Saturday, November 23, 2013

ಅಂಗೈ ಅಗಲದ ಕಥೆ--೬

ಅಂಗೈ ಅಗಲದ ಕಥೆ--೬


ಆ ಭೇಟಿಗಾಗಿ ಅವಳು ಕಾಯುತ್ತಿದ್ದಳು. ಅನೇಕ ದಿನಗಳಿಂದ. ಕಳೆದ ವಾರದ ಘಟನೆಗಳು
ಅವಳ ಜೀವನಕ್ಕೊಂದು ಹೊಸ ಗತಿ ಕೊಟ್ಟಿದ್ದವು..ಅನಪೇಕ್ಷಿತ ಅನಿರೀಕ್ಷೀತ ಘಟನೆಗಳು ನಡೆಯುವುದೇ
ಬದುಕಿನ ರಂಗಸ್ಥಳದಲ್ಲಿ. ತನಗಾದ ಅನ್ಯಾಯಕ್ಕೆ ಇಲ್ಲಿ ನ್ಯಾಯದೊರೆತೀತು ಇದು ಅವಳ ಆಸೆ. ಅಂತೂ ಇವಳಿಗೆ
ಕರೆ ಬಂತು. ಹೋಗಿ ಹೆಚ್ ಆರ್ ಮುಂದೆ ಕೂತಳು. ರೂಮಲ್ಲಿ ಏಸಿಯ ತಂಪು ಅಲ್ಲಿಯ ಬಿಸಿ ವಾತಾವರಣಕ್ಕೆ
ಮಿಳಿತವಾದಂತಿತ್ತು. ಇವಳ ಲಿಖಿತ ದೂರಿಗೆ ಸ್ಪಂದಿಸಿದ ಅಧಿಕಾರಿಣಿ ಕ್ರಮದ ಭರವಸೆ ನೀಡಿದಳು. ಇದಾಗಿ ಹದಿನೈದು
ದಿನ ಆಗಿವೆ..ಆ ಟಿಎಲ್ ಹೊಸ ಹಕ್ಕಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ ಇವಳು ಆ ಪ್ರಾಜೆಕ್ಟನಿಂದ ಹೊರಹೋಗಿದ್ದಾಳೆ ..
ದೂರು ಕೊಡುವ ಮುನ್ನ ಅವಳು ಭೇಟಿಯಾಗಿದ್ಲು. ಅವಳು ಇವಳಿಗಿಂತ ಸೀನಿಯರ್ ಅವಳು ಹೇಳಿದ್ದು ಒಂದೇ ಮಾತು
"ನಿನ್ನಂಥ ಎಷ್ಟೋ ಜನರ ಆಕ್ರಂದನಗಳು,ನೋವುಗಳು ಕಡತಗಳಲ್ಲಿ ಬಂದಿಯಾಗಿವೆ..ನರಳಿವೆ.ಹಾಂ ಈ ಕಂಪನಿಯ ನಾಲ್ಕುದಿಕ್ಕಿನಲ್ಲೂ
ಕೂಡ ನನ್ನ ನಿನ್ನ ನೋವುಗಳು,ಸೋಲುಗಳು ಅಪಮಾನಗಳು ಚೀರಲಾರದೆ ಸಿಡಿಯಲಾರದೆ ಬಂದಿಯಾಗಿವೆ...." ಅವಳ ಮಾತು
ರಿಂಗಣಿಸುತ್ತಿದೆ..ಹೊಸ ಟಿಎಲ್ ನಡಾವಳಿಯೂ ಅದೇ ಪೂರ್ವಸಿದ್ದ ರೂಪದ ಹಾದಿ ಹಿಡಿದಿದೆ..ಮತ್ತೊಂದು ಅಪಮಾನದ

ಹಾದಿ ಕಾಯುತ್ತ ಅವಳು ಕಲ್ಲಾಗುತ್ತಿದ್ದಾಳೆ.

4 comments:

  1. ಎಷ್ಟೋ ಜನರ ನೋವುಗಳು ಬಂಧಿಯಾಗಿಯೇ ಉಳಿದಿವೆ ಸರ್.. ತುಂಬಾ ಚೆನ್ನಾಗಿದೆ ಕಥೆ

    ReplyDelete
  2. ನಾಲ್ಕುದಿಕ್ಕಿನಲ್ಲೂ
    ಕೂಡ ನನ್ನ ನಿನ್ನ ನೋವುಗಳು,ಸೋಲುಗಳು ಅಪಮಾನಗಳು ಚೀರಲಾರದೆ ಸಿಡಿಯಲಾರದೆ ಬಂದಿಯಾಗಿವೆ....chennagi mudide

    ReplyDelete
  3. ಅಂಗೈ ಏಟು ಜೋರ ಅದರಿ, ದೇಸಾಯರ!

    ReplyDelete
  4. "ನಿನ್ನಂಥ ಎಷ್ಟೋ ಜನರ ಆಕ್ರಂದನಗಳು,ನೋವುಗಳು ಕಡತಗಳಲ್ಲಿ ಬಂದಿಯಾಗಿವೆ..ನರಳಿವೆ... ಎಂತಾ ವಿಪರ್ಯಾಸದ ಮಾತು..ಖಾಸಗಿ ಕಂಪನಿಗಳ ನೌಕರಶಾಹಿ ವರ್ತನೆಗೆ ಹಿಡಿದ ಕನ್ನಡಿ.

    ReplyDelete