Wednesday, April 15, 2009

ಲಲ್ಲು ಯಾರು?

ಹೌದು ಲಾಲೂ ಕಂಗಾಲಾಗಿದ್ದಾರೆ...ಮೊದಲಬಾರಿ ನಡುಗುತ್ತಿದ್ದಾರೆ...ರಾಜ್ಯದಲ್ಲಿರುವ ಬಿಹಾರಿಗಳನ್ನು ಬೇರೆ ಬೇರೆ ರೇಲ್ವೆzoneಗಳಲ್ಲಿ
ತುರುಕಿಯೂ ಅವರು ಹೆದರಿದ್ದಾರೆ ಅಂದರೆ ಪ್ರಬಲವಾದ ಆಯುಧವೇ ಎದುರಾಳಿಗಳ ಕಡೆ ಇರಬೇಕು. ಆ ಆಯುಧವೇ ಅಭಿವೃದ್ದಿ ಎಂಬ ಸಂತಸದ ಸಂಗತಿ ನಿಜ ನಿತೀಶ್ ಕುಮಾರ್ ಅಸಾಧ್ಯವಾದದ್ದನ್ನು ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.... ಮೊದಲ ಸಲ ಮುಖ್ಯ
ಮಂತ್ರಿ ಆದಾಗ ಬಿಹಾರದ ರಸ್ತೆ ಗಳನ್ನು ಹೇಮಾಮಾಲಿನಿಯ ಕೆನ್ನೆ ಮಾಡುವುದಾಗಿ ಹೇಳಿದ್ದ ಲಾಲೂ ಈಗ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಂತೆಯೇ ನಿದ್ದೆಯಲ್ಲಿದ್ದ ಪಾಸವಾನರನ್ನು ಅಪ್ಪಿ ಹಿಡಿದ ಲಾಲು ಒಂದುಕಾಲದ ವೈರಿ ಮುಲಾಯಂಜತೆಯೂ
ಹುಂ ಗುಟ್ಟಿದ್ದಾರೆ...ನಿನ್ನೆ ತಾನೇ ಲೆಫ್ಟ ಸಹ ರೈಟ್ ಎಂದಿದ್ದಾರೆ.
ಮೇಲಿನ ಬೆಳವಣಿಗೆ ನೋಡಿದ್ರೆ ಲಾಲೂಗೆ ಸೋಲಿನ ಭೀತಿ ಇದೆ. ಹೋದಸಾರಿ ೨೨ ಸೀಟು ಗೆದ್ದು ಅಧಿಪತ್ಯ ಚಲಾಯಿಸಿದ ಲಾಲೂಗೆ
ಮುಂದಿನ ದಿನಗಳು ಒಳ್ಳೆಯವೋ ಕೆಟ್ಟದ್ದೋ ಗೊತ್ತಿಲ್ಲ ಹೀಗಾಗಿ ಊಹಿಸಲಾರದ ನಡೆ ಯಿಡುತ್ತಿದ್ದಾರೆ. ಈ ನಡೆಗಳು ಮುಂದೆ ಅವರಿಗೇ ಮುಳುವು ಆಗಬಹುದು ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಈಗಿನ ಪರಿಸ್ಥಿತಿ ಲಾಲೂಗೆ ಹೊಸದು
ರಾಜ್ಯದಲ್ಲಿ ವಿರೋಧಿ ಆಡಳಿತ ಇದೆ ಆಯಕಟ್ಟಿನ ಜಾಗೆಗಳಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ನೇಮಿಸುವಂತಿಲ್ಲ ತಾನೇ ಹಾಲೆರೆದ ಭಾವ ಮೈದುನ ಸಹ ಸಡ್ಡುಹೊಡೆದು ನಿಂತಿದ್ದಾನೆ. ಮುಖ್ಯವಾಗಿ ಕಾಂಗ್ರೆಸ ಚುನಾವಣೆಯ ನಂತರ ಲಾಲೂನ ಜತೆ
ಯಾವ ರೀತಿ ಸಂಭಂದ ಇಟ್ಟುಕೊಳ್ಳಬಹುದು ಇದು ಚರ್ಚೆಯ ವಿಷಯ. ಹಾಗೆಯೇ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಾಲೂಗೆ ಮತ್ತೆ ಜೈಲೂಟ ಗ್ಯಾರಂಟಿ.... ಒಟ್ಟಿನಲ್ಲಿ ಲಾಲೂನ ಪರಿಸ್ಥಿತಿ ನಾಜೂಕಾಗಿದೆ....

1 comment: