Monday, February 8, 2010

ಮತ್ತೊಂದಿಷ್ಟು ಪಂಚಕಗಳು...

೭) ಪೇಟೆ ಹೊತ್ತಿ ಉರೀತಾದೆ ಕೇಳಿದ್ರಾ
ಗೋಣಿ ತುಂಬ ದುಡ್ಡೊಯ್ದು ಕ್ಯಾರಿಯಲ್ಲಿ
ದಿನಸಿ ತಂದವ್ರ ಪಾಡು...
ಚಿಂತೆ ಬ್ಯಾಡ ನಮ್ಮ ನಾಳೆಗಳ ಬೆಳಗಾಕೆ
ತಯಾರಿಸ್ತಾರಂತೆ ಹೊಸ ಕರಡು.

೮) ಅರವತ್ತು ಮುಗೀತು ಇನ್ನೆನು
ಅರಳು ಮರಳು ಸುರು
ಅಂದ್ರು ಒಬ್ರು...
ಹುಟ್ಟೋವಾಗ್ಲೆ ತಲೆರಿಪೇರಿಯಾಗಾಕಿತ್ತು
ಇನ್ನಾದ್ರು ಹಚ್ಕೋಳಿ ಸುರು ಮತ್ತೊಬ್ರಂದ್ರು....!
(ಮೊನ್ನೆ ೨೬/೦೧ ಕ್ಕೆ ಈ ದೇಶಕ್ಕೆ ೬೦ ತುಂಬ್ತು..)

೯) ಇಟಾಲಿಯನ್ ನಲ್ಲಿ ಪತ್ರ
ಬರೀತಾರಂತೆ ಮೋದಿ
ಸೋನಿಯಾಗೆ,, ಬೆಲೆ ಬಿಸಿ ಬಗ್ಗೆ
ತಿನ್ನೋ ಪಾಸ್ತಾದ ರುಚಿ ಕಮ್ಮಿ ದಿನಾ ಕಳ್ದಂಗೆ
ಚಿಂತೆಯಾಗೈತೆ ಮೇಡಮ್ಗೆ...

೧೦) ಹಲ್ಲು ಮುರ್ಕೊಂಡ ಮುದಿಹುಲಿ ಮುಂಬೈಲಿ
ಗರ್ಜನೆ ಅಂತತಿಳ್ಕೊಂಡ್ ಕೂಗ್ದಾಗ
ಗೊಣಗಾಟ ಮಾತ್ರ ಕೇಳಿದೆ...
ಸೋತ ಸಿಟ್ಟು ತಡೀಕಾಗ್ದೆ ಅಮಾಯಕ್ರ
ಮ್ಯಾಲೆ ಎಗರಾಡಿದೆ....

೧೧) ಬಸವನ ಹುಳಕ್ಕೂ ಮೆಟ್ರೋ ನಿಗಮಕ್ಕೂ
ಓಡುವ ಪಂದ್ಯ
ಇತ್ತಂತೆ....
ಹುಳುವನ್ನು ಸೋಲಿಸಿದ "ನಮ್ಮ ಮೆಟ್ರೋ"
ಬೀಗಿತಂತೆ.....!

೧೨) ರಾಹುಲ್ ಅಂತಾನೆ ಬಿಹಾರಿಗಳು.
ಭಾಯಿಗಳು.. ಅಮರ್ ಗೀಗ ಮಾಜಿ ಶತ್ರು
ಮಾಯಾವತಿ ಬೆಹನು..
ರಾಜಕೀಯ ದೊಂಬರಾಟದಲ್ಲಿ ಶ್ರೀಸಾಮಾನ್ಯನೇ
ನಿಜವಾದ ಬಫೂನು...!

೧೩) ಮಾಜಿ ಉಗ್ರನಿಗೂ ದಕ್ಕಿತು ಪದ್ಮಶ್ರೀ..
ಜಿಂಕೆ ಕೊಂದ ಸೈಫು ಪ್ರಶಸ್ತಿ ಪಡೆದು
ಆದ ಸೇಫು
ಗೌರವಗಳೇ ಮಾರಾಟವಾಗೋವಾಗ
ಹಳೆದೆಲ್ಲ ಆಗೋಗಿದೆ ಮಾಫು....

೧೪) ರಾಹುಲ್ ಅಪ್ರಬುದ್ಧ ಕಾರಣ ಅವ ಇನ್ನೂ
ಬ್ರಹ್ಮಚಾರಿ.. ಇದು ಠಾಕ್ರೆ ಮಾಡಿದ
ಹೊಸ ಸಂಶೋಧನೆ...
ಆ ಮುದಿ ತಲೆಯಲ್ಲಿ ಇನ್ನೆಷ್ಟಿವೆಯೋ
ಇಂಥ ಬಾಲಿಶ ಯೋಚನೆ....!

೧೫) ಸಿಡಕ್ಯಾಕೆ ಠಾಕರೆ ಸಾಹೇಬಗೆ
ಅಂಬಾನಿ, ಸಚಿನ್ ಹಾಗೂ ಶಾರುಖ್
ಮೇಲೆ
ಅವರಿಂದಲೆ ಮುಂಬೈಗೊಂದು ಕಳೆ
ಇಲ್ವಾದ್ರೆ ನಿನ್ನ ಮುಖಕ್ಕೆ ಅದೇನು ಬೆಲೆ...?

15 comments:

  1. Desayare wonderful. nanage chutuku brahma dinakara desai nenapaagtidaare! olleya chaatiyetinantha punch ka galu! Thanks for wonderful writing

    ReplyDelete
  2. ಸಖತಾಗಿವೆ ನಿಮ್ಮ ಪ೦ಚಕಗಳು ದೇಸಾಯರೆ, ಅವುಗಳಲ್ಲಿರುವ ಪ೦ಚ್ ಇಷ್ಟವಾಯ್ತು.

    ReplyDelete
  3. ದೇಸಾಯರ,
    punchಕಮಾಲೆಯನ್ನು ಪ್ರಾರಂಭಿಸಿಬಿಟ್ಟೀರಲ್ಲ!

    ReplyDelete
  4. ಸೂಪರ್ ಸಾರ್,

    ನಿಮ್ಮ ಪಂಚಕಗಳ ಪಂಚೇ ಬೇರೆ...

    ReplyDelete
  5. ಪಂಚ್ ಮಸ್ತ್ ಅದಾವ್ರೀ ದೇಸಾಯರ...ಹೇಳ್ರೀ ಇನ್ವಷ್ಟು ಮುಂದ...

    ReplyDelete
  6. ಅದ್ಭುತ ಪ೦ಚಕಗಳು. ಪ೦ಚಕದ ಪ೦ಚಗಳು ಸುಪರ್.

    ReplyDelete
  7. ಧನ್ಯವಾದಗಳು..ವಸಂತ್

    ReplyDelete
  8. ಮೆಚ್ಚಿದ್ದಕ್ಕೆ ಪರಾಂಜಪೆ ಅವರಿಗೆ ಧನ್ಯವಾದಗಳು

    ReplyDelete
  9. ಕಾಕಾ ನಿಮ್ಮ ಪ್ರೋತ್ಸಾಹ ಹಿಂಗ ಇದ್ರ ಮಾಲಿ ಪೋಣಸಬೇಕಂತೀನಿ...

    ReplyDelete
  10. ಗೋರೆಸರ್ ಧನ್ಯೊಸ್ಮಿ..

    ReplyDelete
  11. ಭಟ್ರೆ ಮುಂದ ಹೇಳೋಣ ನಿಮ್ಮ ಪ್ರೋತ್ಸಾಹ ಹಿಂಗ ಇರಲಿ..

    ReplyDelete
  12. ಸೀತಾರಾಮ್ ಅವರೆ ಧನ್ಯವಾದಗಳು..

    ReplyDelete
  13. ಚುಕ್ಕಿ ಚಿತ್ತಾರ ಅಪರೂಪಕ್ಕೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  14. tumba chennagive. dinakar desaiyavara choupadigalu hudukuttiddaga akasmattagi odalu sikkvu

    ReplyDelete