್ದೆ ಕೆಡಿಸಿದೆ. "ಈ ದೇಶದ ರಾಜಕೀಯ ಬದಲಾಯಿಸುವೆ " ಇದು ಅತ ಹೇಳಿದ ಮಾತು ಆದರೆ ಹೇಳಿದ್ದನ್ನು ಮಾಡಿ ತೋರಿಸಿದ್ದಾನೆ.
ಅವನ ಜತೆ ಒಂದು ದಂಡೆ ಇದೆ ದೇವ್ರಾ, ಪೈಲಟ್ ,ಸಿಂಧ್ಯಾ ಹೀಗೆ ...ಈ ಯುವಕರ ಕಡೆ ದೇಶ ಆಶೆಯಿಂದ
ನೋಡುತ್ತಿದೆ. ರಾಹುಲ್ ನ ಪ್ರಭಾವ ಉತ್ತರ ಪ್ರದೇಶದಲ್ಲಿ ನಿಖರವಾಗಿ ಗೋಚರ ವಾಗುತ್ತದೆ. ಜಾತಿ, ಮತ
ಹೀಗೆ ಹರಿದು ಹಂಚಿ ಹೋದ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಅದರ ಫಲ ರಾಹುಲ್ ಗೆ ಸೇರಬೆಕು.
ಜನರ ಜೊತೆ ಅವ ಬೆರೆಯುತ್ತಿದ್ದ ರೀತಿ ಬರೀ ನಾಟಕ ವಾಗಿರಲಿಲ್ಲ... ಅವರು ಅವನಿಗೆ ವೋಟೂ ಹಾಕಿದರು..!
ರಾಹುಲ್ ಪ್ರಭಾವ ಸೋತು ಸುಣ್ಣವಾದ ಕಾಂಗ್ರೆಸ್ ಗೆ ಸಂಜೀವಿನಿ ಯಾಯಿತು.

೨) ಬಿಜೆಪಿಯ ಪ್ರಚಾರ:
---------------------
ಆದ್ವಾನಿ ಹೇಳಿದ್ದರು. ನನಗೆ ಅತಿ ಆತ್ಮವಿಶ್ವಾಸ ತೋರುತ್ತಿದೆ...ಆದರೆ ಅ ಪಕ್ಷದ
ಕಾರ್ಯಕರ್ತರು ಕಿವುಡಾಗಿದ್ದರು. ಮನಮೋಹನ್ ಸಿಂಗ್ ರ ಬಗ್ಗೆ ಆಡಿದ ಮಾತು ಅತಿಯಾಯಿತು.
ಆದಾಯ ತೆರಿಗೆಯಲ್ಲಿ ವಿನಾಯಿತಿ, ಸ್ವಿಸ್ ಹಣ ಈ ದೇಶದ ಸಾಮಾನ್ಯರಿಗೆ ಅಪಥ್ಯ ವಾಯಿತು.ಯಾಕೋ ಈ ಸಲ ಬಿಜೆಪಿ ವೈಯುಕ್ತಿಕ ನಿಂದನೆ ಬಿಟ್ಟು ಹೊರಬರಲೇ ಇಲ್ಲ. ಕಸಬ್,ಅಫಜಲ್ ಗುರು ಬಗ್ಗೆ ತಳೆದ ಧೋರಣೆ
ಸಹ ಜನರಿಗೆ ಮುಟ್ಟಲಿಲ್ಲ.ಬಹುಷಃ ಎರಡನೇ ಪೀಳಿಗೆ ನಾಯಕರಿಲ್ಲದ ಕೊರತೆ ಆ ಪಕ್ಷಕ್ಕೆ ದೊಡ್ಡ ಏಟು ನೀಡಿದೆ. ಪ್ರಮೋದ್ ಮಹಾಜನ್ ಇಲ್ಲವಾದ ಮೇಲೆ ಆ ಜಾಗೆ ತುಂಬಲು ಪ್ರಯತ್ನ ಸಹ ಮಾಡಲಿಲ್ಲ...!

೩)ಲೆಫ್ಟ್ ಗೆ ರೈಟ್ :
----------------
ಈ ದೇಶಕ್ಕೆ ದೊಡ್ಡ ಪಿದುಗು ಈ ಕಮ್ಯುನಿಸಂ. ಅವರದೇ ಪರಿಧಿಯಲ್ಲಿ ಸುತ್ತುತ್ತ ತನ್ನ ಸುತ್ತಲೂ ಇರುವವರನ್ನೂ ಬೆಳೆಯಗೊಡದ ಇವರ ಧೋರಣೆಗೆ ಒಂದು ಅಂತ್ಯ ಹಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಾಗಿದೆ.
ಇನ್ನು ಮಮತಾ ಕಮಾಲ್ ತೋರಿಸಿದರಾಯಿತು ಆ ಬಂಗಾಲದಿಂದ ಬಂಗಾಳಕೊಲ್ಲಿಗೆ ವರ್ಗಾವಣೆ ಆಗುತ್ತಾರೆ
ಕಮ್ಯುನಿಸ್ಟರು.

೪)ಯಾವ ಮುದ್ದಾ....?
-----------
ಈ ದೇಶದ ಮತದಾರ ಏನನ್ನು ನೋಡಿ ಮತಹಾಕಿದ. ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಮುಖ್ಯವಾಗಿ
ಯುವಜನತೆಗೆ ಬೇಕಾಗಿದ್ದು ಕೈ ತುಂಬ ಕೆಲಸ, ನಾಳಿನ ಮಕ್ಕಳ ಭವಿಷ್ಯ. ಕಟ್ಟುಪಾಡು ಅವರಿಗೆ ಬೇಕಿಲ್ಲ
ಕಾಂಗ್ರೆಸಿಗರ ಅದರಲ್ಲೂ ಯುವ ನೇತಾರರ ಜೀವನಶೈಲಿ ಅವರಿಗೆ ಆಕರ್ಷಕವಾಗಿ ಕಂಡಿದೆ. ರಾಮ, ಮಸೀದಿ
ಅವರಿಗೆ ಈಗ ಆಕರ್ಷಣೆಯ ವಸ್ತುವಾಗಿ ಉಳಿದಿಲ್ಲ... ಈ ನಿಜ ಅರಿತ ಪಕ್ಷ ಮಾತ್ರ ಉಳಿಯಬಲ್ಲದು
ಬೆಳೆಯಬಲ್ಲದು.....!

ಈ ಚುನಾವಣೆ ನಮ್ಮ ರಾಜ್ಯದ ಮೇಲೆ ಯಾವ ಪರಿಣಾಮ ಬೀರಬಲ್ಲದು ಹತ್ತೊಂಬತ್ತು ಸಂಸದರು ವಿರೋದ ಸಾಲಿನಲ್ಲಿ ಕೂಡುವ ಅನಿವಾರ್ಯತೆ ಒಂದು ವೇಳೆ ಕಾಂಗ್ರೆಸ್ ತನ್ನ ಹಳೇ ಚಾಳಿ ಮುಂದುವರೆಸಿ ಈ ರಾಜ್ಯಕ್ಕೆ ಅನ್ಯಾಯ ಮುಂದುವರೆಸಿದ್ದೇ ಆದಲ್ಲಿ ಈ ರಾಜ್ಯದಿಂದ ಅದು ಹೆಸರಿಲ್ಲದೇ ಅಳಿಸಿಹೋಗುತ್ತದೆ
ಹಾಗೆಯೇ ಕಾಂಗ್ರೆಸ್ ನಿಂದ ಆರಿಸಿಹೋದ ಆರೂ ಜನ ಈ ಕರ್ನಾಟಕಕ್ಕೆ ನ್ಯಾಯವಾಗಿ ಸಿಗುವ ಸವಲತ್ತುಗಳಿಗಾಗಿ ಹೊಡೆದಾಡಬೇಕು...!

3 comments:

 1. ಜನತೆಗೆ ಕಿಚಡಿ ಸರಕಾರ ಬೇಕಾಗಿರಲಿಲ್ಲ.
  ಆದುದರಿಂದ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಈ ಎರಡು ಪಕ್ಷಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿತ್ತು. ಬಹುಶ: ಅಲ್ಪಸಂಖ್ಯಾತರು ಸಂಪೂರ್ಣವಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿರಬೇಕು.
  ರಾಹುಲ ಗಾಂಧಿಯ youthly imageನಿಂದ ಪ್ರಭಾವಗೊಂಡಿರಬಹುದು. ಆದರೆ ಅದು ಕೇವಲ image ಅನ್ನುವದನ್ನು ಅರಿಯದೆ ಜನ ವೋಟು ಹಾಕಿರಬಹುದು.
  ಬಿಜೆಪಿಯ ಮುದ್ದಾಗಳನ್ನು ಜನತೆ ಒಪ್ಪಿಕೊಳ್ಳಲಿಲ್ಲ ಎನ್ನುವ ನಿಮ್ಮ ವಿಶ್ಲೇಷಣೆ ಸರಿಯಾಗಿದೆ.

  ReplyDelete
 2. ಧನ್ಯವಾದಗಳು ಸುನಾಥ ಸರ್ ಒಟ್ಟಿನಲ್ಲಿ ಹಳೆಯ ಘಟನೆಯಿಂದ ಮತದಾರ ಪಾಠ ಕಲೆತಿದ್ದಾನೆ....!

  ReplyDelete
 3. ಏನ್ರಿ ಇದು, ಕೆ೦ಪಾದವೋ ಎಲ್ಲ ಕೆ೦ಪಾದವೋ

  ReplyDelete