ಯಾಕ ಹಿಂಗ ಗೊತ್ತಿಲ್ಲ.. ಅಥವಾ ನನಗೂ ಅದೂ ಪೂರ್ತಿ ತಿಳದಿಲ್ಲ..
ಹಂಗ ನೋಡಿದ್ರ ಇದೇನು ಹೊಸಾದು ಅಲ್ಲ ಈ ಬ್ಯಾನಿ ಆವಾಗಆವಾಗ ಬರತಿತ್ತು..
ಒಂದು ದಿನ ತಪ್ಪಿದ್ರ ಒಂದು ವಾರ ಝಾಡಿಸಿಹೋಗತಿತ್ತು.. ಯಾಕೋ ಗೊತ್ತಿಲ್ಲ ಈ ಸಲ
ಇನ್ನೂ ಮುಗೀವಲ್ಲದಾಗೇದ. ಏನೋ ಗೊತ್ತಿಲ್ಲ ನಿರಾಶಾ ಕವಿದಿದ್ದು ಹೋಗವಲ್ತು..
ನಿಮ್ಮ ಮುಂದ ಹೇಳಕೊಂಡ್ರ ಏನರ ಸಮಾಧಾನ ಸಿಕ್ಕೀತು ಅನಿಸೇದ...
ನಾನೂ ಜನೇವರಿಯೊಳಗ ರೆಸಲೂಶನ್ ಹಾಕ್ಕೊಂಡೆ ಈ ವರ್ಷ ಹಿಂಗ್ ಇರಬೇಕು
ಇದನ್ನು ಮಾಡಬೇಕು..ಈ ಕತಿ ಬರೀಬೇಕು ಹಂಗ ಹಿಂಗ ಅಂತ.ಇನ್ನೂ ಮಾರ್ಚು ಮುಗದಿಲ್ಲ
ಆಗಲೇ ಹವಾ ಹೋದ ಪುಗ್ಗಾ ಆಗೇದ ನನ್ನ ಯೋಜನಾ ಎಲ್ಲಾ. ಯಾರಿಗೂ ಬಟ್ಟ ಮಾಡಲಿಕ್ಕೆ
ಆಗೂದಿಲ್ಲ ಇದು ನಂದ ಸ್ವಯಂಕೃತಾಪರಾಧ ಅದ.
ನಾ ಹೇಳಹೊರಟಿದ್ದು ನಿಸ್ತೇಜ ಜೀವನದ ಬಗ್ಗೆ. ಖಡಾಖಡಿ ಕೂತು ಈ ಇಡೀ ತಿಂಗಳು ನಾ
ಒಂದು ಪೇಜು ಬರದಿಲ್ಲ. ಬ್ಲಾಗಿನ್ಯಾಗ ಕತಿ ಒಂದು ಅರ್ಧಕ್ಕ ನಿಂತದ ಮುಂದುವರೆಸಲಿಕ್ಕೆ ಸುದ್ದಾ
ಆಗವಲ್ತಾಗೇದ ..ಕೆಲಸದ ಒತ್ತಡ ಅದ ಅದ ಅದ ಇದು ಅದ ಎಲ್ಲಾ ನೆವಾ ಹೇಳೂದಿಲ್ಲ ನನಗ
ಬರೀಲಿಕ್ಕೆ ಬ್ಯಾಸರ ಆಗೇದ ಇದು ಖರೆ ಸಂಗತಿ. ಇದು ಯಾಕಾತು ಇದಕ್ಕ ಉತ್ತರ ನನ್ನೊಳಗ ಇಲ್ಲಾ
ಅರ್ಧಾ ಮರ್ಧಾ ಬರದ ಕತಿಗೋಳು..ನಾಲ್ಕು ಸಾಲು ಜೋಡಿಸಿ ಅವು ಅದ್ಭುತ ಹನಿ ಅನ್ನುವ ಭ್ರಮಾಗೋಳೂ
ಎಲ್ಲಾ ನನ್ನ ಹಿಂದ ಬಿದ್ದಾವ. ನಾ ಬರದಿದ್ದು ಮೆಚ್ಚಿಕೊಳ್ಳಲೇ ಬೇಕು ಅನ್ನುವ ಹುಕುಮ್ ಶಾಹಿ ಕಾಲ ಇದಲ್ಲ
ಆದ್ರ ಮೆಚ್ಚಿಕೊಳ್ಳುವುದು ದೂರ..ಏನಾದ್ರೂ ಬರೀಯೋ ಜೋಕುಮಾರ..ಅನ್ನುವಹಂಗ ಹಾಗೇದ.
ಅದಕ್ಕ ಇಂಥಾ ಮನಸ್ಥಿತಿಯೊಳಗ ಏನು ಮಾಡಲಿ ತಿಳಿಲಾರದ ನಿಮಗ ಕೇಳತೇನಿ...ಏನು ಮಾಡಲಿ
ನಾ ಈ ತಿಂಗಳೀಡಿ ಏನು ಮಾಡಿದೆ ಅಂತ ನೀವು ಕೇಳಿದ್ರ ಮೂರು ಕಾದಂಬರಿ ಓದಿಮುಗಿಸಿದೆ...
ಮೂರು ಒಂದಕ್ಕಿಂತ ಒಂದು ಭಿನ್ನ ಇದ್ವು "ಮಂದ್ರ", ,"ಅಮ್ಮ ಸಿಕ್ಕಿದ್ಲು.." ಹಂಗ ಶೆಲ್ಡಾನ್ ನ ಬ್ಲಡ್ ಲೈನ್.
ಹೌದು ಮೂರು ಸೊಗಸಾಗಿದ್ವು.ಅದರಾಗ ರವಿ ಬೆಳಗೆರೆ "ಅಮ್ಮ ಸಿಕ್ಕಿದ್ಲು" ವನ್ನು ಬರೇ ಐದು ದಿನದಲ್ಲಿ ಬರೆದು
ಮುಗಿಸಿದ್ರಂತ..ಅಂಥಾವರ ಮುಂದ ನಾ ಎಂಥಾ ಮುಖೇಡಿ ಇದ್ದೇನಿ. ಹಂಗ ಎರಡು ಉತ್ತಮ ಸಿನೇಮಾನೂ ನೋಡಿದೆ
"ಕಹಾನಿ", "ಆರ್ಟಿಸ್ಟ" .ಕಹಾನಿ ಭಾಳ ಹಿಡಸತು. ವಿದ್ಯಾ ಬಾಲನ್ ನಮ್ಮ ನಡುವಿನ ಅದ್ಭುತ ನಟಿ.ಅವಳಿಗೆಅವಳೇ ಸಾಟಿ.
ಸರ,
ReplyDeleteನಿಮ್ಮ ಪರಿಸ್ಥಿತಿ ಗೊತ್ತಾಗತೈತಾ...ನೀವು ಏನಾರ ಬರೀಬೇಕು ಅಂತ ಕೂಡ ಬೇಡ್ರಿ...ಹಾಗೆ ಕೂತು ಬರೆದ್ರಾ..ಸ್ವಾರಸ್ಯ ಬರಂಗಿಲ್ರಿ....ನೀವು ಹೀಗೆ ಓದುತ್ತಾ.ಖುಷಿಯಿಂದ.ಸಿನಿಮಾ ನೋಡ್ತಾಇರಿ...ನಿಮಗ ಯಾವಗಲೋ ಒಮ್ಮೆ ಬರಿಲಿಕ್ಕೆ ಪ್ರೆಶರ್ ಬರತಾದ...ಆಗ ಕೂತುಕೊಳ್ರಿ ಬರೀಲಿಕ್ಕೆ...ಅಮೇಲೆ ರಿಸಲ್ಟ್ ನೊಡ್ರಿ....
ದೇಸಾಯಿಯವರೆ...
ReplyDeleteಏನು ಬರಿಬೇಕು ಅಂತ ಗೊತ್ತಾಗ್ತಾ ಇಲ್ಲ ಅಂತ ಒಂದು ಲೇಖನನೇ ಬರ್ದಿದ್ದೀರಿ...
ಇನ್ನು ಬರಿಲಿಕ್ಕೆ ಕೂತ್ರೆ ಹೇಗೆ?
ಲಗೂನ ಮೂಡ್ ತಂದ್ಕೊಳ್ರಿ... ಕಥೆ ಮುಗಿಸಿಬಿಡಿ..
ನೀವು ಮಾಡ ಬಲ್ಲಿರಿ... ಜೈ ಹೋ !
ಈಗ ಮೂಡು ಕೆಳಗ ಹೋಗಿರಬಹುದು, ಮತ್ತೆ ಮ್ಯಾಲಕ ಏರೇ ಏರ್ತದ.
ReplyDelete