೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡು
ತಂಪಾಗಿದೆ..ನಕ್ಕಿದೆ...
ಅದೇ ಸೋನೆ ಮಳೆ ಜಿನುಗು ಎದೆಯಲ್ಲಿ
ಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...
ಮನ ಮಳೆಯಲ್ಲೂ ಅಳುತಿದೆ....!
೨) ಬಸವಳಿದ ಅವನಿಗೆ ಮಳೆಯ ಸ್ಪರ್ಶ
ಕೋಮಲ ಸಾಂತ್ವನ..ಪುಳಕ..
ಹರ್ಷ ಧಾರೆಯ...ಝಳಕ..
ಮಳೆಯ ಜೊತೆ ನಿನ್ನ ನೆನಪೂ ರಚ್ಚೆ
ಹಿಡಿಯಲೇಕೆ....ಇದಾರ ಕುಹಕ...?
೩) ಹಳೆ ಸಾಲ ತೀರಿಸಿದ ಮಳೆ..
ಈ ಭೂಮಿಯ ಮುಖಕೆಲ್ಲ ಕೆಸರು..ಹಸಿರು
ಹೊದ್ದು ಮೆದ್ದು ತೇಗಿ ತಂಪಾಗಿದೆ....
ನಿನ್ನ ನೆನಪು ಹಳೆಯದೇ....ಚಿಪ್ಪಲ್ಲಡಗಿತ್ತು..
ಮಳೆಯ ಸದ್ದಿಗೆ ಎದ್ದು ಕುಣಿದಾಡುತಿದೆ.....!
ದೇಸಾಯರೇ, ಮಳೆ ನಿಮಗೆ ಕವನ ಬರೆಯಲು
ReplyDeleteಸ್ಪೂರ್ತಿಯಾಗಿದೆ, ಸೋನೆಮಳೆ ಯ೦ತೆ ನಿಮ್ಮ ಕವನವೂ ವಿನೂತನವಾಗಿದೆ.
ಖೂಬಸೂರತ್, ಮಿಯಾ!
ReplyDeleteಈ ಸಾವನ ಕೀ ಮಹೀನಾದಾಗ ನೆನಪಿನ ಮಳೆಯೇ ಜೋರಾಗಿ ಬೀಳತದಲ್ಲರಿ? ನಿಮ್ಮ ನೆನಪೆಲ್ಲಾ ಕವನಗಳಾಗಲಿ ಅಂತ ಹಾರೈಸತೇನಿ.
ನಿಮ್ಮ ಮಳೆ ಕವನ ಚೆನ್ನಾಗಿದೆ... ಛತ್ರಿ ಹಿಡ್ಕೊಂಡೆ ಓದಿದೆ :)
ReplyDeleteಉಮೇಶ್ ಸರ್,
ReplyDeleteಮಳೆ ಕವನ ಓದಿ ಖುಷಿಯಾಯ್ತು. ನನಗೊಂದು ಮಳೆಯ ಬಗ್ಗೆ ಲೇಖನ ಬರೆಯಬೇಕು ಅನ್ನಿಸಿದರೂ ಯಾಕೋ ಬರೆಯಲಾಗುತ್ತಿಲ್ಲ. ಕಾರಣವೂ ಗೊತ್ತಿಲ್ಲ..ಇದ್ಯಾಕೆ ಹೀಗೆ?
This comment has been removed by the author.
ReplyDeleteಚೆ೦ದದ ಮಳೆ-ಚುಟುಕುಗಳು.
ReplyDelete