Wednesday, June 10, 2015



ನಿರೋಪ..
------------------------------
ಗ್ರೀಶ್ಮನೂ ಅರೆಬರೆ ಬಟ್ಟೆ ಧರಿಸಿ ಬೆದರಿ ನಿಂತಿಹ
ಉದುರಿದ ನಾಕೈದು ಹನಿಗಳನೇ ಮತ್ತೆ ಮತೆ ನೆಕ್ಕಿ ತೇಗುವ ಭುವಿ.
ಸುಡುವ ಹಾಸಿಗೆಯ ಮೇಲೆ ನಿದ್ದೆ ಬಾರದೆ
ಉರುಳಾಡಿ ಮಗ್ಗುಲಾದಾಗ ಮುಖಾಮುಖಿಯಗುತ್ತವೆ ಇವು.
ಹೌದು ಇವು ಹೀಗಿರಬೇಕು ಹೀಗೆ ಹೇಳಬೇಕು ಹೀಗೆಯೇ ಬದುಕಬೇಕು
ಎಂದು ನಾ ನಿರ್ದೇಶಿಸಿದ್ದೆ ಹಂಬಲಿಸಿದ್ದೆ ಇವುಗಳ ಪೋಷಣೆಗೆ.. ರಕ್ತ ಸುಟ್ಟುಕೊಂಡಿದ್ದೆ..
ಅವುಗಳನ್ನು ಅಲ್ಲಿಗಲ್ಲಿಗೆ ಬಿಟ್ಟು ಮುಂದೆಂದಾದರೂ ಮತ್ತೆ ಸಂಧಿಸುವ ಮೈ ನೇವರಿಸುವ
ಮಾತನಾಡಿ ನಾಜೂಕಿನಿಂದ ಅವುಗಳ ಬಂಧ ಬಿಡಿಸಿಕೊಂಡ ಭ್ರಮೆಯಿಂದ ಖುಶಿಯಾಗಿ
ಬೀಗುವಾಗ ಹೀಗೆ ಹಾಳುರತ್ರಿಗಳಲಿ ಇವು ಬರಬೇಕೆ?
ಸುಮ್ಮನಿರದೆ ತಿವಿದು ಎಬ್ಬಿ ಕಾಡುವ ಪ್ರಶ್ನೆಗಳೆಸೆದು ಮೋಜು ನೋಡಲೇಕೆ..
ಅಯ್ಯಾ ನಾ ಬಳಲಿಹೆ..ಅದೆಷ್ಟೋ ಉಳಿಪೆಟ್ಟು ತಿಂದು ಬೆಂದರೂ ನಾನಿನ್ನೂ
ಕಲ್ಲಾಗಿಯೇ ಉಳಿದಿಹೆ..ನಿಮ್ಮ ತಿದ್ದಿ ನಿಮ್ಮ ಬದುಕಿಗೊಂದು ಗತಿಕೊಡುವ ತ್ರಾಣ ಇಲ್ಲ
ಅಸಲು ನಾ ಯಾಕೆ ಉಸಿರಾಡಿಹೆ ಎಂಬ ಜಡದಲ್ಲಿ ನಾನಿರುವಾಗ
ಜೇಡರ ಬಲೆಯಲ್ಲಿ ಸಿಕ್ಕಿರುವ ನಿಮ್ಮ ಹೇಗೆ ಬಿಡಿಸಲಿ..
ನಾ ಸುಧಾರಿಸಿ ನಿಮಗೊಂದು ಹಂತ ತರಲು ಯುಗಗಳೇ ಬೇಕಾದಾವು..
ಹೋಗಿ ಹಾರಾಡಿ ಅದಾರೋ ಶಕ್ತ ನಿಮಗಾಗಿ ಕಾದಿರಬಹುದು..ಅವನ ಹೆಗಲನೇರಿ
ಅವನ ನೇವರಿಸಿರಿ..ನಾನೋ ಜೀವಚ್ಛವ
ಕನಸು ಇಲ್ಲಿನ್ನು ಕುಡಿಯೊಡೆಯಲಾರದು..ಬರಡು ಬೆಂಗಾಡಿನಲಿ ಭಾವ ಮೂಡಲಾರದು...!!



3 comments:

  1. ಕವಿಯು ಅರುಹಲು ಹೊರಟ ತನ್ನ ಕಾವ್ಯದ ಭಾವ, ಕಟ್ಟಿಕೊಟ್ಟ ಈ ಸಾಲುಗಳ ಅರ್ಥ ವ್ಯಾಪ್ತಿಯು ಕವಿತೆಯ ತೂಕವನ್ನು ಇಮ್ಮಡಿಗೊಳಿಸಿತು:
    ಅದೆಷ್ಟೋ ಉಳಿಪೆಟ್ಟು ತಿಂದು ಬೆಂದರೂ ನಾನಿನ್ನೂ
    ಕಲ್ಲಾಗಿಯೇ ಉಳಿದಿಹೆ

    ReplyDelete
  2. ‘ನಿರೋಪ’ ಕವನವು ಹತಾಶ ಭಾವವನ್ನು ಸೊಗಸಾಗಿ ಚಿತ್ರಿಸಿದೆ. ಆದರೆ ಈ ಹತಾಶ ಭಾವವು ಕೇವಲ ಒಂದು ಮನೋಲಹರಿ ಹಾಗು ತಾತ್ಪೂರ್ತಿಕ ವಿಚಾರ ಎಂದು ಭಾವಿಸುವೆ. ದೇಸಾಯರು ವಸಂತ ಋತುವಿನ ಶಾಯರ್ ಎಂದು ನಮಗೆ ಗೊತ್ತಿಲ್ಲವೆ!?

    ReplyDelete
  3. Chennagide Desai sir. ..welcome to my blog.... Do visit in your free time. Aakshanagalu.blogspot. in

    ReplyDelete