Sunday, November 25, 2012

ನುಡಿಶಿರಿ---೨೦೧೨--೩ ದಿನ..


 ಹೋಗುವ ಮೊದಲು ಅಳುಕಿತ್ತು ಮುಖ್ಯವಾಗಿ ಈ ಸಾಹಿತ್ಯಸಮ್ಮೇಳನ ಎಲ್ಲಾ ದೊಡ್ಡವರ ತಲುಬುಗಳು
ಮುಖ್ಯವಾಗಿ ಅಲ್ಲಿ ನಡೆಯೋ ಒಣ ಚರ್ಚೆಗಳು, ಗೋಷ್ಠಿಗಳು ಎಂದೂ ಜಾರಿಯಾಗದ ನಿರ್ಣಯಗಳು
ಊಟ, ವಸತಿಯ ಅಧ್ವಾನಗಳು ಹೀಗೆ ಎಲ್ಲತರಹದ ಕೆಟ್ಟ ಸಂಗತಿಗಳನ್ನೇ ಕೇಳಿದ್ದೆ ಇವೆಲ್ಲ ಒಂಥರಾ
ಹಿಂಜರಿಕೆ ಉಂಟುಮಾಡಿದ್ವು. ಅಳುಕುತ್ತಲೆ ಆಳ್ವಾಸ್ ನುಡಿಸಿರಿಗೆ ಬಂದಿಳಿದಿದ್ದೆ. ಮೂಡಬಿದ್ರೆ ಊರಿನ
ಹೊರಗೆ ಗುಡ್ಡದ ಮೇಲೆ ಒಂದು ಶಿಕ್ಷಣರಾಜ್ಯವನ್ನು ಅವರು ಸ್ಥಾಪಿಸಿದ್ದಾರೆ ಅಲ್ಲಿ ಏನೇನೆಲ್ಲ ಕಲಿಸುತ್ತಾರೆ
pg ಯಿಂದ ಹಿಡಿದು highschool ವರೆಗೆ. ಅದೆಷ್ಟು ವಿದ್ಯಾರ್ಥಿಗಳು ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಡಾ.ಮೋಹನ್ ಆಳ್ವ ೯ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ನುಡಿಸಿರಿಯ
ಐಸಿರಿ ಹೊನ್ನಿಗೆ ಕಳಶವಿಟ್ಟಂತೆಇದೆ.

ಅಚ್ಚುಕಟ್ಟುತನ ಈ ಪದಕ್ಕೆ ಹೊಸಮೆರುಗು ನುಡಿಸಿರಿಯಲ್ಲಿ ನೋಡಲಿಕ್ಕೆ ಸಿಕ್ಕಿತು. ವೇದಿಕೆಮೇಲೆ
ಅನವಶ್ಯಕ ಗದ್ದಲವಿಲ್ಲ.ಗೋಷ್ಠಿಗಳಲ್ಲಿ ಭಾಗವಹಿಸುವವರು ನಿಯಮಕ್ಕನುಸಾರವಾಗಿ ನಿರ್ಧಾರಿತ
ವೇಳೆಗೆ ತಮ್ಮ ಮಾತು ಮುಗಿಸಲೇಬೇಕು. ಮೂರುದಿನದಲ್ಲಿ ಒಮ್ಮೆಯಾದರೂ ಭಾಷಣಕಾರರ
ಉತ್ಸಾಹದಿಂದ ವೇಳೆಮೀರಿದ್ದು ಇಲ್ಲ. "ಕನ್ನಡ ಮನಸ್ಸು: ಜನಪರ ಚಳುವಳಿಗಳು.." ಈ ಸಲದ
ನುಡಿಸಿರಿಯ ವಿಶಯ ಆಗಿತ್ತು. ನಾಡೋಜ ನಿಸಾರಅಹ್ಮದ್ ಅಧ್ಯಕ್ಷತೆಯಲ್ಲಿ ನುಡಿಸಿರಿ ನಡೆಯಿತು.
ಅನಂತಮೂರ್ತಿ ಉದ್ಘಾಟಕರಾಗಿದ್ದರು. ಮೊದಲದಿನ ಟ್ರೇನು ಲೇಟಾಗಿತ್ತು ಮೂಡಬಿದ್ರೆಗೆ ಹೋಗುವ
ಷ್ಟರಲ್ಲಿ ಮೆರವಣಿಗೆ,ಉದ್ಘಾಟನೆ ಮುಗಿದು ಹೋಗಿತ್ತು ಸಿಂಗರಿಸಿದ ಪಲ್ಲಕ್ಕಿಯಲ್ಲಿ ನಿಸಾರ್ ರನ್ನು ಕೂಡಿಸಿ
ಮೆರವಣಿಗೆ ಮಾಡಿದ್ದರಂತೆ. ಅಂದೇ ನಾಡಿನ ಶತಾಯುಷಿ ಜೀವಿ ಅವರಿಗೆ ವಿರೇಂದ್ರ ಹೆಗ್ಗಡೆಅವರಿಂದ
ಸನ್ಮಾನವೂ ಇತ್ತು.

ಚಳುವಳಿ ವಿಷಯವಾಗಿತ್ತು ಅಂದೆನಲ್ಲ...ಮಾತಾಡುವವರಿಗೆ ವೈವಿಧ್ಯವಾದ ವಿಷಯಗಳನ್ನು
ಕೊಡಲಾಗಿತ್ತು.ಮಾತಾಡುವವರ ಆಯ್ಕೆಯೂ ರೆಲೆವಂಟ್ ಆಗಿತ್ತು. ಉದಾ, ಹೇಳುವುದಾದರೆ ಪರಿಸರದ
ಬಗ್ಗೆ ಮಾತನಾಡಲು ಸುರೇಶ್ ಹೆಬ್ಳಿಕರ್ ,ರೈತಸಮಸ್ಯೆಗೆ ಚುಕ್ಕಿ ನಂಜುಂಡಸ್ವಾಮಿ ಹೀಗೆ ಆಯಾ
ಕ್ಶೇತ್ರದಲ್ಲಿ ಅನುಭವ ಹೊಂದಿದವರೇ ಮಾತಾಡಿದರು.ನಾನು ಇಂತಹ ಒಂದು ಚರ್ಚೆಯನ್ನು ಹೇಳಬಯಸುವೆ
ಉದಾಹರಣೆಯಾಗಿ. ನಾಟಕ, ಸಿನೇಮಾ ಮತ್ತು ಮಾಧ್ಯಮಗಳಲ್ಲಿ ಬದಲಾವಣೆ ಹೇಗಾಗುತ್ತಿವೆ ಅಲ್ಲಿಯ ಈಗಿನ
ಸ್ಥಿತಿಗತಿ ಹೇಗೆ ಎಂಬುದಾಗಿತ್ತು. ಸುಮಾರು ಒಂದು ಗಂಟೆ ಕಾಲಾವಕಾಶದ್ದು ಮಾತಾಡಿದ್ದು ಘಟಾನುಘಟಿಗಳು
ರಂಗಭೂಮಿ ಯ ರಘುನಂದನ್, ಸಿನೇಮಾದ ಗಿರೀಶ್ ಕಾಸರವಳ್ಳಿ ಮಾಧ್ಯಮದ ಬಗ್ಗೆ ನಿರಂಜನ ವಾನಳ್ಳಿ.
ರಘುನಂದನ್ ಹೇಳಿದ ಮಾತು ಮನಸ್ಸಿಗೆ ನಾಟಿತು, ಎಪ್ಪತ್ತು ಎಂಬತ್ತರ ದಶಕದಲ್ಲಿ ರಂಗಭೂಮಿ ಅಲ್ಲಿಯ
ಸ್ವರೂಪ ಕ್ರಾಂತಿಕಾರಿ ನಾಟಕಗಳು ಮುಂತಾದವುಗಳ ಬಗ್ಗೆ ಹೇಳಿದರು. ಉದಾರೀಕರಣ ಶುರುವಾದಾಗಿನಿಂದ
ಹೇಗೆ ಚಳುವಳಿಗಳು ಸಾಯುತ್ತಿವೆ..ಹೇಗೆ ರಂಗಭೂಮಿ ನಶಿಸುತ್ತಿದೆ ಇತ್ಯಾದಿ. ಅವರು ಮುಂದುವರೆಯುತ್ತ ಹೇಳಿದ
ಮಾತಿದು "ಮೊದಲಾದರೆ ವೈರಿಯಾರು ಯಾರವಿರುದ್ಧ ಚಳುವಳಿ ಮಾಡಬೇಕು ಅನ್ನೋದು ಅರಿವಿತ್ತು ಈಗ ವೈರಿ
ನಮ್ಮ ಎದೆಯಲ್ಲಿಯೇ ಇದ್ದಾನೆ ಹೀಗಾಗಿ ನಮ್ಮ ವಿರುದ್ಧವೇ ನಾವು ಹೇಗೆ ಹೋರಾಡುವುದು.." ಈ ಯಡ್ಯೂರಪ್ಪ.
ಮನಮೋಹನ್, ಮಾಂಟೆಕ್ ಅಹ್ಲುವಾಲಿಯಾ ಇತ್ಯಾದಿ ನಮ್ಮ ಒಳಗನ್ನು ಆಕ್ರಮಿಸಿಕೊಂಡಿದ್ದಾರೆ..ಹೇಗೆ
ನಾವು ನಿಧಾನವಾಗಿ ಕೊಳ್ಳುಬಾಕತನಕ್ಕೆ ಬಲಿಯಾಗುತ್ತಿದ್ದೇವೆ . ಕಾಸರವಳ್ಳಿ ಒಳ್ಳೆಯ ಅವಾರ್ಡು ಗಳಿಸಿದ
ಸಿನೇಮಾಗಳು ಹೇಗೆ ಥಿಯೇಟರ್ ಸಮಸ್ಯೆ ಎದುರಿಸುತ್ತಿವೆ ಹೇಗೆ ನಮ್ಮ ಕನ್ನಡ ಸಿನೇಮಾ ತಮಿಳರ ತೆಲುಗರ
ಹತೋಟಿಯಲ್ಲಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.ಇಲ್ಲಿ ಇನ್ನೊಂದು ಕಾರ್ಯಕ್ರಮವಿತ್ತು. ಅದೇ ಕವಿಸಮಯ. ಹಲವು ಪ್ರಸಿದ್ಧ ಕವಿಗಳು ತಮಗೆ ಮೀಸಲಾದ
ಇಪ್ಪತ್ತು ನಿಮಿಷದಲ್ಲಿ ತಮ್ಮ ಕಾವ್ಯಕ್ಕೆ ಪ್ರೇರಣೆಯಾದ ಸಂಗತಿ ಹೇಳಿ ತಮ್ಮದೇ ಕವಿತಾವಾಚನ ಮಾಡಬೇಕಾಗಿತ್ತು
ಕೊನೆಗೆ ಅವರು ರಚಿಸಿದ ಒಂದು ಕವಿತೆಗೆ ರಾಗಸಂಯೋಜಿಸಿ ಗಾಯಕ್/ಗಾಯಕಿ ಹಾಡುತ್ತಿದ್ದ್ರು. ಅನೇಕ ಹೆಸರಾಂತ
ಕವಿಗಳ ಅನುಭವ/ಹಾಡು ಕೇಳಲು ಸಿಕ್ಕವು. ಸಂಧ್ಯಾದೇವಿ, ವಿಷ್ಣು ನಾಯ್ಕ. ಜಿನದತ್ತ ದೇಸಾಯಿ ಹಾಗೆಯೇ
ಬಸು ಬೇವಿನಗಿಡದ. ಅಂತೆಯೇ ಕಥಾಸಮಯವೂ ಇತ್ತು .ಅಮರೇಶ್, ಕುಂವೀ, ದಿವಾಕರ್ ಮೊದಲಾದ ಖ್ಯಾತ
ಲೇಖಕರು ತಮ್ಮ ಅನುಭವ ಹಂಚಿಕೊಂಡರು.ಕೇವಲ ಸಾಹಿತ್ಯಅಲ್ಲ ಮುಂಜಾನೆ, ಮಧ್ಯಾಹ್ನ ರಂಜಿಸಲು
ಗಾಯಕ ಗಾಯಕಿಯರು ಸೇರಿದ್ರು ಮೇವುಂಡಿ, ಶೇಶಗಿರಿ ದಾಸ್ ಹೀಗೆ ಹಲವರು ಸಂಗೀತ ಸುಧೆ ಉಣ್ನಿಸಿದರು..
ಸಂಜೆ ಆರಾಗುತ್ತಿರುವ ಹಾಗೆಯೇ ವಿವಿಧ ಸಂಸ್ಕ್ರತಿಯ ಅನಾವರಣ ಆಗುತ್ತಿತ್ತು ಯಕ್ಷಗಾನ, ಭರತನಾಟ್ಯ,
ಹರಿಕಥೆ ಹೀಗೆ..

ಅಲ್ಲಿ ಒಟ್ಟು ಐದು ವೇದಿಕೆಗಳಿದ್ದವು ಒಂದರಲ್ಲಿ ನೃತ್ಯ, ಮತ್ತೊಂದರಲ್ಲಿ ಯಕ್ಷಗಾನ, ಮತ್ತೊಂದರಲ್ಲಿ
ಸುಗಮ ಸಂಗೀತ ಹೀಗೆ ಒಂದಕ್ಕಿಂತಾಒಂದು ಭಿನ್ನ ಮತ್ತು ಉತ್ತಮ . ನಾ ಯಕ್ಷಗಾನ ನೋಡಿ ಬಹಳ ದಿನ
ಆಗಿದ್ವು ಸಾಲಿಗ್ರಾಮ್ ಬಾಲಕಲಾವಿದರು ಪ್ರಸ್ತುತಪಡಿಸಿದ ವೀರ ವೃಷಸೇನ ಪ್ರಸಂಗ ಕಳೆ ಕಟ್ಟಿತ್ತು. ಬಾಲ ಕಲಾವಿದರೇ
ಅಭಿನಯಿಸಿದ್ದರು. ಇನ್ನು ನಮ್ಮ ಹುಬ್ಬಳ್ಳಿ-ಧಾರವಾಡ ಪ್ರತಿಭೆಗಳೂ ಭರತನಾಟ್ಯ ಪ್ರದರ್ಶನ ನೀಡಿದರು..
ಧಾರವಾಡದ ಹುಡುಗಿ ಸೃಷ್ಟಿ ಕುಲಕರ್ಣಿ ಐವ್ವತ್ತು ನಿಮಿಷ ರಂಜಿಸಿದಳು.

ಮೂರುದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ,ರಾತ್ರಿಯ ಊಟ ಸೊಗಸಾಗಿತ್ತು. ವ್ಯವಸ್ಠೆ ಸರಿಯಗಿದ್ರೆ
ಜನ ನೂಕು ನುಗ್ಗಲು ಮಾಡೊಲ್ಲ ಅನ್ನುವುದಕ್ಕೆ ಇಲ್ಲಿನ ಉತ್ತಮ ವ್ಯವಸ್ಥೆ ಸಾಕ್ಷಿಆಗಿತ್ತು.

ಇದೆಲ್ಲದರ ನಡುವೆ ಒಂದು ತಮಾಷೆಯೂ ಇತ್ತು. ತುಮಕೂರಿನ ನುಡಿಸಿರಿ ಘಟಕದವರಿಗೆ ದಾ. ಮೋಹನ್ ಆಳ್ವ
ಅವರನ್ನು ಸನ್ಮಾನಿಸುವ ಆಸೆ ವೇದಿಕೆ ಮೇಲೆ ಸುಮಾರು ಹದಿನೈದು ಜನಹೋದ್ರು..ಫೋಟೋಗಳಿಗೆ
ಹಲ್ಕಿರಿದರು. ಅದೇನೋ ಅಂತಾರಲ್ಲ..ಪಾಪಿ ಗಂಗೆಗೆ ಇಳಿದ್ರೂ ನೀರು ಮೊಣಕಾಲಮಟಾ ಅಂತ...ಇಂಥಾವ್ರು
"ಜೈನಕಾಶಿ"ಗೆ ಬಂದ್ರೂ ಬುದ್ಧಿ ಮೊಣಕಾಲು ಏರುವುದಿಲ್ಲ....


8 comments:

 1. ಮಹಾಭಾರತದಲ್ಲಿ ಸಂಜಯ ಯುದ್ಧ ಭೂಮಿಯ ದೃಶ್ಯಗಳನ್ನು ಹೇಳಿದಂತೆ ಭಾಸವಾಯಿತು...300-400ಕಿ.ಮಿ. ದೂರದಲ್ಲೇ ಕುಳಿತು ನುಡಿಯ ಐಸಿರಿಯಾ ಬಗ್ಗೆ ಬಿಡಿ ಬಿಡಿಯಾಗಿ ವಿಸ್ತರಿಸಿದ ನಿಮ್ಮ ಲೇಖನ ಸೊಗಸಾಗಿದೆ..ಚಿತ್ರಗಳು ಸೊಗಸಾಗಿ ಮೂಡಿಬಂದಿವೆ..ನಿಮ್ಮ ಅನುಭವ ಪ್ರವಾಸಿ ಕಥಾನಕ ಹಂಚಿಕೊಂಡದಕ್ಕೆ ಧನ್ಯವಾದಗಳು ಉಮೇಶ್ ಸರ್

  ReplyDelete
 2. ದೇಸಾಯಿಯವರೆ...

  ದಕ್ಷಿಣ ಕನ್ನಡ ಜಿಲ್ಲೆಯವರು ಸಂಘಟನೆಗಳಿಗೆ ಹೆಸರುವಾಸಿ....
  ಊಟ.. ತಿಂಡಿ ವಸತಿ ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುತ್ತಾರೆ...

  ಮುಖ್ಯವಾಗಿ...
  " ಇದು ನಮ್ಮದು " ಅಂತ ಅವರಲ್ಲೊಂದು ಹೆಮ್ಮೆಯನ್ನು ಕಾಣುತ್ತೇವೆ..
  ಆ ಭಾವನೆ ಬಹಳ ಮಹತ್ವದ್ದು...

  ಇಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ...

  ಬೇಡ ಬಿಡಿ.. ಅದೆಲ್ಲ..

  ನಿಮ್ಮ ಚಿತ್ರಲೇಖನ ಒಂದಕ್ಕೊಂದು ಪೂರಕವಾಗಿದೆ...
  ನೀವು ನನ್ನನ್ನು ಕರೆದಿದ್ರಿ...

  ಈಗ ಹೊಟ್ಟೆ ಉರಿತಾ ಇದೆ...

  ಹೊಟ್ಟೆ ಉರಿಸಿದ್ದಕ್ಕೆ ಧನ್ಯವಾದಗಳು...

  ReplyDelete
 3. ವಾಹ್..!! ಸರ್ ಈ ನುಡುಸಿರಿಯ ಬಗ್ಗೆ ಬಹಳಷ್ಟು ಕೇಳಿದ್ದೆ ಯಾವಾಗಲು ನಾವು ಹೋಗಬೇಕು ಎಂದುಕೊಳ್ಳುತ್ತಿದ್ದೆವು ಆದರೆ ಆಗುತ್ತಲೇ ಇರಲಿಲ್ಲ.. ನೀವು ನಮ್ಮನ್ನು ಅಲ್ಲಿಗೆ ಕರಿದುಕೊಂಡೋದಿರಿ. ಧನ್ಯವಾದಗಳು ಸರ್ ಚಿತ್ರಗಳ ಜೊತೆ ಪೂರಕ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  ReplyDelete
 4. ದಿವ್ಯ ಆಂಜನಪ್ಪNovember 25, 2012 at 1:08 AM

  ನಿಮ್ಮ ಲೇಖನದಲ್ಲಿನ ಚರ್ಚಾ ಕಾಂಡ ನನ್ನ ಮನ ಸೆಳೆದಿದೆ. ಹಾಗೆಯೇ ಕವಿಸಮಯ. ಇಂತಹ ಅದ್ಬುತ ಕಾರ್ಯಕ್ರಮಗಳಿಗೆ ನಾನು ವಂಚಿತಳಾಗುತ್ತಿರುವುದಕ್ಕೆ ಬೇಸರವಿದೆ, ನಿಮ್ಮ ಈ ಲೇಖನದ ಮೂಲಕ ನಮ್ಮನ್ನು ನುಡಿಸಿರಿಗೆ ಬೆಸೆದಿರುವುದಕ್ಕಾಗಿ ನಿಮಗೆ ಧನ್ಯವಾದಗಳು ಸರ್

  ReplyDelete
 5. ದೇಸಾಯರ,
  ನುಡಿಸಿರಿಯ ಸಿರಿಯನ್ನು ನಿಮ್ಮ ಲೇಖನದ ಮೂಲಕ ಸವಿದು ಖುಶಿಯಾಯಿತು.

  ReplyDelete
 6. Umesh,
  Thanks for sharing your experience. Nudisiri karyakrama prati varsha miss aaguttale ide, next year I should make it up. Lekhana chennaagide, happy to read your views.
  Roopa

  ReplyDelete
 7. ನುಡಿ ಸಿರಿಯ ಬಗೆಗೆ ಬಹಳ ಕೇಳಿದ್ದೆ. ನಿಮ್ಮ ಬರಹದಲ್ಲೂ ಚಿತ್ರದಲ್ಲೂ ಅದರ ಹಿರಿಮೆ ಮತ್ತೆ ಕಳೆ ಕಟ್ಟಿದೆ. ಇಂತಹ ಉತ್ಸವದಲ್ಲಿ ಭಾಗವಹಿಸಿ ಕಣ್ಣಾರೆ ಮನಸಾರೆ ಖುಷಿಪಟ್ಟ ನೀವೇ ಧನ್ಯ.

  ಗಾಯನ, ನೃತ್ಯ ಮತ್ತು ಯಕ್ಷಗಾನ ಹೀಗೆ ಹಲ ಪ್ರಕಾರಗಳಿಂದ ಮನೋತ್ತೇಜನ ಉಂಟು ಮಾಡುವ ಇಂತಹ ಕೂಟಗಳು ಆಗಾಗ ನಡೆಯುತ್ತಿರಬೇಕು.

  ಡಾ. ಆಳ್ವಾರಿಗೆ ನಮ್ಮೆಲ್ಲರ ನಮನ.

  ReplyDelete
 8. naanu 6 varshadinda mangalurinalle iddarU hogalaagalilla... nimma lekhana odi, khanDita mundina varsha hoguttene...

  ReplyDelete