Monday, September 14, 2009

ಗಮ್ಯ

ಹಿಂದೆ ಅದಾರೋ ಊರಿಹೋದ
ಹೆಜ್ಜೆ ಗುರುತುಗಳು ದಾರಿಯಲಿ ಮಾಸಿಲ್ಲ...
ಈ ಮರುಭೂಮಿಯಲೂ ಚಿಗಿಯುವ ಗಿಡ...
ಇದಾರ ಹಪಾಪಿತನ...
ಬಿಚ್ಚಿ ಬತ್ತಲಾಗಬೇಕು ಓಡಬೇಕು ಈ
ಧಾವಂತ ನಿರಂತರ..

ಗಮ್ಯ ಎಲ್ಲಿ ನೆಲೆ ಯಾವುದು ಗೊತ್ತಿಲ್ಲ
ವಾಸ್ತವಕೆ ಬೆನ್ನು ತೋರಿಸಿ ಓಡುವ
ಹವ್ಯಾಸ ನನಗೆ ಹೊಸದೇನಲ್ಲ....!

ಎಲ್ಲಿ ಹೋದರೇನು ಏನು ಕಳೆದರೇನು
ಬೆನ್ನಿಗಂಟಿದ ಬೇತಾಳ ಈ ದೇಹ...
ಇದು ವಾಸ್ತವವಾದರೆ ಈ ಓಟ ಯಾಕೆ
ದಿನ ಕಳೆದಂತೆ ರಾತ್ರಿಯ ಹಂಬಲವೇಕೆ..
ಒಂಟಿ ಹಾಸಿಗೆಯಲಿ ನಾಳಿನ ಕನಸೇಕೆ....?

11 comments:

  1. ದೇಸಾಯರೇ, ಚೆನ್ನಾಗಿದೇರಿ ನಿಮ್ಮ ಕವನ. ನಾಳೆ ಏನು ಎ೦ಬುದನು ಅರಿಯದ ನಾವು, ಗಮ್ಯ ದ ಅರಿವಿಲ್ಲದೆ ವಾಸ್ತವಕ್ಕೆ ಅ೦ಜಿ ಇದ್ದುದರಲ್ಲಿ ಸುಖ ಪಡುವುದನ್ನು ಬಿಟ್ಟು ಇಲ್ಲದುದಕ್ಕೆ ಹಾತೊರೆಯುತ್ತೇವೆ. ಅದೇ ಅಲ್ಲವೇ ಜೀವನ

    ReplyDelete
  2. ಉಮೇಶ,
    ಮತ್ತೊಂದು ವಿಚಾರಪೂರ್ಣ ಕವನವನ್ನು ಸುಂದರವಾಗಿ ರಚಿಸಿ ನಮಗೆ ಕೊಟ್ಟಿದ್ದೀರಿ. ಕವನವನ್ನು ಮೆಲಕು ಹಾಕುತ್ತಲೇ ಇದ್ದೇನೆ.

    ReplyDelete
  3. ಪರಾಂಜಪೆ ಸರ್ ಮೆಚ್ಚಿದ್ದಕ್ಕೆ ಧನ್ಯವಾದಗಳು.ಈ ಸಲದ ಮಯೂರದ "ಕಲ್ಪನೆ ಚಿತ್ರ" ಈ ಕವಿತೆಗೆ ಪ್ರೇರಣೆ
    ಅಲ್ಲಿ ಕಳಿಸಲು ತಡಾ ಆತು ಅದಕ್ಕೆಬ್ಲಾಗ್ ನಲ್ಲಿ ಹಾಕಿದೆ...

    ReplyDelete
  4. ಕಾಕಾ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ನನಗೆ ಈ ಬಗ್ಗೆ ಹೆದರಿಕೆ ಇದೆ ಈ ಜೀವನ ಪಂಜರದಲ್ಲಿ ಕೂಡಿ ಹಾಕಿ ಮುತ್ತು ಹವಳ
    ತಿನಿಸುತಿದೆ ಇದೇ ಸ್ವರ್ಗಎಂದುಕೊಂಡು ನಾವು ಬಂದಿಯಾಗಿದ್ದೇವೆ..ಪರಿಸ್ಥಿತಿ ಸ್ಚಲ್ಪ ಬದಲಾದರೂ ತಳಮಳಿಸುವ ನಾವು
    ಹೊಸತು ಬರಲು ಯಾಕೆ ಅಪೇಕ್ಷಿಸುತ್ತೇವೋ ತಿಳೀದು..

    ReplyDelete
  5. ಗೋಪಾಲ್ ಮೆಚ್ಚಿದ್ದಕ್ಕೆ ಧನ್ಯವಾದಗಳು ನಿಮ್ಮ ಸುದ್ದೀನೇ ಇಲ್ಲ ಎಲ್ಲಿದ್ದೀರಿ....

    ReplyDelete
  6. ದೇಸಾಯ್ ಸರ್,

    ಒಂದು ಅರ್ಥಪೂರ್ಣ ಕವನ...ಪದ ಬಳಕೆ ಇಷ್ಟವಾಯಿತು...

    ReplyDelete
  7. ಶಿವು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete
  8. ತುಂಬಾ ಚೆನ್ನಾಗಿ ಬರೆದಿದ್ದೀರ. ಮತ್ತೆ ಏನು ಸಮಾಚಾರ ಸರ್? ಹುಬ್ಬಳಿಗೆ ಹೋಗಿದ್ರೆನು. ಸ್ವಲ್ಪ ಕೆಲಸದ ಒತ್ತಡ ಇತ್ತು ಅಷ್ಟೇ.

    ReplyDelete
  9. ಖರೇನ ಭಾರಿ ಗಟ್ಟಿ ಕವಿತಾ ಬರದೇರಿ ಸರ್! ನಿಮ್ಮ ತಳಮಳಾ ಸೀದಾ ಎದಿಗೆ ನಾಟತದ.. ಈ ತಳಮಳ ಮನುಷಾಗ ಜೀವನ ಪರ್ಯಂತ ಬೆನ್ನಿಗಂಟಿದ ಬೇತಾಳ ಇದ್ದಂಗ ಅಲ್ರ್ಯಾ?

    ReplyDelete