Tuesday, July 16, 2013

ಇನ್ನಷ್ಟು ಅಂಗೈ ಅಗಲದ ಕಥೆಗಳು.




-----------------------
ಅವ ನೆಲದಮೇಲೆ ನಡೆಯುತ್ತಿದ್ದನಾದರೂ ಆಕಾಶದಲ್ಲಿ ತೇಲಿದ ಅನುಭವ ಹೊಂದಿದ್ದ.
ಅವನ ಬಹಳದಿನಗಳ ಕನಸು ನನಸಾಗುವುದರಲ್ಲಿತ್ತು.ಅವನ "ಆರಾಧ್ಯ ದೈವ" ಒಲಿದಿತ್ತು
ಅವ ಬರೆದ ಹಾಡು ಅವನ ಆ ದೈವಕ್ಕೆ ಒಪ್ಪಿಗೆಯಾಗಿ , ಇವನನ್ನು ಬಾಚಿ ತಬ್ಬಿಕೊಂಡು ತಲೆದೂಗಿತು.
ತನ್ನ ಸಹಾಯಕನಿಗೆ ಕರೆದು ಇವನನ್ನು ಪರಿಚಯಿಸಿತು. ನಾಳೆ ಸ್ಟುಡಿಯೋಗೆಬಂದು ಕಾಣಲು ಹೇಳಿತು.
ಇವ ಬರೆದ ಹಾಡು ಸಿನೇಮಾದಲ್ಲಿ ಬರುವುದಿತ್ತು .ಇವನ ತಪಸ್ಸು ಪೂರ್ಣವಾಗಿತ್ತು.
ಇವ ಬರೆದ ಗೀಚಿದ ಹಾಡುಗಳಿಗೆ ಲೆಕ್ಕವಿಲ್ಲ....ರಾತ್ರಿಯಿಡೀ ನಿದ್ದೆಗೆಟ್ಟು ಬೆಳಗಿಗಾಗಿ ಹಂಬಲಿಸಿದ
ಎಷ್ಟೇ ಗಡಿಬಿಡಿಯಿಂದ ತಯಾರಾದರೂ ಟ್ರಾಫಿಕ್ ಕಿರಿಕಿರಿಯಿಂದ ಸ್ಟುಡಿಯೋಗೆ ಹೋದಾಗ
ಅರ್ಧಗಂಟೆ ತಡ. ಅಲ್ಲಿ ಸಹಾಯಕನಿದ್ದ ಹಾಡು ರಿಕಾರ್ಡ ಆಗಿ ಹೋತು ತಗೋ ಅಂದು ಸಾವಿರದ ನೋಟು
ಇವನಿಗೆ ಕೊಟ್ಟ. ಮರುದಿನ ಪತ್ರಿಕೆಯಲ್ಲಿ ಆ ಸಿನೇಮಾ ಜಾಹೀರಾತು ಬಂದಿತ್ತು ಚಿತ್ರದ ಹೆಸರು "ಗಾಂಧಿನಗರ"
ಹಾಡು ಬರೆದು ಸಂಗೀತ ಕೊಟ್ಟವರೆಂದು ಆರಾಧ್ಯ ದೈವದ ಚಿತ್ರ ದೊಡ್ಡದಾಗಿದ್ದ ಫೋಟೋ ಸೊಗಸಾಗಿತ್ತು
ಅಚ್ಚರಿ ಎಂದರೆ ಚಿತ್ರದ ಟ್ಯಾಗ್ ಲೈನ್ ಆಗಿ ಇವ ಬರೆದ ಹಾಡಿನ ಸಾಲಿತ್ತು.
 
 
-------------------------
ಆ ವಿಶಾಲ ಹಾಲ್ ನ ಮೆತ್ತನೆ ಸೋಫಾದಲ್ಲಿ ಮದ್ಯತುಂಬಿದ ಗ್ಲಾಸ್ ಹಿಡಿದು
ಆಗಾಗ ಹುರಿದ ಗೋಡಂಬಿ ಮುಕ್ಕುತ್ತಿತ್ತು ಆ ವ್ಯಕ್ತಿ. ಅವನ ಕಾಲ ಬುಡದಲ್ಲಿ ಕುಳಿತು
ಕಾಲಿಗೆ ಮಸಾಜ್ ಮಾಡುತ್ತಿತ್ತು ಇನ್ನೊಂದು ವ್ಯಕ್ತಿ. ಕೆಳಗೆ ಕೂತವ ಹುಟ್ಟು ಮೂಗ, ಕಿವುಡ.
ಗ್ಲಾಸ್ ಹಿಡಿದ ವ್ಯಕ್ತಿ ಅಂಗವಿಕಲರ , ಅಶಕ್ತರ ಸಲುವಾಗಿ ಇದ್ದ ಸಂಸ್ಥೆಯ ಹಿರಿ ಅಧಿಕಾರಿ.
ಅವನ ಸಂಸ್ಥೆಯ ಬಗ್ಗೆ ಅದರ ಹಿರಿಮೆಬಗ್ಗೆ ದೇಶವಿದೇಶಗಳ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದವು.
ಪದ್ಮ ಪುರಸ್ಕಾರ ಈ ಸಲ ಇವನಿಗೆ ಎಂಬ ಮಾತಿತ್ತು. ಕೆಳಗೆ ಕೂತವ ಬಳಲಿಕೆಯಿಂದ ತೂಕಡಿಸಿದ..
ಇವ ಕೋಪದಿಂದ ಅವನಿಗೊಂದು ಒದ್ದ.! ಫೋನ್ ರಿಂಗಾಯಿತು..ದೆಹಲಿಯ ಬ್ರಾಂಚ್ ಮ್ಯಾನೇಜರಂದು..
ಸಂಸ್ಥೆಗೆ ವಿದೇಶಿಸಂಸ್ಥೆಯಿಂದ ಡೊನೇಶನ್ ಬಂತು ಎಂದು...ಮದ್ಯದ ರುಚಿ ಇನ್ನೂ ಹೆಚ್ಚಾದಂತೆನ್ನಿಸಿತು ಅವನಿಗೆ.
ಮಸಾಜ್ ಮಾಡುತ್ತಿದ್ದವನ ಕಡೆ ಅಳಿದುಳಿದ ಗೋಡಂಬಿ ಚೆಲ್ಲಿದ..ಬರಲಿರುವ ಫಂಡ್ ನಲ್ಲಿ ಹೊಸಾ ಕಾರು ಬುಕ್ ಮಾಡಬೇಕು..
ಸಂಸ್ಥೆಯ ಕಾರ್ಯಕ್ಷೇತ್ರ ವಿಸ್ತರಿಸಬೇಕು....ಹೊಟ್ಟೆಮೇಲೆ ನವಿರಾಗಿ ಕೈ ಆಡಿಸಿಕೊಂಡ..ಗ್ಲಾಸ್ ಗೆ ಇನ್ನಷ್ಟು ಸುರಿದುಕೊಂಡ...!!

































































































 

  

6 comments:

  1. ನಿಮ್ಮ ಅಂಗೈ ಅಗಲದ ಕಥೆಗಳು 'ಇ............. ಷ್ಟ್' ಇಷ್ಟ ಆದವು... :)

    ReplyDelete
  2. ಅ೦ಗೈಅಗಲದ ಕಥೆಗಳು...... ಮನ ಕಲುಕುವ೦ತಿವೆ.... ಚೆನ್ನಾಗಿವೆ ಉಮೇಶ್.... ಬರೆಯುತ್ತಿರಿ......

    ReplyDelete
  3. ಮಸ್ತ್ ಅವರೀ ನಿಮ್ಮ ಅಂಗೈ ಅಗಲದ ಕಥಿ-ಗೋಳು! :)

    ReplyDelete
  4. 3ನೇ ಕಥೆ ಸರ್ವತ್ರ ಸತ್ಯ ಸಾರ್, ನನ್ನ ಹಲವು ಗೆಳೆಯರು ಹೇಳಿದ ಗೋಲಿನ ಕಥೆಯೇ ಇದು.
    4ನೇ ಕಥೆಯ ನಿಜವು, ಪರದೆ ಹಿಂದಿನ ಸತ್ಯ! ಹೊರಗೆ ಜಗದೋದ್ಧಾರಕರ ಪೋಸು - ಮನೆಯೊಳಗೆ ಸ್ವ ಪೀಡಕ, ನೀತಿ ಭಂಜಕರು.

    ReplyDelete
  5. ದೇಸಾಯರ,ಅಂಗೈ ತಪರಾಕಿ ಜೋರ ಅದ!

    ReplyDelete