Thursday, July 26, 2012

ಇಕಿ ಇಂಥಾಕಿ..








ಹೇಳುವ ಮಜಕೂರು ಅಂದ್ರ ಇಕಿ ನೋಡ್ರಿ ಎಂಥಾಕಿ..
ನನ್ನ ಕತ್ತಲ ದಾರಿಯೊಳಗ ಸಾಲುದೀಪಾ ಹಚ್ಚಿದಾಕಿ..
ಇಕಿ ಇಂಥಾಕಿ

ಕಣ್ಣಾಗ ದೀಪ ತುಟ್ಯಾಗ ನಗಿ ಇಟಗೊಂಡಾಕಿ..
ಅರ್ಧಾಭಕ್ಕರಿ ನಕ್ಕೋತನs ಹಂಚಿಕೊಂಡಾಕಿ...
ಇಕಿ ಇಂಥಾಕಿ

ನನ್ನ ಹಾಡಿಗೆ ದನಿಯಾದಾಕಿ ರಂಗೋಲಿಯಾಗಿ ನಕ್ಕಾಕಿ
ಹರಿವ ಕಣ್ಣೀರ ಖುಷಿಯಿಂದ ಕುಡ್ದು ತೇಗಿದಂತಾಕಿ..
ಇಕಿ ಇಂಥಾಕಿ

 
 
ಎದ್ಯಾಗ ಹಕ್ಕಿನಾದ ಮನಿತುಂಬ ಸವಿಗಾನ ಹರಿಸಿದಾಕಿ..
ಬದುಕ ಜಂಜಡಕೆ ಬಸವಳಿದಾಗ ಬಳಸಿ ತಬ್ಬಿಕೊಂಡಾಕಿ..
ಇಕಿ ಇಂಥಾಕಿ

ಗಂಧದ ಕೊರಡು ಉರಿವ ದೀಪ ಆದಾವೇನು ಹೋಲಿಕಿ..
ನಮ್ಮ ನಿಮ್ಮ ನಾಳೆಗಳ ಸಲುವಾಗಿ ತನ್ನಿರುವನ್ನೇ ಉರಿಸುವಾಕಿ...
ಇಕಿ ಇಂಥಾಕಿ

8 comments:

  1. ಭಾಳ ಚೆಂದಾಗಿ ಬಂದದ! "ಗಂಧದ ಕೊರಡು ಉರಿವ ದೀಪ ಆದಾವೇನು ಹೋಲಿಕಿ.." ಭಾಳ ಇಷ್ಟ ಆತು.

    ReplyDelete
  2. ಎಂತಹ ಅಚ್ಚ ನಾರೀಮಣಿ ಸಾರ್ ಈಕೆ. ಇಂತಹ ಹೆಣ್ಣು ಮಗಳು ದುನಿಯಾದಾಗೆ ಸಿಗ್ತಾರಾ?

    ಹುಟ್ಟು ಹಬ್ಬಕ್ಕೆ ಒಳ್ಳೆಯ ಸಿಕ್ಸರ್ ಹೊಡೆದಿದೀರ.

    ReplyDelete
  3. ಗಂಧದ ಕೊರಡು ಉರಿವ ದೀಪ ಆದಾವೇನು ಹೋಲಿಕಿ..
    ನಮ್ಮ ನಿಮ್ಮ ನಾಳೆಗಳ ಸಲುವಾಗಿ ತನ್ನಿರುವನ್ನೇ ಉರಿಸುವಾಕಿ.

    ತುಂಬಾ ಒಳ್ಳೆಯ ಸಾಲುಗಳು ದೇಸಾಯರ. :)

    ReplyDelete
  4. ಇಂಥಾ ಮನಿಯಾಕಿ ಸಿಕ್ಕಾಗ,ಅಷ್ಟೈಶ್ವರ್ಯನ ಸಿಕ್ಕ್ಹಂಗ ಅಲ್ಲೇನ್ರಿ, ದೇಸಾಯರ? ನಿಮ್ಮ ದಾಂಪತ್ಯ ನೂರು ಕಾಲ ಸುಖ, ನೆಮ್ಮದಿಯಿಂದ ಇರಲಿ. ಕವನದ ಹೂಮಾಲೀನ ನಿಮ್ಮ ಮನಿಯವರ ಕೊರಳಾಗ ತೊಡಿಸೀರಿ a la ಬೇಂದ್ರೆ. ಸ್ವರ್ಣಮಾಲೀನ್ನೂ ತೊಡಸಿರಿ ನನ್ನ ತಂಗೀಗೆ!

    ReplyDelete
    Replies
    1. no its not addressed to my wife but WOMEN in general..this speaks of a Ideal woman whom we dream of

      Delete
  5. Desayre chalo aiti. naanoo vaaapas bandeni! heenga serkontironu.

    ReplyDelete