ಹೌದು ಒಂದು ವರ್ಷದ ಕನಸು ಸಾಕಾರ ಆಗಿದ್ದಕ್ಕೆ ಖುಷಿ, ನಿರಾಳ ಭಾವ ಯಾವುದೋ
ಮಹತ್ತರ ಕೆಲಸ ಮುಗಿಸಿದಾಗಿನ ಭಾವ ಆವರಿಸಿತ್ತು. ಸುರುವಾತು ಸುಲಭ ಇರಲಿಲ್ಲ...
ಹೋದವರ್ಷ ಇಟಗಿ ಈರಣ್ಣ ಬರಲು ಒಪ್ಪಿದ್ರು ಮತ್ತು ನನ್ನ ಮಾರಿಷಸ್ ಪ್ರವಾಸದಿಂದ
ಅದು ರದ್ದಾಯಿತು. ಗೆಳೆಯ ಸತೀಶ್, ಹೆಗಡೇಜಿ ಇವರ ಒತ್ತಾಸೆಯ ಫಲ ಮತ್ತೊಮ್ಮೆ
ಕನಸು ಕಾಣಲು ಸುರು ಮಾಡಿದೆ. ಈರಣ್ಣ ಅವರಿಗೆ ಮೊದಲು ಪತ್ರ ಬರೆದೆ..ಕೇಳಿಕೊಂಡೆ
ಅವರು ಹೊಸಪೇಟೆಯಿಂದ ಶಿವಮೊಗ್ಗೆಗೆ ಶಿಫ್ಟ ಆಗಿದ್ರು..ಅವರು ಉತ್ತರ ಬರೆದರು..
"ಅಪ್ಪಿಕೊಂಡಮೇಲೆ ಒಪ್ಪಿಕೊಳ್ಳಲೇ ಬೇಕು" ಅವರ ಈ ಮಾತು ಸದಾನೆನಪಿನಲ್ಲಿ
ಉಳಿಯುತ್ತದೆ..ಎಲ್ಲಕ್ಕಿಂತ ಮುಖ್ಯ ಅಂದ್ರೆ ನಾವು ಹೇಳಿದ ದಿನಾಂಕಕ್ಕೆ ಅವ್ರು ಬಿಡುವಾಗಿದ್ದು
ಬರಲು ಒಪ್ಪಿದ್ರು.ಪುಟ ವಿನ್ಯಾಸ ಡಾ.ಸತ್ಯನಾರಾಯಣ್ ಸರ್ ಕಡೆ ಇತ್ತು ಅದನ್ನೇ ಮತ್ತೆ
ತಿದ್ದಿ ಪ್ರಕಟಿಸಲು ಅನುವು ಗೊಳಿಸಲಾಯಿತು..ಗೆಳೆಯ ಅಜಿತ್ ಕೌಂಡಿಣ್ಯ ಮುಖಪುಟದ
ಸಿಡಿ ಕಾಯ್ದಿರಿಸಿದ್ದರು..(ಒಂದು ವರ್ಷದ ಹಿಂದೆ ಅವರೇ ವಿನ್ಯಾಸ ಗೊಳಿಸಿದ್ದು) ಎಲ್ಲ ಕೂಡಿತು
ಪುಸ್ತಕ ಸಿದ್ಧವೂ ಆತು. ಅಸಮಾಧಾನದ ಅಲೆ ಬಂತು ಇಡಿ ಪುಸ್ತಕದಲ್ಲಿ "ಷ" ಅಕ್ಷರ ನಾಪತ್ತೆ
ಸತೀಶ್ ಸಹ ಬೇಜಾರು ಪಟಗೊಂಡ್ರು.
ಪ್ರಕಾಶ್ ಹೆಗಡೆ ಬಗ್ಗೆ ಹೇಳಲೇ ಬೇಕು.ನಾನು ಹಿರಿಯರಿಗೆ ಸನ್ಮಾನ ಮಾಡುವ
ಬಗ್ಗೆ ಹೇಳಿದಾಗ ಖುಷಿ ಆದ್ರು. ಹಾಲ್ ಬುಕ್ ಮಾಡುವುದರಿಂದ ಹಿಡಿದು ಪೇಪರ್ ಆಫೀಸ್ ಅಲೆಯುವ
ವರೆಗೆ, ನಿರೂಪಕಿ, ಸ್ವಾಗತ ಗೀತೆ , ತಿಂಡಿ ಕಾಫಿ ಹೀಗೆ ಎಲ್ಲ ಅವರೆ ಅರೇಂಜ್ ಮಾಡಿದ್ದು..
ನನ್ನಂತಹ ಸೊಂಬೇರಿಗಳಿಗೆ ವಿರುದ್ಧವಾಗಿ ಚಟುವಟಿಕೆಯಿಂದ ಎಲ್ಲ ನಿಭಾಯಿಸಿದ್ರು,,ನನ್ನ ಪುಸ್ತಕ
ಹೊರಬರಲು ಅವರದು ಬಹುದೊಡ್ಡ ಪಾಲು ಇಂಥಾ ಗೆಳೆಯ ಸಿಕ್ಕಿದ್ದು ಪುಣ್ಯ ಅನ್ನಲೋ
ಅಥವ ಅಪಾಥನಾದ ನನಗೆ ದೇವರು ನೀಡಿದ ವರದಾನ ಅನ್ನಲೋ ನೀವೆ ಹೇಳಿ. ಆತಂಕ ಇತ್ತು
ಶನಿವಾರ ಎಲ್ಲರಿಗೂ ರಜೆ ಇರೋದಿಲ್ಲ ಹಾಲ್ ತುಂಬದಿದ್ರೆ ಹೇಗೆ ಅಂತ..ಆದ್ರೆ ಒಂದು ಮಾತು ನಿಜ
ಬ್ಲಾಗಿಗರು ಕೈ ಬಿಡೋಲ್ಲ..ಹಾಲ್ ತುಂಬಿತು ಹೂ ಗುಚ್ಛ್ಹ ಹಿಡಿದು ಬಂದ್ರು ಶುಭ ಕೋರಿದರು.
ಈರಣ್ಣ ಇಟಗಿ ಸಹ ಮೆಚ್ಚಿಕೊಂಡ್ರು..ಇದೊಂಥರಾ ಹೊಸಾ ರೀತಿಯ ನಂಟು ..ಬರೀ ನಿಸ್ತಂತು ವಾಹಕದ
ಮೂಲಕ ಜೀವಸೆಲೆಯ ಸಂಬಂಧ ಕುದುರಿತ್ತು. ಸೊಗಸಾದ ಸ್ವಾಗತ ಗೀತೆ, ನಿರೂಪಣೆ ಭಾಷಣ
ಎಲ್ಲ ಹಿತಮಿತವಾಗಿ ಮೇಳೈಸಿದವು.
ಕೆಲ ನ್ಯೂನತೆ ಅನ್ನೋಕಿಂತಾ ಕೊರತೆ ಕಾಡಿತು ಮುಖ್ಯವಾಗಿ ಸುನಾಥ ಕಾಕಾ
ಬರದಿರುವಿಕೆ..ಅವರ ಆರೋಗ್ಯದ ಕಾರಣ. ಇನ್ನೊಂದು ಪ್ರಮಾದ ನನ್ನಿಂದ ..ಮಾತನಾಡುವಾಗ
ಅವರ ಹೆಸರು ಪ್ರಸ್ತಾಪಿಸದೇ ಹೋಗಿದ್ದು...ಇದಕ್ಕಾಗಿ ಎಲ್ಲರ ಕ್ಷಮೆ ಕೇಳುತ್ತಿರುವೆ. ಅದ್ಭುತವಾಗಿ ಮುನ್ನುಡಿ
ಬರೆದಿದ್ರು..ಬೆನ್ನು ತಟ್ಟಿದ್ರು. ನನ್ನಿಂದ ತಪ್ಪಾಗಿದೆ ಕ್ಷಮಿಸಿ. ಹಿರಿಯರಾದ ಹೆಬ್ಬಾರ್, ಗೋವಾ ಮತ್ತು
ಜೇಪಿ ಮೇಡಮ್ ಅವರಿಗೆ ಸನ್ಮಾನ ಮಾಡಿದ್ದು ಒಂದು ಸಂತಸದ ಸಂಗತಿ.
ಕ್ಷುಲ್ಲಕ ಅನಿಸಬಹುದೇನೋ ಆ ಸಂಗ್ತಿ ಅಂದ್ರೆ ನಾವು ನೋಡುತ್ತಿದ್ದ ಒಂದು ಮರಾಠಿ ಧಾರಾವಾಹಿ
"ಎಕಾ ಲಗ್ನಾಚಿ ದುಸರಿ ಗೋಸ್ಟ.." ಅನ್ನುವ ಧಾರಾವಾಹಿ ಮುಗೀತು...ಅದರ ಪಾತ್ರಗಳು ನಮ್ಮ ದಿನಚರಿಯ
ಒಂದು ಭಾಗವಾಗಿದ್ದವು.ಇನ್ನು ಮುಂದೆ ರಾತ್ರಿ ೮=೩೦ ಆದಾಗೆಲ್ಲ ನೆನಪಾಗುತ್ತಾರೆ ಅಲ್ಲಿಯ ಪಾತ್ರ
ಇನ್ನು ಎರಡನೇ ಸಂಗತಿ..ಪ್ರಸ್ತಾಪಿಸಲೇ ವಿಚಿತ್ರ ಅನಿಸುವುದು. ಬೇರೆಯವರಿಗೆ ತೀರಗಳು.
ಕಥೆ ಸ್ವಲ್ಪ ವಿಚಿತ್ರದ್ದು ಈ ವಿಭಕ್ತ, ನ್ಯೂಕ್ಲಿಯಸ್ ಕುಟುಂಬದ ಯುಗದಲ್ಲಿ ಕೂಡು ಕುಟುಂಬದ ಮಹತ್ವ
ಸಾರುವಂತಹದ್ದು. ಕಾಳೆವಾಡಿ ಯ ಘನಶಾಮ ಮತ್ತು ರಾಧಾ ರದು ಕಂಟ್ರಾಕ್ಟ ಮ್ಯಾರೇಜು ಒಂದುವರ್ಷ
ಆದಮೇಲೆ ಡೈವೋರ್ಸ ತಗೊಳೋದು ಅನ್ನುವ ಪೂರ್ವ ಕರಾರಿನದ್ದು. ರಾಧಾ ಕಾಳೆವಾಡಿಗೆ ಸೊಸೆಯಾಗಿ
ಬರುತ್ತಾಳೆ. ಆ ವಾಡೆಯಲ್ಲಿ ಆಕೆಯ ಅತ್ತೆ, ಮಾವ,ಗಂಡನ ಕಾಕಾಗಳು ,ಕಾಕುಗಳು, ಅವರ ಮಕ್ಕಳು ಮತ್ತು
ಎಲ್ಲಕಿಂತ ಮೇಲಾಗಿ ಘನಶಾಮನ ಅಜ್ಜಿ ಹೀಗೆ ಅಲ್ಲಿ ಒಂಥರಾ ಸಂತೆ. ನಿಧಾನವಾಗಿ ರಾಧಾಳಿಗೆ ಸಂಬಂಧಗಳ
ಅರಿವು, ಮಹತ್ವ ಅರಿವಾಗತೊಡಗುತ್ತದೆ. ಘನಶಾಮನಿಗೆ ಅಮೆರಿಕದ ವ್ಯಾಮೋಹ..ಆದಷ್ಟು ಬೇಗ ವರ್ಷ ಮುಗಿದು
ಬಿಡುಗಡೆ ಆಗಿ ಹಾರುವ ವಿಚಾರ ಅವನದು, ಕೊನೆಗೆ ಎಲ್ಲ ಸುಖಾಂತ ವಾಗಿ ಮುಗಿಯುವ ಧಾರಾವಾಹಿ ನನ್ನನ್ನು
ಕಾಡಿತ್ತು. ಮುಖ್ಯವಾಗಿ ಅಲ್ಲಿನ ಪಾತ್ರಗಳು ಅವರ ಮಾತು ಧರಿಸುವ ವಸ್ತ್ರ ಇತ್ಯಾದಿ ಎಲ್ಲ ಸಹಜವಾಗಿದ್ದವು..
ಯಾರೂ ಅಭಿನಯ ಮಾಡುತ್ತಿದ್ದಾರೆ ಅನಿಸದೇ ಆ ಪಾತ್ರಗಳನ್ನು ಅವರು ಅನುಭವಿಸುತ್ತಿದ್ದಾರೆ ಅಂತ ಭಾಸ.
ಇದಕ್ಕೆ ತಕ್ಕಂತೆ ಸಿಕ್ಕ ಪ್ರಚಾರ. ಮೊನ್ನೆ ಐಬಿಎನ್-ಲೋಕಮತ್ ದಲ್ಲಿ ಈ ಧಾರಾವಾಹಿಯ 'ಕುಹೂ' ಪಾತ್ರಧಾರಿಯ
ಸಂದರ್ಷನ ಇತ್ತು. ಕೇರಳ, ಜರ್ಮನಿಯಿಂದ ಅವಳಿಗೆ ಫೋನು ಮಾಡಿ ಅಭಿನಂದನೆ ಹೇಳುತ್ತಿದ್ದರು. ಆಶ್ಚರ್ಯ ಅಂದ್ರೆ
ಎಲ್ಲರೂ ಅವಳಿಗೆ ಕುಹೂ ಅಂತಾನೇ ಕರೆದಿದ್ದು ಅವಳ ಹೆಸರು ಸ್ಪೃಹಾ ಜೋಶಿ ಆದರೆ ಕುಹೂ ಹೆಸರು
ಜನಜನಿತ ಅಂತ ಅವಳೆ ಒಪ್ಪಿಕೊಂಡಿದ್ದು.
ಶನಿವಾರದ ಬೆಳಗು ಮನಸ್ಸನ್ನು ಪ್ರಫುಲ್ಲ ಮಾಡಿತು ಉಮೇಶ್ ಸಾರ್. ಐದು ಪುಸ್ತಕಗಳ ಬಿಡುಗಡೆ ಸಮಾರಂಭದ ಜೊತೆಗೆ ನಿಮ್ಮ ದಯೆಯಿಂದ ನಾನು ಆರಾಧಿಸುತ್ತಿದ್ದ ಹಲವು ಬ್ಲಾಗರುಗಳ ಮುಖತಃ ಭೇಟಿಯಾಯಿತು.
ReplyDeleteನಿಮ್ಮ ೧೦೦ನೇ ಪುಸ್ತಕ ಬಿಡುಗಡೆಗೆ ಇದರ ೧೦೦ರಷ್ಟು ಅಭಿಮಾನಿಗಳು ಸೇರುತ್ತಾರೆ.
ನಿಮ್ಮ ಮನಸ್ಸನ್ನು ಗೆದ್ದ ಧಾರವಾಹಿ ಎಂದ ಮೇಲೆ, ಪ್ರಯಶಃ ತುಂಬಾ ಕೌಟಂಬಿಕ ನೆಲೆಗಟ್ಟಿನ ಕಥನ ಇದ್ದೀತು.
ಕಾರ್ಯಕ್ರಮ ಅಂತ ಅನ್ನಿಸಲೇ ಇಲ್ಲ..ಮನೆಯಲ್ಲಿ ಯುಗಾದಿ, ದೀಪಾವಳಿಯ ಸಂಭ್ರಮ ಇತ್ತು..ಬಂದ ಮನೆಯವರೆಲ್ಲ..ಒಬ್ಬರನ್ನೊಬ್ಬರು ಅಣ್ಣ, ಅತ್ತಿಗೆ, ತಂಗಿ, ತಮ್ಮ, ಗುರುಗಳೇ ಅಂತ ಎಲ್ಲ ಸಂಭೋದಿಸಿದ್ದ ನೋಡಿ...ಇದು ಬ್ಲಾಗ್ ಲೋಕದ ಮನೆಯಲ್ಲಿ ನಡೆದ ಸಂಭ್ರಮ ಅಂತ ಅನಿಸಿತು..
ReplyDeleteಎಲ್ಲರಿಗು ಅಭಿನಂದನೆಗಳು..ಹಾಗು ಇಂತಹ ಮನೆ ಸಂಭ್ರಮಕ್ಕೆ ಬಂದು ವಿರಮಿಸಿದ್ದು ಖುಷಿ ತಂದಿತು!!!
ದೇಸಾಯರೆ,ಅನಾರೋಗ್ಯ ನಿಮ್ಮ ಹಾಗೂ ಇತರ ನಾಲ್ವರ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಬರಲು ಅನುಮತಿಸಲಿಲ್ಲ, ಅದಕ್ಕಾಗಿ ವಿಷಾದವಿದೆ, ಅಂತೂ ಪುಸ್ತಕ ಹೊರಬಂದಿದೆ, ಚೊಚ್ಚಲ ಬಾಣಂತನದ ಸಂತಸ ನಿಮ್ಮದು! ಸಾಹಿತ್ಯದಲ್ಲಿ ನಿಮಗೆ ಇನ್ನಷ್ಟು ವಿಶಿಷ್ಟ ಮಕ್ಕಳು ಜನಿಸಲಿ ಎಂದು ಹಾರೈಸುತ್ತೇನೆ. ಅಭಿನಂದನೆಗಳು.
ReplyDeleteದೇಸಾಯ್ ಸರ್,
ReplyDeleteಮನೆಯ ವಾತಾವರಣದಲ್ಲಿ ನಾಲ್ಕು ಪುಸ್ತಕಗಳ ನಡುವೆ ನಿಮ್ಮ ಪುಸ್ತಕ ಬಿಡುಗಡೆಯಾದ ಸಂಭ್ರಮವನ್ನು ನಾವಿಬ್ಬರೂ ನೋಡಿ ಖುಶಿಪಟ್ಟೆವು. ಇನ್ನೂ ನೂರಾರು ಪುಸ್ತಕಗಳು ನಿಮ್ಮಿಂದ ಬರಲಿ...ಅಭಿನಂದನೆಗಳು.
ದೇಸಾಯರ,
ReplyDeleteದೈಹಿಕವಾಗಿ ಬರಲಾಗದಿದ್ದರೂ, ಮನಸ್ಸು ಶನಿವಾರದಂದು ನಿಮ್ಮನ್ನು ನೆನೆಯುತ್ತಿತ್ತು.
ಮರಾಠಿಯ ಒಳ್ಳೇ ಧಾರಾವಾಹಿಗಳು ನಡೆಯುತ್ತಿದ್ದರೆ, ವಿವರ ತಿಳಿಸಿ,please.
ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ...ಬ್ಲಾಗ್ ಮಿತ್ರರನ್ನೆಲ್ಲ ಒಂದೇ ಕಡೆ ನೋಡಿ ಸಂತೋಷವಾಯಿತು...ಅಭಿನಂದನೆಗಳು ಸರ್.....
ReplyDeleteನನ್ನ ಆಫೀಸ್ ನಲ್ಲಿ ಈ ಧಾರಾವಾಹಿಯ ಬಗ್ಗೆ ತುಂಬಾ ಮಾತುಕತೆ ನಡೀತಾ ಇತ್ತು ಮೊದಲು....ನಾನು ಯಾವತ್ತು ನೋಡಿರಲಿಲ್ಲ....ಇವತ್ತು ನಿಮ್ಮ ಪೋಸ್ಟ್ ನೋಡಿ ನನ್ನ ಸ್ನೇಹಿತನಿಗೆ ಈ ಧಾರಾವಾಹಿಯ ಬಗ್ಗೆ ಕೇಳಿದೆ.....ಅವನು ಸಹ ಇದೆ ಮಾತನ್ನು ಹೇಳಿದ ..ತುಂಬಾ ಚೆನ್ನಾಗಿತ್ತು ...ಈಗ ಮುಗಿದಿದೆ ಎಂದು....
kaaryakramadalli bhaagiyaada hemme namagide.....
ReplyDeleteCongratulations ...
ReplyDeleteSorry, sir nanu nimma book release function ge barabeku endu kanavarisutta idde...aadare adhika masada baagina saluvaagi nanna hendati tavara manege hogabekagi bantu... higaagi chinnadanata manege baralu agalilla ...:-))). matte hegittu sir function. all photos are nice. mattondu bejaar andre nanna acchu-mechhina kavigalada Sri BRL sir avarannu noduva mattu matagalannu kelabekemba aase iitu miss madikonde ... nimma pustaka kondu khandita oduttene...ankitadalli sigabahude ...
Congrats sir!!
ReplyDelete