Sunday, April 25, 2010

ಮಧು....ಮಧು..ಮತ್ತೆ ಮಧು...


೧) ವಿಚಿತ್ರ ದೃಶ್ಯವಿತ್ತಲ್ಲಿ...
ಮಧು ಇರಲಿಲ್ಲ..ಗಿಲಾಸಿಲ್ಲ..
ಆದರೂ ನಾ ಕುಡಿಯುತ್ತಿದ್ದೆ....
ನನ್ನ ಮುಂದೆ ನೀನಿದ್ದೆಯಲ್ಲ......!

೨) ನೊಂದ ಹೃದಯಗಳಿಗೆ
ಮಧುವೊಂದೆ ಸಾಲದು..
ಮಧುಶಾಲೆಯಲಿ..
ನಿನ್ನ ನಗೆಯ ಬೆಳಕೂ ಬೇಕು ಸಖಿ...!

೩) ಗುಡಿ ಗುಂಡಾರಗಳಲಿ
ಮಸೀದಿ ಮಠಗಳಲಿ...
ಶಾಂತಿ ಸಿಗುವಂತಿದ್ದರೆ....ಈ
ಮಧುಶಾಲೆಗೇಕೆ ಜನ
ಬರುತಿದ್ದರು.....?

೪) ವಿಪ್ಲವವದು..ಮಧು
ಬಟ್ಟಲಲಿ ತುಳುಕಿತೇಕೆ..
ಮಧು ಶಾಲೆಯಲೂ ನಿನ್ನ
ನೆನಪು ಬೆಂಬಿಡದೇಕೆ....?

೫) ಜಗದರಿವ ಮರೆಸುವ ಮಧು
ಬೇಡೆನಗೆ ಸಖಿ...
ಉಣ್ಣಿಸು ಮಧುವೊಂದ...
ಮನದಾಳದಿ ಇಳಿದ ಅವಳ
ನೆನಪು ಕೆದುಕುವಂತಹುದ.....!

೬) ನಾನಿಲ್ಲವಾದಾಗ ನನ್ನ ಗೋರಿ ಬಳಿ
ಬಂದು ಕಣ್ಣೀರಿಡಬೇಡ...
ಬರುವಿಯಾದರೆ ಮಧು ಬಟ್ಟಲ ತಾ
ಜೊತೆಗೆ...
ನರಕದಲಿ ಅದು
ಸಿಗುವುದಿಲ್ಲ.....!

22 comments:

  1. ದೇಸಾಯಿಯವರೆ...

    ವಾಹ್... !
    ಕ್ಯಾ ..ಬಾತ್ ಹೆ... !

    ಸಂಜೆಯ ಮಬ್ಬು ಬೆಳಕು...
    ಮಧುರೆಯ ಬಟ್ಟಲು..
    ಸನಿಹ..
    ನೀರೇ..
    ನೀ..ನಿರದಿದ್ದರೂ..
    ನಿನ್ನ..
    ದಟ್ಟ ಕಣ್ಣುಗಳ....
    ನೆನಪಿತ್ತಲ್ಲ...
    ನಶೆ..
    ಏರಿಸಲು..
    ನನ್ನ..
    ಒಂಟಿ..
    ಏಕಾಂತದಲೀ...
    ಮಾತನಾಡಲು....

    ದೇಸಾಯಿಯವರೆ...
    ನಿಮ್ಮ ನಶೆ ಏರಿಸುವ ಚುಟುಕುಗಳಿಗೆ.. ನೀವೇ ಸಾಟಿ..!

    ವಾಹ್....
    ವಾಹ್... !

    ReplyDelete
  2. ದೇಸಾಯರ,
    ಬಟ್ಟಲಿನಲ್ಲಿ ಮಧು ತುಂಬುತ್ತಿದ್ದೀರಿ. ನಶೆ ಏರುವಂತೆ ಕುಡಿಸಿರಿ.
    "ನ ಪೀನಾ ಹರಾಮ ಹೈ, ನ ಪಿಲಾನಾ ಹರಾಮ ಹೈ,
    ಪೀಕೆ ನಶೇ ಮೇ ನ ಹೋನಾ ಹರಾಮ ಹೈ!"

    ReplyDelete
  3. ಹ ಹ..ಕೊನೆಯ ಐದು ಸಾಲುಗಳು ತುಂಬಾ ಚೆಂದವಿದೆ.

    ಒಂದಷ್ಟು... ಮಧು ಪಾತ್ರೆಯಲ್ಲಿ,
    ಕವಿತೆ ಹೊರಚೆಲ್ಲಿ....
    ಅರಿವಿರದೇ ರಾಗ ಮೀಟಿ
    ಭಾವಗೀತೆಯಾದಂತೆ,
    ನಿನ್ನ ಸ್ವಪ್ನವೇ ಬಂದು ನನ್ನೊಳಗೆ
    ವಾಸ್ತವಾದೊಡನೆ ಐಕ್ಯವಾದಂತೆ...

    ಮಧು ರುಚಿಕಾರವಾಗಿದೆ ದೇಸಾಯಿ ಸರ್. ಘಜ಼ಲ್ ಗೆ ರಾಗ ಕಲ್ಪಿಸಿ ನಾನೇ ಹಾಡಿಕೊಳ್ಳುವೆ. ತುಂಬಾ ಸುಂದರವಾಗಿದೆ.

    ReplyDelete
  4. ಉಮೇಶ್ ಜೀ,
    ನಿಮ್ಮ ಕಾವ್ಯ ಮಧುಪಾನದಿ೦ದ ಅಪೂರ್ವ ಕಿಕ್ ದಕ್ಕಿತು. ಚೆನ್ನಾಗಿವೆ.

    ReplyDelete
  5. ಇಲ್ಲಾ ಸಾರ್ ಇಲ್ಲಾ
    ನೀವ್ ಹೋಗಿರಿ ಸಗ್ಗಕ್ಕೆ
    ಸಿಗುವುದಲ್ಲಿ ಮಧು
    ಜೊತೆಗೆ
    ಮಧುಬಾಲ

    ReplyDelete
  6. ದೇಸಾಯಿ ಸರ್,

    ಮದುವಿನ ಬಗ್ಗೆ ಮಧುಬಟ್ಟಲ ಬಗ್ಗೆ ಸೊಗಸಾದ ಚುಟುಕು ಕವನಗಳು. ಕೊನೆಯದಂತೂ ತುಂಬಾ ಇಷ್ಟವಾಯಿತು. ಅದರಲ್ಲೂ
    ನರಕದಲ್ಲಿ ಅದು ಸಿಗುವುದಿಲ್ಲ.....
    ಎಷ್ಟು ನಿಜ ಅಲ್ವಾ...

    ReplyDelete
  7. ಹೆಗಡೇಜಿ ಬಹಳ ದಿನಗಳ ನಂತರ ಬ್ಲಾಗಿಗೆ ಬಂದಿರುವಿರಿ...
    ಹಾಗೆಯೇ ಒಳ್ಳೆಯ "ಚುಟುಕಾಗಿ" ಪ್ರತಿಕ್ರಿಯಿಸಿದ್ದೀರಿ...
    ನಿಮ್ಮ ಹಾರೈಕೆ ಹೀಗೆ ಇರಲಿ...

    ReplyDelete
  8. ಧನ್ಯೋಸ್ಮಿ ಚುಕ್ಕಿ ಚಿತ್ತಾರ....!

    ReplyDelete
  9. This comment has been removed by the author.

    ReplyDelete
  10. ಕಾಕಾ ಏನು ಕಮಾಲ್ ಶೇರ್ ಅಲ್ವಾ...? ಧನ್ಯವಾದಗಳು..

    ReplyDelete
  11. ವಿನಿ ಮೊದಲ ಸಲ ಬ್ಲಾಗಿಗೆ ಬಂದು ರುಚಿಕರಪ್ರಇತ್ಕ್ರಿಯೆ ನೀಡಿರುವಿರಿ. ಆಗಾಗ ಬರುತ್ತ ಇರಿ.

    ReplyDelete
  12. ಪರಾಂಜಪೆ ಅವರಿಗೆ ಧನ್ಯತೆ ಹೇಳುತ್ತೇನೆ ಹಾಗೂ ಕಿಕ್ ಈಗ ಇಳಿದಿದೆ ತಾನೆ..?

    ReplyDelete
  13. This comment has been removed by the author.

    ReplyDelete
  14. ಹೆಬ್ಬಾರ್ ಅವರೆ ಸಗ್ಗದಲ್ಲಿ ಮಧುಬಾಲಾ ಇದ್ದಾಳಾ ನಾ ಹೋಗ್ತೀನಿ ನೀವೂ ಬರುವಿರೇನು......ಹಃ ಹಃ....!

    ReplyDelete
  15. ಶಿವಪ್ರಕಾಶ್ ಧನ್ಯವಾದಗಳು...

    ReplyDelete
  16. ಸೀತಾರಾಮ ಅವರಿಗೆ ಧನ್ಯವಾದ..

    ReplyDelete
  17. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಶಿವು

    ReplyDelete
  18. ಗೋರೆ ಅವರಿಗೆ..ಧನ್ಯೋಸ್ಮಿ...

    ReplyDelete