Wednesday, April 7, 2010

ಮೊದಲ ತೊದಲು.....

ನಾ ಇಲ್ಲಿ ಬರೆದಿರುವ ಕವಿತೆಗಗೆ ಒಂದು ಇತಿಹಾಸವಿದೆ. ಇದು ನನ್ನ
ಪ್ರಥಮ ಪ್ರಕಟಿತ ಕವಿತೆ. ಗದಗಿನ ಮಿತ್ರರೊಬ್ಬರಿದ್ರು ಎ. ಜಿ. ಮಹಾಲ್ದಾರ್ ಅಂತ. ೧೯೯೦ರಲ್ಲಿ " ಸ್ನೇಹ ತರಂಗ" ಅನ್ನೋ
ಕವಿತೆಯ ಸಂಕಲನ ತಂದಿದ್ರು. ನನ್ನ ಹಾಗೆ ಅನೇಕ ಮರಿಕವಿಗಳ ಕವಿತೆ ಅದರಲ್ಲಿದ್ದವು. ಹಾಂ ಈ ಸಂಕಲನಕ್ಕೆ ನಾವೇನೂ
ಧನ ಸಹಾಯ ಮಾಡಿರಲಿಲ್ಲ. ಮಹಾಲದಾರ ತಮ್ಮ ದುಡ್ಡು ಹಾಕಿ ತಂದರು. ನನಗೆ ಮೊದಲದಾರಿ ತೆರೆದ ಮಹಾಲದಾರರಿಗೆ
ದೇವರು ಆಯುರಾರೋಗ್ಯ ನೀಡಲಿ. ಈಗ ಅವರ ಸಂಪರ್ಕ ಇಲ್ಲ...ಅವರು ಎಲ್ಲಿದ್ದರೂ ಚೆನ್ನಾಗಿರಲಿ..

೧) ಸಾರಾಂಶ
-----------

ಉಷೆ ಹೊಂಬಣ್ಣದ ಓಕುಳಿ
ಭುವಿ ಮೇಲೆಲ್ಲ ಚೆಲ್ಲಾಡಿದಾಗ
ಬಂದ ಸೂರ್ಯ ನನ್ನ ಕಂಡು
ಮುಗುಳ್ನಕ್ಕ....
ಆತನ ಕೆಂಪುಮೊಗದಲ್ಲಿ ನನ್ನ
ಅನೇಕ ಕನಸುಗಳ ಪ್ರತಿಬಿಂಬ
ಕಂಡೆ.... ಮುಂಜಾವು ಹಲವು
ಕದ ತೆರೆದಿತ್ತು ಬಾಳಿಗೆ
ಸೂರ್ಯ ಆಶ್ವಾಸನೆಯ ನಗೆ
ಬೀರುತಿದ್ದ.....

ಯಾಮಿನಿ ಹೊಸಲ ಹಿಂದೆ
ಚಡಪಡಿಸುತ ನಿಂತಿದ್ದಳು....
ಬಂದ ಸೂರ್ಯ ಕುಂದಿದ್ದ...
ಸೊರಗಿದ್ದ...
ಆತನ ಮುಖದ ಕೆಂಪಲ್ಲಿ ನನ್ನ
ಅನೇಕ ಕನಸುಗಳ ಬೆಂದ ವಾಸನೆ
ನಗು ತೇಲಿತು ಮುಖದಲ್ಲಿ.....
ಜೀವನವಿದು ಮುಂಜಾನೆಯ
ಕೆಂಪಂತೆ ಸ್ಫಟಿಕವೂ ಹೌದು...
ಸಂಜೆಗೆಂಪಂತೆ ನೀರಸವೂ ಅಹುದುstyle="font-weight:bold;">

21 comments:

  1. ಮಜಾ ಇರುತ್ತಲ್ವಾ? ಅಷ್ಟ್ ಹಳೇದನ್ನ ನೆನಪು ಮಾಡ್ಕೊಳ್ಳೋದು?

    ReplyDelete
  2. ನಿಮಗೆ ಕವನದ ದಾರಿ ತೋರಿದ ಶ್ರೀ ಮಹಾಲದಾರರಿಗೆ ವಂದನೆಗಳು. ನಿಮ್ಮ ಮೊದಲ ಕವನದಲ್ಲಿಯೇ ಉತ್ತಮ ಗುಣ ತೋರಿಸಿದ್ದೀರಿ.

    ReplyDelete
  3. ಸುಶ್ರುತ ಹಳೆಯ ನೆನಪಿನ ಜೊತೆ ನಿಮ್ಮಂತಹ ಗೆಳೆಯರ ಅಭಿಪ್ರಾಯ ದೊರೆತರೆ ಅದರ ಮಜಾ ಡಬ್ಬಲಾಗುತ್ತೆ....

    ReplyDelete
  4. ಸಾಗರಿ,ಅನಿಸಿಕೆಗೆ ಧನ್ಯವಾದಗಳು..

    ReplyDelete
  5. ಕಾಕಾ ನಿಮ್ಮ ಹೊಗಳಿಕೆಗೆ ನಾ ಪಾತ್ರನೋ ಹೇಗೆ ಗೊತ್ತಿಲ್ಲ.ಮೊದಲ ಸಲ ಬೇರೆ ಪೇಪರಿನಮೇಲೆ ಹೆಸರು ಪ್ರಿಂಟಾದಾಗ ಸಿಗೋ
    ಮಜಾನೇ ಬೇರೆ.ಮಹಾಲದಾರ ರಿಗೆ ಋಣಿಯಾಗಿರುವೆ.

    ReplyDelete
  6. ಸರ್,

    ನಿಮ್ಮ ಮೊದಲ ಕವನ ಚೆನ್ನಾಗಿದೆ. ಅದಕ್ಕೆ ಪ್ರೋತ್ಸಾಹ ನೀಡಿದ ಮಹಾಲದಾರರಿಗೆ ಧನ್ಯವಾದಗಳು. ಹಳೆಯ ನೆನಪುಗಳು ಎಷ್ಟು ಚೆನ್ನಾ ಅಲ್ವಾ ಸರ್...

    ReplyDelete
  7. ಮೊದಲ ಕವನದಲ್ಲೇ ಪ್ರಬುದ್ಧತೆಯ ಲಕ್ಷಣಗಳಿದ್ದವು. ಚೆನ್ನಾಗಿದೆ, ನಿಮ್ಮ ಕವನ ಪ್ರಕಟಿಸಿದ ಮಹಾಶಯರಿಗೆ ಧನ್ಯವಾದ ಗಳು.

    ReplyDelete
  8. ಚೆನ್ನಾಗಿದೆ ನಿಮ್ಮ ನೆನಪು ಮತ್ತು ಕವನ,ಧನ್ಯವಾದಗಳು

    ReplyDelete
  9. ಚೊಚ್ಚಲದ ಕವನದಲ್ಲಿ ಸಿಕ್ಸರ್ ಭಾರಿಸಿರುವಿರಿ ದೇಸಾಯಿಯವರೇ!!
    ಚೆ೦ದದ ಕವನ.
    ಯಾಕೊ ನಮ್ಮ ಬ್ಲೊಗ್ ಬಹಳ ದಿನಗಳಿ೦ದ ತಮ್ಮ ಹಾರೈಕೆ ಇಲ್ಲದೆ ಸಪ್ಪೆಯಾಗಿದೆ!

    ReplyDelete
  10. ಶಿವು ಅನಿಸಿಕೆಗೆ ಅಭಿನಂದನೆಗಳು...ನೆನಪು ಮಧುರ ಅಲ್ಲವೆ.....

    ReplyDelete
  11. ಪರ‍ಾಂಜಪೆ ಅವರಿಗೆ,ಹೊಗಳಿಕೆಗೆ ಧನ್ಯವಾದಗಳು..ನಿರುದ್ಯೋಗದ ಬಿಸಿಯಲ್ಲಿ ಮೂಡಿದ ಸಾಲು ಇವು...

    ReplyDelete
  12. ಭಟ್ ಅವರಿಗೆ ಅಭಿಪ್ರಾಯಕ್ಕೆ ವಂದನೆಗಳು..

    ReplyDelete
  13. ಸೀತಾರಾಮ್ ಸರ್ ಬೇಜಾರು ಮಾಡ್ಕೊಬೇಡಿ ಬರುವೆ,,,ಹೇಳುವೆ.

    ReplyDelete
  14. ಧನ್ಯವಾದಗಳು ಗೋರೆಅವರಿಗೆ

    ReplyDelete
  15. ಚನ್ನಾಗಿ ತೊದಲಿದ್ದೀರಿ ದೇಸಾಯರೆ...

    ReplyDelete
  16. ಅಭಿಪ್ರಾಯಕ್ಕೆ ಧನ್ಯವಾದ ಚುಕ್ಕಿ ಚಿತ್ತಾರ

    ReplyDelete
  17. ದೇಸಾಯಿಯವರೆ...

    ತುಂಬಾ ಚೆನ್ನಾಗಿದೆ...

    "ಬಂದ ಸೂರ್ಯ ನನ್ನ ಕಂಡು
    ಮುಗುಳ್ನಕ್ಕ....
    ಆತನ ಕೆಂಪುಮೊಗದಲ್ಲಿ ನನ್ನ
    ಅನೇಕ ಕನಸುಗಳ ಪ್ರತಿಬಿಂಬ
    ಕಂಡೆ.... ಮುಂಜಾವು ಹಲವು
    ಕದ ತೆರೆದಿತ್ತು ಬಾಳಿಗೆ
    ಸೂರ್ಯ ಆಶ್ವಾಸನೆಯ ನಗೆ
    ಬೀರುತಿದ್ದ..... "

    ಈ ಸಾಲುಗಳು...
    ನಿಮ್ಮ ಕಲ್ಪನೆ ...
    ಬಹಳ ಇಷ್ಟವಾಯಿತು...
    ಅಭಿನಂದನೆಗಳು...


    ದಯವಿಟ್ಟು ನನಗೊಮ್ಮ ಫೋನ್ ಮಾಡಿ..
    ನಿಮ್ಮ ಬಳಿ ಮಾತನಾಡ ಬೇಕು...
    9449053412

    ReplyDelete
  18. ಹೆಗಡೇಜಿ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.. ದೇರ್ ಆಯೇ ದುರಸ್ತ ಆಯೇ ಅನ್ನೋಹಾಗೆ ನಿಮ್ಮ ಅಭಿಪ್ರಾಯಗಳಿಗಾಗಿ
    ನನ್ನ ಬ್ಲಾಗು ಹಸಿದಿತ್ತು.

    ReplyDelete
  19. ಸುಂದರ ಕಲ್ಪನೆಯ ಚಂದದ ಕವನ ಉಮೇಶ್ ಸರ್. ತುಂಬಾ ಇಷ್ಟವಾಯ್ತು.

    ReplyDelete